BISFF 2026ಕ್ಕೆ ಚಾಲನೆ: ಜಾಗತಿಕ ಕಿರುಚಿತ್ರಗಳು, AI ಮತ್ತು ಹೊಸ ಸಿನಿಮಾ ಸಂವಾದಕ್ಕೆ ವೇದಿಕೆ
ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಪ್ರಸ್ತುತಿಯಲ್ಲಿ ನಡೆಯುತ್ತಿರುವ BISFF 2026, ಆ. 6ರಿಂದ 16ರವರೆಗೆ ಆನ್‌ಲೈನ್ ಹಾಗೂ ಆ.13ರಿಂದ 16ರವರೆಗೆ ಬೆಂಗಳೂರಿನ ವಿವಿಧ ಸಾಂಸ್ಕೃತಿಕ ಮತ್ತು ಸಿನಿಮಾ ಕೇಂದ್ರ ಗಳಲ್ಲಿ ನಡೆಯಲಿದೆ. ಈ ವರ್ಷದ ಚಿತ್ರೋತ್ಸವಕ್ಕೆ 100ಕ್ಕೂ ಹೆಚ್ಚು ದೇಶಗಳಿಂದ 3,300ಕ್ಕೂ ಅಧಿಕ ಚಿತ್ರಗಳು ಬಂದಿದ್ದು, ಅವುಗಳಲ್ಲಿ ಆಯ್ಕೆಯಾದ ಕೃತಿಗಳು ಭಾಷೆ, ಗಡಿ, ಗುರುತು ಮತ್ತು ಸಿನಿಮೀಯ ಅಭಿವ್ಯಕ್ತಿಯ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ.
-
ಬೆಂಗಳೂರು: ಬೆಂಗಳೂರಿನ 16ನೇ ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ (BISFF) ತನ್ನ ಭೌತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು, ಇದು ಚಿತ್ರನಿರ್ಮಾಪಕರು, ವಿದ್ಯಾರ್ಥಿಗಳು, ಸಿನಿಮಾ ಪ್ರೇಮಿಗಳು ಹಾಗೂ ಚಿತ್ರರಂಗದ ವೃತ್ತಿಪರರನ್ನು ಒಂದೇ ವೇದಿಕೆಗೆ ತರುತ್ತಿದೆ. ಭಾರತದ ಏಕೈಕ ಆಸ್ಕರ್ ಮಾನ್ಯತೆ ಪಡೆದ ಕಿರುಚಿತ್ರೋತ್ಸವವಾಗಿರುವ BISFF, ತನ್ನ ಭಾರತೀಯ, ಅಂತರ ರಾಷ್ಟ್ರೀಯ ಮತ್ತು ಅನಿಮೇಷನ್ ವಿಭಾಗಗಳಲ್ಲಿ ಆಯ್ಕೆಯಾದ ಚಿತ್ರಗಳನ್ನು ನೇರವಾಗಿ ಅಕಾಡೆಮಿ ಪ್ರಶಸ್ತಿಗಳಿಗೆ ಪರಿಗಣನೆಗೆ ಶಿಫಾರಸು ಮಾಡುವ ವಿಶೇಷ ಸ್ಥಾನಮಾನ ಹೊಂದಿದೆ.
ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಪ್ರಸ್ತುತಿಯಲ್ಲಿ ನಡೆಯುತ್ತಿರುವ BISFF 2026, ಆ. 6ರಿಂದ 16ರವರೆಗೆ ಆನ್‌ಲೈನ್ ಹಾಗೂ ಆ.13ರಿಂದ 16ರವರೆಗೆ ಬೆಂಗಳೂರಿನ ವಿವಿಧ ಸಾಂಸ್ಕೃತಿಕ ಮತ್ತು ಸಿನಿಮಾ ಕೇಂದ್ರಗಳಲ್ಲಿ ನಡೆಯಲಿದೆ. ಈ ವರ್ಷದ ಚಿತ್ರೋತ್ಸವಕ್ಕೆ 100ಕ್ಕೂ ಹೆಚ್ಚು ದೇಶಗಳಿಂದ 3,300ಕ್ಕೂ ಅಧಿಕ ಚಿತ್ರಗಳು ಬಂದಿದ್ದು, ಅವುಗಳಲ್ಲಿ ಆಯ್ಕೆಯಾದ ಕೃತಿಗಳು ಭಾಷೆ, ಗಡಿ, ಗುರುತು ಮತ್ತು ಸಿನಿಮೀಯ ಅಭಿವ್ಯಕ್ತಿಯ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ.
