ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವನೆ ಮಾಡಿದರೆ ಈ ಆರೋಗ್ಯ ಲಾಭ ಸಿಗಲಿದೆ!

Health Tips: ಅನಾರೋಗ್ಯಕ್ಕೆ ತುತ್ತಾಗಿದ್ದೇವೆ ಎಂದಾಗ ದುಬಾರಿ ಚಿಕಿತ್ಸೆಯ ಮೊರೆ ಹೋಗುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ಅಡುಗೆ ಮನೆಯಲ್ಲೇ ಸಿಗುವ ಸುಲಭ ಆಹಾರದ ಮೂಲಕ ಚಿಕಿತ್ಸೆ ಪಡೆಯಬಹುದು. ಅದರಲ್ಲಿ ಪ್ರಮುಖವಾಗಿ ನೆಲ್ಲಿಕಾಯಿ ಕೂಡ ಒಂದಾಗಿದ್ದು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಇದು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳನ್ನು ನೀಡುತ್ತವೆ‌. ಆರೋಗ್ಯ ತಜ್ಞರ ಸಲಹೆಯಂತೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ನೆಲ್ಲಿಕಾಯಿ ಸೇವನೆ ಮಾಡಿದರೆ ಹಲವು ಆರೋಗ್ಯ ಲಾಭವನ್ನು ಪಡೆಯಬಹುದು.

ಆಮ್ಲಾದಿಂದ ದೇಹಕ್ಕೆ ಈ ಆರೋಗ್ಯ ಪ್ರಯೋಜನ ಸಿಗಲಿದೆ!

ಸಂಗ್ರಹ ಚಿತ್ರ -

Profile
Pushpa Kumari May 16, 2026 7:00 AM

ನವದೆಹಲಿ,ಮೇ 15: ಇತ್ತೀಚೆಗೆ ಕೆಲಸದ ಒತ್ತಡ, ಆಧುನಿಕ ಆಹಾರ ಪದ್ದತಿಯಿಂದಾಗಿ ಅನೇಕರು ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಅನಾರೋಗ್ಯಕ್ಕೆ (Health Tips) ತುತ್ತಾಗಿದ್ದೇವೆ ಎಂದಾಗ ದುಬಾರಿ ಚಿಕಿತ್ಸೆಯ ಮೊರೆ ಹೋಗುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ಅಡುಗೆ ಮನೆಯಲ್ಲೇ ಸಿಗುವ ಸುಲಭ ಆಹಾರದ ಮೂಲಕ ಚಿಕಿತ್ಸೆ ಪಡೆಯಬಹುದು. ಅದರಲ್ಲಿ ಪ್ರಮುಖವಾಗಿ ನೆಲ್ಲಿಕಾಯಿ ಕೂಡ ಒಂದಾಗಿದ್ದು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಇದು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳನ್ನು ನೀಡುತ್ತವೆ‌. ಆರೋಗ್ಯ ತಜ್ಞರ ಸಲಹೆಯಂತೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ನೆಲ್ಲಿಕಾಯಿ ಸೇವನೆ ಮಾಡಿದರೆ ಹಲವು ಆರೋಗ್ಯ ಲಾಭವನ್ನು ಪಡೆಯಬಹುದು.

ಸಕ್ಕರೆ ಏರಿಕೆಯನ್ನು ನಿಯಂತ್ರಣ ಮಾಡುತ್ತದೆ:

ಸಾಮಾನ್ಯವಾಗಿ ಸಕ್ಕರೆ ಪ್ರಮಾಣ ದೇಹದಲ್ಲಿ ಹೆಚ್ಚಿರುತ್ತದೆ. ಇದನ್ನು ತಡೆಯಲು ನೀವು ನೆಲ್ಲಿಕಾಯಿ ಬಳಕೆ ಮಾಡ ಬಹುದು.ಹಣ್ಣಿನಲ್ಲಿರುವ ನಾರಿನ ಅಂಶವವು ದೇಹದಲ್ಲಿ ಸಕ್ಕರೆ ಅಂಶ ತ್ವರಿತವಾಗಿ ಕರಗುವಂತೆ ಮಾಡುತ್ತದೆ‌. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಇದ್ದಕ್ಕಿದ್ದಂತೆ ಏರಿಕೆಯಾಗದಂತೆ ತಡೆಯಲು ಸಹಕಾರಿಯಾಗುತ್ತದೆ.

ಕೂದಲು ಮತ್ತು ಚರ್ಮದ ಆರೋಗ್ಯ:

ಆಮ್ಲವು ಚರ್ಮದ ರಕ್ಷಣೆಗೆ ಹೆಸರುವಾಸಿಯಾಗಿದೆ.ಇದರಲ್ಲಿರುವ ಹೆಚ್ಚಿನ ವಿಟಮಿನ್ ಸಿ ಅಂಶವು ದೇಹಕ್ಕೆ ಕಾಲಜನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ರಕ್ಷಣೆ ಮಾಡಿ ಕೂದಲನ್ನು ಹೊಳೆಯುವಂತೆ ಮಾಡುತ್ತದೆ.

Health Tips: ಬ್ರೇಕ್‌ಫಾಸ್ಟ್‌ ಸ್ಕಿಪ್‌ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!

ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ:

ಜೀರ್ಣಕ್ರಿಯೆಗೆ, ಆಮ್ಲಾ ನೈಸರ್ಗಿಕ ಕ್ಲೆನ್ಸರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸಿ, ಜೀರ್ಣಕ್ರಿಯೆಯನ್ನು ಸರಾಗವಾಗಿ ಪ್ರೇರಿಪಿಸುತ್ತದೆ‌. ಖಾಲಿ ಹೊಟ್ಟೆಯಲ್ಲಿ ಆಮ್ಲಾ ಸೇವಿಸುವುದು ಜೀರ್ಣಕಾರಿ ರಸವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಯಕೃತ್ತಿನ ಕಾರ್ಯವನ್ನು ಬೆಂಬಲಿಸುತ್ತದೆ:

ಆಮ್ಲಾವು ಯಕೃತ್ತಿಗೆ ಹೆಚ್ಚು ಉಪಯೋಗಕಾರಿಯಾಗಿದೆ. ಆಮ್ಲಾದಲ್ಲಿರುವ ಕೆಲವು ಸಂಯುಕ್ತಗಳು ಯಕೃತ್ತು ತನ್ನ ನೈಸರ್ಗಿಕ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ:

ನೆಲ್ಲಿಕಾಯಿಯಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಹೆಚ್ಚಾಗಿದ್ದು ಇವು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ರೋಗಾಣುಗಳ ವಿರುದ್ಧ ಹೋರಾಡುವಂತೆ ಮಾಡುತ್ತದೆ.ಆಮ್ಲಾವನ್ನು ನೀವು ಪುಡಿ ರೂಪದಲ್ಲಿ, ಒಣಗಿದ ಹಣ್ಣುಗಳಾಗಿ ಅಥವಾ ರಸವಾಗಿಯೂ ತೆಗೆದುಕೊಳ್ಳಬಹುದು.