ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪೈಲಟ್ ಕೊಂದು ಫ್ಲೈದುಬೈ ವಿಮಾನ ಅಪಹರಣ, ಇಸ್ರೇಲ್ ಏರ್ ಪೋರ್ಟ್ ಮೇಲೆ ದಾಳಿಗೆ ಸಂಚು: ಬಯಲಾಯ್ತು ಉಗ್ರ ಸಹ ಪೈಲಟ್ ನ ಡೆಡ್ಲಿ ಪ್ಲ್ಯಾನ್

flydubai attack: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಹತ್ಯೆ ಮಾಡಿ ಇಸ್ರೇಲ್ ಮೇಲೆ 9/11 ಮಾದರಿಯ ದಾಳಿಗೆ ಸಂಚು ರೂಪಿಸಿದ್ದಾಗಿ ಫ್ಲೈದುಬೈ ವಿಮಾನದ ಸಹ ಪೈಲಟ್ ಹಮಾಮ್ ಅಲ್-ಹಮ್ಮಮಿ ತಿಳಿಸಿದ್ದಾನೆ. ಈ ಕುರಿತು ಮಾಹಿತಿ ನೀಡಿರುವ ತನಿಖಾಧಿಕಾರಿಗಳು ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣ ದಾಳಿಕೋರನ ಗುರಿಯಾಗಿತ್ತು ಎಂದು ತಿಳಿಸಿದ್ದಾರೆ.

ಫ್ಲೈದುಬೈ ಉಗ್ರ ಸಹ ಪೈಲಟ್ ನ ಯೋಜನೆ ಏನಾಗಿತ್ತು?

ಸಂಗ್ರಹ ಚಿತ್ರ -

ಯುಎಇ: ದುಬೈಯಿಂದ (dubai) ಇಸ್ರೇಲ್ (israel)ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈ ದುಬೈ ವಿಮಾನದ (Flydubai Co-Pilot) ಮೇಲಿನ ದಾಳಿಗೆ (flydubai attack)ಸಂಬಂಧಿಸಿ ಹಲವು ಹೊಸ ಮಾಹಿತಿಗಳನ್ನು ತನಿಖಾಧಿಕಾರಿಗಳು ಬಹಿರಂಗ ಪಡಿಸಿದ್ದಾರೆ. ಫ್ಲೈದುಬೈ ಸಹ ಪೈಲಟ್ ಹಮಾಮ್ ಅಲ್-ಹಮ್ಮಮಿ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smith Machchhar) ಅವರನ್ನು ಕೊಂದು ಇಸ್ರೇಲ್ ನ ಬೆನ್ ಗುರಿಯನ್ ವಿಮಾನ ನಿಲ್ದಾಣದ ಮೇಲೆ 9/11 ಮಾದರಿಯ ದಾಳಿ (9/11-Style Attack) ನಡೆಸಲು ಸಂಚು ರೂಪಿಸಿದ್ದನು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಯುಎಇಯಲ್ಲಿ ಬಂಧನದಲ್ಲಿರುವ ಒಮಾನಿನ ಪ್ರಜೆ ಹಮಾಮ್ ಅಲ್ -ಹಮ್ಮಮಿ ಇಸ್ರೇಲ್ ಮೇಲೆ ದಾಳಿ ನಡೆಸುವ ಸಲುವಾಗಿ ಫ್ಲೈದುಬೈ ವಿಮಾನಯಾನ ಸಂಸ್ಥೆಯನ್ನು ಆಯ್ಕೆ ಮಾಡಿದ್ದಾಗಿ ತಿಳಿಸಿದ್ದಾನೆ ಎಂದು ಯುಎಇ ತನಿಖಾಧಿಕಾರಿಗಳ ವಿಚಾರಣೆಯ ವರದಿಗಳು ತಿಳಿಸಿವೆ.

ಸಿಮ್ ಬೇಕಿಲ್ಲ, ಟವರ್ ಹಾಕಿಲ್ಲ, ವೈಫೈ ಅಗತ್ಯವಿಲ್ಲ: ಭಯೋತ್ಪಾದಕರ 'ಲೋರಾ' ಭದ್ರತೆಗೆ ಹೊಸ ಸವಾಲು; ಏನಿದು ಹೊಸ ತಂತ್ರಜ್ಞಾನ?

