BLA Attack: ಬಲೂಚಿ ಬಂಡೂಕೋರರ ದಾಳಿಗೆ 9 ಪಾಕ್ ಸೈನಿಕರ ಬಲಿ
Pakistani security personnel killed: ಬಲೂಚಿಸ್ತಾನದ ಕಲಾತ್ ಜಿಲ್ಲೆಯಲ್ಲಿ ಪ್ರತ್ಯೇಕತಾವಾದಿ ಬಲೂಚ್ ಲಿಬರೇಶನ್ ಆರ್ಮಿಯು ಪಾಕಿಸ್ತಾನಿ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದು, ಇದರಿಂದ ಗಣ್ಯ ವಿಶೇಷ ಸೇವೆಗಳ ಗುಂಪಿನ (ಎಸ್‌ಎಸ್‌ಜಿ) ಇಬ್ಬರು ಕಮಾಂಡೋಗಳು ಸೇರಿ ಒಟ್ಟು ಒಂಬತ್ತು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಇದರಿಂದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇದೀಗ ಮತ್ತೊಮ್ಮೆ ಪ್ರಮುಖ ದಂಗೆಕೋರ ದಾಳಿ ನಡೆಸಿದಂತಾಗಿದೆ. ದಾಳಿ ನಡೆಸಿದ ಹೋರಾಟಗಾರರು ಸ್ನೈಪರ್‌ಗಳು ಮತ್ತು ಆರ್‌ಪಿಜಿಗಳು ಸೇರಿದಂತೆ ಅತ್ಯಾಧುನಿಕ ತಂತ್ರಗಳನ್ನು ಬಳಸಿ ಪಾಕಿಸ್ತಾನಿ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಎರಡು ಮಿಲಿಟರಿ ವಾಹನಗಳು ತೀವ್ರವಾಗಿ ಹಾನಿಗೊಳಗಾದವು ಎಂದು ವರದಿಗಳು ತಿಳಿಸಿವೆ.
-
ವಿದ್ಯಾ ಇರ್ವತ್ತೂರು
Nov 1, 2025 4:39 PM
ಬಲೂಚಿಸ್ತಾನ: ಪಾಕಿಸ್ತಾನಿ ಸೈನಿಕರ (Pakistani Security Personnel) ಮೇಲೆ ಬಲೂಚ್ ಲಿಬರೇಶನ್ ಆರ್ಮಿ (Baloch Liberation Army) ಏಕಾಏಕಿ ದಾಳಿ ನಡೆಸಿದ್ದು ಭದ್ರತಾ ಪಡೆಯ 9 ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಬಲೂಚಿಸ್ತಾನದ ಕಲಾತ್ ಜಿಲ್ಲೆಯಲ್ಲಿ (Kalat district) ಬಲೂಚ್ ಲಿಬರೇಶನ್ ಆರ್ಮಿಯು ಹೊಂಚುದಾಳಿ ನಡೆಸಿದೆ. ಭದ್ರತಾ ಪಡೆಗಳ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಸಂಘಟಿತ ದಾಳಿಯಲ್ಲಿ ಹೋರಾಟಗಾರರು ಸ್ನೈಪರ್‌ಗಳು ಮತ್ತು ಆರ್‌ಪಿಜಿಗಳು ಸೇರಿದಂತೆ ಅತ್ಯಾಧುನಿಕ ತಂತ್ರಗಳನ್ನು ಬಳಸಲಾಗಿತ್ತು. ಈ ದಾಳಿಯಲ್ಲಿ ಎರಡು ಮಿಲಿಟರಿ ವಾಹನಗಳು ತೀವ್ರವಾಗಿ ಹಾನಿಗೊಳಗಾಗಿವೆ.
ಕಲಾತ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ಪ್ರತ್ಯೇಕತಾವಾದಿ ಬಲೂಚ್ ಲಿಬರೇಶನ್ ಆರ್ಮಿ ಹೊಂಚು ದಾಳಿ ನಡೆಸಿದೆ. ಇದರಿಂದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಮತ್ತೊಮ್ಮೆ ಪ್ರಮುಖ ದಂಗೆಕೋರರ ದಾಳಿಯಾಗಿದೆ. ಈ ದಾಳಿಯಲ್ಲಿ ಗಣ್ಯ ವಿಶೇಷ ಸೇವೆಗಳ ಗುಂಪಿನ (ಎಸ್‌ಎಸ್‌ಜಿ) ಇಬ್ಬರು ಕಮಾಂಡೋಗಳು ಸೇರಿದಂತೆ ಒಂಬತ್ತು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Gauribidanur News: ನ.2ಕ್ಕೆ ಮದಕರಿ ಯುವ ಬ್ರಿಗೇಡ್‌ನಿಂದ ಮದಕರಿ ಜಯಂತಿ
ಬಲೂಚ್ ಲಿಬರೇಶನ್ ಆರ್ಮಿಯ ಸಂಘಟಿತ ದಾಳಿಯನ್ನು ಭದ್ರತಾ ಪಡೆಗಳ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡೇ ನಡೆಸಲಾಗಿದೆ. ಇದರಲ್ಲಿ ಹೋರಾಟಗಾರರು ಸ್ನೈಪರ್‌ಗಳು, ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್‌ಗಳು (ಆರ್‌ಪಿಜಿಗಳು) ಸೇರಿದಂತೆ ಅತ್ಯಾಧುನಿಕ ತಂತ್ರಗಳನ್ನು ಬಳಸುತ್ತಿದ್ದರು. ಆರ್‌ಪಿಜಿ ದಾಳಿಯಲ್ಲಿ ಎರಡು ಮಿಲಿಟರಿ ವಾಹನಗಳು ತೀವ್ರವಾಗಿ ಹಾನಿಗೊಳಗಾದವು ಎಂದು ಬಲೂಚ್ ಲಿಬರೇಶನ್ ಆರ್ಮಿ ತಿಳಿಸಿದೆ.
