ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉಪವಾಸ ಮಾಡಿದ್ರೆ ಕ್ಯಾನ್ಸರ್ ಬರಲ್ವಾ? ವೈದ್ಯರ ಸಲಹೆ ಏನು?

Health Tips: ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಉಪವಾಸ ಮಾಡಿದರೆ ನಮ್ಮ ಆರೋಗ್ಯದಲ್ಲಿ ಯಾವೆಲ್ಲ ಬದಲಾವಣೆಯನ್ನು ಕಾಣಬಹುದು? ಭವಿಷ್ಯದಲ್ಲಿ ಯಾವೆಲ್ಲಾ ಆರೋಗ್ಯ ಸಮಸ್ಯೆ ಗಳಿಂದ ದೂರ ಉಳಿಯಬಹುದು? ಕ್ಯಾನ್ಸರ್ ನಿಂದ ದೂರ ಇರಬಹುದಾ? ಉಪವಾಸದಿಂದ ದೇಹದ ಶಕ್ತಿ ಹೇಗೆ ಹೆಚ್ಚುವುದು? ಎನ್ನುವಂತಹ ವಿಚಾರಗಳಿಗೆ ಸೂಕ್ತ ಮಾಹಿತಿಯನ್ನು ಪ್ರೊ. ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.

ಉಪವಾಸದಿಂದ ಕ್ಯಾನ್ಸರ್ ತಡೆಯಬಹುದೇ?

ಸಂಗ್ರಹ ಚಿತ್ರ -

Profile
Pushpa Kumari Jan 28, 2026 6:00 AM

ಬೆಂಗಳೂರು,ಜ.27: ದೇಹ ಮತ್ತು ಮನಸ್ಸಿನ ಶುದ್ಧೀಕರಣಕ್ಕೆ ಅನುಸರಿಸಲ್ಪಡುವ ಒಂದು ಪ್ರಾಚೀನ ಪದ್ಧತಿಯೇ ಉಪವಾಸ ಕ್ರಮವಾಗಿದೆ. ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಉಪವಾಸ (Fasting) ಮಾಡಿದರೆ ನಮ್ಮ ಆರೋಗ್ಯದಲ್ಲಿ ಯಾವೆಲ್ಲ ಬದಲಾವಣೆಯನ್ನು ಕಾಣಬಹುದು? ಭವಿಷ್ಯದಲ್ಲಿ ಯಾವೆಲ್ಲಾ ಆರೋಗ್ಯ ಸಮಸ್ಯೆ ಗಳಿಂದ ದೂರ ಉಳಿಯಬಹುದು? ಕ್ಯಾನ್ಸರ್‌ನಿಂದ (Cancer) ದೂರ ಇರಬಹುದಾ? ಉಪವಾಸದಿಂದ ದೇಹದ ಶಕ್ತಿ ಹೇಗೆ ಹೆಚ್ಚುವುದು? ಎನ್ನುವಂತಹ ವಿಚಾರ ಗಳಿಗೆ ಸೂಕ್ತ ಮಾಹಿತಿಯನ್ನು ಪ್ರೊ. ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.

ನಾವು ಹಬ್ಬ - ಹರಿದಿನಗಳಲ್ಲಿ ಅಥವಾ ವಿಶೇಷ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಉಪವಾಸದ ವ್ರತ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಹೆಚ್ಚಿನವರಿಗೆ ಇದೆ.‌ ಏಕಾದಶಿ, ಸಂಕಷ್ಟ ಚತುರ್ಥಿ ಹೀಗೆ ವಿವಿಧ ಸಂದರ್ಭದಲ್ಲಿ ಉಪವಾಸ ಮಾಡುತ್ತೇವೆ. ಇದರಿಂದ ನಾನಾ ರೀತಿಯ ಅನುಕೂಲ ಇದೆ ಎಂದು ನಮ್ಮ ಪೂರ್ವಜರೇ ಅರಿತಿದ್ದಾರೆ. ಅದೇ ರೀತಿ ನೀವು ಎಷ್ಟು ಕಡಿಮೆ ಊಟ ಮಾಡುತ್ತೀರೋ ನಿಮ್ಮ ಆಯಸ್ಸು ವೃದ್ದಿಯಾಗುತ್ತದೆ ಎಂದು ವಿಜ್ಞಾನದ ಮೂಲಕ‌ ಕೂಡ ಸಾಬೀತು ಆಗಿದೆ. ಹಾಗಾಗಿ ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ಸಿಗಲಿದ್ದು ದೇಹವನ್ನು ಕೂಡ ಶುದ್ಧಗೊಳಿಸುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ವಿಡಿಯೋ ನೋಡಿ:



