ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Los Angeles Violence: ಲಾಸ್ ಏಂಜಲೀಸ್‌ನಲ್ಲಿ 700 ಮೆರೀನ್‌ಗಳ ತಾತ್ಕಾಲಿಕ ನಿಯೋಜನೆ: ಟ್ರಂಪ್ ವಿರುದ್ಧ ಮೊಕ್ಕದ್ದಮೆ ದಾಖಲು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ಜಾರಿ ನೀತಿಗಳ ವಿರುದ್ಧ ಲಾಸ್ ಏಂಜಲೀಸ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು (Los Angeles Violence) ನಡೆಯುತ್ತಿವೆ. ಈ ನಡುವೆ ಭದ್ರತೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಟ್ರಂಪ್ ಆದೇಶದ ಹಿನ್ನೆಲೆಯಲ್ಲಿ ಯುಎಸ್ ಮಿಲಿಟರಿ ಸೋಮವಾರ ಲಾಸ್ ಏಂಜಲೀಸ್‌ಗೆ ಸುಮಾರು 700 ಮೆರೀನ್‌ಗಳನ್ನು ತಾತ್ಕಾಲಿಕವಾಗಿ ನಿಯೋಜಿಸಿದೆ.

ಕ್ಯಾಲಿಫೋರ್ನಿಯದಲ್ಲಿ ಟ್ರಂಪ್ ವಿರುದ್ಧ ಮೊಕ್ಕದ್ದಮೆ  ದಾಖಲು

ಲಾಸ್ ಏಂಜಲೀಸ್: ವಲಸೆ ಜಾರಿ ನೀತಿಗಳ (Immigration enforcement policies) ವಿರುದ್ಧ ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟನೆಗಳು (Los Angeles Violence) ಹಿಂಸಾತ್ಮಕ ರೂಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ (US president) ಡೊನಾಲ್ಡ್ ಟ್ರಂಪ್ (Donald Trump) ಆದೇಶದ ಮೇರೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಯುಎಸ್ ಮಿಲಿಟರಿ ಸೋಮವಾರ ಲಾಸ್ ಏಂಜಲೀಸ್‌ಗೆ ಸುಮಾರು 700 ಮೆರೀನ್‌ಗಳನ್ನು ತಾತ್ಕಾಲಿಕವಾಗಿ ನಿಯೋಜಿಸಿದೆ. ಲಾಸ್ ಏಂಜಲೀಸ್‌ನಲ್ಲಿ ಹಿಂಸಾತ್ಮಕ ಪ್ರತಿಭಟಗಳು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಈ ನಡುವೆ ಟ್ರಂಪ್ ಮಾಡಿರುವ ಫೆಡರಲ್ ನಿಯೋಜನೆ ಕಾನೂನುಬಾಹಿರವಾಗಿದೆ ಎಂದು ಕರೆದಿರುವ ಕ್ಯಾಲಿಫೋರ್ನಿಯ ಆಡಳಿತವು ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ಜಾರಿ ನೀತಿಗಳ ವಿರುದ್ಧ ಲಾಸ್ ಏಂಜಲೀಸ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಭದ್ರತೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಟ್ರಂಪ್ ಆದೇಶದ ಹಿನ್ನೆಲೆಯಲ್ಲಿ ಯುಎಸ್ ಮಿಲಿಟರಿ ಸೋಮವಾರ ಲಾಸ್ ಏಂಜಲೀಸ್‌ಗೆ ಸುಮಾರು 700 ಮೆರೀನ್‌ಗಳನ್ನು ತಾತ್ಕಾಲಿಕವಾಗಿ ನಿಯೋಜಿಸಿದೆ. ಇದು ಇಲ್ಲಿರುವ ರಾಷ್ಟ್ರೀಯ ಗಾರ್ಡ್ ಪಡೆಗಳನ್ನು ಬೆಂಬಲಕ್ಕಾಗಿ ಎಂದು ಹೇಳಲಾಗಿದೆ. ಆದರೆ ಈ ಫೆಡರಲ್ ನಿಯೋಜನೆಯನ್ನು ಕಾನೂನುಬಾಹಿರ ಎಂದು ಕ್ಯಾಲಿಫೋರ್ನಿಯಾ ಆಡಳಿತ ಆರೋಪಿಸಿದೆ.

ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪಕ್ಕೆ ತಿರುಗಿರುವುದರಿಂದ ಟ್ರಂಪ್ ಸರ್ಕಾರವು 2,000 ನ್ಯಾಷನಲ್ ಗಾರ್ಡ್ ಪಡೆಗಳ ಹೆಚ್ಚುವರಿ ನಿಯೋಜನೆಗೆ ಆದೇಶಿಸಿತ್ತು. ಇದರಿಂದ ಇಲ್ಲಿ ನ್ಯಾಷನಲ್ ಗಾರ್ಡ್ ಸದಸ್ಯರ ಸಂಖ್ಯೆ 4,000ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಇಲ್ಲಿ ಕಾನೂನು ಜಾರಿಗೊಳಿಸಲು ಮಿಲಿಟರಿ ಬಳಸಲು ಅನುಮತಿ ನೀಡುವ ದಂಗೆ ಕಾಯ್ದೆ ಪೆಂಟಗನ್ ಅನ್ನು ಜಾರಿಗೊಳಿಸಿಲ್ಲ ಎಂದು ಕ್ಯಾಲಿಫೋರ್ನಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಂಪ್ ಅವರು ಲಾಸ್ ಏಂಜಲೀಸ್‌ಗೆ ಹೆಚ್ಚುವರಿಯಾಗಿ 2,000 ರಾಷ್ಟ್ರೀಯ ಗಾರ್ಡ್ ಪಡೆಗಳನ್ನು ಕಳುಹಿಸಿರುವ ಕುರಿತು ಪ್ರತಿಕ್ರಿಯಿಸಿರುವ ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್, ಇಲ್ಲಿಯವರೆಗೆ ಕೇವಲ 300 ಸೈನಿಕರನ್ನು ಮಾತ್ರ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಹೆಚ್ಚಿನ ಸೈನಿಕರು ಆದೇಶಗಳಿಲ್ಲದೆ ಫೆಡರಲ್ ಕಟ್ಟಡಗಳಲ್ಲಿ ಕುಳಿತಿದ್ದಾರೆ ಎಂದು ಹೇಳಿದರು.

