Fashion News 2025: ಫ್ಯಾಷನ್ ಪ್ರಿಯರ ಪವರ್ ಡ್ರೆಸ್ಸಿಂಗ್ಗೆ ಮನೆಕಿನ್ ಸಾಥ್
Actress Manvitha Kamath: ಪವರ್ ಡ್ರೆಸ್ಸಿಂಗ್ ಕಾನ್ಸೆಪ್ಟ್ಗೆ ಹೆಸರಾದ ನಟಿ ಮಾನ್ವಿತಾ ಕಾಮತ್ರ ಫ್ಯಾಷನ್ ಬ್ರ್ಯಾಂಡ್ ಮನೆಕಿನ್ ಫ್ಯಾಷನ್ವೇರ್ಗಳ ಅನಾವರಣವು ಉದ್ಯಾನನಗರಿಯ ಬ್ಯಾಸ್ಟಿಯನ್ ಗಾರ್ಡನ್ ಸಿಟಿಯಲ್ಲಿ ನಡೆಯಿತು. ಸಾಕಷ್ಟು ಫ್ಯಾಷನ್ ಪ್ರಿಯರು ಭಾಗವಹಿಸಿದ್ದರು. ಈ ಕುರಿತಂತೆ ಇಲ್ಲಿದೆ ವರದಿ.
ನಟಿ ಮಾನ್ವಿತಾ ಕಾಮತ್ -
ಸ್ಯಾಂಡಲ್ವುಡ್ ನಟಿ ಮಾನ್ವಿತಾ ಕಾಮತ್ರ ಬ್ರ್ಯಾಂಡ್ ಮನೆಕಿನ್ನ ನಾನಾ ವಿನ್ಯಾಸದ ಪವರ್ ಸೂಟ್ಗಳ ಅನಾವರಣವು ಉದ್ಯಾನನಗರಿಯ ಬ್ಯಾಸ್ಟಿಯನ್ ಗಾರ್ಡನ್ ಸಿಟಿಯಲ್ಲಿ ನಡೆಯಿತು.
ಮಾನ್ವಿತಾ ಪವರ್ ಡ್ರೆಸ್ಸಿಂಗ್ ಫ್ಯಾಷನ್ವೇರ್ಸ್
ಸ್ಯಾಂಡಲ್ವುಡ್ ನಟಿ ಮಾನ್ವಿತಾ ಕಾಮತ್ ಫ್ಯಾಷನ್ ಇಂಡಸ್ಟ್ರಿಗೆ ಎಂಟ್ರಿ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪವರ್ ಡ್ರೆಸ್ಸಿಂಗ್ಗೆ ಹೆಸರಾದ ಅವರ ಈ ಬ್ರಾಂಡ್ನ ಫ್ಯಾಷನ್ವೇರ್ಗಳು ಇದೀಗ ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರನ್ನು ಮಾತ್ರವಲ್ಲ, ಎಲ್ಲಾ ಕ್ಷೇತ್ರದವರನ್ನು ಸೆಳೆದಿದೆ. ಇದಕ್ಕೆ ಕಾರಣ, ಸಿಲ್ಕ್ ಫ್ಯಾಬ್ರಿಕ್ ಹಾಗೂ ಡಿಸೈನ್ಸ್.
ಏನಿದು ಮನೆಕಿನ್ ಫ್ಯಾಷನ್ವೇರ್
ಇನ್ನು, ನಟಿ ಮಾನ್ವಿತಾ ಅವರೇ ಹೇಳುವಂತೆ, ಪರಿಶುದ್ಧ ಸಿಲ್ಕ್ ಬ್ಲೇಜರ್ಗಳಿವು. ಪ್ರೊಫೆಷನಲ್ ಹುಡುಗಿಯರಿಗೆ ಮಾತ್ರವಲ್ಲ ಹಾಗೂ ಯೂನಿಕ್ ಆಗಿ ಜತೆಜತೆಗೆ ಕ್ಲಾಸಿಕ್ ಆಗಿಯೂ ಕಾಣ ಬಯಸುವವರಿಗೆ ಬೆಸ್ಟ್ ಔಟ್ಫಿಟ್ ಎನ್ನಬಹುದು. ಪವರ್ ಡ್ರೆಸ್ಸಿಂಗ್ ನೀಡುವ ಫ್ಯಾಷನ್ವೇರ್ಗಳಿವು ಎನ್ನುತ್ತಾರೆ.
ಪವರ್ ಡ್ರೆಸ್ಸಿಂಗ್ ಪ್ರಿಯರಿಗೆ ಬೆಸ್ಟ್ ಫ್ಯಾಷನ್ವೇರ್
ಇಂತಹ ಬ್ಲೇಜರ್ ಸೂಟ್ ಹಾಗೂ ಸೆಟ್ಗಳನ್ನು ಈಗಾಗಲೇ ತಮ್ಮ ಮನೆಕಿನ್ ಬ್ರ್ಯಾಂಡ್ ಆಯ್ಕೆಗೆ ತಕ್ಕಂತೆ ಡಿಸೈನ್ ಮಾಡುತ್ತಿದೆ. ಇವು ಆನ್ಲೈನ್ನಲ್ಲಿಯೂ ಕೂಡ ಲಭ್ಯ ಎಂದು ಮಾನ್ವಿತಾ ವಿಶ್ವವಾಣಿ ನ್ಯೂಸ್ಗೆ ತಿಳಿಸಿದರು.
ಫ್ಯಾಷನ್ ಪ್ರೇಮಿಗಳ ವಿಸಿಟ್
ಈ ಫ್ಯಾಷನ್ ಪಾಪ್ ಅಪ್ನಲ್ಲಿ ಡಿಸೈನರ್ ಹಾಗೂ ಸ್ಟೈಲಿಸ್ಟ್ ನಿಧಿ ಸೌಮ್ಯ ಸೇರಿದಂತೆ ಸಾಕಷ್ಟು ಫ್ಯಾಷನ್ ಪ್ರೇಮಿಗಳು ಭಾಗವಹಿಸಿದ್ದರು.