ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rajeev Gowda Arrested: ಕಾನೂನು ರೀತಿಯಲ್ಲಿಯೇ ರಾಜೀವ್ ಗೌಡರ ಬಂಧನವಾಗಿದೆ: ಎಸ್‌ಪಿ ಕುಶಾಲ್ ಚೌಕ್ಸೆ ಹೇಳಿಕೆ

ಜಿಪಿಎಸ್,ಪಾಸ್ಟ್ ಟ್ಯಾಗ್ ಆಧಾರದ ಮೇಲೆ ಆರೋಪಿ ಬಂಧನವಾಗಿದ್ದು, ಜನವರಿ 16ಕ್ಕೆ ರಾಜೀವ್‌ಗೌಡ ಮಂಗಳೂರಿಗೆ ಭೇಟಿ ನೀಡಿದ್ದಾರೆ. ನಂತರ ನಾಲ್ಕು ದಿನಗಳು ಅಲ್ಲಿಯೇ ತಂಗಿದ್ದ ರಾಜೀವ್ ಗೌಡ. ಮಂಗಳೂರಿನಲ್ಲಿ ಯಾಕೆ ಪಾರ್ಕಿಂಗ್ ಮಾಡಿದ್ದರು ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಬೆದರಿಕೆ ಆಡಿಯೋ ವಿಚಾರದಲ್ಲಿ ಮೊಬೈಲ್ ವಶಕ್ಕೆ ಪಡೆಯುವ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ. ತನಿಖೆಗೆ ರಾಜೀವ್ ಗೌಡ ಸ್ಪಂದಿಸುತ್ತಿದ್ದಾರೆ

ಕಾನೂನು ರೀತಿಯಲ್ಲಿಯೇ ರಾಜೀವ್ ಗೌಡರ ಬಂಧನವಾಗಿದೆ

-

Ashok Nayak
Ashok Nayak Jan 27, 2026 11:18 PM

ಚಿಕ್ಕಬಳ್ಳಾಪುರ : ತಲೆ ಮೆರಸಿಕೊಂಡಿದ್ದ ರಾಜೀವ್ ಗೌಡನನ್ನು ಸೋಮವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಕೇರಳದ ಮಲ್ಲಪುರಂನ ವಾಜಿಕಡೈ ಬಳಿ ಬಂಧಿಸಿ ಕಾನೂನು ರೀತಿಯಲ್ಲಿಯೇ ಬಂಧಿಸಿ ಕರೆತರಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ಹೇಳಿದರು.

ನಗರ ಹೊರವಲಯದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.

ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಅಶ್ಲೀಲವಾಗಿ ನಿಂಧಿಸಿ ಧಮ್ಕಿ ಹಾಕಿ ಶರ‍್ಯ ಮೆರೆದಿದ್ದ ರಾಜೀವ್ ಗೌಡ ಎಫ್‌ಐಆರ್ ಆದ ಕೂಡಲೇ ಜ,14ರಿಂದಲೇ ತಲೆಮರೆಸಿ ಕೊಂಡಿದ್ದ. ಬೆಂಗಳೂರಿನಿಂದ ಚಿಕ್ಕಮಗಳೂರು ಅಲ್ಲಿಂದ ಮಂಗಳೂರಿಗೆ ತೆರಳಿದ್ದರು. ಅಲ್ಲಿ ಕಾರು ನಿಲ್ಲಿಸಿ ಆಸಾಮಿ ಪರಾರಿಯಾಗಿದ್ದರು. ರಾಜೀವ್‌ಗೌಡನೊಂದಿಗೆ ಫರ್ನೀಚರ್ ಬಿಸಿನೆಸ್ ಮಾಡುತ್ತಿದ್ದ ಕೇರಳದ ಮೈಕಲ್ ಜೋಸೆಫ್ ರೇಗೋ ಅವರ ಮಂಗಳೂರಿನ ರೆಸಾರ್ಟ್ನಲ್ಲಿ ತಲೆ ಮೆರೆಸಿಕೊಂಡಿರುವ ಮಾಹಿತಿ ಮೇರೆಗೆ ಭಾನುವಾರ ಶಿಡ್ಲಘಟ್ಟದ ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ನೇತೃತ್ವದ ತಂಡ ಮೈಕಲ್ ಜೋಸೆಫ್ ರೇಗೋ ಅವರ ಮೊಬೈಲ್ ನಂಬರ್ ಸಹಾಯದಿಂದ ಬಂಧಿಸಿ ಕರೆ ತರಲಾಗಿದೆ ಎಂದರು.

