ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇನ್ಮುಂದೆ ಬೆಂಗಳೂರಿನ ಸೋಮೇಶ್ವರ ದೇಗುಲದಲ್ಲಿ ಮದುವೆಗೆ ಅನುಮತಿ ಇಲ್ಲ; ಆಡಳಿತ ಮಂಡಳಿಯ ದಿಢೀರ್‌ ನಿರ್ಧಾರಕ್ಕೇನು ಕಾರಣ?

ಬೆಂಗಳೂರಿನ ಅತ್ಯಂತ ಜನಪ್ರಿಯ ಪಾರಂಪರಿಕ ದೇವಾಲಯಗಳಲ್ಲಿ ಒಂದಾದ ಹಲಸೂರು ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬಹಳ ಹಿಂದಿನಿಂದಲೂ ಮದುವೆ ನಡೆಯುತ್ತಿತ್ತು. ಆದರೆ ಈಗ ಅಲ್ಲಿನ ಆಡಳಿತ ಮಂಡಳಿ ಪದಾಧಿಕಾರಿಗಳು ಮದುವೆ ಸಮಾರಂಭವನ್ನು ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ವ್ಯಕ್ತಿಯೊಬ್ಬರು ಕರ್ನಾಟಕ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಈ  ದೇಗುಲದಲ್ಲಿ ಮದುವೆ ಮಾಡುವಂತಿಲ್ಲ; ಕಾರಣ ಏನು?

ಎಐ ಚಿತ್ರ -

Profile
Pushpa Kumari Dec 9, 2025 8:05 PM

ಬೆಂಗಳೂರು, ಡಿ. 9: ಸರಳ ಮದುವೆಯಾಗಲು ಇಷ್ಟ ಪಡುವ ಬಹುತೇಕರು ಇದಕ್ಕಾಗಿ ದೇವಸ್ಥಾನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಲವ್ ಮ್ಯಾರೇಜ್‌ಗಳೆಲ್ಲ ಹೆಚ್ಚಾಗಿ ದೇವಸ್ಥಾನದಲ್ಲೇ ನಡೆಯುತ್ತವೆ. ಬೆಂಗಳೂರಿನ ಅತ್ಯಂತ ಜನಪ್ರಿಯ ಪಾರಂಪರಿಕ ದೇವಾಲಯಗಳಲ್ಲಿ ಒಂದಾದ ಹಲಸೂರು ಸೋಮೇಶ್ವರ ಸ್ವಾಮಿ ದೇಗುಲದಲ್ಲಿ (Halasuru Someshwara Swamy Temple) ಬಹಳ ಹಿಂದಿನಿಂದಲೂ ಮದುವೆ ನಡೆಯುತ್ತಿತ್ತು. ಆದರೆ ಈಗ ಅಲ್ಲಿನ ಪದಾಧಿಕಾರಿಗಳು ತನ್ನ ಮದುವೆಗೆ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕರ್ನಾಟಕ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ್ದಾರೆ. ಹೀಗಾಗಿ ಈ ವಿಚಾರದ ಬಗ್ಗೆ ಕಾರಣ ನೀಡುವಂತೆ ಕೋರಿ ಸಿಎಂ ವಿಶೇಷ ಕರ್ತವ್ಯಾಧಿಕಾರಿಗಳು ದೇವಸ್ಥಾನಕ್ಕೆನೋಟಿಸ್ ನೀಡಿದ್ದಾರೆ. ಅರ್ಚಕರು ಈ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದು, ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಅರ್ಚಕರು ಹೇಳಿದ್ದೇನು? ಇಲ್ಲಿದೆ ವಿವರ.

ಶತಮಾನಗಳ ಇತಿಹಾಸ ಹೊಂದಿರುವ ಹಲಸೂರು ಸೋಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪೂಜೆ ಮಾಡಿಸಲು ಮತ್ತು ಮದುವೆ ಕಾರಣಕ್ಕೆ ಭೇಟಿ ನೀಡುವವರ ಪ್ರಮಾಣ ಹೆಚ್ಚಾಗಿದೆ‌‌. ಇಲ್ಲಿ ಅನೇಕ ವರ್ಷಗಳಿಂದ ಮದುವೆ ನಡೆಯುತ್ತಿದ್ದು, ತನ್ನ ಮದುವೆ ನಡೆಸಲು ಆಡಳಿತಾಧಿಕಾರಿಗಳು ಸಮ್ಮತಿ ನೀಡಿಲ್ಲ ಎಂದು ವರ ಸಿಎಂ ಕಚೇರಿಗೆ ಪತ್ರ ಬರೆದ ಬಳಿಕ ಅನೇಕ ಕುತೂಹಲದ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರತಿಕ್ರಿಯೆ ನೀಡಿ, ಮದುವೆಯಾದ ಅನೇಕ ಜೋಡಿಗಳು ವಿಚ್ಛೇದನ ಪಡೆಯುವ ಪ್ರಮಾಣ ಹೆಚ್ಚಾಗಿದೆ. ಈ ಕಾರಣಕ್ಕೆ ಇಲ್ಲಿ ಮದುವೆ ಮಾಡಿಸಲು ಹಿಂದೇಟು ಹಾಕುದಾಗಿ ತಿಳಿಸಿದ್ದಾರೆ.

