Operation Sindoor: ನಮ್ಮ ಬಳಿ ಕೇವಲ 6 ಲಕ್ಷ ಸೈನಿಕರಿದ್ದಾರೆ, ಭಾರತದ ಜೊತೆ ಯುದ್ಧ ಮಾಡಿದರೆ ನಾಶ ಆಗೋದು ಫಿಕ್ಸ್; ಪಾಕ್ ಮಾಜಿ ಸೇನಾಧಿಕಾರಿ
ಭಾರತ ಹಾಗೂ ಪಾಕಿಸ್ತಾನ ನಡುವೆ ಘರ್ಷಣೆ ಹೆಚ್ಚಿದೆ. (Operation Sindoor) ಉಭಯ ದೇಶಗಳು ಯುದ್ಧಕ್ಕೆ ಸನ್ನದ್ಧರಾಗಿ ನಿಂತಿವೆ. ಪಾಕಿಸ್ತಾನದ ಡ್ರೋನ್ ದಾಳಿಗೆ ಭಾರತ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಗಲೇ ಭಾರತ ಪಾಕಿಸ್ತಾನದ (Pakistan) ಮೂರು ವಾಯು ನೆಲೆಗಳ ಮೇಲೆ ದಾಳಿ ನಡೆಸಿದೆ ಹಾಗೂ ಪಾಕ್ ರಾಜಧಾನಿ ಇಸ್ಲಾಮಾಬಾದ್ ಮೇಲೆ ದಾಳಿ ಮಾಡಲಾಗಿದೆ.
                                -
                                
                                Vishakha Bhat
                            
                                May 10, 2025 10:37 AM
                            ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನ ನಡುವೆ ಘರ್ಷಣೆ ಹೆಚ್ಚಿದೆ. (Operation Sindoor) ಉಭಯ ದೇಶಗಳು ಯುದ್ಧಕ್ಕೆ ಸನ್ನದ್ಧರಾಗಿ ನಿಂತಿವೆ. ಪಾಕಿಸ್ತಾನದ ಡ್ರೋನ್ ದಾಳಿಗೆ ಭಾರತ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಗಲೇ ಭಾರತ ಪಾಕಿಸ್ತಾನದ (Pakistan) ಮೂರು ವಾಯು ನೆಲೆಗಳ ಮೇಲೆ ದಾಳಿ ನಡೆಸಿದೆ ಹಾಗೂ ಪಾಕ್ ರಾಜಧಾನಿ ಇಸ್ಲಾಮಾಬಾದ್ ಮೇಲೆ ದಾಳಿ ಮಾಡಲಾಗಿದೆ. ಇದೀಗ ಭಾರತ ಪಾಕಿಸ್ತಾನದ ನಡುವೆ ಸಂಪೂರ್ಣ ಯುದ್ಧ ನಡೆದರೆ ಏನಾಗಬಹುದು ಎಂಬುದನ್ನು ಪಾಕಿಸ್ತಾನದ ನಿವೃತ್ತ ಸೇನಾ ಅಧಿಕಾರಿ ಒಬ್ಬರು ಹೇಳಿದ ಮಾತು ಎಲ್ಲಡೆ ವೈರಲ್ ಆಗಿದೆ. ಪಾಕಿಸ್ತಾನದ ಡಾನ್ ಟಿವಿಯ ಒಂದು ನಿಮಿಷದ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವಿಡಿಯೋದಲ್ಲಿ ನಿವೃತ್ತ ಸೇನಾ ಅಧಿಕಾರಿಯೊಬ್ಬರು ತಮ್ಮ ಬಳಿ ಕೇವಲ ಆರು ಲಕ್ಷ ಸೈನಿಕರಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. "ಭಾರತವು 16 ಲಕ್ಷ ಸೈನಿಕರನ್ನು ಹೊಂದಿದೆ, ನಮ್ಮದು ಕೇವಲ ಆರು ಲಕ್ಷ ಸೈನಿಕರು. ಯುದ್ಧ ನಡೆದರೆ ನಾವು ಉಳಿಯುವುದಿಲ್ಲ. ಭಾರತವನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಇಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ನಮ್ಮ ಪರಿಸ್ಥಿತಿ ತೀರಾ ಹದೆಗೆಡುತ್ತಿದೆ. ನಾಯಕರು ಕೈ ಕಟ್ಟಿ ಕುಳಿತಿದ್ದಾರೆ ಎಂದು ಅವರು ಹೇಳಿದ್ದಾರೆ. ಭಾರತ ಈಗಾಗಲೇ ಕೆರಳಿದೆ. ಅವರ ದಾಳಿ ಇನ್ನೂ ನಿಂತಿಲ್ಲ. ಅಮೆರಿಕ ಒತ್ತಡ ಹೇರುವವರೆಗೆ ಉದ್ವಿಗ್ನತೆ ಶಮನವಾಗುವುದಿಲ್ಲ. ಪರಿಸ್ಥಿತಿ ನಮಗೆ ಇನ್ನಷ್ಟು ಹದಗೆಡುತ್ತದೆಯೇ ಹೊರತು ನಾವು ಏನು ಮಾಡಬೇಕೆಂದು ನಾವು ನಿಜವಾಗಿಯೂ ಯೋಚಿಸಬೇಕು" ಎಂದು ಪಾಕಿಸ್ತಾನದ ಮಾಜಿ ಏರ್ ಮಾರ್ಷಲ್ ಮಸೂದ್ ಅಖ್ತರ್ ಹೇಳಿದ್ದಾರೆ.
