ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ಅನ್ನೋದು ಕಷ್ಟವೇ? ಫಿಟ್‌ನೆಸ್ ತಜ್ಞರು ಹೇಳೋದೇನು?

Health Tips: ಪ್ರತಿದಿನ ಜಿಮ್‌ನಲ್ಲಿ ಹಲವು ಗಂಟೆಗಳ ಕಾಲ ವರ್ಕೌಟ್ ಮಾಡಿ ಊಟ ತಿಂಡಿ ಬಿಟ್ಟು ಹರಸಹಾಸ ಮಾಡುತ್ತಾರೆ. ಕೊಬ್ಬನ್ನು ಕರಗಿಸುವುದು ಪುರುಷರು ಹಾಗೂ ಮಹಿಳೆಯರ ಮುಖ್ಯ ಗುರಿಯಾಗಿರುತ್ತದೆ. ಆದಾಗ್ಯೂ, ಹಲವಾರು ಶಾರೀರಿಕ ಮತ್ತು ಹಾರ್ಮೋನುಗಳ ಅಂಶಗಳಿಂದಾಗಿ ಕೊಬ್ಬು ಕರಗುವುದು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸವಾಲಿನ ಕೆಲಸ ಆಗಿರಬಹುದು‌.

ಮಹಿಳೆಯರು ಕೊಬ್ಬು ಕರಗಿಸುವುದು ಕಷ್ಟವೇ? ತಜ್ಞರು ನೀಡಿದ ಟಿಪ್ಸ್ ಏನು?

ಇಂಟರ್ ನೆಟ್ ಚಿತ್ರ -

Profile
Pushpa Kumari Sep 17, 2026 7:01 AM

ನವದೆಹಲಿ,ಸೆ.16: ವೇಟ್‌ಲಾಸ್ ಅನ್ನೋದು ಎಲ್ಲರ ಬಾಯಲ್ಲಿ ಇತ್ತೀಚೆಗೆ ಕೇಳುವಂತಹ ಪದವಾಗಿದೆ‌. ಪ್ರತಿದಿನ ಜಿಮ್‌ನಲ್ಲಿ ಹಲವು ಗಂಟೆಗಳ ಕಾಲ ವರ್ಕೌಟ್ ಮಾಡಿ ಊಟ ತಿಂಡಿ ಬಿಟ್ಟು ಹರಸಹಾಸ ಮಾಡುತ್ತಾರೆ. ಕೊಬ್ಬನ್ನು ಕರಗಿಸುವುದು (Fat Burn) ಪುರುಷರು ಹಾಗೂ ಮಹಿಳೆಯರ ಮುಖ್ಯ ಗುರಿಯಾಗಿರುತ್ತದೆ. ಆದಾಗ್ಯೂ, ಹಲವಾರು ಶಾರೀರಿಕ ಮತ್ತು ಹಾರ್ಮೋನುಗಳ ಅಂಶಗಳಿಂದಾಗಿ ಕೊಬ್ಬು ಕರಗುವುದು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸವಾಲಿನ ಕೆಲಸ ಆಗಿರಬಹುದು‌. ಮಹಿಳೆಯರು ಹಾರ್ಮೋ ನುಗಳ ಏರಿಳಿತಗಳಿಗೆ ಸಂಬಂಧಿಸಿದ ಅಡೆತಡೆಗಳನ್ನು ಎದುರಿಸಬಹುದು, ವಿಶೇಷವಾಗಿ ಮುಟ್ಟಿನ ಸಮಯದಲ್ಲಿ, ಗರ್ಭಾವಸ್ಥೆಯಲ್ಲಿ ತೂಕ ಇಳಿಕೆ ಮಾಡುವುದು ಕಷ್ಟವಾಗಬಹುದು. ಈ ಕುರಿತು ಪೌಷ್ಟಿಕ ತಜ್ಞರೊಬ್ಬರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಡಿಮೆ ಸ್ನಾಯುವಿನ ದ್ರವ್ಯರಾಶಿ:

ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರ ದೇಹದಲ್ಲಿ ನೈಸರ್ಗಿಕವಾಗಿ ಸ್ನಾಯುವಿನ ಪ್ರಮಾಣ ಹಾಗೂ ಶಕ್ತಿ ಕಡಿಮೆ ಇರುತ್ತದೆ‌. ಹೀಗಾಗಿ ತೂಕ ಇಳಿಕೆ ಅನ್ನೋದು ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರಿಗೆ ಕಷ್ಟವಾಗಬಹುದು.

​ಹಾರ್ಮೋನ್‌ಗಳ ತೊಂದರೆ:

ಮಹಿಳೆಯರಲ್ಲಿ ಸ್ನಾಯುಗಳನ್ನು ನಿರ್ಮಿಸಲು ಮತ್ತು ಕೊಬ್ಬನ್ನು ಸುಡಲು ಸಹಾಯ ಮಾಡುವ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಇರುತ್ತದೆ‌. ಬದಲಾಗಿ ಕೊಬ್ಬನ್ನು ಶೇಖರಣೆ ಮಾಡಲು ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಪ್ರಮಾಣ ಹೆಚ್ಚಾಗಬಹುದು.

Health Tips: ದೇಹದಲ್ಲಿನ ಸಕ್ಕರೆ ಪ್ರಮಾಣ ಇಳಿಸಬೇಕೇ? ಮನೆಯಲ್ಲೇ ಈ ಪಾನೀಯ ತಯಾರಿಸಿ

ಹಾರ್ಮೋನುಗಳ ಅಸಮತೋಲನ:

ಋತುಚಕ್ರ, ಗರ್ಭಧಾರಣೆ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು ತೂಕ ಇಳಿಕೆಗೆ ಕಷ್ಟವಾಗಬಹುದು. ಇದರಿಂದ ಆಹಾರದ ಹಂಬಲ ಮತ್ತು ಆಯಾಸ ಹೆಚ್ಚಾಗಬಹುದು‌

ಸೊಂಟದ ಕೆಳಭಾಗದ ಕೊಬ್ಬು:

ಈಸ್ಟ್ರೋಜೆನ್ ಕಾರಣದಿಂದಾಗಿ ಮಹಿಳೆಯರ ಸೊಂಟ, ತೊಡೆ ಮತ್ತು ಹೊಟ್ಟೆಯ ಭಾಗದಲ್ಲಿ ಕೊಬ್ಬು ಹೆಚ್ಚಾಗಿ ಸಂಗ್ರಹ ವಾಗುತ್ತದೆ. ಇದನ್ನು ಕರಗಿಸುವುದು ಪುರುಷರ ಹೊಟ್ಟೆಯ ಕೊಬ್ಬಿಗಿಂತ ಕಷ್ಟ

ಒತ್ತಡ ಮತ್ತು ಹಂಬಲಗಳು:

ಒತ್ತಡವು ಕಾರ್ಟಿಸೋಲ್ ಅನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಒತ್ತಡದ ಅವಧಿಗಳಲ್ಲಿ ಮಹಿಳೆ ಯರು ಭಾವನಾತ್ಮಕವಾಗಿ ತಿನ್ನುವ ಮತ್ತು ಸಕ್ಕರೆ, ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರಗಳ ಹಂಬಲಕ್ಕೆ ಪ್ರೇರೇಪಣೆ ನೀಡಬಹುದು.

ಮಹಿಳೆಯರು ಏನು ಮಾಡಬೇಕು?

*ಪ್ರತಿಯೊಂದು ಊಟದಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಕೊಬ್ಬನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ.

*ನಿಮ್ಮ ವ್ಯಾಯಾಮ ದಿನಚರಿಯಲ್ಲಿ ತೂಕ ಎತ್ತುವಿಕೆ, ವಾಕಿಂಗ್, ಇತ್ಯಾದಿ ರೂಢಿ ಮಾಡಿಕೊಳ್ಳಿ

*ಸಾಕಷ್ಟು ತರಕಾರಿಗಳು, ಲೀನ್ ಪ್ರೋಟೀನ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಸಮೃದ್ಧವಾಗಿರುವ ಆಹಾರದ ಮೇಲೆ ಕೇಂದ್ರೀಕರಿಸಿ.

*ನಿದ್ರೆಯ ಕೊರತೆಯು ತೂಕ ನಷ್ಟಕ್ಕೆ ಅಡ್ಡಿಯಾಗಬಹುದು. ಸರಿಯಾದ ಸಮಯದ ನಿದ್ರೆಗೆ ಆಧ್ಯತೆ ನೀಡಿ.