ಈ ನಿರ್ಧಾರ ಕೈಗೊಳ್ಳುವ ಮುನ್ನ ಐದಾರು ವರ್ಷದ ಹಿಂದೆಯೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಇಲ್ಲಿ ಮದುವೆಯಾದ ಜೋಡಿಗಳು ವಿಚ್ಛೇದನ ಪಡೆಯುವ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ಅರ್ಚರು ಕೋರ್ಟ್‌ಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅರ್ಚಕರು ಮದುವೆ ಸಮಾರಂಭಕ್ಕೆ ತಾವು ಪುರೋಹಿತರಾಗಲು ಹಿಂದೇಟು ಹಾಕುತ್ತಿದ್ದರು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕ ಮೆದುಳಿನ ರಕ್ತಸ್ರಾವದಿಂದ ಸಾವು

ವರದಿಯೊಂದರ ಪ್ರಕಾರ, ದೇವಸ್ಥಾನದಲ್ಲಿ ವಿವಾಹವಾಗುವ ನವಜೋಡಿ ವಿಚ್ಛೇದನ ಪಡೆದರೆ ಆಗ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಪುರೋಹಿತರನ್ನು (ಅರ್ಚಕರನ್ನು) ಸಾಕ್ಷಿಗಾಗಿ ಹಾಜರಾಗುವಂತೆ ನಿರ್ದೇಶಿಸುತ್ತದೆ. ಅನೇಕ ಜೋಡಿಗಳು ಲವ್ ಮ್ಯಾರೇಜ್ ಆಗಲು ಮನೆಯಿಂದ ಓಡಿಹೋಗಿ ಇಲ್ಲಿಗೆ ಬಂದು ನಕಲಿ ದಾಖಲೆಗಳನ್ನು ನೀಡುತ್ತದೆ. ಕೆಲವು ದಿನಗಳ ನಂತರ, ಈ ಜೋಡಿಗಳ ಪೋಷಕರು ಬಂದು ನ್ಯಾಯಾಲಯದ ಪ್ರಕರಣಗಳನ್ನು ದಾಖಲಿಸಿದ್ದೂ ಇದೆ. ಹೀಗಾಗಿ ಮದುವೆ ಮಾಡಿಸಿದ ಬಳಿಕ ಕೋರ್ಟ್ ಕಚೇರಿಗಳಿಗೆ ಅರ್ಚಕರು ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಸಿಎಂ ಕಚೇರಿಯ ನೋಟಿಸ್‌ಗೆ ಪ್ರತ್ಯುತ್ತರ ನೀಡಲಾಗಿದೆ ಎಂಬುದಾಗಿ ದೇವಾಲಯ ಸಮಿತಿಯ ಮುಖ್ಯ ಆಡಳಿತ ಅಧಿಕಾರಿ ವಿ. ಗೋವಿಂದರಾಜು ಹೇಳಿದ್ದಾರೆ.

ದೇವಾಲಯವು ಇತರ ಆಚರಣೆಗಳು ಮತ್ತು ಧಾರ್ಮಿಕ ಸಮಾರಂಭಗಳನ್ನು ನಡೆಸುವುದನ್ನು ಈ ಹಿಂದಿನಂತೆ ಮುಂದುವರಿಸಿಕೊಂಡು ಬಂದಿದೆ. ಆದರೆ ವಿವಾಹ ಸಮಾರಂಭವನ್ನು ಸ್ಥಗಿತಗೊಳಿಸಿದೆ. ಈ ನೀತಿಯನ್ನು ಮುಂದಿನ ದಿನದಲ್ಲಿ ಮಾರ್ಪಾಡು ಮಾಡುವ ಸಾಧ್ಯತೆ ಇರುವುದಾಗಿ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಪ್ರಸ್ತುತ ಯಾವುದೇ ವಿವಾಹ ಸಮಾರಂಭಗಳು ನಡೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ದೇವಸ್ಥಾನದಲ್ಲಿ ವಿವಾಹವಾದರೂ ಪ್ರಮಾಣ ಪತ್ರವನ್ನು ಸ್ಥಳೀಯ ಆಡಳಿತ ಮಂಡಳಿ ನೀಡುತ್ತದೆ. ಹಾಗಿದ್ದ ಮೇಲೆ ವಿಚ್ಛೇದನ ಪ್ರಕರಣದಲ್ಲಿ ಪುರೋಹಿತರನ್ನು ಏಕೆ ಕರೆಯಬೇಕು ಎಂದು ಬಳಕೆದಾರರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.