ಮಕ್ಕಳ ದಿನಾಚರಣೆ; ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಕಲಿಕೆ ಉತ್ತೇಜಿಸಲು ಎರಡನೇ ಕಂಪ್ಯೂಟರ್ ಪ್ರಯೋಗಾಲಯ ಆರಂಭಿಸಿದ ಜೀಟಾ
ಒಂದು ವರ್ಷದೊಳಗೆ 300ಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕಾ ಪರಿಕರಗಳು ಮತ್ತು ರಚನಾತ್ಮಕ ಕಂಪ್ಯೂಟರ್ ಶಿಕ್ಷಣ ಒದಗಿಸುವ ಮೂಲಕ ಅವರ ಬದುಕಿನ ಆರಂಭದಲ್ಲಿಯೇ ಅಗತ್ಯ ಡಿಜಿಟಲ್ ಕೌಶಲಗಳನ್ನು ಕರಗತ ಮಾಡಿಸಲು ಈ ಕಾರ್ಯ ಕ್ರಮ ವಿನ್ಯಾಸಗೊಳಿಸಲಾಗಿದೆ.
-
ಬೆಂಗಳೂರು: ಹೊಸ ತಲೆಮಾರಿನ ಬ್ಯಾಂಕಿಂಗ್ ತಂತ್ರಜ್ಞಾನ ಪೂರೈಸುತ್ತಿರುವ ಜೀಟಾ (Zeta), ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಚೀಮಸಂದ್ರ ಸರ್ಕಾರಿ ಶಾಲೆಯಲ್ಲಿ ತನ್ನ ಎರಡನೇ ಕಂಪ್ಯೂಟರ್ ಪ್ರಯೋಗಾಲಯ ಆರಂಭಿಸಿದೆ.
ಡಿಜಿಟಲ್ ಸೇರ್ಪಡೆ ಮತ್ತು ತಂತ್ರಜ್ಞಾನ ಆಧಾರಿತ ಶಿಕ್ಷಣ ಮುನ್ನಡೆಸುವ ತನ್ನ ಬದ್ಧತೆ ಯನ್ನು ಈ ಮೂಲಕ ಜಾರಿಗೊಳಿಸಿದೆ. ಶೈಕ್ಷಣಿಕ ಅಂತರ ಕಡಿಮೆ ಮಾಡಲು ಶ್ರಮಿಸು ತ್ತಿರುವ ಸರ್ಕಾರಿಯೇತರ ಸಂಸ್ಥೆಯಾಗಿರುವ ʼಪ್ರಾಜೆಕ್ಟ್ ಶಿಕ್ಷಾʼದ ಸಹಯೋಗದಲ್ಲಿ ಕೈಗೊಳ್ಳ ಲಾಗಿರುವ ಈ ಉಪಕ್ರಮವು, ಡಿಜಿಟಲ್ ಕಲಿಕಾ ಮೂಲಸೌಲಭ್ಯ ಬಲಪಡಿಸುವ ಮತ್ತು ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣ ಲಭ್ಯತೆ ಹೆಚ್ಚಿಸುವ ಗುರಿ ಹೊಂದಿದೆ.
ಒಂದು ವರ್ಷದೊಳಗೆ 300ಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕಾ ಪರಿಕರಗಳು ಮತ್ತು ರಚನಾತ್ಮಕ ಕಂಪ್ಯೂಟರ್ ಶಿಕ್ಷಣ ಒದಗಿಸುವ ಮೂಲಕ ಅವರ ಬದುಕಿನ ಆರಂಭದಲ್ಲಿಯೇ ಅಗತ್ಯ ಡಿಜಿಟಲ್ ಕೌಶಲಗಳನ್ನು ಕರಗತ ಮಾಡಿಸಲು ಈ ಕಾರ್ಯಕ್ರಮ ವಿನ್ಯಾಸಗೊಳಿಸಲಾಗಿದೆ. ಈ ಪ್ರಯೋಗಾಲಯವು ಕಂಪ್ಯೂ ಟರ್‌ಗಳು, ಗರಿಷ್ಠ ವೇಗದ ಇಂಟರ್‌ನೆಟ್ ಸಂಪರ್ಕ ಮತ್ತು ನವೀಕರಿಸಿದ ತರಗತಿ ಮೂಲ ಸೌಲಭ್ಯಗಳನ್ನು ಒಳಗೊಂಡಿದೆ.
ಇದನ್ನೂ ಓದಿ: Bangalore News: ಪ್ರಾಧಿಕಾರದ ಸಮಗ್ರ ಅಭಿವೃದ್ದಿಗೆ ಸರ್ಕಾರದಿಂದ ಅಗತ್ಯ ಸಹಕಾರ: ಸಚಿವ ಎನ್ ಎಸ್ ಭೋಸರಾಜು ಭರವಸೆ
ಇದರ ಪಠ್ಯಕ್ರಮವು ಕೋಡಿಂಗ್ ಮೂಲಭೂತ ಸಂಗತಿಗಳು, ಡಿಜಿಟಲ್ ಸಾಕ್ಷರತೆ (ಅಂತ ರ್ಜಾಲ ಸುರಕ್ಷತೆ ಮತ್ತು ಇ-ತ್ಯಾಜ್ಯ ನಿರ್ವಹಣೆ ), ವಿಜ್ಞಾನ, ತಂತ್ರಜ್ಞಾನ, ಎಂಜಿನಿ ಯರಿಂಗ್ ಮತ್ತು ಗಣಿತ (ಎಸ್‌ಟಿಇಎಂ) ಆಧಾರಿತ ಯೋಜನೆಗಳು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಸೈಬರ್ ಸುರಕ್ಷತೆಯ ಜಾಗೃತಿ ಒಳಗೊಂಡಿದೆ. ಇದು ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳಲು ಮತ್ತು ಈ ಕೌಶಲಗಳನ್ನು ತಮ್ಮ ದೈನಂದಿನ ಕಲಿಕೆಯಲ್ಲಿ ಅನ್ವಯಿಸಲು ನೆರವಾಗಲಿದೆ.
ಕಂಪ್ಯೂಟರ್ ಲ್ಯಾಬ್‌ನ ಈ ವಿಸ್ತರಣಾ ಕಾರ್ಯಕ್ರಮವು 2024ರ ಸೆಪ್ಟೆಂಬರ್ 5 ರಂದು ಚಿನ್ನಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭವಾದ ಜೀಟಾದ ಮೊದಲ ʼಪ್ರಾಜೆಕ್ಟ್ ಶಿಕ್ಷಾʼ ಪ್ರಯೋಗಾಲಯದ ಯಶಸ್ಸು ಆಧರಿಸಿದೆ. ಇದು 300 ವಿದ್ಯಾರ್ಥಿಗಳನ್ನು ಮೊದಲ ಬಾರಿಗೆ ಔಪಚಾರಿಕ ಕಂಪ್ಯೂಟರ್ ಶಿಕ್ಷಣಕ್ಕೆ ಪರಿಚಯಿಸಿತು. ಆ ಶಾಲೆಯ ವಿದ್ಯಾರ್ಥಿಗಳು ದೂರ -ನಿಯಂತ್ರಿತ ಕಾರುಗಳಂತಹ ಸೃಜನಶೀಲ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಡಿಜಿಟಲ್ ಸಾಕ್ಷರತೆ ಮತ್ತು ಆತ್ಮವಿಶ್ವಾಸದಲ್ಲಿ ಗಮನಾರ್ಹ ಸುಧಾರಣೆ ಪ್ರದರ್ಶಿಸಿದ್ದಾರೆ.
