ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಮೂತ್ರ ವಿಸರ್ಜನೆ ವೇಳೆ ಈ ತಪ್ಪುಗಳನ್ನು ಮಾಡದಿರಿ

ನಮ್ಮ ಕೆಲವು ಸಾಮಾನ್ಯ ಮೂತ್ರ ವಿಸರ್ಜನೆಯ ಅಭ್ಯಾಸಗಳು ಸೋಂಕಿನ ಸಮಸ್ಯೆಗಳಿಗೆ (Health Tips) ಕಾರಣವಾಗಬಹುದು. ಇದಕ್ಕಾಗಿ ಇಂದಿನಿಂದಲೇ ನಾವು ಆರೋಗ್ಯಕರ ರೀತಿಯಲ್ಲಿ ಮೂತ್ರ ವಿಸರ್ಜಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಮೂತ್ರ ವಿಸರ್ಜನೆ ಮಾಡುವಾಗ ನಾವು ಮುಖ್ಯವಾಗಿ ಈ ಐದು ಮಾಡಲೇ ಬಾರದು ಎನ್ನುತ್ತಾರೆ ಮೂತ್ರಶಾಸ್ತ್ರಜ್ಞರಾದ ಜೋಸೆಫ್ ಬ್ರಿಟೊ.

ಮೂತ್ರ ವಿಸರ್ಜನೆ- ಈ ತಪ್ಪುಗಳನ್ನು ಮಾಡಬೇಡಿ

ಸಾಮಾನ್ಯವಾಗಿ ಮೂತ್ರ ವಿಸರ್ಜನೆ (urination) ಮಾಡುವಾಗ ನಾವು ಕೆಲವೊಂದು ತಪ್ಪುಗಳನ್ನು(Health Tips) ಮಾಡುತ್ತೇವೆ. ಇದು ಎಷ್ಟೋ ಮಂದಿಯ ಅರಿವಿಗೂ ಬಂದಿರುವುದಿಲ್ಲ. ಆದರೆ ನಾವು ಮಾಡುವ ಈ ತಪ್ಪುಗಳು ಮುಂದೆ ಬಹುದೊಡ್ಡ ಸಮಸ್ಯೆಗಳನ್ನು ತಂದೊಡ್ಡಬಹುದು. ಹೀಗಾಗಿ ವಾಶ್ ರೂಮ್ ಗೆ ಹೋಗುವಾಗ ಕೆಲವೊಂದು ಅಂಶಗಳನ್ನು ಪ್ರತಿಯೊಬ್ಬರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಮ್ಮ ಕೆಲವು ಸಾಮಾನ್ಯ ಮೂತ್ರ ವಿಸರ್ಜನೆಯ ಅಭ್ಯಾಸಗಳು (urination mistakes) ಸೋಂಕಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಕ್ಕಾಗಿ ಇಂದಿನಿಂದಲೇ ನಾವು ಆರೋಗ್ಯಕರ ರೀತಿಯಲ್ಲಿ ಮೂತ್ರ ವಿಸರ್ಜಿಸುವ ಅಭ್ಯಾಸವನ್ನು (urination habits) ರೂಢಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು.

ಮೂತ್ರ ವಿಸರ್ಜನೆ ಮಾಡುವಾಗ ನಾವು ಮುಖ್ಯವಾಗಿ ಈ ಐದು ಮಾಡಲೇ ಬಾರದು ಎನ್ನುತ್ತಾರೆ ಮೂತ್ರಶಾಸ್ತ್ರಜ್ಞರಾದ ಜೋಸೆಫ್ ಬ್ರಿಟೊ.

ಮೂತ್ರ ಹಿಡಿದಿಟ್ಟುಕೊಳ್ಳುವುದು

ಸಾಮಾನ್ಯವಾಗಿ ಹೆಚ್ಚಿನವರು ಪ್ರಯಾಣದಲ್ಲಿ ಇರುವಾಗ ಮೂತ್ರವನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಇದು ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ಮೂತ್ರ ವಿಸರ್ಜನೆ ಮಾಡುವ ಪ್ರಚೋದನೆಯನ್ನು ನಿರ್ಲಕ್ಷಿಸುವುದರಿಂದ ಮೂತ್ರಕೋಶ ವಿಸ್ತಾರವಾಗುತ್ತದೆ. ಇದರಿಂದ ವಯಸ್ಸಾದಂತೆ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೇ ದೀರ್ಘಕಾಲ ಮೂತ್ರವನ್ನು ತಡೆಹಿಡಿಯುವುದರಿಂದ ಮೂತ್ರನಾಳದ ಸೋಂಕುಗಳಿಗೂ ಕಾರಣವಾಗುತ್ತದೆ.

