8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ
Body Heals itself Return to Nature ಎಂದರೆ ದೇಹವು ಸ್ವತಃ ಗುಣವಾಗುತ್ತದೆ ಎಂಬ ಸಿದ್ಧಾಂತ ದೊಟ್ಟಿಗೆ ಚಿಕಿತ್ಸೆಯನ್ನು ನೀಡುವುದು ಪ್ರಕೃತಿ ಚಿಕಿತ್ಸೆಯ ಮೂಲ ಧೈಯ. ಆದ್ದರಿಂದ ಎಲ್ಲಾ ಪ್ರಕೃತಿ ಚಿಕಿತ್ಸಾಲಯದಲ್ಲಿ ಪಂಚಮಹಾಭೂತಗಳಾದ ವಾಯು, ಅಗ್ನಿ ಜಲ ಪ್ರಶ್ನೆ ಹಾಗೂ ಆಕಾಶ. ಇವುಗಳನ್ನು ಉಪಯೋಗಿಸಿಕೊಂಡು ಚಿಕಿತ್ಸೆಯನ್ನು ನೀಡು ತ್ತಾರೆ.
-
ಪ್ರಕೃತಿ ಚಿಕಿತ್ಸೆಯು ಭಾರತೀಯ ಸಂಸ್ಕೃತಿಯ ಮೇಲೆ ನಿಂತಿರುವ ಹಾಗೂ ವಿಶೇಷವಾಗಿ ಔಷಧರಹಿತ ಚಿಕಿತ್ಸೆಯಾಗಿದ್ದು ದೇಶಿಯ ವೈದ್ಯಕೀಯ ಚಿಕಿತ್ಸೆ ಪದ್ಧತಿಯಲ್ಲಿ ಆಯುಷ್ ಪ್ರಮುಖ ಸ್ನಾನವನ್ನು ಪಡೆದಿವೆ.
ಪ್ರಕೃತಿ ಚಿಕಿತ್ಸೆಯಲ್ಲಿ ಯಾವುದೇ ರಾಸಾಯನಿಕ ಔಷಧಿ ಯನ್ನು ಉಪಯೋಗಿಸದೆ ದೇಹದಲ್ಲಿ ಹುದುಗಿಕೊಂಡಿರುವ ಚೈತನ್ಯವನ್ನು ಬೇರೆ ಬೇರೆ ಚಿಕಿತ್ಸೆಗಳ ಮೂಲಕ ಉತ್ತೇಜನಗೊಳಿಸಿ ದೇಹದ ಪಂಚ ಮಹಾ ಭೂತಗಳಿಗೆ ವ್ಯತ್ಯಾಸವಾಗಿ ಕಾಯಿಲೆಗೆ ಕಾರಣ ವಾದ ವಿಷ ಪದಾರ್ಥವನ್ನು ಪ್ರಕೃತಿಯಲ್ಲಿರುವ ಪಂಚಮಹಾಭೂತಗಳನ್ನು ಉಪಯೋಗಿ ಸಿಕೊಂಡು ಬೇರೆ ಬೇರೆ ಚಿಕಿತ್ಸೆಗಳ ಮೂಲಕ ನೀಡಿ ಕಾಯಿಲೆಗಳನ್ನು, ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಪ್ರಕೃತಿ ಚಿಕಿತ್ಸೆಯ ತತ್ವ.
Body Heals itself Return to Nature ಎಂದರೆ ದೇಹವು ಸ್ವತಃ ಗುಣವಾಗುತ್ತದೆ ಎಂಬ ಸಿದ್ಧಾಂತದೊಟ್ಟಿಗೆ ಚಿಕಿತ್ಸೆಯನ್ನು ನೀಡುವುದು ಪ್ರಕೃತಿ ಚಿಕಿತ್ಸೆಯ ಮೂಲ ಧೈಯ. ಆದ್ದರಿಂದ ಎಲ್ಲಾ ಪ್ರಕೃತಿ ಚಿಕಿತ್ಸಾಲಯದಲ್ಲಿ ಪಂಚಮಹಾಭೂತಗಳಾದ ವಾಯು, ಅಗ್ನಿ ಜಲ ಪ್ರಶ್ನೆ ಹಾಗೂ ಆಕಾಶ. ಇವುಗಳನ್ನು ಉಪಯೋಗಿಸಿಕೊಂಡು ಚಿಕಿತ್ಸೆಯನ್ನು ನೀಡು ತ್ತಾರೆ. ಈ ಪ್ರಕೃತಿಯಲ್ಲಿರುವ ఎలా ಜೀವಿಗಳು ಮಾನವನು ಸೇರಿದಂತೆ ಚಿಕಿತ್ಸಾ ಪದ್ಧತಿ ಯನ್ನು ಅಳವಡಿಸಿಕೊಂಡಿರುವುದು ನಿಜಕ್ಕೂ ವಿಶೇಷ. ಅದೇ ರೀತಿಯಲ್ಲಿ ನಮಗೆ ದೇಹದಲ್ಲಿ ತೊಂದರೆ ಉಂಟಾದಾಗ ಈ ಮೂಲಭೂತ ಸಿದ್ಧಾಂತವನ್ನು ಉಪಯೋಗಿಸಿ ಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತೇವೆ ಹಾಗೆಯೇ ಮುಂದುವರೆದು ಪ್ರಕೃತಿ ಚಿಕಿತ್ಸೆ ಯಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: Mohan Vishwa Column: ವಿದ್ಯಾವಂತರು ಭಯೋತ್ಪಾದಕರಾದರೆ ಕಥೆ ಏನು ?
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಅದ್ಭುತವಾದ ಭಾರತೀಯ ಚಿಕಿತ್ಸಾ ಪದ್ಧತಿ ಮೇಪತ್ತಿಗೆ ಸೇರುತ್ತದೆ ಎನ್ನುವ ಕಳಕಳಿ ಯೊಂದಿಗೆ 1987ರಲ್ಲಿ ಆಸ್ಪತ್ರೆ ಪ್ರಾರಂಭಿಸಿದ ಎರಡೇ ವರ್ಷದಲ್ಲಿ ಇತರೆ ವೈದ್ಯಕೀಯ ವಿಜ್ಞಾನ ಕೋರ್ಸಳಂತೆ 1989ರಲ್ಲಿ ಬಿ.ಎನ್ ವೈ ಎಸ್ ಎಂಬ ಪದವಿಯನ್ನು ಈ ಚಿಕಿತ್ಸಾ ಪದ್ಧತಿಗೆ ಒಳ್ಳೆಯ ಸ್ನಾನಮಾನವನ್ನು ಕೊಡಬೇಕೆಂಬ ಉದ್ದೇಶದಿಂದ ಒಂದು ಸಣ್ಣ ಆಸ್ಪತ್ರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಾಂತಿವನವನ್ನು ಸ್ಥಾಪಿಸಿದರು. ಮುಂದು ವರೆದಂತೆ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯ ಕೀಯ ಮಹಾವಿದ್ಯಾಲಯವನ್ನು ಆರಂಭಿಸಿದರು. ಇಂದು ಈ ಕಾಲೇಜು ಎಸ್ ಡಿ ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯವಾಗಿದೆ.
ಈ ಸಂಸ್ಥೆ ಪ್ರಕೃತಿ ಚಿಕಿತ್ಸೆಯನ್ನು ನೀಡುವುದರಲ್ಲಿ ಮಾದರಿ ಸಂಸ್ಥೆಯೆಂದು ಕೇಂದ್ರ ಸರ್ಕಾರವು ಗುರುತಿಸಿ Centre of Excellence in Naturopathy and Yoga ಸಂಶೋಧನಾ ವಿಭಾಗವನ್ನು ನೀಡಿದೆ. ಪ್ರಕೃತಿ ಚಿಕಿತ್ಸೆಯ ಉಪಯೋಗವನ್ನು ಕರ್ನಾಟಕದದ್ಯಂತ ಪಸರಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಾಂತಿವನ, ಉಡುಪಿಯಲ್ಲಿ ಸೌಖ್ಯವನ್ನು ಹಾಗೂ ಬೆಂಗಳೂರಿನಲ್ಲಿ ಕ್ಷೇಮವನ ಎಂಬ ಮತ್ತೆರಡು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯನ್ನು ಪ್ರಾರಂಭಿಸ ಲಾಯಿತು ಕಳೆದ ವರ್ಷದಿಂದ ಮೂರು ಆಸ್ಪತ್ರೆಗಳು ಸಂಪೂರ್ಣವಾಗಿ ಆರೋಗ್ಯಾರ್ಥಿ ಗಳಿಂದ ತುಂಬಿದೆ.