ಈ ಉಪಕ್ರಮದ ಮೂಲಕ ಜೀಟಾ, ಡಿಜಿಟಲ್ ಕಲಿಕಾ ಮೂಲಸೌಲಭ್ಯ ಒದಗಿಸುವುದನ್ನು ಮೀರಿ ಮುನ್ನಡೆದಿದೆ. ಕಂಪನಿಯು ಬೋಧನಾ ಸಿಬ್ಬಂದಿಗೆ ಸೂಕ್ತ ಸಂಭಾವನೆ ೀಡುತ್ತಿದೆ. ಸ್ಥಳೀಯ ಶಿಕ್ಷಕರಿಗೆ ತರಬೇತಿ ನೀಡುತ್ತಿದೆ ಮತ್ತು ಶಾಲಾ ಪಠ್ಯಕ್ರಮಗಳಲ್ಲಿ ಡಿಜಿಟಲ್ ಕಲಿಕೆಯನ್ನು ಸಂಯೋಜಿಸುತ್ತಿದೆ. ಈ ಮೂಲಕ ಸುಸ್ಥಿರ ಸ್ವರೂಪದ ದೀರ್ಘಕಾಲೀನ ಪರಿಣಾಮವನ್ನು ಖಚಿತಪಡಿಸುತ್ತದೆ. ಇದರ ಜೊತೆಗೆ, ಜೀಟಾ ಉದ್ಯೋಗಿಗಳು ಕಾರ್ಯಾ ಗಾರಗಳು ಮತ್ತು ಪರಸ್ಪರ ಸಂವಾದಾತ್ಮಕ ಕಲಿಕಾ ತರಗತಿಗಳನ್ನು ಸ್ವಯಂ ಸೇವಕರಾಗಿ ನಿರ್ವಹಿಸಲು ಪ್ರೋತ್ಸಾಹಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಕೆಲಸ ಮಾಡುವ ವೃತ್ತಿಪರರಿಂದ ನೇರವಾಗಿ ಕಲಿಯಲು ಅನುವು ಮಾಡಿಕೊಡುತ್ತದೆ.
ಜೀಟಾದ ಚೀಫ್ ಪೀಪಲ್ ಆಫೀಸರ್ ಶುಭಯು ಸೇನ್‌ಗುಪ್ತಾ ಅವರು ಮಾತನಾಡಿ, "ಡಿಜಿಟಲ್ ಸೇರ್ಪಡೆಯು ಪ್ರಗತಿಗೆ ಗಮನಾರ್ಹ ಕೊಡುಗೆ ನೀಡುತ್ತದೆ. ʼಪ್ರಾಜೆಕ್ಟ್ ಶಿಕ್ಷಾʼ ದಂತಹ ಉಪಕ್ರಮಗಳು ವಹಿವಾಟನ್ನು ಮೀರಿ ತಂತ್ರಜ್ಞಾನದ ಪ್ರಯೋಜನಗಳನ್ನು ವಿಸ್ತರಿಸಲು ನಮಗೆ ಅವಕಾಶ ಮಾಡಿಕೊಡುತ್ತವೆ" ಎಂದು ಹೇಳಿದ್ದಾರೆ.
"ತಳಮಟ್ಟದಲ್ಲಿ ಡಿಜಿಟಲ್ ಕಲಿಕೆಯ ಮೂಲಸೌಲಭ್ಯಗಳಲ್ಲಿ ಹೂಡಿಕೆ ಮಾಡುವ ಮೂಲಕ, ನಾವು ದೀರ್ಘಾವಧಿಯ ಪರಿಣಾಮ ಸೃಷ್ಟಿಸುವ ಮತ್ತು ಡಿಜಿಟಲ್ ಭವಿಷ್ಯಕ್ಕೆ ಅಗತ್ಯವಾದ ಕೌಶಲಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುವ ಗುರಿ ಹೊಂದಿದ್ದೇವೆ" ಎಂದೂ ಅವರು ಹೇಳಿದ್ದಾರೆ.