ಮೊದಲು ಫೆಡರಲ್ ಕಟ್ಟಡಗಳಲ್ಲಿರುವ ಸೈನಿಕರಿಗೆ ಸರಿಯಾಗಿ ಆಹಾರ ಅಥವಾ ನೀರು ನೀಡಲಿ ಎಂದು ಟ್ವಿಟ್ ಮಾಡಿರುವ ಅವರು, ಇದು ಸಾರ್ವಜನಿಕ ಸುರಕ್ಷತೆ ಬಗ್ಗೆ ಅಲ್ಲ. ಅಪಾಯಕಾರಿ ಅಧ್ಯಕ್ಷರ ಅಹಂಕಾರವಾಗಿದೆ. ಇದು ಅಜಾಗರೂಕ. ಅರ್ಥಹೀನ ಮತ್ತು ನಮ್ಮ ಪಡೆಗಳಿಗೆ ನೀಡಿರುವ ಅಗೌರವವಾಗಿದೆ ಎಂದು ಅವರು ಹೇಳಿದ್ದಾರೆ.

ವಲಸೆ ನೀತಿ ಜಾರಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದು, ಇದನ್ನು ನಿಯಂತ್ರಿಸಲು ಸುಮಾರು 300 ಕ್ಯಾಲಿಫೋರ್ನಿಯಾ ರಾಷ್ಟ್ರೀಯ ಗಾರ್ಡ್ ಪಡೆಗಳನ್ನು ಭಾನುವಾರ ನಿಯೋಜಿಸಲಾಯಿತು. ಫೆಡರಲ್ ಅಧಿಕಾರದ ಅಡಿಯಲ್ಲಿ ಆದೇಶಿಸಲಾದ ಆ ಪಡೆಗಳ ಆಗಮನಕ್ಕೆ ರಾಜ್ಯ ನಾಯಕರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ಗಾರ್ಡ್ ಅನ್ನು ಅಮೆರಿಕ ಫೆಡರಲ್ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನಿಯಂತ್ರಿಸುತ್ತವೆ. ಆದರೆ ರಾಜ್ಯ ಸರ್ಕಾರದ ಅನುಮತಿ ಪಡೆಯದೆ ಟ್ರಂಪ್ ಅವರು ರಾಷ್ಟ್ರೀಯ ಗಾರ್ಡ್ ನಿಯೋಜನೆಯ ಮಾಡಿರುವುದನ್ನು ವಿರೋಧಿಸಿರುವ ಕ್ಯಾಲಿಫೋರ್ನಿಯಾ ಇದು ಕಾನೂನು ಬಾಹಿರ ಎಂದು ಹೇಳಿದೆ.

ಇದನ್ನೂ ಓದಿ: Viral News: ಸತ್ತು 8 ನಿಮಿಷಗಳ ನಂತ್ರ ಬದುಕಿ ಬಂದ ಯುವತಿ; ಬಿಚ್ಚಿಟ್ಟ ಸಾವಿನ ರಹಸ್ಯ ಏನು?

ಟ್ರಂಪ್ ಆಡಳಿತದ ವಿರುದ್ಧ ರಾಜ್ಯವು ಮೊಕದ್ದಮೆ ಹೂಡಿದೆ ಎಂದು ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ರಾಬ್ ಬೊಂಟಾ ಸೋಮವಾರ ಘೋಷಿಸಿದ್ದಾರೆ. ಟ್ರಂಪ್ ಆಡಳಿತವು ಫೆಡರಲ್ ನಿಯೋಜನೆ ಮಾಡಿರುವುದು ರಾಜ್ಯದ ಸಾರ್ವಭೌಮತ್ವವನ್ನು ದುರ್ಬಲಗೊಳಿಸಲು ಮಾಡಿರುವ ಅಧಿಕಾರದ ದುರುಪಯೋಗ. ಮಿಲಿಟರಿ ಉಪಸ್ಥಿತಿಯು ರಾಜ್ಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ನಾಗರಿಕ ಭಿನ್ನಾಭಿಪ್ರಾಯಕ್ಕೆ ಮಿಲಿಟರಿ ಪ್ರತಿಕ್ರಿಯೆ ಬಗ್ಗೆ ಅನೇಕ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು. ಆದರೆ ಫೆಡರಲ್ ನಿಯೋಜನೆಯನ್ನು ಸಮರ್ಥಿಸಿಕೊಂಡಿರುವ ಅಧ್ಯಕ್ಷ ಟ್ರಂಪ್, ನಾವು ಗಾರ್ಡ್ ಅನ್ನು ಕಳುಹಿಸದಿದ್ದರೆ ನಗರವು ಸಂಪೂರ್ಣವಾಗಿ ನಾಶವಾಗುತ್ತಿತ್ತು ಎಂದು ಹೇಳಿದ್ದಾರೆ.