ಕ್ಯಾನ್ಸರ್ ಜೀವಕೋಶಗಳನ್ನು ನಾಶಮಾಡಿಸುವ ಶಕ್ತಿ ಕೂಡ ಉಪವಾಸಕ್ಕೆ ಇದೆ. ಉಪವಾಸವು ದೇಹದಲ್ಲಿ ಆಟೋಫ್ಯಾಜಿ ಪ್ರಕ್ರಿಯೆಯನ್ನು ಉಂಟು ಮಾಡಬಹುದು. ಜಪಾನಿನ ವಿಜ್ಞಾನಿ ಯೋಶಿನೋರಿ ಒಹ್ಸುಮಿ ಎಂಬವರು ಆಟೋಫ್ಯಾಜಿ ಕುರಿತ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ.

Health Tips: ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೋರೆಕಾಯಿ ಜ್ಯೂಸ್​ ಕುಡಿದರೆ ಬೊಜ್ಜು ಕರಗುವುದರ ಜೊತೆಗೆ ಶುಗರ್ ಕಂಟ್ರೋಲ್ ಆಗುತ್ತದೆ

ಇದರಲ್ಲಿ ಹಾನಿಗೊಳಗಾದ ಜೀವಕೋಶಗಳು ಮತ್ತು ಬಳಕೆ ಇಲ್ಲದ ಪ್ರೋಟೀನ್‌ಗಳನ್ನು ತೆಗೆದು ಹಾಕುವ ಮೂಲಕ ಹೊಸ ಕೋಶಗಳು ರೂಪುಗೊಳ್ಳುತ್ತವೆ. ಈ ಆಟೋಫ್ಯಾಜಿ ಪ್ರಕ್ರಿಯೆಯಲ್ಲಿ, ದೇಹದ ಕ್ಯಾನ್ಸರ್ ಕೋಶಗಳು ಸಹ ನಾಶವಾಗುತ್ತವೆ ಎಂದು ಅನೇಕ ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ.

ಉಪವಾಸ ಮಾಡಲು ಪೂರ್ವಸಿದ್ಧತೆಯೂ ಬೇಕಾಗಿದ್ದು ಕೆಲವೊಮ್ಮೆ ನಾವು ಮಾಡುವ ವಿಧಾನ ಸರಿಯಿಲ್ಲಿದ್ದರೆ ಗ್ಯಾಸ್ಟ್ರಿಕ್‌, ಹೊಟ್ಟೆನೋವು, ಅಜೀರ್ಣ ದಂತಹ ಸಮಸ್ಯೆಗಳು ಕಾಡಬಹುದು. ಹಾಗಾಗಿ ಉಪವಾಸದ ಜೊತೆಗೆ ನೀರನ್ನು ಕುಡಿಯಬೇಕು., ತಾಜಾ ಹಣ್ಣಿನ ರಸ, ಮಜ್ಜಿಗೆ ಮುಂತಾದ ದ್ರವ ಪದಾರ್ಥಗಳನ್ನು ಸೇವಿಸಬಹುದು. ಇದರಿಂದ ಬೇಡವಾದ ಟಾಕ್ಸಿಕ್ ಗಳು ನಮ್ಮದೇಹದಿಂದ ಹೊರಹೋಗುತ್ತವೆ. ಕರುಳು ಸ್ವಚ್ಛವಾಗಿ ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಯನ್ನು ತಡೆಯ ಬಹುದು. ಆದರೆ ಉಪವಾಸದ ನಂತರ ಹೆಚ್ಚು ಆಹಾರವನ್ನು ಸೇವಿಸಬಾರದು. ಅದರಲ್ಲೂ ಮಸಾಲೆ, ಖಾರವಾದ ಆಹಾರ, ಪೇಸ್ಟ್ರಿ ತಿನ್ನಬೇಡಿ. ಉಪವಾಸದ ನಂತರ ಈ ಆಹಾರ ತಿನ್ನುವು ದರಿಂದ ವಾಂತಿ, ಎದೆಯುರಿ ಉಂಟಾಗುತ್ತದೆ.

ಈ ಪ್ರಯೋಜನ ಇದೆ

*ಉಪವಾಸದಿಂದ ಉತ್ತಮ ಜೀರ್ಣ ಕ್ರಿಯೆ ನಡೆಯುತ್ತಿರುತ್ತದೆ.

*ಉಪವಾಸನವು ರೋಗಾಣು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

* ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

*ಜೀವಕೋಶಗಳಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.