ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಹುದ್ದೆಗೆ ತುಳಸಿ ಗಬ್ಬಾರ್ಡ್ ರಾಜೀನಾಮೆ

Tulsi Gabbard resigns: ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಹುದ್ದೆಗೆ ತುಳಸಿ ಗಬ್ಬಾರ್ಡ್ ರಾಜೀನಾಮೆ ನೀಡಿದ್ದಾರೆ. ಅವರ ಪತಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವುದರಿಂದ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅವರನ್ನು ತಾನು ನೋಡಿಕೊಳ್ಳಬೇಕಾಗಿದೆ ಎಂಬುದಾಗಿ ಅವರು ಹೇಳಿದರು.

ಅಮೆರಿಕದ ಗುಪ್ತಚರ ನಿರ್ದೇಶಕಿ ಹುದ್ದೆಗೆ ತುಳಸಿ ಗಬ್ಬಾರ್ಡ್ ರಾಜೀನಾಮೆ

ತುಳಸಿ ಗಬ್ಬಾರ್ಡ್ (ಸಂಗ್ರಹ ಚಿತ್ರ) -

Priyanka P
Priyanka P May 23, 2026 2:59 PM

ವಾಷಿಂಗ್ಟನ್, ಮೇ 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಸಂಪುಟದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಹುದ್ದೆಗೆ ತುಳಸಿ ಗಬ್ಬಾರ್ಡ್ (Tulsi Gabbard) ರಾಜೀನಾಮೆ ನೀಡಿದ್ದಾರೆ. ಪತಿಯ ಅನಾರೋಗ್ಯದ ಕಾರಣ ನೀಡಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಪತಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವುದರಿಂದ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಈ ಮೂಲಕ ಟ್ರಂಪ್ ಅವರ ಎರಡನೇ ಅಧ್ಯಕ್ಷಾವವಧಿಯಲ್ಲಿ ನಿರ್ಗಮಿಸಿದ ನಾಲ್ಕನೇ ಕ್ಯಾಬಿನೆಟ್ ಅಧಿಕಾರಿಯಾಗಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಅವರು, ಟ್ರಂಪ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತುಳಸಿ ಗಬ್ಬಾರ್ಡ್ ಅವರು ಜೂನ್ 30 ರಂದು ಅಧಿಕಾರ ತೊರೆಯುವುದಾಗಿ ತಿಳಿಸಿದ್ದಾರೆ. ತಮ್ಮ ಪತಿಗೆ ಇತ್ತೀಚೆಗೆ ಅಪರೂಪದ ಮೂಳೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಹೀಗಾಗಿ ಅವರು ಮುಂಬರುವ ದಿನಗಳಲ್ಲಿ ಸವಾಲುಗಳನ್ನು ಎದುರಿಸಲಿದ್ದಾರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅವರನ್ನು ತಾನು ನೋಡಿಕೊಳ್ಳಬೇಕಾಗಿದೆ ಎಂಬುದಾಗಿ ಅವರು ಹೇಳಿದರು.

ಪತಿಯ ಅನಾರೋಗ್ಯದ ಸಮಯದಲ್ಲಿ ಪತ್ನಿಯಾದವಳು ಅವರ ಜೊತೆ ಇರಬೇಕಾದುದು ತನ್ನ ಕರ್ತವ್ಯ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ತಾನು ಅವರಿಗೆ ಸದಾ ಬೆಂಬಲವಾಗಿರಬೇಕು. ಹೀಗಾಗಿ ಸಾರ್ವಜನಿಕ ಸೇವೆಯಿಂದ ದೂರ ಸರಿಯಲು ನಿರ್ಧರಿಸಿದ್ದಾಗಿ ಅವರು ಪತ್ರದಲ್ಲಿ ಬರೆದಿದ್ದಾರೆ.

ಬಕ್ರೀದ್‌ಗೂ ಮುನ್ನ ಬಾಂಗ್ಲಾದೇಶದಲ್ಲಿ ಭಾರಿ ಸದ್ದು ಮಾಡ್ತಿವೆ 'ಡೊನಾಲ್ಡ್ ಟ್ರಂಪ್', 'ನೆತನ್ಯಾಹು' ಎಮ್ಮೆಗಳು!

ಇನ್ನು ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಡೊನಾಲ್ಡ್ ಟ್ರಂಪ್, ತುಳಸಿ ಉತ್ತಮ ಕೆಲಸವನ್ನೇ ಮಾಡಿದ್ದಾರೆ. ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಅವರ ರಾಜೀನಾಮೆ ಬಗ್ಗೆ ತಿಳಿಸಿದರು. ತುಳಸಿ ಅವರ ಸ್ಥಾನಕ್ಕೆ ಆರನ್ ಲುಕಾಸ್ ರಾಷ್ಟ್ರೀಯ ಗುಪ್ತಚರ ವಿಭಾಗದ ಹಂಗಾಮಿ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದರು.

ಟ್ರಂಪ್ ಅವರ ಮೊದಲ ಅಧ್ಯಕ್ಷಾವಧಿಯಲ್ಲಿ, ಲುಕಾಸ್ ಅವರು 2020 ರಲ್ಲಿ ರಾಷ್ಟ್ರೀಯ ಗುಪ್ತಚರದ ಹಂಗಾಮಿ ನಿರ್ದೇಶಕ ರಿಕ್ ಗ್ರೆನೆಲ್ ಅವರಿಗೆ ಗುಪ್ತಚರ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು.

ಅಂದಹಾಗೆ, ಅಮೆರಿಕದ ಸಮೋವಾದಲ್ಲಿ ಜನಿಸಿದ 44 ವರ್ಷದ ತುಳಸಿ ಗಬ್ಬಾರ್ಡ್, ಹವಾಯಿಯಲ್ಲಿ ಬೆಳೆದರು. ಫಿಲಿಪೈನ್ಸ್‌ನಲ್ಲಿ ತನ್ನ ಒಂದು ವರ್ಷ ಬಾಲ್ಯವನ್ನು ಕಳೆದರು. ರಾಜಕೀಯ ಕ್ಷೇತ್ರಕ್ಕೆ ಅವರು ಬಹಳ ಚಿಕ್ಕ ವಯಸ್ಸಿನಲ್ಲೇ ಪ್ರವೇಶಿಸಿದರು. ಹವಾಯಿಯ ಪ್ರತಿನಿಧಿಗಳ ಸದನಕ್ಕೆ 21 ವರ್ಷದವಳಿದ್ದಾಗ ಆಯ್ಕೆಯಾದರು. ಆದರೆ ಮೊದಲ ಅವಧಿಯಲ್ಲೇ ಅವರು ಹುದ್ದೆಯಿಂದ ಹೊರಬರಬೇಕಾಯಿತು.

ಅಮೆರಿಕ ಸಂಸತ್ತಿನ ಇತಿಹಾಸದಲ್ಲೇ ಮೊದಲ ಹಿಂದೂ ಸದಸ್ಯೆಯಾಗಿದ್ದ ಅವರು, ಕಾಂಗ್ರೆಸ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಹಿಂದೂ ಧಾರ್ಮಿಕ ಗ್ರಂಥವಾದ ಭಗವದ್ಗೀತೆ ಮೇಲೆ ಇಟ್ಟು ಪ್ರಮಾಣವಚನ ಸ್ವೀಕರಿಸಿದ್ದರು.