ಪ್ರಾಜೆಕ್ಟ್ ಶಿಕ್ಷಾʼ-ದ ಸ್ಥಾಪಕಿ ಮತ್ತು ನಿರ್ದೇಶಕಿ ನೇಹಾ ಚಾವ್ಲಾ ಅವರು ಪ್ರತಿಕ್ರಿಯಿಸಿ- "ಪ್ರಾಜೆಕ್ಟ್ ಶಿಕ್ಷಾದಲ್ಲಿ, ನಾವು ನಿರ್ಮಿಸುವ ಪ್ರತಿಯೊಂದು ಡಿಜಿಟಲ್ ಲ್ಯಾಬ್- ಕಲಿಕೆಯಲ್ಲಿ ಸಮಾನತೆ ನಿಟ್ಟಿನಲ್ಲಿ ಸಾಗುವ ದೃಢ ಹೆಜ್ಜೆಯಾಗಿದೆ. ಜೀಟಾ ಜೊತೆಗಿನ ನಮ್ಮ ನಿರಂತರ ಪಾಲುದಾರಿಕೆಯು ಜಗತ್ತಿನ ಯಾವುದೇ ಭಾಗದಲ್ಲಿ ಡಿಜಿಟಲ್ ಕಲಿಕಾರ್ಥಿಗಳಿಗೆ ಲಭ್ಯ ಇರುವ ಅವಕಾಶಗಳನ್ನು ಪಡೆಯಲು ಅರ್ಹ ಮಕ್ಕಳಿಗೆ ಡಿಜಿಟಲ್ ಬಾಗಿಲುಗಳನ್ನು ತೆರೆಯಲು ನಮಗೆ ಸಹಾಯ ಮಾಡುತ್ತಿದೆ. ಈ ಉಪಕ್ರಮದ ಮೂಲಕ, ತಂತ್ರಜ್ಞಾನವು ಶಿಕ್ಷಣಕ್ಕೆ ಅಡ್ಡಿಯಾಗದೆ, ಸೇತುವೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕೊನೆಯ ಹಂತದವರೆಗೆ ಡಿಜಿಟಲ್ ಸಾಕ್ಷರತೆ ಸೌಲಭ್ಯ ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ ”ಎಂದು ಹೇಳಿದ್ದಾರೆ.
ತನ್ನ ನಿರಂತರ ಬದ್ಧತೆಯ ಭಾಗವಾಗಿ ಜೀಟಾ, ಪ್ರತಿ ವರ್ಷ ಒಂದು ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಲು ಉದ್ದೇಶಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಕಲಿಕೆಯ ಲಭ್ಯತೆಯನ್ನು ವಿಸ್ತರಿಸುತ್ತಿದೆ. ಭಾರತದ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತಿದೆ.
ʼಪ್ರಾಜೆಕ್ಟ್ ಶಿಕ್ಷಾʼದಡಿಯಲ್ಲಿ, ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಕಲಿಕೆ ಪರಿಚಯಿಸುವ ಮೂಲಕ ಡಿಜಿಟಲ್ ಅಂತರ ಕಡಿಮೆ ಮಾಡುವುದನ್ನು ಜೀಟಾ ಮುಂದುವರೆಸಿದೆ. ಒಂದು ವರ್ಷದೊಳಗೆ 300ಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕಾ ಪರಿಕರಗಳು ಮತ್ತು ರಚನಾತ್ಮಕ ಸ್ವರೂಪದ ಕಂಪ್ಯೂಟರ್ ಶಿಕ್ಷಣ ಒದಗಿಸಲು ಈ ಕಾರ್ಯಕ್ರಮ ವಿನ್ಯಾಸಗೊಳಿಸಲಾಗಿದೆ. ತನ್ನ ನಿರಂತರ ಬದ್ಧತೆಯ ಭಾಗವಾಗಿ ಪ್ರತಿ ವರ್ಷ ಒಂದು ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಲು ಜೀಟಾ ಉದ್ದೇಶಿಸಿದೆ. ಹೆಚ್ಚೆಚ್ಚು ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಕಲಿಕೆಯ ಲಭ್ಯತೆ ವಿಸ್ತರಿಸುತ್ತಿದೆ. ಭಾರತದ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ವಿದ್ಯಾರ್ಥಿ ಗಳು ಸಕ್ರಿಯವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತಿದೆ.