ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ಪ್ರಯಾಣ ದರದ ಬೆನ್ನಲ್ಲೇ ಲಗೇಜ್ ಶುಲ್ಕವೂ ಹೆಚ್ಚಳ!
KSRTC bus luggage fares: ಬಸ್ ಪ್ರಯಾಣ ದರಗಳ ಏರಿಕೆಯ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಲಗೇಜ್ ಸಾಗಣೆ ಶುಲ್ಕವನ್ನೂ ಸಹ ಏರಿಸಿದೆ. ಈ ಹೊಸ ಪರಿಷ್ಕೃತ ದರಗಳು ಈಗಾಗಲೇ ರಾಜ್ಯಾದ್ಯಂತ ಜಾರಿಗೆ ಬಂದಿವೆ. ಇನ್ನು ನಿಗಮದ ಹೊಸ ನಿಯಮಾವಳಿಗಳ ಪ್ರಕಾರ, ಪ್ರತಿಯೊಬ್ಬ ಪ್ರಯಾಣಿಕನಿಗೆ ನಿಗದಿತ ಮಿತಿಯವರೆಗೆ ಮಾತ್ರ ಸಾಮಗ್ರಿಗಳನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುತ್ತದೆ.
-
Prabhakara R
Nov 10, 2026 6:40 PM
ಬೆಂಗಳೂರು: ಸಾರಿಗೆ ಬಸ್ ಪ್ರಯಾಣಿಕರಿಗೆ ಪ್ರಯಾಣ ದರದ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯುವ ಲಗೇಜ್ ಸಾಗಣೆ ಶುಲ್ಕವನ್ನು (KSRTC bus luggage fares: ) ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಪರಿಷ್ಕೃತ ದರಗಳು ಈಗಾಗಲೇ ಜಾರಿಗೆ ಬಂದಿವೆ.
ನಿಗಮದ ಹೊಸ ನಿಯಮಾವಳಿಗಳ ಪ್ರಕಾರ, ಪ್ರತಿಯೊಬ್ಬ ಪ್ರಯಾಣಿಕನಿಗೆ ನಿಗದಿತ ಮಿತಿಯವರೆಗೆ ಮಾತ್ರ ಸಾಮಗ್ರಿಗಳನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುತ್ತದೆ. 10 ಕೆಜಿಯಿಂದ 20 ಕೆಜಿ ತೂಕದವರೆಗಿನ ಲಗೇಜ್ಗೆ ಯಾವುದೇ ಶುಲ್ಕ ವಿಧಿಸದೆ ಉಚಿತ ಸಾಗಣೆಗೆ ಮುಂದುವರಿಯಲಿದೆ. ಆದರೆ, ಈ ನಿರ್ದಿಷ್ಟ ತೂಕದ ಮಿತಿಯನ್ನು ಮೀರಿದ ಯಾವುದೇ ಹೆಚ್ಚುವರಿ ಲಗೇಜ್ಗೆ ಪ್ರಯಾಣಿಕರು ಜೇಬಿನಿಂದ ದುಪ್ಪಟ್ಟು ಹಣ ತೆರಬೇಕಾಗುತ್ತದೆ.
ಪರಿಷ್ಕೃತ ಲಗೇಜ್ ದರಗಳ ವಿವರ (ಸ್ಟೇಜ್ ಆಧಾರದಲ್ಲಿ):
- ಮೊದಲ 5 ಸ್ಟೇಜ್ವರೆಗೆ: ₹6 ರೂ. ಶುಲ್ಕದಿಂದ 10 ರೂ. ಏರಿಕೆ.
- 6 ರಿಂದ 10 ಸ್ಟೇಜ್ಗಳಿಗೆ: 10 ರೂ.ಗಳಿಂದ 15 ರೂ.ಗೆ ಪರಿಷ್ಕರಣೆ
- 11 ರಿಂದ 15 ಸ್ಟೇಜ್ಗಳಿಗೆ: 20 ರೂ.ಗಳಿಂದ 25ಕ್ಕೆ ಹೆಚ್ಚಳ
ದೂರದ ಊರುಗಳಿಗೆ ವ್ಯಾಪಾರ, ಶಿಕ್ಷಣ ಹಾಗೂ ಕೃಷಿ ಕೆಲಸಗಳಿಗಾಗಿ ಸಾಮಗ್ರಿಗಳನ್ನು ಹೊತ್ತು ಸಾಗುವ ಸಾಮಾನ್ಯ ಜನರಿಗೆ ಈ ಲಗೇಜ್ ಶುಲ್ಕ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ.