ಮಾತು ಕಮ್ಮಿ ಮಾಡಿ ಮೌನ ವ್ರತ ಪಾಲಿಸಿದರೆ ಈ ಎಲ್ಲ ಆರೋಗ್ಯ ಲಾಭ ನಿಮ್ಮದಾಗಲಿದೆ; ಈ ಬಗ್ಗೆ ತಜ್ಞರು ಹೇಳೋದೇನು?
Benefit of Silence: ಜೀವನದಲ್ಲಿ ಮೌನವಾಗಿರುವುದು ನಮ್ಮ ವ್ಯಕ್ಯಿತ್ವ ರೂಪುಗೊಳ್ಳಲು ಸಹಕಾರಿ. ಜತೆಗೆ ಮೌನವಾಗಿರುವುದು ವೈಜ್ಞಾನಿಕ ದೃಷ್ಟಿಯಿಂದ ಏನೆಲ್ಲ ಅನುಕೂಲ ಇದೆ ಎಂಬುದನ್ನು ವಿಶ್ವವಾಣಿ ಹೆಲ್ತ್ ಚಾನಲ್‌ನಲ್ಲಿ ಖ್ಯಾತ ವೈದ್ಯ ಡಾ. ಮಾಲಿನಿ ಎಸ್. ಸುತ್ತೂರು ತಿಳಿಸಿಕೊಟ್ಟಿದ್ದಾರೆ. ದೊಡ್ಡ ಸಾಧಕರು ಕೂಡ ಮಾತಿಗಿಂತ ಕೃತಿ ಲೇಸು ಎಂಬ ತತ್ವ ಅಳವಡಿಸಿಕೊಂಡಿದ್ದರು. ಮೌನವಾಗಿರುವುದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಬಹಳ ಪ್ರಯೋಜನೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಡಿ. 6: ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತಿದೆ. ಮಾತನಾಡಿ ಕೆಟ್ಟವರಾಗುವ ಬದಲು ಮೌನವಾಗಿದ್ದು, ಎಲ್ಲವನ್ನು ಸರಿಮಾಡುವ ಚತುರತೆ ಬಹಳ ಮುಖ್ಯ. ಜೀವನದಲ್ಲಿ ಮೌನವಾಗಿರುವುದು ನಮ್ಮ ವ್ಯಕ್ಯಿತ್ವ ರೂಪುಗೊಳ್ಳಲು ಸಹಕಾರಿಯಾಗುವ ಜತೆಗೆ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಪ್ರಯೋಜನ ಸಿಗುತ್ತದೆ ಎಂಬುದನ್ನು ವಿಶ್ವವಾಣಿ ಹೆಲ್ತ್ ಚಾನಲ್‌ಗೆ ನೀಡಿದ ವೈದ್ಯೆ ಡಾ. ಮಾಲಿನಿ ಎಸ್. ಸುತ್ತೂರು (Dr. Malini S. Suttur) ತಿಳಿಸಿ ಕೊಟ್ಟಿದ್ದಾರೆ. ದೊಡ್ಡ ಸಾಧಕರು ಕೂಡ ಮಾತಿಗಿಂತ ಕೃತಿ ಲೇಸು ಎಂಬ ತತ್ವ ಅಳವಡಿಸಿಕೊಂಡಿದ್ದರು. ಮೌನವಹಿಸುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಬಹಳ ಪ್ರಯೋಜನೆ ಸಿಗಲಿದೆ ಎಂದು ಅವರು ಅನೇಕ ಉಪಯುಕ್ತ ಸಂಗತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೌನದ ಪ್ರಾಮುಖ್ಯತೆ ಬಗ್ಗೆ ನಮ್ಮ ಪೂರ್ವಜರಿಗೆ ಒಂದು ವಿಶೇಷ ನಂಬಿಕೆ ಇತ್ತು. ಇದಕ್ಕಾಗಿಯೇ ಹಿಂದಿನ ಕಾಲದಲ್ಲಿ ಮೌನ ವ್ರತ ಮಾಡುವುದು, ಆಶ್ರಮ ಇತ್ಯಾದಿಗಳಲ್ಲಿ ಮೌನಾಚರಣೆಯನ್ನು ಅತ್ಯಂತ ಕಠಿಣವಾಗಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಹೆಚ್ಚು ಮೌನವಾದಷ್ಟು ನಾವು ಅಂತರ್ಮುಖಿಯಾಗಿ ನಮ್ಮನ್ನು ನಾವು ಹೆಚ್ಚು ಅರಿಯಬಹುದು. ಧ್ಯಾನಗಳಲ್ಲಿ ಕೂಡ ಮೌನ ಎನ್ನುವುದು ಪ್ರಧಾನ ಪಾತ್ರವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.
ವಿಡಿಯೊ ನೋಡಿ:
ಮಾನಸಿಕ ಆರೋಗ್ಯ ವೃದ್ಧಿ
ಯುವ ಜನಾಂಗಕ್ಕೆ ಮಾನಸಿಕ ರೋಗದ ಸಮಸ್ಯೆ ಬಹಳಷ್ಟು ಕಾಡುತ್ತಿದೆ. ಹೀಗಾಗಿ ವೈದ್ಯರ ಮೊರೆ ಹೋದಾಗ ಬಹುತೇಕ ಕಡೆಗಳಲ್ಲಿ ಯೋಗ, ಧ್ಯಾನ ಮಾಡುವಂತೆ ಸಲಹೆ ನೀಡುತ್ತಾರೆ. ಮೌನವಾಗಿದ್ದು ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡುವ ಇಂತಹ ಹವ್ಯಾಸದಿಂದ ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ. ಮೌನದಿಂದ ನಿಮ್ಮಲ್ಲಿರುವ ತಾಳ್ಮೆಯು ಕೂಡ ವೃದ್ಧಿಯಾಗಲಿದೆ. ಹೀಗಾಗಿ ನೆನಪಿನ ಶಕ್ತಿ ವೃದ್ಧಿಯಾಗಲಿದೆ, ಖಿನ್ನತೆ ಸಮಸ್ಯೆ ಬರಲಾರದು ಎಂದು ಅವರು ಸಲಹೆ ನೀಡಿದ್ದಾರೆ.
ಚಳಿಗಾಲದಲ್ಲಿ ನೆಲ್ಲಿಕಾಯಿ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭ ಇದೆ ಗೊತ್ತಾ?
ವೈಜ್ಞಾನಿಕವಾಗಿ ಏನೆಲ್ಲ ಉಪಯೋಗ ಇದೆ?
- ಮೌನ ವಹಿಸುವುದರಿಂದ ನಮ್ಮಲ್ಲಿ ಒತ್ತಡವನ್ನು ಉಂಟು ಮಾಡುವ ಕಾಟಿಸಾ ಹಾರ್ಮೋನಿಯಂ ಪ್ರಮಾಣ ಕಡಿಮೆಯಾಗುತ್ತ ಬರುತ್ತದೆ. ಇದರಿಂದಾಗಿ ಹೃದಯ ಸರಿಯಾಗಲಿದೆ. ರಕ್ತದೊತ್ತಡ ಸರಿ ಪ್ರಮಾಣದಲ್ಲಿ ಇರಲಿದೆ.
- ನಾವು ಮೌನವಾಗಿದ್ದಾಗ ನರಕೋಶಗಳು ಬಹಳ ಆರೋಗ್ಯಯುತವಾಗಿ ಇರುತ್ತವೆ
- ಮೌನದಿಂದಾಗಿ ಗ್ರಹಿಕೆಯ ಶಕ್ತಿ ವೃದ್ಧಿಯಾಗಲಿದ್ದು ಏಕಾಗ್ರತೆ ವೃದ್ಧಿಗೆ ಸಹಕಾರಿ.
- ಮೌನಿಯಾಗಿದ್ದಾಗ ನಮ್ಮಲ್ಲಿರುವ ಪ್ಯಾರಸಿಂಪಥಿಟಿಕ್ ನರಗಳ ಆರೋಗ್ಯ ವೃದ್ಧಿಯಾಗಲಿದೆ. ದೇಹದ ಎಲ್ಲ ಕ್ರಿಯೆಗಳಿಗೂ ಶಾಂತವಾಗಿ ಇರುವಂತೆ ಅದು ನೋಡಿಕೊಳ್ಳಲಿದೆ.
- ಮೌನವಾಗಿದ್ದಷ್ಟು ಹೊಸ ಆಲೋಚನಾ ಕ್ರಮ ಹುಟ್ಟುತ್ತದೆ. ನಿರ್ಧಾರಗಳ ಬಗ್ಗೆ ಸ್ಪಷ್ಟನೆ ಇರಲಿದೆ, ತರ್ಕ ಮಾಡುವುದು, ವಿಭಿನ್ನವಾಗಿ ಯೋಚಿಸುವುದು ಹೀಗೆ ನಾನಾ ವಿಧವಾಗಿ ಮೌನವು ಒಳಿತು ಮಾಡುತ್ತದೆ.
- ದೇಹದಲ್ಲಿ ಇನ್ ಫ್ಲನೇಟರಿ ಪಾತ್ ವೇ ಕಡಿಮೆ ಆಗುತ್ತದೆ. ಅದು ಕಡಿಮೆ ಆಗುವುದರಿಂದ ಕಾಯಿಲೆಗಳು ವಕ್ಕರಿಸುವ ಪ್ರಯಾಣವೂ ನಿಯಂತ್ರಣಕ್ಕೆ ಬರುತ್ತದೆ.
- ಮೌನ ವಹಿಸುದರಿಂದ ನಿದ್ರಾಹೀನತೆ ಸಮಸ್ಯೆ ದೂರಾಗಲಿದೆ.
- ದೇಹದಲ್ಲಿ ಗುಡ್ ಹಾರ್ಮೋನ್ ಬಿಡುಗಡೆಯಾಗಲಿದ್ದು ದೇಹದ ಜೀರ್ಣ ಶಕ್ತಿ ವೃದ್ಧಿಯಾಗಲಿದೆ, ಮೆದುಳಿನ ಆರೋಗ್ಯಕ್ಕೆ ಒಳಿತಾಗಲಿದೆ.
ಬುದ್ಧ, ಮಹಾವೀರ ಸೇರಿದಂತೆ ದೊಡ್ಡ ಸಾಧಕರು ಧ್ಯಾನದಿಂದ ಮೌನ ವಹಿಸಿ ಸಾಧಿಸಿದ್ದಾರೆ. ಹೀಗಾಗಿ ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಮೌನವಹಿಸಬೇಕು. ಮೌನವಾಗಿರುವುದನ್ನು ಅಭ್ಯಾಸಿಸಿಕೊಂಡರೆ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ ಎಂದು ಡಾ. ಮಾಲಿನಿ ಸಲಹೆ ನೀಡಿದ್ದಾರೆ.