पाकिस्तानी सेना के रिटायर्ड अधिकारी बता रहे हैं इंडिया की 16 लाख की सेना के आगे हमारे मात्र 6 लाख सैनिक ज्यादा टिक नहीं पायेंगे।
— Ravi Bhadoria (@ravibhadoria) May 10, 2025
अब तो अमेरिका और चीन ही युद्ध रोककर हमें बचा सकते हैं इंडिया से। pic.twitter.com/RW83rMmrU2
ಆಪರೇಷನ್ ಸಿಂದೂರದ ಮೂಲಕ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಬಳಿಕ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಲು ಪ್ರಾರಂಭಿಸಿದೆ. ಅದಕ್ಕೆ ಪ್ರತಿಯಾಗಿ ಭಾರತವೂ ದಾಳಿ ನಡೆಸುತ್ತಿದ್ದು, ಪಾಕಿಸ್ತಾನದ ಮೂರು ವಾಯುನೆಲೆಗಳು ಸಂಪೂರ್ಣನಾಶವಾಗಿದೆ. ಟ್ಯೂಬ್-ಲಾಂಚ್ಡ್ ಡ್ರೋನ್‌ಗಳನ್ನು ಉಡಾಯಿಸಲಾಗುತ್ತಿದ್ದ ಪಾಕಿಸ್ತಾನಿ ಪೋಸ್ಟ್‌ಗಳು ಮತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳನ್ನು ಧ್ವಂಸ ಮಾಡಿದೆ. ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ಬಳಿ ಪಾಕಿಸ್ತಾನದ ಪೋಸ್ಟ್‌ಗಳು ಮತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳನ್ನು ನಾಶಪಡಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿದೆ. ಪಾಕಿಸ್ತಾನ ಸರ್ಕಾರ ಭಾರತದ ಮೇಲೆ ಕ್ಷಿಪಣಿಗಳನ್ನು ಹಾರಿಸುತ್ತಿದೆ ಮತ್ತು ಗಡಿಯಲ್ಲಿ ಭಾರೀ ಶೆಲ್ ದಾಳಿ ನಡೆಸುತ್ತಿದೆ.
ಈ ಸುದ್ದಿಯನ್ನೂ ಓದಿ: ಪ್ರಾದೇಶಿಕ ಸೇನೆ ನಿಯೋಜನೆಗೆ ನಿರ್ಧಾರ; ಬಾರ್ಡರ್‌ಗೆ ಹೋಗ್ತಾರಾ ಧೋನಿ, ಸಚಿನ್?
ರಾಜೌರಿಯಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ, ಇದರಲ್ಲಿ ಮೆಂಧರ್ ಮತ್ತು ಆರ್‌ಎಸ್ ಪುರದ ಒಬ್ಬರು ಸೇರಿದ್ದಾರೆ. ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಪಾಕಿಸ್ತಾನವು ರಾಜೌರಿಯಲ್ಲಿ ವಸತಿ ಪ್ರದೇಶಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಅಂಗಡಿಗಳು ಮತ್ತು ಮನೆಗಳ ಜೊತೆಗೆ ಧಾರ್ಮಿಕ ಸ್ಥಳಗಳಿಗೆ ಹಾನಿ ಮಾಡಲು ಪ್ರಯತ್ನಿಸಿದೆ ಎಂದು ಸ್ಥಳೀಯ ಜನರು ಹೇಳಿದ್ದಾರೆ.