ಇದನ್ನೂ ಓದಿ: Rajeev Gowda: ಇನ್ನೂ ಸೆರೆಸಿಗದ ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ,‌ 9 ಕ್ರಿಮಿನಲ್‌ ಕೇಸ್‌ಗಳ ಸರದಾರ!

ಮಂಗಳೂರಿನಲ್ಲಿಯೇ ದೊರೆಯಬೇಕಿದ್ದ ರಾಜೀವ್‌ಗೌಡ ರೈಲ್ವೆ ಪೊಲೀಸರ ತನಿಖೆ ದಿಕ್ಕು ತಪ್ಪಿಸುವ ಭಾಗವಾಗಿ ತನ್ನ ವಾಹನವನ್ನು ರೈಲ್ವೆ ಸ್ಟೇಷನ್‌ನಲ್ಲಿ ನಿಲ್ಲಿಸಿ ಮೈಕಲ್ ಜೋಸೆಫ್ ರೇಗೋ ಅವರ ಮಾರುತಿ ಬ್ರೀಜಾ ಕಾರಿನಲ್ಲಿ ಕೇರಳಕ್ಕೆ ಪರಾರಿಯಾಗಿದ್ದನು.

ಅಲ್ಲಿಗೆ ತೆರಳಿದ ಪೊಲೀಸರು ರಾಜೀವ್‌ಗೌಡ ಮತ್ತು ಮೈಕಲ್ ಜೋಸೆಫ್ ರೇಗೋ ರನ್ನು ಕೇರಳದ ಮಲ್ಲಪುರಂನ ವಾಜಿಕಡೈ ಬಳಿ ಬಂಧಿಸಿ ಮಾರುತಿ ಬ್ರೀಜಾ ಕಾರನ್ನು ವಶಪಡಿಸಿ ಕೊಳ್ಳಲಾಗಿದೆ.

ಚಿಂತಾಮಣಿ ಡಿವೈಎಸ್ಪಿ ಮುರಳಿಧರ್ ನೇತೃತ್ವದಲ್ಲಿ ಶಿಡ್ಲಘಟ್ಟ ಠಾಣೆ, ಸೈಬರ್ ಠಾಣೆ, ಚಿಂತಾಮಣಿ ಠಾಣೆ ಇನ್ಸ್ಪೆಕ್ಟರ್‌ಗಳ ಮೂರು ತನಿಖಾ ತಂಡಗಳ ನೇಮಿಸಲಾಗಿತ್ತು.

ಇದರೊಂದಿಗೆ ನೆರಯ ಜಿಲ್ಲೆಗಳ ಪೋಲಿಸರು ಸಹಕಾರ ನೀಡಿದ್ದರು. ಪೊಲೀಸ್ ವತಿಯಿಂದ ಶೇ.100ರಷ್ಟು ಪ್ರಯತ್ನ ಮಾಡಿ ಆರೋಪಿಯನ್ನು ಬಂಧಿಸಿದ್ದೀವಿ. ಕಾನೂನಿನ ಪ್ರಕಾರ ಯಾವ ರೀತಿ ತನಿಖೆ ಆಗಬೇಕು ಅದೇ ರೀತಿ ತನಿಖೆ ನಡೆಯುತ್ತಿದೆ. ತನಿಖೆಗೆ ರಾಜೀವ್ ಗೌಡ ಕುಟುಂಬ ಪೊಲೀಸರೊಂದಿಗೆ ಸ್ಪಂದಿಸಿರಲಿಲ್ಲ, ಆದರೆ ಬಂದಿತ ಸ್ಪಂಧಿಸುತ್ತಿದ್ದಾರೆ ಎಂಬ ಮಾಹಿತಿಯನ್ನೂನ ಕೂಡ ಹಂಚಿಕೊಂಡರು.

ಜಿಪಿಎಸ್,ಪಾಸ್ಟ್ ಟ್ಯಾಗ್ ಆಧಾರದ ಮೇಲೆ ಆರೋಪಿ ಬಂಧನವಾಗಿದ್ದು, ಜನವರಿ 16ಕ್ಕೆ ರಾಜೀವ್‌ಗೌಡ ಮಂಗಳೂರಿಗೆ ಭೇಟಿ ನೀಡಿದ್ದಾರೆ. ನಂತರ ನಾಲ್ಕು ದಿನಗಳು ಅಲ್ಲಿಯೇ ತಂಗಿದ್ದ ರಾಜೀವ್ ಗೌಡ. ಮಂಗಳೂರಿನಲ್ಲಿ ಯಾಕೆ ಪಾರ್ಕಿಂಗ್ ಮಾಡಿದ್ದರು ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಬೆದರಿಕೆ ಆಡಿಯೋ ವಿಚಾರದಲ್ಲಿ ಮೊಬೈಲ್ ವಶಕ್ಕೆ ಪಡೆಯುವ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ. ತನಿಖೆಗೆ ರಾಜೀವ್ ಗೌಡ ಸ್ಪಂದಿಸುತ್ತಿದ್ದಾರೆ ಎಂದರು.

ಪೊಲೀಸರಿಗೆ ರಾಜಕಾರಣಿಗಳಿಂದ ಏನಾದರೂ ಒತ್ತಡ ಇತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಶಾಲ್ ಚೌಕ್ಸೆ ಅವೆಲ್ಲಾ ಮಾಧ್ಯಮದ ಸೃಷ್ಟಿ ಅಷ್ಟೆ,ನಾವು ಕಾನೂನು ವ್ಯಾಪ್ತಿಯಲ್ಲಿ ಕ್ರಮ ವಹಿಸಿ ಆರೋಪಿಯನ್ನು ಬಂಧಿಸಲಾಗಿದೆ. ತನಿಖಾ ತಂಡಗಳೊAದಿಗೆ ನಿತ್ಯವೂ ಸಂಪರ್ಕದಲ್ಲಿದ್ದು ಅವರಿಗೆ ಬೇಕಾದ ಮಾರ್ಗದರ್ಶನ ನೀಡಲಾಗಿತ್ತು ಎಂದರು.

ಪೊಲೀಸ್ ಸರ್ಕೀಟ್ ಹೌಸ್‌ನಲ್ಲಿ ವಿಚಾರಣೆ ಮಾಡಿದ್ದು ಸರಿಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮಾಧ್ಯಮಗಳು ಈ ವಿಚಾರದಲ್ಲಿ ಹೆಚ್ಚಿನ ಪ್ರಚಾರ ನೀಡಿದ್ದರಿಂದ ನಮ್ಮ ತನಿಖೆಗೆ ತೊಂದರೆಯಾಗಬಾರದು ಎಂದು ಹೀಗೆ ಮಾಡಲಾಗಿದೆ. ಅಷ್ಟಕ್ಕೂ ನಾವು ಹೇಗೆ ತನಿಖೆ ಮಾಡಬೇಕು. ಎಲ್ಲಿ ತನಿಖೆ ಮಾಡಬೇಕು? ಯಾವಾಗ ಆರೋಪಿಯನ್ನು ಮಾಧ್ಯಮದ ಎದುರು ತರಬೇಕು. ಯಾವಾಗ ತರಬಾರದು ಎಂಬುದು ಗೊತ್ತಿದೆ ಎನ್ನುವ ಮೂಲಕ ಮಾಧ್ಯಮದವರ ಬಾಯಿ ಮುಚ್ಚಿಸಿದರು.

ಧಮ್ಕಿ ರಾಜೀವ್‌ಗೌಡನನ್ನು ಖಾಕಿ ಬಲೆಗೆ ಬೀಳಿಸಿದ ಕಥೆ  
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಬೆದರಿಕೆ ಪ್ರಕರಣದಲ್ಲಿ ತಲೆಮರೆಸಿ ಕೊಂಡು ಓಡಾಡುತ್ತಿದ್ದ ಆರೋಪಿ ರಾಜೀವ್ ಗೌಡನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಖಾಕಿ ಬಲೆಗೆ ಬೀಳಿಸಿದ ರೀತಿಯೇ ರೋಚಕವಾಗಿದ್ದು, ಆತನಿಗೆ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿಯನ್ನೂ ಈ ವೇಳೆ ಬಂಧಿಸಲಾಗಿದೆ.

ತಲೆ ಮೆರೆಸಿಕೊಂಡಿದ್ದ ಆರೋಪಿ ರಾಜೀವ್‌ಗೌಡ ತನ್ನ ಸಹೋದರಿಗೆ ಕರೆ ಮಾಡಿದ್ದ ಎಂಬ ವಿಚಾರ ಪೊಲೀಸರಿಗೆ ಸಿಕ್ಕಿದ್ದು, ಈ ಬಗ್ಗೆ ಆಕೆಯನ್ನು ವಿಚಾರಣೆ ನಡೆಸಲಾಗಿತ್ತು. ಮಂಗಳೂರಲ್ಲಿ ಇದ್ದ ರಾಜೀವ್‌ಗೌಡ ಬೇರೆ ರಾಜ್ಯಕ್ಕೆ ಎಸ್ಕೇಪ್ ಆಗಿದ್ದಾನೆ ಎಂಬ ಮಾಹಿತಿ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದರು.

ಈ ವೇಳೆ, ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋ ಜೊತೆ ಆರೋಪಿ ಇರೋದು ಧೃಡವಾಗಿದೆ. ಆದರೆ ಮೈಕಲ್ ಜೋಸೇಫ್ ರೇಗೊ ಮೋಬೈಲ್ ಪೋನ್ ನಂಬರ್ ಪೊಲೀಸರ ಬಳಿ ಇರಲಿಲ್ಲ. ಎಷ್ಟು ಪ್ರಯತ್ನಿಸಿದರೂ ಮೋಬೈಲ್ ಪೋನ್ ನಂಬರ್ ಸಿಗದ ಕಾರಣ ಪೋಲಿಸರು ಪರದಾಟ ನಡೆಸಿದ್ದಾರೆ. ಅಂತಿಮವಾಗಿ ಪೊಲೀಸರು ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಸಕ್ಸಸ್ ಆಗಿದೆ.

ಮೈಕಲ್ ಜೋಸೆಫ್ ರೇಗೋ ನಂಬರ್ ಸಿಗದ ಕಾರಣ ಉದ್ಯಮಿಯ ಹಿನ್ನೆಲೆಯನ್ನು ಪೊಲೀಸರು ಕೆದಕಿದ್ದಾರೆ. ಮೈಕಲ್ ಮಗ ಬಹಳ ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2018ರಲ್ಲಿ ಅಮೇರಿಕಾ ದಿಂದ  ಬೆಂಗಳೂರು ಏರ್ಪೋರ್ಟ್??ಗೆ ಬಂದಿದ್ದ ಮೈಕಲ್ ಮಗ, ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ.  

ಇದನ್ನೇ ಆಧಾರ ಮಾಡಿಕೊಂಡ ಚಿಕ್ಕಬಳ್ಳಾಪುರ ಪೋಲಿಸರು ಮಂಗಳೂರಿನ ಪಬ್ ಒಂದರ ಮಾಲಕರಾಗಿರುವ ಮೈಕಲ್ ಸೋದರ ಸಂಬAಧಿಯೊಬ್ಬರಿಗೆ ತಾವು ಚಿಕ್ಕಜಾಲ ಪೊಲೀಸರು ಅಂತಾ ದೂರವಾಣಿ ಕರೆ ಮಾಡಲಾಗಿದೆ. ಮೈಕಲ್ ಮಗನ ಸಾವಿನ ವಿಚಾರದಲ್ಲಿ ಅವರ ಜೊತೆ ಮಾತನಾಡಬೇಕು ಎಂದು ಹೇಳಿ ಪೊಲೀಸರು ಮೈಕಲ್ ಜೋಸೆಫ್ ರೇಗೋ ಮೊಬೈಲ್ ನಂಬರ್ ಪಡೆದಿದ್ದಾರೆ. ಬಳಿಕ ಆ ನಂಬರ್ ಟ್ರೇಸ್ ಮಾಡಿ ಮೈಕಲ್ ಹಾಗೂ ಜೊತೆ ಇದ್ದ ರಾಜೀವ್ ಗೌಡನನ್ನು ಪೊಲೀಸರು ಬಂಧಿಸಿ ಇಂದು ಜೈಲಿಗಟ್ಟಿದ್ದಾರೆ.