K Ramp OTT: ರೊಮ್ಯಾಂಟಿಕ್ ಕಾಮಿಡಿ ಮೂವಿ 'ಕೆ-ರ‍್ಯಾಂಪ್' ಒಟಿಟಿ ಎಂಟ್ರಿ ಯಾವಾಗ?
ದೀಪಾವಳಿ ವಾರಾಂತ್ಯದಲ್ಲಿ ಅಕ್ಟೋಬರ್ 18, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಇಂದು ನವೆಂಬರ್ 15, 2025 ರಂದು ಡಿಜಿಟಲ್ ಪ್ರೀಮಿಯರ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದ ನಂತರ, ಚಿತ್ರವು ಮನೆಯಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ.
ಒಟಿಟಿ ಸಿನಿಮಾ -
ಕಿರಣ್ ಅಬ್ಬಾವರಾಮ್ ಮತ್ತು ಯುಕ್ತಿ ತರೇಜಾ (Kiran Abbavaram and Yukti Thareja) ಅವರ ರೊಮ್ಯಾಂಟಿಕ್ ಹಾಸ್ಯ ಚಿತ್ರ 'ಕೆ-ರ‍್ಯಾಂಪ್' (K Ramp) ಈಗ ಒಟಿಟಿಗೆ ಎಂಟ್ರಿ ಕೊಟ್ಟಿದೆ. ದೀಪಾವಳಿ ವಾರಾಂತ್ಯದಲ್ಲಿ ಅಕ್ಟೋಬರ್ 18, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಇಂದು ನವೆಂಬರ್ 15, 2025 ರಂದು ಡಿಜಿಟಲ್ (Digital Premere) ಪ್ರೀಮಿಯರ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದ ನಂತರ, ಚಿತ್ರವು ಮನೆಯಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ.
'ಕೆ-ರ‍್ಯಾಂಪ್' ವೀಕ್ಷಣೆ ಎಲ್ಲಿ?
ಈ ಚಿತ್ರವು ಈಗ ಆಹಾ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಪ್ರೀಮಿಯರ್ ಬಗ್ಗೆ ಈ ಹಿಂದೆ ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿತ್ತು, "ವರ್ಷದ ಮನಸ್ಸಿಗೆ ಮುದ ನೀಡುವ ಮನರಂಜನೆಗಾಗಿ ಸಿದ್ಧರಾಗಿ. 'ಕೆ-ರ‍್ಯಾಂಪ್' ನವೆಂಬರ್ 15 ರಂದು ಆಹಾದಲ್ಲಿ ಮಾತ್ರ ಪ್ರಥಮ ಪ್ರದರ್ಶನಗೊಳ್ಳುತ್ತದೆ".
ಇದನ್ನೂ ಓದಿ: Bigg Boss Kannada 12: ರಕ್ಷಿತಾ ಶೆಟ್ಟಿ ಬಗ್ಗೆ ಕಾವ್ಯ ಅಸಮಾಧಾನ! ವೀಕ್ಷಕರು ಗರಂ
ಚಿತ್ರ ಬಿಡುಗಡೆಯಾದ ಒಂದು ತಿಂಗಳೊಳಗೆ OTT ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಚಿತ್ರವನ್ನು ಮಿಸ್ ಮಾಡಿಕೊಂಡಿರವರಿಗೆ ಮನೆಯಲ್ಲಿಯೇ ವೀಕ್ಷಿಸುವ ಅವಕಾಶವನ್ನು ಸಿಗಲಿದೆ.
'ಕೆ-ರ‍್ಯಾಂಪ್' ಚಿತ್ರದ ಪಾತ್ರವರ್ಗ ಮತ್ತು ತಂಡ
ಚಿತ್ರದಲ್ಲಿ ಕಿರಣ್ ಅಬ್ಬಾವರಂ ಮತ್ತು 'ಮಾರ್ಕೊ' ನಟಿ ಯುಕ್ತಿ ಥರೇಜಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ತಾರಾಗಣದಲ್ಲಿ ಅನನ್ಯಾ ಅಕುಲಾ, ಕಿರ್ರಕ್ ಸೀತಾ, ವೆನ್ನೆಲ ಕಿಶೋರ್, ಮುರಳೀಧರ್ ಗೌಡ್, ಸಾಯಿ ಕುಮಾರ್, ನರೇಶ್, ರಾಜಶ್ರೀ ನಾಯರ್, ಗೋಪರಾಜು ರಮಣ, ಶಿವನ್ನಾರಾಯಣ ನರಿಪೆಡ್ಡಿ, ಅಲಿ ಮತ್ತು ಶ್ರೀನಿವಾಸ ರೆಡ್ಡಿ ಇದ್ದಾರೆ. ಅಜಯ್ ಮತ್ತು ವಿಮಲಾ ರಾಮನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
.'ಕೆ-ರ‍್ಯಾಂಪ್' ಚಿತ್ರವನ್ನು ಜೈನ್ಸ್ ನಾನಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಹಾಸ್ಯ ಮೂವೀಸ್ ಮತ್ತು ರುದ್ರಾಂಶ ಸೆಲ್ಯುಲಾಯ್ಡ್ಸ್ ಅಡಿಯಲ್ಲಿ ರಾಜೇಶ್ ದಂಡಾ, ಬಾಲಾಜಿ ಗುಟ್ಟಾ ಮತ್ತು ಶಿವ ಬೊಮ್ಮಕ್ ನಿರ್ಮಿಸಿದ್ದಾರೆ. ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಚೈತನ್ ಭಾರದ್ವಾಜ್ ಸಂಯೋಜಿಸಿದ್ದಾರೆ, ಸತೀಶ್ ರೆಡ್ಡಿ ಮಾಸಮ್ ಅವರ ಛಾಯಾಗ್ರಹಣ ಮತ್ತು ಚೋಟಾ ಕೆ. ಪ್ರಸಾದ್ ಅವರ ಸಂಕಲನವಿದೆ.
ಕಲೆಕ್ಷನ್ ಎಷ್ಟು?
ಕೆ-ರ‍್ಯಾಂಪ್ ತನ್ನ ಮೊದಲ 11 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು ಮತ್ತು ಅಂದಾಜು ₹ 17.48 ಕೋಟಿ ಭಾರತೀಯ ನಿವ್ವಳ ಗಳಿಸಿತು.ಕಿ ರಣ್ ಅಬ್ಬಾವರಾಮ್ ಮುಂದಿನ 'ಚೆನ್ನೈ ಲವ್ ಸ್ಟೋರಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು 'ಕೆಎ2' ಚಿತ್ರವನ್ನೂ ಸಹ ಮಾಲು ಮುಂದಾಗಿದ್ದಾರೆ.
ಇದನ್ನೂ ಓದಿ: Bigg Boss Kannada 12: ಕಿಚ್ಚನ ಕೋಪ ನೆತ್ತಿಗೆ ಏರಿಸಿದ್ರಾ ರಕ್ಷಿತಾ? ಗಿಲ್ಲಿ ಸೀಕ್ರೆಟ್ ಮ್ಯಾಚ್ ಬಗ್ಗೆ ಸುದೀಪ್ ಕೆಂಡ!
ಇದು 2024 ರ ಫ್ಯಾಂಟಸಿ ಥ್ರಿಲ್ಲರ್ 'ಕೆಎ' ಚಿತ್ರದ ಮುಂದುವರಿದ ಭಾಗವಾಗಿದ್ದು, ಇದರಲ್ಲಿ ಅವರು ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ.