ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರಿ ಭೂಕಂಪದಿಂದ ಸುನಾಮಿ: ಫಿಲಿಪೈನ್ಸ್‌ನಲ್ಲಿ 4 ಮಂದಿ ಸಾವು 200 ಕ್ಕೂ ಹೆಚ್ಚು ಮಂದಿಗೆ ಗಾಯ

ಫಿಲಿಪೈನ್ಸ್‌ನಲ್ಲಿ ಭಾರಿ ಭೂಕಂಪದಿಂದ ಸುನಾಮಿ ಎದ್ದಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 200 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಬುರಿಯಾಸ್‌ನ ಪಶ್ಚಿಮ ನೈಋತ್ಯ ಭಾಗದ 24.7 ಕಿಲೋಮೀಟರ್ ದೂರದಲ್ಲಿ 35 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರಬಿಂದುವಿದ್ದು, ಇದರಿಂದ ಹತ್ತಿರದ ಕರಾವಳಿಯಲ್ಲಿ ಸುಮಾರು 1 ಮೀಟರ್ ಎತ್ತರದ ಸುನಾಮಿಯನ್ನು ಉಂಟುಮಾಡಿದೆ.

ಫಿಲಿಪೈನ್ಸ್‌ನಲ್ಲಿ ಭಾರಿ ಭೂಕಂಪ

ಸಂಗ್ರಹ ಚಿತ್ರ -

ಮನಿಲಾ: ಭಾರಿ ಭೂಕಂಪ (earthquake) ಮತ್ತು ಇದರಿಂದ ಉಂಟಾದ ಸುನಾಮಿಯ (Tsunami) ಕಾರಣದಿಂದ ಫಿಲಿಪೈನ್ಸ್‌ನಲ್ಲಿ (Philippines) 4 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡ ಘಟನೆ ನಡೆದಿದೆ. ಭೂಕಂಪದ ಕೇಂದ್ರಬಿಂದು ಬುರಿಯಾಸ್‌ನ ಪಶ್ಚಿಮ ನೈಋತ್ಯ ಭಾಗದ 24.7 ಕಿಲೋಮೀಟರ್ ದೂರ ಮತ್ತು 35 ಕಿಲೋ ಮೀಟರ್ ಆಳದಲ್ಲಿತ್ತು. 7.8 ತೀವ್ರತೆಯ ಭೂಕಂಪಕ್ಕೆ ದಕ್ಷಿಣದ ನಗರದಲ್ಲಿನ ಎತ್ತರದ ಕಟ್ಟಡಗಳು ಮತ್ತು ಪ್ರಮುಖ ಪ್ರವೇಶ ಸೇತುವೆಗೆ ಹಾನಿಯಾಗಿದೆ. ಅಲ್ಲದೇ ಇದರಿಂದ ಹತ್ತಿರದ ಕರಾವಳಿಯಲ್ಲಿ ಸುಮಾರು 1 ಮೀಟರ್ ಎತ್ತರದ ಸುನಾಮಿ ಉಂಟಾಗಿದೆ.

ಫಿಲಿಪೈನ್ಸ್‌ನ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರು ಸುನಾಮಿಗೆ ಗುರಿಯಾಗುವ ಪ್ರದೇಶಗಳ ಜನರು ಸುರಕ್ಷಿತ ಪ್ರದೇಶಗಳಿಗೆ ಹೋಗುವಂತೆ ಎಚ್ಚರಿಕೆಯನ್ನು ನೀಡಿದ್ದು,ಇಂಡೋನೇಷ್ಯಾ ಮತ್ತು ಮಲೇಷಿಯಾದ ಅಧಿಕಾರಿಗಳು ಕೂಡ ಹತ್ತಿರದ ಕರಾವಳಿ ಪ್ರದೇಶಗಳಲ್ಲಿ ಎಚ್ಚರಿಕೆಯನ್ನು ಹೊರಡಿಸಿದ್ದಾರೆ.

ಅಮೆರಿಕದ ಓಹಿಯೋ ಉತ್ಸವದಲ್ಲಿ ಹರಿದ ನೆತ್ತರು; ಗುಂಡಿನ ದಾಳಿ ನಡೆಸಿದವರಿಗಾಗಿ ತೀವ್ರ ಶೋಧ

ಫಿಲಿಪೈನ್ಸ್‌ನಲ್ಲಿ ಈ ವರ್ಷ ಅತ್ಯಂತ ಪ್ರಬಲ ಭೂಕಂಪವು ಜನರಲ್ ಸ್ಯಾಂಟೋಸ್‌ನ ನೈಋತ್ಯ ಭಾಗದಲ್ಲಾಗಿತ್ತು. ಸುಮಾರು 13 ಕಿಲೋ ಮೀಟರ್ ದೂರದ ಸಮುದ್ರದಲ್ಲಿ ಇದರ ಕೇಂದ್ರವಿತ್ತು. ದಕ್ಷಿಣ ಮಿಂಡಾನಾವೊ ಪ್ರದೇಶದಲ್ಲಿ ಟೂನ ಸಂಸ್ಕರಣೆ ಮತ್ತು ಇತರ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿರುವ ಈ ಪ್ರದೇಶದಲ್ಲಿ ಸುಮಾರು 7,00,000 ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ.

ಭೂಕಂಪ, ಸುನಾಮಿ ಪರಿಸ್ಥಿತಿಯನ್ನು ಎದುರಿಸಲು ವಿಪತ್ತು-ಪ್ರತಿಕ್ರಿಯೆ ತಂಡಗಳು ಸಿದ್ಧವಾಗಿವೆ. ಮಿಂಡಾನಾವೊನಲ್ಲಿ ಉಂಟಾಗಬಹುದಾದ ಅಪಾಯಗಳ ಮುನ್ನೆಚ್ಚರಿಕೆ ಇರುವುದರಿಂದ ಇದರ ಮೇಲೂ ಗಮನವಿರಿಸಲಾಗಿದೆ ಎಂದು ಮಾರ್ಕೋಸ್ ಹೇಳಿದರು.

ಫಿಲಿಪೈನ್ಸ್‌ಗೆ ಹತ್ತಿರುವವಿರುವ ಮಲೇಷ್ಯಾದಲ್ಲಿ ಸೋಮವಾರ ಬೆಳಗ್ಗೆ 7.37ಕ್ಕೆ ಭೂಕಂಪದ ಅನುಭವವಾಗಿದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿಯೂ ಸುನಾಮಿ ಅಲೆಗಳು ಕಂಡು ಬಂದಿವೆ.

ಫಿಲಿಪೈನ್ಸ್‌ನಲ್ಲಿ ಉಂಟಾಗಿರುವ ಭೂಕಂಪನದಿಂದಾಗಿ ಜನರಲ್ ಸ್ಯಾಂಟೋಸ್‌ನಲ್ಲಿ ಮೂವರು ಸಾವನ್ನಪ್ಪಿದ್ದು, 130 ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಲ್ಲಿ ಕೆಲವು ಸಣ್ಣ ಕಟ್ಟಡಗಳು ಭಾಗಶಃ ಕುಸಿಡಿದ್ದು, ಪ್ರಮುಖ ಪ್ರವೇಶ ಸೇತುವೆ ಸೇರಿದಂತೆ ಹಲವಾರು ರಚನೆಗಳ ಮೇಲೆ ಬಿರುಕು ಕಾಣಿಸಿಕೊಂಡಿವೆ. ದಾವೊ ಓರಿಯಂಟಲ್ ಪ್ರಾಂತ್ಯದಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜನರಲ್ ಸ್ಯಾಂಟೋಸ್‌ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, 17 ದೇಶೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗಿನ ಧ್ವಜಾರೋಹಣ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಕೆಲವರು ಭಯಭೀತರಾಗಿ ಮೂರ್ಛೆ ಹೋದರು ಎಂದು ದಕ್ಷಿಣ ಪ್ರದೇಶದ ನಾಗರಿಕ ರಕ್ಷಣಾ ಕಚೇರಿಯ ನಿರ್ದೇಶಕ ಎಡ್ನರ್ ದಯಾಂಗ್‌ಹಿರಾಂಗ್ ತಿಳಿಸಿದ್ದಾರೆ.

