ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ನಿರ್ಬಂಧ ವಿಧಿಸಿದ ಇರಾನ್: ಅಮೆರಿಕದಿಂದ ಕದನ ವಿರಾಮ ಉಲ್ಲಂಘನೆ ಆರೋಪ

ಅಮೆರಿಕ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಇರಾನ್ ಮತ್ತೆ ಹೊರ್ಮುಜ್ ಜಲ ಸಂಧಿಯಲ್ಲಿ ಮತ್ತೆ ನಿರ್ಬಂಧ ವಿಧಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಏರ್ಪಟ್ಟ ಬಳಿಕ ಶುಕ್ರವಾರ ಇರಾನ್ ಹೊರ್ಮುಜ್ ಜಲ ಸಂಧಿಯನ್ನು ತೆರೆಯುವುದಾಗಿ ಶುಕ್ರವಾರ ಘೋಷಣೆಯನ್ನು ಮಾಡಿತ್ತು. ಆದರೆ ಬಳಿಕ ಇದೀಗ ಮತ್ತೆ ಹೊರ್ಮುಜ್ ಜಲ ಸಂಧಿ ಮುಚ್ಚುವುದಾಗಿ ಹೇಳಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ನಿರ್ಬಂಧ

ಸಂಗ್ರಹ ಚಿತ್ರ -

ಟೆಹರಾನ್: ಹೊರ್ಮುಜ್ ಜಲಸಂಧಿಯನ್ನು (Strait of Hormuz) ತೆರೆದ ಇರಾನ್ 24 ಗಂಟೆಯೊಳಗೆ ಮತ್ತೆ ಅದನ್ನು ಮುಚ್ಚುವ ನಿರ್ಧಾರ ಮಾಡಿದೆ. ಅಮೆರಿಕ (America) ಕದನ ವಿರಾಮ (ceasefire) ಉಲ್ಲಂಘಿಸಿದೆ ಎಂದು ಆರೋಪಿಸಿರುವ ಇರಾನ್ (Iran war) ಶನಿವಾರ ಮತ್ತೆ ಹೊರ್ಮುಜ್ ಜಲ ಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದೆ. ಕಳೆದ ಫೆಬ್ರವರಿ ತಿಂಗಳಾಂತ್ಯಕ್ಕೆ ಪ್ರಾರಂಭವಾದ ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷಕ್ಕೆ ಕಳೆದ ವಾರ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಕದನ ವಿರಾಮ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ಮತ್ತೆ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.

ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಏರ್ಪಟ್ಟ ಬಳಿಕ ಶುಕ್ರವಾರ ಇರಾನ್ ಹೊರ್ಮುಜ್ ಜಲಸಂಧಿಯನ್ನು ತೆರೆಯುವುದಾಗಿ ಘೋಷಣೆ ಮಾಡಿತ್ತು. ಆದರೆ ಇದೀಗ ಅದನ್ನು ಮತ್ತೆ ಮುಚ್ಚುವುದಾಗಿ ಹೇಳಿದೆ. ಅಮೆರಿಕ ಕದನ ವಿರಾಮ ನಿಯಮ ಉಲ್ಲಂಘಿಸಿದೆ ಎಂದು ಅದು ಆರೋಪಿಸಿದೆ.

ಕದನ ವಿರಾಮ ಇರುವವರೆಗೂ ಹಾರ್ಮೊಜ್‌ ಜಲಸಂಧಿ ಓಪನ್‌; ಇರಾನ್‌ ಸರ್ಕಾರದಿಂದ ಮಹತ್ವದ ನಿರ್ಧಾರ

ಇರಾನ್ ಬಂದರುಗಳ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿದ್ದು, ಇದನ್ನು ತೆಗೆಯುವವರೆಗೆ ನಿರ್ಬಂಧ ವಿಧಿಸುವುದಾಗಿ ಎಚ್ಚರಿಕೆ ನೀಡಿರುವ ಇರಾನ್, ಜಾಗತಿಕ ಮಟ್ಟಕ್ಕೆ ತೈಲ ಪೂರೈಕೆ ಮಾಡುವ ನಿರ್ಣಾಯಕ ಜಲಮಾರ್ಗವನ್ನು ಪುನಃ ತೆರೆಯುವ ತನ್ನ ಹಿಂದಿನ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿದೆ.

