ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚಿಸುವ ಆಹಾರಗಳಿವು
Health Tips: ದೇಹವನ್ನು ತಂಪಾಗಿಸಲು ಸಾಕಷ್ಟು ಪ್ರಮಾಣದ ನೀರು ಕುಡಿಯುವುದು, ತರಕಾರಿ-ಹಣ್ಣುಗಳ ಸೇವನೆಯೂ ಅಗತ್ಯವಾಗಿರುತ್ತದೆ. ಶಾಖದ ಪರಿಣಾಮದಿಂದ ದೇಹವು ನಿರ್ಜಲೀಕರಣ ಗೊಂಡಾಗ ಅತೀ ಆಯಾಸಕ್ಕೆ ಕಾರಣವಾಗಬಹುದು, ಈ ಸಂದರ್ಭದಲ್ಲಿ ಅತಿ ಹೆಚ್ಚಿನ ಉಷ್ಣಾಂಶವನ್ನು ಉಂಟು ಮಾಡುವ ಆಹಾರಗಳನ್ನು ಸೇವನೆ ಮಾಡಿದರೆ ಹಲವು ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡ ಬಹುದು. ಕೆಲವೊಂದು ಆಹಾರಗಳು ತಂಪು ನೀಡುತ್ತವೆ ಎಂದು ಸೇವಿಸಿ ಅವು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತವೆ. ಹಾಗಿದ್ರೆ ಯಾವುದು ಅಂತಹ ಆಹಾರಗಳು?
ಸಂಗ್ರಹ ಚಿತ್ರ -
ನವದೆಹಲಿ, ಮೆ 9: ಬೇಸಿಗೆಯಲ್ಲಿ (Summer Food) ದೇಹದ ರಕ್ಷಣೆಗಾಗಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳಷ್ಟು ಅವಶ್ಯಕ. ದೇಹವನ್ನು ತಂಪಾಗಿಸಲು ಸಾಕಷ್ಟು ಪ್ರಮಾಣದ ನೀರು ಕುಡಿಯುವುದು, ತರಕಾರಿ-ಹಣ್ಣುಗಳ ಸೇವನೆಯೂ ಅಗತ್ಯವಾಗಿರುತ್ತದೆ. ಶಾಖದ ಪರಿಣಾಮ ದಿಂದ ದೇಹವು ನಿರ್ಜಲೀಕರಣಗೊಂಡಾಗ ಅತೀ ಆಯಾಸಕ್ಕೆ ಕಾರಣವಾಗಬಹುದು, ಈ ಸಂದರ್ಭದಲ್ಲಿ ಅತಿ ಹೆಚ್ಚಿನ ಉಷ್ಣಾಂಶವನ್ನು ಉಂಟು ಮಾಡುವ ಆಹಾರಗಳನ್ನು ಸೇವನೆ ಮಾಡಿದರೆ ಹಲವು ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಕೆಲವೊಂದು ಆಹಾರಗಳು ತಂಪು ನೀಡುತ್ತವೆ ಎಂದು ಸೇವಿಸಿ ಅವು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತವೆ. ಹಾಗಿದ್ರೆ ಯಾವುದು ಅಂತಹ ಆಹಾರಗಳು?
ಐಸ್ ಕ್ರೀಮ್:
ಐಸ್ ಕ್ರೀಮ್ ತಿಂದಾಗ ದೇಹ ತಂಪಾದ ವಾತಾವರಣ ನೀಡಬಹುದು. ಆದರೆ ಅದರ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಅಂಶವು ಕರಗಿಸಿಕೊಳ್ಳಲು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಬೇಕಾಗಿ ಬರಬಹುದು. ಈ ಪ್ರಕ್ರಿಯೆಯಲ್ಲಿ ದೇಹದ ಒಳಭಾಗದಲ್ಲಿ ಶಾಖ ಉತ್ಪತ್ತಿಯಾಗುತ್ತದೆ. ಇದರಿಂದ ದೇಹಕ್ಕೆ ಅಸ್ವಸ್ಥತೆ ಕಾಡಬಹುದು.