ಮೊದಲು ಸ್ಮಿತ್ ಮಚ್ಚಾರ್ ಅವರನ್ನು ಕೊಂದು ಬಳಿಕ ವಿಮಾನವನ್ನು ಸಾಮಾನ್ಯ ರೀತಿಯಲ್ಲಿ ಹಾರಿಸಿ ಲ್ಯಾಂಡಿಂಗ್‌ಗೆ ಅಗತ್ಯ ಅನುಮತಿಗಳನ್ನು ಪಡೆದುಕೊಂಡು ಅಂತಿಮವಾಗಿ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿರುವ ಕಟ್ಟಡ ಅಥವಾ ವಿಮಾನವೊಂದಕ್ಕೆ ಉದ್ದೇಶಪೂರ್ವಕವಾಗಿ ವಿಮಾನವನ್ನು ಅಪ್ಪಳಿಸುವ ಯೋಜನೆಯನ್ನು ದಾಳಿಕೋರ ಹೊಂದಿದ್ದನು ಎಂದು ತನಿಖಾಧಿಕಾರಿಗಳಿಗೆ ತಿಳಿಸಿರುವುದಾಗಿ ಇಸ್ರೇಲ್ ಮಾಧ್ಯಮ ವರದಿ ಮಾಡಿದೆ.

ವಿಮಾನವು ಜೋರ್ಡಾನ್‌ನ ವಾಯುಪ್ರದೇಶದ ಮೇಲಿರುವಾಗ ಹಮಾಮ್ ಅಲ್ -ಹಮ್ಮಮಿ ಪೈಲೆಟ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ್ದನು. ಇಸ್ರೇಲ್ ತಲುಪುವ ಮೊದಲು ಅಧಿಕಾರಿಗಳು ತನ್ನ ಸಂಚನ್ನು ಪತ್ತೆಹಚ್ಚಲು ಅಥವಾ ತಡೆಯಲು ಸಾಧ್ಯವಾಗದಂತೆ ಕಡಿಮೆ ಸಮಯ ಸಿಗುವಂತೆ ಮಾಡಲು ಈ ಸಂದರ್ಭವನ್ನು ಆತ ಆಯ್ಕೆ ಮಾಡಿರುವುದಾಗಿ ಹೇಳಿದ್ದಾನೆ.

ಒಂದು ವೇಳೆ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಸಾಧ್ಯವಾಗದೇ ಇದ್ದರೆ ಟೆಲ್ ಅವೀವ್‌ನ ಯಾವುದಾದರೂ ಗಗನಚುಂಬಿ ಕಟ್ಟಡ ಅಥವಾ ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗೆ ವಿಮಾನವನ್ನು ಅಪ್ಪಳಿಸುವ ಯೋಜನೆಯನ್ನು ಆತ ಹೊಂದಿದ್ದ ಎನ್ನಲಾಗಿದೆ.

ಫ್ಲೈದುಬೈ ಸಂಸ್ಥೆಯು ಟೆಲ್ ಅವೀವ್‌ಗೆ ವಿಮಾನಗಳನ್ನು ನಿರ್ವಹಿಸುತ್ತಿದ್ದ ಕಾರಣಕ್ಕಾಗಿಯೇ ಅಲ್-ಹಮ್ಮಮಿ ಇದನ್ನು ಆಯ್ಕೆ ಮಾಡಿಕೊಂಡಿದ್ದನು. ಕೆಲಸ ಸಿಗುವ ಮೊದಲೇ ಇದನ್ನು ಆತ ಯೋಜಿಸಿದ್ದನು. ಈ ದಾಳಿಗೂ ಮೊದಲು ಹಲವು ಬಾರಿ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ವಿಮಾನ ಚಲಾಯಿಸಿದ್ದನು. ಕಳೆದ ಜೂನ್‌ನಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದ ಆತ ಮಾಹಿತಿ ಸಂಗ್ರಹ ಮತ್ತು ಯೋಜನೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿದ್ದನು. ಜುಲೈ ತಿಂಗಳ ಆರಂಭದಲ್ಲಿ ಅಲ್-ಹಮ್ಮಮಿ ದಾಳಿ ಯೋಜನೆ ಮಾಡಿದ್ದು ಸಿಬ್ಬಂದಿಯೊಬ್ಬರೊಂದಿಗೆ ಸ್ನೇಹ ಬೆಳೆದಿದ್ದರಿಂದ ಕೊನೆಯ ಕ್ಷಣದಲ್ಲಿ ಆ ಯೋಜನೆಯನ್ನು ಕೈಬಿಟ್ಟಿದ್ದನು ಎನ್ನಲಾಗಿದೆ.