ಮನಿಲಾದಲ್ಲಿರುವ ಡಿಝೆಡ್ಆರ್ ಹೆಚ್ ರೇಡಿಯೋ ಸ್ಟೇಷನ್ ನ ಪ್ರಾಂತೀಯ ಶಾಖೆಯ ಕಟ್ಟಡವು ಭಾಗಶಃ ಕುಸಿದು ಬಿದ್ದಿದೆ. ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ನಾಲ್ಕು ಅಂತಸ್ತಿನ ಕಚೇರಿ ಕಟ್ಟಡದ ಅವಶೇಷಗಳಲ್ಲಿ ಇತರರು ಸಿಲುಕಿಕೊಂಡಿದ್ದಾರೆಯೇ ಎನ್ನುವುದು ಸ್ಪಷ್ಠಸ್ವಗಿಲ್ಲ. ಇತರ ಹಲವು ಕಟ್ಟಡಗಳು ಕೂಡ ಭಾಗಶಃ ಕುಸಿದಿದ್ದು, ಕೆಲವೆಡೆ ರಸ್ತೆಗಳಲ್ಲಿ ವಾಹನ ಅಪಘಾತಗಳು ಉಂಟಾಗಿವೆ,

ಫಿಲಿಪೈನ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ ಪ್ರಕಾರ 10 ಕಿಲೋ ಮೀಟರ್ ಆಳದಲ್ಲಿರುವ ಕೊಟಾಬಾಟೊ ಕಂದಕದಲ್ಲಿನ ಚಲನೆಯಿಂದಾಗಿ ಭೂಕಂಪ ಸಂಭವಿಸಿದೆ. ಇದು ಒಂದು ದೊಡ್ಡ ಭೂಕಂಪ ಮತ್ತು ಅಪಾರ ಹಾನಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಭೂಕಂಪನ, ಸುನಾಮಿ ಎಚ್ಚರಿಕೆಯನ್ನು ಗಮನಿಸಿ. ಜೀವ ಉಳಿಸಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿದೆ ಎಂದು ಮಾರ್ಕೋಸ್ ತಿಳಿಸಿದ್ದಾರೆ.

ಫಿಲಿಪೈನ್ಸ್‌ನ ಕೆಲವು ಕರಾವಳಿಗಳಲ್ಲಿ 3 ಮೀಟರ್ ವರೆಗಿನ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ. ಇದು ಇಂಡೋನೇಷ್ಯಾ ಮತ್ತು ಮಲೇಷ್ಯಾದ ಕೆಲವು ಕರಾವಳಿಗಳಲ್ಲಿ 1 ಮೀಟರ್ ವರೆಗೆ ಇರಲಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.

ಶಾಂತಿ ಮಾತುಕತೆ ನಡುವೆಯೇ ದಾಳಿ: ಇರಾನಿನ ಡ್ರೋನ್ ಹೊಡೆದುರುಳಿಸಿದ ಅಮೆರಿಕ

ಮಲೇಷ್ಯಾದ ಹವಾಮಾನ ಇಲಾಖೆಯು ಬೊರ್ನಿಯೊ ದ್ವೀಪದಲ್ಲಿರುವ ಸಬಾ ರಾಜ್ಯಕ್ಕೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಪಶ್ಚಿಮ ಪೆಸಿಫಿಕ್‌ನಲ್ಲಿರುವ ಹಲವಾರು ದ್ವೀಪ ರಾಷ್ಟ್ರಗಲ್ಲಿ ಸಣ್ಣ ಸಮುದ್ರ ಬದಲಾವಣೆ ಕಂಡು ಬಂದಿದ್ದರಿಂದ ಎಚ್ಚರಿಕೆಯನ್ನು ನೀಡಲಾಗಿತ್ತು.