ಪಾಕಿಸ್ತಾನದ ಭದ್ರತಾ ಸಿಬ್ಬಂದಿ ವಿರುದ್ಧ ಬಿಎಲ್‌ಎ ಸುಮಾರು 50 ನಿಮಿಷಗಳ ಕಾಲ ತೀವ್ರವಾದ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಭದ್ರತಾ ಸಿಬ್ಬಂದಿ ನಾಯಕ್ ತಾರಿಕ್, ಸಿಪಾಯಿ ಮುಜಮ್ಮಿಲ್, ಸಿಪಾಯಿ ಫರಾಜ್, ಸಿಪಾಯಿ ಅಜಮ್ ನವಾಜ್, ಲ್ಯಾನ್ಸ್ ನಾಯಕ್ ಶಹಜಹಾನ್ ಮತ್ತು ಸಿಪಾಯಿ ಅಬ್ಸರ್, ಇಬ್ಬರು ಎಸ್‌ಎಸ್‌ಜಿ ಕಮಾಂಡೋಗಳು ಹಾಗು ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಬಲೂಚ್ ಲಿಬರೇಶನ್ ಆರ್ಮಿ
ಜನಾಂಗೀಯ ರಾಷ್ಟ್ರೀಯತಾವಾದಿ ಉಗ್ರಗಾಮಿ ಸಂಘಟನೆಯಾಗಿರುವ ಬಲೂಚ್ ಲಿಬರೇಶನ್ ಆರ್ಮಿಯು ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನ ಸರ್ಕಾರವು ಬಲೂಚಿಸ್ತಾನವನ್ನು ಕಡೆಗಣಿಸುತ್ತಿದೆ ಎಂದು ಅದು ಆರೋಪಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ತನ್ನ ಹೋರಾಟವನ್ನು ತೀವ್ರಗೊಳಿಸಿರುವ ಬಲೂಚ್ ಲಿಬರೇಶನ್ ಆರ್ಮಿಯು ಆಗಾಗ್ಗೆ ಭದ್ರತಾ ಪಡೆಗಳು ಸೇರಿದಂತೆ ಸರ್ಕಾರ ನಡೆಸುವಯೋಜನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ.
ಇದನ್ನೂ ಓದಿ: Andhra Pradesh Stampede: ದೇಶದಲ್ಲಿ ಮತ್ತೊಂದು ರಣ ಭೀಕರ ಕಾಲ್ತುಳಿತ- 9 ಬಲಿ; ಸಾವಿನ ಸಂಖ್ಯೆ ಮತ್ತಷ್ಟು ಏರುವ ಭೀತಿ!
ಇತ್ತೀಚೆಗಷ್ಟೇ ಪಾಕಿಸ್ತಾನದ ಭದ್ರತಾ ಪಡೆಗಳು ಕ್ವೆಟ್ಟಾ ಬಳಿಯ ಬಲೂಚಿಸ್ತಾನದ ಚಿಲ್ಟನ್ ಪರ್ವತ ಪ್ರದೇಶದಲ್ಲಿ ಶಂಕಿತ ಉಗ್ರಗಾಮಿ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದರಿಂದ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ ಕನಿಷ್ಠ 14 ಸದಸ್ಯರು ಸಾವನ್ನಪ್ಪಿದ್ದರು,
ವೈಮಾನಿಕ ದಾಳಿಯನ್ನು ದೂರದ ಪರ್ವತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದ ಬಿಎಲ್‌ಎ ಉಗ್ರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾತ್ತು. ಈ ದಾಳಿಗೂ ಮೊದಲು ಪಾಕಿಸ್ತಾನ ಪಡೆಯ ವಾಯುಸೇನೆಯು ಈ ಗುಂಪಿನ ಮೇಲೆ ಹಲವು ದಿನಗಳ ಕಣ್ಗಾವಲು ಇರಿಸಿತ್ತು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಈಗ ಬಿಎಲ್‌ಎ ಉಗ್ರರು ಪಾಕಿಸ್ತಾನ ಭದ್ರತಾ ಪಡೆಯ ಸಿಬ್ಬಂದಿ ಮೇಲೆ ದಾಳಿ ನಡೆಸಿರಬಹುದು ಎನ್ನಲಾಗುತ್ತಿದೆ.