ಫ್ಲೈ ದುಬೈ ವಿಮಾನ ಪ್ರಯಾಣದ ವೇಳೆ ಪ್ರಾರ್ಥನೆ ಮಾಡಲು ಅನುಮತಿ ಕೇಳಿದ ಅಲ್-ಹಮ್ಮಮಿ ಬಳಿಕ ಕಾಕ್‌ಪಿಟ್‌ನಲ್ಲಿದ್ದ ತುರ್ತು ಬಳಕೆಯ ಕೊಡಲಿಯಿಂದ ಭಾರತೀಯ ಕ್ಯಾಪ್ಟನ್ ಮೇಲೆ ದಾಳಿ ನಡೆಸಿದನು. ಇದರಿಂದ ತೀವ್ರ ಗಾಯಗೊಂಡ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆದರು. ತಕ್ಷಣವೇ ಪ್ರಯಾಣಿಕರು ಮತ್ತು ಸಿಬ್ಬಂದಿ ಸ್ಪಂದಿಸಿದ್ದರಿಂದ ದಾಳಿಕೋರನನ್ನು ನಿಯಂತ್ರಿಸಿ ವಿಮಾನವನ್ನು ತುರ್ತಾಗಿ ಸೌದಿ ಅರೇಬಿಯಾದ ತಬುಕ್‌ನಲ್ಲಿ ಇಳಿಸಲಾಯಿತು.

ದಾಳಿಯ ವೇಳೆ ಅಲ್-ಹಮ್ಮಮಿ ವಿಮಾನದ ನಿಯಂತ್ರಣ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ವಿಮಾನವು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಸುಮಾರು 16,000 ಅಡಿಗಳಷ್ಟು ಕೆಳಕ್ಕೆ ಕುಸಿದಿದೆ. ಆತ ಎಂಜಿನ್‌ಗಳನ್ನು ಆಫ್ ಮಾಡಿ ಮತ್ತು ರಡ್ಡರ್‌ಗಳನ್ನು ಮುಂದಕ್ಕೆ ತಳ್ಳಿದ್ದನು. ಇದರಿಂದ ವಿಮಾನವು ವೇಗವಾಗಿ ಕೆಳಮುಖವಾಗಿ ಚಲಿಸತೊಡಗಿತು. ಆದರೆ ಸಮಯಕ್ಕೆ ಸರಿಯಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ಕ್ಯಾಪ್ಟನ್ ಸಹಾಯಕ್ಕೆ ಬಂದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿತ್ತು.

ಭಾರತೀಯ ನೌಕಾಪಡೆಯ ನಾವಿಕ ಹನಿಟ್ರ್ಯಾಪ್‌ಗೆ ಬಲಿ: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ

ಈ ಘಟನೆಯ ಬಳಿಕ ವಾಣಿಜ್ಯ ವಿಮಾನಯಾನಕ್ಕೆ ಪೈಲೆಟ್ ಗಳ ಆಯ್ಕೆ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳು ಹುಟ್ಟುಹಾಕಿವೆ. ಉಗ್ರಗಾಮಿ ನಿಲುವನ್ನು ಹೊಂದಿದ್ದ 29 ವರ್ಷದ ಅಲ್-ಹಮ್ಮಮಿ ಬಗ್ಗೆ ಕಳವಳ ಹಿಂದೆಯೇ ವ್ಯಕ್ತವಾಗಿತ್ತು. ಆತನಿಗೆ ಓಮನ್‌ನಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧಿಸಲಾಗಿತ್ತು. ಆದರೆ ಮತ್ತೆ ಆತನನ್ನು ಬೇರೆಡೆ ಹೇಗೆ ಸೇರಿಸಿಕೊಳ್ಳಲಾಯಿತು, ಹಿಂದಿನ ಕಳವಳಗಳ ಬಗ್ಗೆ ಪ್ರಶ್ನಿಸಿರಲಾಗಿಲ್ಲವೇ ಎನ್ನುವ ಕುರಿತು ಕೂಡ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆಯ ಬಳಿಕ ವಿದೇಶಿ ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶಿಸಿದ್ದಾರೆ.