ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾಕಿಸ್ತಾನದ ಪೇಶಾವರ ಅರೆಸೇನಾ ಪಡೆಯ ಕಚೇರಿ ಮೇಲೆ ಉಗ್ರರ ದಾಳಿ; 6 ಮಂದಿ ಸಾವು

ಪಾಕಿಸ್ತಾನದಲ್ಲಿ ಮತ್ತೆ ಭಯೋತ್ಪಾದಕರ ದಾಳಿ ನಡೆದಿದ್ದು, ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ಪೇಶಾವರದಲ್ಲಿರುವ ಅರೆ ಸೇನಾ ಪಡೆಯ ಪ್ರಧಾನ ಕಚೇರಿ ಮೇಲೆ ನವೆಂಬರ್‌ 24ರಂದು ಬಂದೂಕುಧಾರಿಗಳು ದಾಳಿ ನಡೆಸಿದ್ದು, ಮೃತರಲ್ಲಿ ಮೂವರು ಉಗ್ರರು ಹಾಗೂ ಮೂವರು ಭದ್ರತಾ ಸಿಬ್ಬಂದಿ ಸೇರಿದ್ದಾರೆ.

ಪಾಕಿಸ್ತಾನದಲ್ಲಿ ಉಗ್ರರ ದಾಳಿ; 6 ಮಂದಿ ಸಾವು

ಪಾಕಿಸ್ತಾನದ ಅರೆ ಸೇನಾ ಪಡೆಯ ಕಚೇರಿ ಮೇಲೆ ದಾಳಿ ನಡೆಯಿತು. -

Ramesh B
Ramesh B Nov 24, 2025 4:47 PM

ಇಸ್ಲಾಮಾಬಾದ್‌, ನ. 24: ಪಾಕಿಸ್ತಾನದಲ್ಲಿ ಮತ್ತೆ ಭಯೋತ್ಪಾದಕರ ದಾಳಿ ನಡೆದಿದ್ದು, ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ (Gunmen Attack). ಪೇಶಾವರದಲ್ಲಿರುವ (Peshawar) ಅರೆ ಸೇನಾ ಪಡೆಯ ಕಚೇರಿ ಮೇಲೆ ನವೆಂಬರ್‌ 24ರಂದು ಬಂದೂಕುಧಾರಿಗಳು ದಾಳಿ ನಡೆಸಿದರು. ಮೃತರಲ್ಲಿ ಮೂವರು ಉಗ್ರರು ಹಾಗೂ ಮೂವರು ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಅರೆ ಸೈನಿಕ ಪಡೆಯ ಪ್ರಧಾನ ಕಚೇರಿಯಾದ ರಕ್ಷಣಾ ಸಂಕೀರ್ಣದ ಮೇಲೆಯೂ ಇಬ್ಬರು ಆತ್ಮಾಹುತಿ ಬಾಂಬರ್‌ಗಳು ದಾಳಿ ನಡೆಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಮೊದಲ ಆತ್ಮಹತ್ಯಾ ಬಾಂಬರ್ ಕಾನ್‌ಸ್ಟಾಬ್ಯುಲರಿಯ ಮುಖ್ಯ ದ್ವಾರದ ಮೇಲೆ ದಾಳಿ ನಡೆಸಿದರೆ, ಇನ್ನೊಬ್ಬ ಆವರಣದೊಳಗೆ ನುಗ್ಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

"ಸೇನೆ ಮತ್ತು ಪೊಲೀಸರು ಪ್ರದೇಶವನ್ನು ಸುತ್ತುವರಿದಿದ್ದಾರೆ ಹಾಗೂ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಿದ್ದಾರೆ. ಪ್ರಧಾನ ಕಚೇರಿಯೊಳಗೆ ಕೆಲವು ಭಯೋತ್ಪಾದಕರು ಅಡಗಿಕೊಂಡಿರುವ ಸಾಧ್ಯತೆ ಇದೆʼʼ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನದ ಪೇಶಾವರದಲ್ಲಿ ನಡೆದ ಉಗ್ರರ ದಾಳಿ:



ದಾಳಿಗೆ ಒಳಗಾದ ಕಚೇರಿಯು ಜನದಟ್ಟಣೆಯ ಪ್ರದೇಶದಲ್ಲಿದ್ದು, ಮಿಲಿಟರಿ ಕಂಟೋನ್ಮೆಂಟ್‌ಗೆ ಹತ್ತಿರದಲ್ಲಿದೆ. ಸದ್ಯ ಇಲ್ಲಿಗೆ ಸಾಗುವ ರಸ್ತೆಯನ್ನು ಮುಚ್ಚಲಾಗಿದೆ. ಸೇನೆ, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ತಪಾಸಣೆ ಕೈಗೊಂಡಿದ್ದಾರೆ. ಘಟನೆಯ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಭದ್ರತಾ ಸಿಬ್ಬಂದಿ ಭಯೋತ್ಪಾದಕರೊಂದಿಗೆ ಹೋರಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ವೆಬ್‌ಸೈಟ್ ಒಂದರ ಪ್ರಕಾರ ಮೃತ ಮೂವರು ಎಫ್‌ಸಿ ಅಧಿಕಾರಿಗಳು ಗೇಟ್‌ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ʼʼದಾಳಿ ನಡೆದಾಗ ಬೆಳಗಿನ ಪರೇಡ್ ಕವಾಯತುಗಳಿಗಾಗಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ಪ್ರಧಾನ ಕಚೇರಿಯ ತೆರೆದ ಮೈದಾನದಲ್ಲಿದ್ದರುʼʼ ಎಂದು ಪೇಶಾವರ ಪೊಲೀಸ್ ಮುಖ್ಯಸ್ಥ ಸಯೀದ್ ಅಹ್ಮದ್ ಅಸೋಸಿಯೇಟ್ ಪ್ರೆಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಭಯೋತ್ಪಾದಕ ಮಸೂದ್ ಅಜರ್ ಗೆ ಕಾವಲಾಗಿರುವ ಪಾಕಿಸ್ತಾನ

"ಇಂದಿನ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ನಮ್ಮ ಪಡೆಗಳು ಸಕಾಲದಲ್ಲಿ ಕಾರ್ಯಾವರಣೆ ನಡೆಸಿ ಇನ್ನೂ ದೊಡ್ಡ ದುರಂತವನ್ನು ತಪ್ಪಿಸಿತು" ಎಂದು ಅವರು ಹೇಳಿದ್ದಾರೆ. ದಾಳಿಯಲ್ಲಿ ಕನಿಷ್ಠ 6 ನಾಗರಿಕರು ಗಾಯಗೊಂಡಿದ್ದು, ಅವರನ್ನು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ತೆಹ್ರೀಕ್-ಇ-ತಾಲಿಬಾನ್‌ನ ಕೈವಾಡ

ಪೇಶಾವರದಲ್ಲಿರುವ ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ ಪ್ರಧಾನ ಕಚೇರಿಯ ಮೇಲಿನ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ನ ಬಣ ಜಮಾತುಲ್ ಅಹ್ರಾರ್ ಹೊತ್ತುಕೊಂಡಿದೆ. ಸದ್ಯ ಈ ದಾಳಿಯ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

ಪಾಕ್‌ಗೆ ಮರ್ಮಾಘಾತ! ಕ್ವೆಟ್ಟಾ ನಗರ ಬಲೂಚ್‌ ಆರ್ಮಿ ವಶಕ್ಕೆ

ಹಿಂದೆಯೂ ನಡೆದಿತ್ತು ದಾಳಿ

ಪಾಕಿಸ್ತಾನದ ಅರೆ ಸೈನಿಕ ಪಡೆಯ ಮೇಲೆ ನಡೆಯುತ್ತಿರುವ ದಾಳಿ ಇದು ಮೊದಲ ಸಲವೇನಲ್ಲ. ವರ್ಷಾರಂಭದಲ್ಲಿ ಇದೇ ರೀತಿಯ ಭಯೋತ್ಪಾದಕ ದಾಳಿ ನಡೆದಿತ್ತು. ಕ್ವೆಟ್ಟಾದ ಅರೆ ಸೈನಿಕ ಪಡೆಯ ಕೇಂದ್ರ ಕಚೇರಿಯ ಹೊರಗೆ ಭಯೋತ್ಪಾದಕರು ದಾಳಿ ನಡೆಸಿ 10 ಮಂದಿಯನ್ನು ಹತ್ಯೆಗೈದಿದ್ದರು. ಕಾರು ಸ್ಫೋಟಿಸಿ ಉಗ್ರರು ಈ ದಾಳಿ ನಡೆಸಿದ್ದರು.