ಸಂಪೂರ್ಣ ಮೂತ್ರ ಮಾಡದೇ ಇರುವುದು

ಕೆಲವರು ಆತುರಾತುರವಾಗಿ ಮೂತ್ರ ಮಾಡಿ ಬರುತ್ತಾರೆ. ಇದರಿಂದ ಮೂತ್ರಕೋಶ ಪೂರ್ತಿ ಖಾಲಿಯಾಗುವುದಿಲ್ಲ. ಮೂತ್ರವನ್ನು ಹಿಡಿದಿಟ್ಟುಕೊಳ್ಳುವಂತೆಯೇ ಅಪೂರ್ಣವಾಗಿ ಮೂತ್ರ ಮಾಡುವುದು ಕೂಡ ಮೂತ್ರದ ಸೋಂಕನ್ನು ಉಂಟುಮಾಡಬಹುದು. ಇದು ಮೂತ್ರಕೋಶದಲ್ಲಿ ಕಲ್ಲುಗಳಾಗಲು ಕೂಡ ಕಾರಣವಾಗುತ್ತದೆ. ಪುರುಷರಲ್ಲಿ ಇದು ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆಗೆ ಕಾರಣವಾಗುತ್ತದೆ. ಇದರಿಂದ ಕೆಲವೊಮ್ಮೆ ಮೂತ್ರಕೋಶವು ಉತ್ತಮವಾಗಿ ಖಾಲಿಯಾಗಲು ರೋಗಿಗಳಿಗೆ ಔಷಧ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯ ಬರಬಹುದು.

ಪದೇಪದೆ ಮೂತ್ರ ವಿಸರ್ಜನೆ

ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಕೂಡ ಆರೋಗ್ಯದಲ್ಲಿ ತೊಂದರೆಯಾಗಿರುವ ಸೂಚನೆಯಾಗಿದೆ. ಪದೇ ಪದೇ ಮೂತ್ರ ವಿಸರ್ಜನೆಯಾಗಲು ಮೂತ್ರನಾಳದ ಸೋಂಕು ಕೂಡ ಕಾರಣವಾಗಿರುತ್ತದೆ. ಸಾಮಾನ್ಯವಾಗಿ ಕೆಫೀನ್, ಆಲ್ಕೋಹಾಲ್, ಕಾರ್ಬೊನೇಟೆಡ್ ಪಾನೀಯಗಳು, ಚಾಕೊಲೇಟ್, ಮಸಾಲೆಯುಕ್ತ ಆಹಾರಗಳು ಮತ್ತು ಆಮ್ಲೀಯ ಆಹಾರಗಳು ಹೆಚ್ಚಿನ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ.

ಒತ್ತಡ ಹೇರುವುದು

ದೇಹದಿಂದ ಮೂತ್ರವನ್ನು ಹೊರಹಾಕಲು ಹೆಚ್ಚು ಒತ್ತಡ ಬೇಕಾಗಿಲ್ಲ. ದೇಹವು ವಿಶ್ರಾಂತಿ ಭಂಗಿಯಲ್ಲಿ ಇದ್ದಾಗ ಮೂತ್ರಕೋಶವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಮೂತ್ರ ವಿಸರ್ಜನೆಯ ಸ್ನಾಯುಗಳು ಮೂತ್ರ ವಿಸರ್ಜನೆ ವೇಳೆ ಸ್ವಾಭಾವಿಕವಾಗಿ ಸಂಕುಚಿತಗೊಳ್ಳುತ್ತವೆ. ಪುರುಷರು ಮೂತ್ರ ಮಾಡುವಾಗ ಅನಗತ್ಯ ಒತ್ತಡ ಹೇರುವುದರಿಂದ ಪ್ರಾಸ್ಟೇಟ್‌ನಲ್ಲಿ ಊತ ಮತ್ತು ಮೂತ್ರದ ಹರಿವಿಗೆ ಸಮಸ್ಯೆಗಳು ಉಂಟಾಗುತ್ತವೆ.

ಮಹಿಳೆಯರಲ್ಲಿ ಮೂತ್ರ ಮಾಡಲು ಒತ್ತಡ ಹೇರುವುದರಿಂದ ಶ್ರೋಣಿಯ ಅಂಗ ಹಿಗ್ಗುವುದು. ಇದರಿಂದ ಯೋನಿ ಉಬ್ಬು ಕಾಣಬಹುದು. ಶ್ರೋಣಿಯ ಅಂಗಗಳಾದ ಯೋನಿ, ಗರ್ಭಾಶಯ, ಮೂತ್ರಕೋಶ ಅಥವಾ ಗುದನಾಳ ಇಳಿಯುವುದರಿಂದ ಯೋನಿ ಉಬ್ಬುವುದು. ಇದು ದೇಹದಿಂದ ಮೂತ್ರವನ್ನು ಹೊರಹಾಕಲು ಕಷ್ಟವಾಗುತ್ತದೆ. ಮೂಲವ್ಯಾಧಿ ಅಥವಾ ಹರ್ನಿಯಾ ತೊಂದರೆ ಕಾಣಿಸಿಕೊಳ್ಳಬಹುದು.

ಸಾಕಷ್ಟು ನೀರು ಕುಡಿಯದಿರುವುದು

ಮೂತ್ರದ ಬಣ್ಣ ಸ್ಪಷ್ಟವಾಗಿದ್ದರೆ ನೀವು ಸರಿಯಾದ ಪ್ರಮಾಣದ ನೀರನ್ನು ಕುಡಿಯುತ್ತಿದ್ದೀರಿ ಎಂಬುದರ ಸಂಕೇತವಾಗಿದೆ. ಮೂತ್ರವು ಗಾಢ ಹಳದಿ ಆಗಿದ್ದರೆ ಇದು ನಿರ್ಜಲೀಕರಣದ ಸಂಕೇತವಾಗಿದೆ. ಮೂತ್ರದಲ್ಲಿ ವಾಸನೆ, ಸುಡುವ ಸಂವೇದನೆ ಇದ್ದರೆ ನಿರ್ಜಲೀಕರಣದ ಸಂಕೇತವಾಗಿದೆ. ಸಾಕಷ್ಟು ನೀರು ಕುಡಿಯದಿರುವುದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ನೀರಿಗೆ ಪರ್ಯಾಯವಾಗಿ ಪಾನೀಯಗಳನ್ನು ಸೇವಿಸುವುದು ಸರಿಯಲ್ಲ. ಪಾನೀಯಗಳಲ್ಲಿ ಹೆಚ್ಚಿನ ಸಕ್ಕರೆ ಅಥವಾ ಕೆಫೀನ್ ಇರುವುದರಿಂದ ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಮೂತ್ರಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೂತ್ರಪಿಂಡ ಮತ್ತು ಮೂತ್ರಕೋಶವನ್ನು ಆರೋಗ್ಯಕರವಾಗಿಡಲು ನೀರು ಸುರಕ್ಷಿತ ಆಯ್ಕೆಯಾಗಿದೆ.

ಇದನ್ನೂ ಓದಿ: Health Tips: ಅಂಜೂರ: ಪೋಷಕಾಂಶಗಳ ಆಗರ! ಇದರ ಆರೋಗ್ಯ ಲಾಭಗಳ ಬಗ್ಗೆ ನಮಗೆ ಗೊತ್ತಾ?

ಚೆನ್ನಾಗಿ ನೀರು ಕುಡಿಯುತ್ತಿದ್ದರೂ ಕೂಡ ಕೆಲವೊಮ್ಮೆ ಯಕೃತ್ತಿನ ಸಮಸ್ಯೆಗಳು ಮೂತ್ರದ ಬಣ್ಣವನ್ನು ಹೆಚ್ಚು ಗಾಢವಾಗಿ ಕಾಣುವಂತೆ ಮಾಡಬಹುದು. ಸಾಕಷ್ಟು ನೀರು ಕುಡಿಯುತ್ತಿದ್ದರೂ ಮೂತ್ರದ ಬಣ್ಣ ಗಾಢವಾಗಿದ್ದು ವಾಸನೆಯಿಂದ ಕೂಡಿದ್ದರೆ ಅಥವಾ ಉರಿಯ ಅನುಭವ ಕೊಡುತ್ತಿದ್ದರೆ ಕೂಡಲೇ ಮೂತ್ರಶಾಸ್ತ್ರಜ್ಞರನ್ನು ಭೇಟಿ ಮಾಡುವುದು ಒಳ್ಳೆಯದು.