ಇದನ್ನೂ ಓದಿ: 72nd National Film Awards: ದೇಶೀಯ ಮಟ್ಟದಲ್ಲಿ ಮಿಂಚಿದ ಸ್ಯಾಂಡಲ್‌ವುಡ್‌ನ ʼಮಿಥ್ಯʼ: ತುಳುವಿನ 'ಇಂಬು'ಗೆ ಅವಾರ್ಡ್
ಧೈರ್ಯಶಾಲಿ ಕಥನಗಳೊಂದಿಗೆ ಉದ್ಘಾಟನೆ
ಉದ್ಘಾಟನಾ ಸಮಾರಂಭದಲ್ಲಿ ಗೋಥೆ-ಇನ್‌ಸ್ಟಿಟ್ಯೂಟ್ / ಮ್ಯಾಕ್ಸ್ ಮುಲ್ಲರ್ ಭವನ್ ಬೆಂಗಳೂರಿನ ನಿರ್ದೇಶಕ ಲಿಯೊನಾರ್ಡ್ ಹೇಡೆಕರ್ ಮತ್ತು BISFF ಸಂಸ್ಥಾಪಕ ಹಾಗೂ ಕಲಾತ್ಮಕ ನಿರ್ದೇಶಕ ಆನಂದ್ ವರದರಾಜ್ ಉಪಸ್ಥಿತರಿದ್ದು ಚಿತ್ರೋತ್ಸವಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ BISFF ಮತ್ತು ಗೋಥೆ-ಇನ್‌ಸ್ಟಿಟ್ಯೂಟ್ / ಮ್ಯಾಕ್ಸ್ ಮುಲ್ಲರ್ ಭವನ್ ಬೆಂಗಳೂರು ಜಂಟಿಯಾಗಿ ನಿರ್ಮಿಸಿದ Bare, Coming Out With My Driver, Sthir ಮತ್ತು Maddu ಚಿತ್ರಗಳನ್ನು ಪ್ರದರ್ಶಿಸಲಾಯಿತು.
“ಕಿರುಚಿತ್ರಗಳು ಸಿನಿಮೀಯ ಅಪಾಯಗಳನ್ನು ತೆಗೆದುಕೊಳ್ಳುವ ಅತ್ಯಂತ ಶುದ್ಧ ರೂಪ. ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಕಥೆಯನ್ನು ಹೇಳುವ ಸಾಮರ್ಥ್ಯ ಅವುಗಳ ವಿಶೇಷತೆ. ವಿಶ್ವದ ವಿವಿಧ ಭಾಗಗಳ ಕಥನಗಳೊಂದಿಗೆ ನಮ್ಮದೇ ಸಮುದಾಯಗಳ ಧ್ವನಿಗಳಿಗೆ ವೇದಿಕೆ ಕಲ್ಪಿಸುವುದು ಈ ಆವೃತ್ತಿಯ ಪ್ರಮುಖ ಆಶಯ,” ಎಂದು ಆನಂದ್ ವರದರಾಜ್ ಹೇಳಿದರು.
ಈ ಬಾರಿ AI: Machine Made Movies ವಿಭಾಗವು ಕೃತಕ ಬುದ್ಧಿಮತ್ತೆಯ ಮೂಲಕ ಹೊಸ ಕಥನ ಸಾಧ್ಯತೆಗಳನ್ನು ಅನ್ವೇಷಿಸಲಿದ್ದು, Dancing Lens ವಿಭಾಗವು ನೃತ್ಯ, ಚಲನೆ ಮತ್ತು ಕ್ಯಾಮೆರಾ ಭಾಷೆಯ ಸಂಗಮವನ್ನು ಪರಿಚಯಿಸಲಿದೆ.
ಇದರೊಂದಿಗೆ Producer Bazaar ಸಹಯೋಗದ Discovery Film Market ಮತ್ತು RV University ಸಹಯೋಗದ Echoes Film School Conference ಮೂಲಕ ನಿರ್ಮಾಪಕರು, ವಿತರಕರು, OTT ವೇದಿಕೆಗಳು, ವಿದ್ಯಾರ್ಥಿಗಳು ಹಾಗೂ ಚಿತ್ರರಂಗದ ವೃತ್ತಿಪರರಿಗೆ ಹೊಸ ಸಂಪರ್ಕ ಮತ್ತು ಕಲಿಕೆಯ ಅವಕಾಶಗಳನ್ನು ಕಲ್ಪಿಸಲಾಗಿದೆ.