ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Savadatti News: ಸವದತ್ತಿಯಲ್ಲಿ ಹೆಚ್ಚಾದ ಗೂಳಿಗಳ ಹಾವಳಿ; ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಸವದತ್ತಿ‌ ಪಟ್ಟಣದಲ್ಲಿ ಗೂಳಿಗಳ ಹಾವಳಿ ಹೆಚ್ಚಾಗಿದ್ದು ಮಹಿಳೆಯರು, ಮಕ್ಕಳು, ವೃದ್ಧರು, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಬೈಕ್‌ ಸವಾರರು ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಪುರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ವಹಿಸಿ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸವದತ್ತಿಯಲ್ಲಿ ಹೆಚ್ಚಾದ ಗೂಳಿಗಳ ಹಾವಳಿ; ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಸವದತ್ತಿ‌ ಪಟ್ಟಣದಲ್ಲಿ ಗೂಳಿಗಳ ಕಾದಾಟ. -

Profile
Siddalinga Swamy Jan 27, 2026 9:30 PM

ಸವದತ್ತಿ, ಜ.27:‌ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಮಹಿಳೆಯರು, ಮಕ್ಕಳು, ವೃದ್ಧರು, ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಬೈಕ್‌ ಸವಾರರು ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸವದತ್ತಿ (Savadatti News) ಪುರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ವಹಿಸಿ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಹಳೇ ಕಾಯಿಪಲ್ಲೇ ಮಾರುಕಟ್ಟೆ ಹತ್ತಿರ ಇಂದು ಸಂಜೆ ಮೂರು ಗೂಳಿಗಳು ರಸ್ತೆಯ ಮಧ್ಯದಲ್ಲಿಯೇ ಒಂದಕ್ಕೊಂದು ಹಾಯುತ್ತಾ ಕಾದಾಡಲು ಪ್ರಾರಂಭಿಸಿದ್ದವು. ಜನರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿಹೋದರು. ಗೂಳಿಗಳು ಕಾದಾಡುತ್ತಾ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕೆಳಗಡೆ ಬೀಳಿಸಿದವು. ಗೂಳಿಗಳ ಕಾದಾಟದಿಂದ ಕೆಲಕಾಲ ಭಯಭೀತ ವಾತಾವರಣ ನಿರ್ಮಾಣವಾಗಿತ್ತು.

ಈಗಾಗಲೇ ಗೂಳಿಗಳ ಕಾದಾಟದಿಂದ ಗಾಯಗೊಂಡ ಘಟನೆಗಳು ನಗರದಲ್ಲಿ ಸಾಕಷ್ಟು ನಡೆದಿವೆ. ಗಾಯಗೊಂಡವರಲ್ಲಿ ಚೇತರಿಸಿಕೊಳ್ಳದವರೇ ಹೆಚ್ಚು. ಈ ಕುರಿತು ವಿಶ್ವವಾಣಿ ಕೆಲ ದಿನಗಳ ಹಿಂದೆ "ಬೀದಿನಾಯಿ, ಬಿಡಾಡಿ ದನಗಳ ಹಾವಳಿಗೆ ಕ್ರಮ ಕೈಗೊಳ್ಳಿ" ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು.

Savadatti stray cattle news

ಮಧುಗಿರಿ ತಾಲೂಕು ಕಚೇರಿ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆಯಿಂದ ಕಿರಿಕಿರಿ: ಸಾರ್ವಜನಿಕರ ಆಕ್ರೋಶ

ಮಹಿಳೆಯರು, ಮಕ್ಕಳು, ವೃದ್ಧರು, ವಿದ್ಯಾರ್ಥಿಗಳು, ಬೈಕ್‌ ಸವಾರರು ಸಂಚರಿಸುವ ರಸ್ತೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪುರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಈಗಲಾದರೂ ಮುನ್ನೆಚ್ಚರಿಕೆ ವಹಿಸಿ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.