ಇರಾನ್ ಬಂದರುಗಳಿಗೆ ಹಡಗು ಸಂಚಾರಕ್ಕೆ ದಿಗ್ಬಂಧನ ವಿಧಿಸಿರುವ ಅಮೆರಿಕ ಇದನ್ನು ಕೊನೆಗೊಳಿಸುವುದಿಲ್ಲ ಎಂದು ಹೇಳಿದ ಬಳಿಕ ಇರಾನ್ ಕೂಡ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಹೊರ್ಮುಜ್ ಜಲಸಂಧಿಯ ಮೇಲೆ ಮೊದಲಿನಂತೆ ನಿಯಂತ್ರಣ ಹೇರಲಾಗಿದೆ. ಇದು ಇರಾನ್ ಸಶಸ್ತ್ರ ಪಡೆಗಳ ಕಟ್ಟುನಿಟ್ಟಾದ ನಿರ್ವಹಣೆ ಮತ್ತು ನಿಯಂತ್ರಣದಲ್ಲಿದೆ ಎಂದು ಇರಾನ್‌ನ ಜಂಟಿ ಮಿಲಿಟರಿ ಕಮಾಂಡ್ ಹೇಳಿದೆ.

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನಡೆಸಿರುವ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ಅಮೆರಿಕ ಹೊರ್ಮುಜ್ ಬಳಿ ದಿಗ್ಬಂಧನ ವಿಧಿಸಿತ್ತು. ಇದರ ಬಳಿಕ ಅಮೆರಿಕ ದಿಗ್ಬಂಧನವನ್ನು ತೆರೆದರೆ ಇರಾನ್ ಹೊರ್ಮುಜ್ ಜಲ ಮಾರ್ಗವನ್ನು ಮುಕ್ತಗೊಳಿಸುವುದಾಗಿ ತಿಳಿಸಿದೆ.

ಇರಾನ್ ಒಪ್ಪಂದಕ್ಕೆ ಸಹಿ ಹಾಕಿದರೆ ಪಾಕ್‌ಗೆ ಭೇಟಿ: ಟ್ರಂಪ್ ಹೇಳಿದ್ದೇನು?

ಇರಾನ್ ಮತ್ತು ಅಮೆರಿಕದ ನಾಯಕರು ಮತ್ತೆ ಸೋಮವಾರ ಇಸ್ಲಾಮಾಬಾದ್‌ನಲ್ಲಿ ಕದನ ವಿರಾಮ ಒಪ್ಪಂದಕ್ಕಾಗಿ ಸೇರುವ ಸಾಧ್ಯತೆ ಇದೆ. ಇದಕ್ಕಾಗಿ ಇರಾನ್ ಅಧಿಕಾರಿಗಳು ಭಾನುವಾರ ಪಾಕಿಸ್ತಾನದ ರಾಜಧಾನಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಇರಾನ್ ಶುಕ್ರವಾರ ಜಲಸಂಧಿಯನ್ನು ತೆರೆಯುವುದಾಗಿ ಘೋಷಿಸಿದ ಬಳಿಕ ಟೆಹರಾನ್ ತನ್ನ ಪರಮಾಣು ಕಾರ್ಯಕ್ರಮ ಸೇರಿದಂತೆ ವಾಷಿಂಗ್ಟನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವವರೆಗೆ ಅಮೆರಿಕ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಹಿನ್ನೆಲೆಯಲ್ಲಿ ಇರಾನ್ ಕೂಡ ಹೊರ್ಮುಜ್ ಮೇಲೆ ಬಿಗಿ ನಿಯಂತ್ರಣ ವಿಧಿಸಿದೆ.