ಮಸಾಲೆಯುಕ್ತ ಆಹಾರಗಳು:
ಮೆಣಸಿನಕಾಯಿಯಂತಹ ಮಸಾಲೆಯುಕ್ತ ಪದಾರ್ಥಗಳನ್ನು ಒಳಗೊಂಡಿರುವ ಭಕ್ಷ್ಯಗಳು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು. ಹೆಚ್ಚಿನ ಉಪ್ಪು ಮತ್ತು ಸಕ್ಕರೆ ಇರುವ ಪ್ಯಾಕ್ ಮಾಡಿದ ಆಹಾರಗಳು ದೇಹದಲ್ಲಿ ಹೆಚ್ಚಿನ ನಿರ್ಜಲೀಕರಣ ಉಂಟು ಮಾಡಬಹುದು.
ಸಂಸ್ಕರಿಸಿದ ಆಹಾರಗಳು:
ಸಾಮಾನ್ಯವಾಗಿ ಸೋಡಿಯಂ ಮತ್ತು ಸಕ್ಕರೆಗಳಿಂದ ತುಂಬಿರುವ ಸಂಸ್ಕರಿಸಿದ ಆಹಾರಗಳು ಸಾಕಷ್ಟು ಹಾನಿಕಾರಕವಾಗಬಹುದು. ಈ ವಸ್ತುಗಳನ್ನು ಸೇವಿಸುವುದರಿಂದ ಆಲಸ್ಯ ಮತ್ತು ಆಯಾಸದ ಭಾವನೆ ಉಂಟಾಗುತ್ತದೆ.
ಆಲ್ಕೋಹಾಲ್:
ಇದು ರಿಫ್ರೆಶ್ ಆಗಿರಬಹುದು ಆದರೆ ಮದ್ಯಪಾನವು ದೇಹದಿಂದ ನೀರನ್ನು ಹೊರಹಾಕುವಂತೆ ಮಾಡಿ ಮೆಟಬಾಲಿಸಂ ಮೇಲೆ ಪ್ರಭಾವ ಬೀರಿ ಉಷ್ಣತೆ ಹೆಚ್ಚಿಸುತ್ತದೆ.
ಗೆಡ್ಡೆ, ಗೆಣಸು ಬೇರು ತರಕಾರಿಗಳು:
ಕ್ಯಾರೆಟ್, ಮೂಲಂಗಿನಂತ ತರಕಾರಿಗಳಲ್ಲಿ ಕಾರ್ಬೋ ಹೈಡ್ರೇಟ್‌ಗಳು ಮತ್ತು ಫೈಬರ್‌ನಲ್ಲಿ ಅಧಿಕವಾಗಿದ್ದರೂ ಈ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ.
ಮಾವಿನ ಹಣ್ಣು:
ಬೇಸಿಗೆಯ ಹಣ್ಣು ಮಾವಿನ ಹಣ್ಣು ಸ್ವಾಭಾವಿಕವಾಗಿ 'ಥರ್ಮೋಜೆನಿಕ್' ಗುಣ ಹೊಂದಿದೆ. ಇದು ದೇಹದಲ್ಲಿ ಶಾಖ ಹೆಚ್ಚಿಸುತ್ತದೆ. ಇದನ್ನು ತಿನ್ನುವ ಮುನ್ನ ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡುವುದು ಉತ್ತಮ
ಶುಂಠಿ:
ಶುಂಠಿಯಲ್ಲಿ ಜಿಂಜರಾಲ್ ಮತ್ತು ಶೋಗೋಲ್ ಇದ್ದು, ಇದು ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ, ಆದರೆ ದೇಹದಾದ್ಯಂತ ಬೆಚ್ಚಗಿನ ಉಷ್ಣತೆ ಸಂವೇದನೆಯನ್ನು ಉಂಟುಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಸೌತೆಕಾಯಿ, ಕಲ್ಲಂಗಡಿ, ಪುದೀನ, ಮೊಸರು ಮತ್ತು ತೆಂಗಿನ ನೀರಿನಂತ ಆಹಾರ ಸೇವಿಸಬಹುದು.