ಇಲ್ಲಿ ಬರುವಂತಹ ಸಾಧಕರು ಅಧಿಕ ಪ್ರಮಾಣದಲ್ಲಿ ಪಟ್ಟಣ ಪ್ರದೇಶದವರಾಗಿದ್ದು, ಅವರಲ್ಲಿ ಉತ್ತಮವಾದ ಜೀವನ ಶೈಲಿಗೆ ಕಾರಣ ಪ್ರಕೃತಿ ಚಿಕಿತ್ಸೆಯೆಂದು ಮನಗಂಡು ಈ ಚಿಕಿತ್ಸಾ ಪದ್ಮತಿಯನ್ನು ಹಳ್ಳಿಗಾಡಿನ ರೈತಾಪಿ ಜನರಿಗೂ ಲಭ್ಯವಾಗಬೇಕೆಂಬ ಉದ್ದೇಶ ದಿಂದ 8ನೇ ಪ್ರಕೃತಿ ಚಿಕಿತ್ಸೆ ದಿನದ ಅಂಗವಾಗಿ ಪ್ರಕೃತಿ ಚಿಕಿತ್ಸೆ ಕರ್ನಾಟಕದ ಉದ್ದಗಲಕ್ಕೂ ಪರಿಚಯ ಮಾಡಬೇಕೆಂದು ಅಲ್ಲದ ಏಕಕಾಲದಲ್ಲಿ ಹಲವಾರು ಜಿಲ್ಲೆಗಳಲ್ಲಿ ರಾಜ್ಯದ ಪ್ರತಿಯೊಂದು ಪ್ರಜೆಯೂ ಪ್ರಕೃತಿ ಚಿಕಿತ್ಸೆಯ ಬಗ್ಗೆ, ತಿಳುವಳಿಕೆ ನೀಡುವ ದೃಷ್ಟಿಯಿಂದ ಮುಖ್ಯವಾಗಿ ಯುವಕರಿಗೆ ಈ ಪ್ರಕೃತಿ ಚಿಕಿತ್ಸೆಯ ಮಹತ್ವ ಸಾರಲು ರಾಜ್ಯದ ಎಲ್ಲಾ 234 ತಾಲೂಕು ಕೇಂದ್ರಗಳಲ್ಲಿ ನವೆಂಬರ್ 10 ರಿಂದ 17 ರವರೆಗೆ ತಾಲೂಕಿನಾದ್ಯಂತ ಶಿಬಿರ ಹೋಬಳಿ ಮಟ್ಟದಲ್ಲಿ ಪ್ರಕೃತಿ ಚಿಕಿತ್ಸೆಯ ಪರಿಚಯವನ್ನು ಮಾಡುವುದಕ್ಕಾಗಿ ಸುಮಾರು 500ಕ್ಕೂ ಹೆಚ್ಚು ವೈದ್ಯ ತಂಡದೊಂದಿಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮನದ ಮಾತು ಸರಣಿಯಲ್ಲಿ ಉಲ್ಲೇಖ ವಾದ ಅತಿ ಪ್ರಮುಖ ವಿಷಯ ಆರೋಗ್ಯಯುತ ಜೀವನಶೈಲಿ ಹಾಗೂ ಬೊಜ್ಜು ನಿವಾರಣೆ ಯೂ ಕೂಡ ಪ್ರಕೃತಿ ಚಿಕಿತ್ಸೆ ಹಾಗೂ ಯೋಗಾಭ್ಯಾಸದಿಂದ ಸಾಧ್ಯ ಹೀಗಾಗಿ ವೈದ್ಯ ತಂಡದೊಂದಿಗೆ ಈ ಶಿಬಿರವನ್ನು ಜನರಿಗೆ ಮನಮುಟ್ಟುವ ಹಾಗೆ ಸ್ವಾಭಾವಿಕ ಜೀವನ ಶೈಲಿ ಅಳವಡಿಸಿಕೊಂಡು ಆರೋಗ್ಯ ಕಾಪಾಡುವ ನೈಸರ್ಗಿಕ ವಿಧಾನಗಳ ಪರಿಚಯ ಹಾಗೂ ಆಹಾರ, ಪೌಷ್ಟಿಕತೆ ಮತ್ತು ಜೀವನ ಶೈಲಿ ಮಾರ್ಗದರ್ಶನ ಮೂಲಕ ದೈನಂದಿನ ಆರೋಗ್ಯದ ಬುನಾದಿ ಬಲಪಡಿಸುವ ಪ್ರಯತ್ನ ಹಾಗೂ ಆರೋಗ್ಯ శరితు ಪ್ರೇರಣಾ ದಾಯಕ ಉಪನ್ಯಾಸಗಳು ಹಾಗೂ ಮನೆಯ ಅನುಸರಿಸಬಹುದಾದ ಸರಳ ಚಿಕಿತ್ಸೆ ವಿಧಾನ ಗಳ ತರಬೇತಿ ಅಲ್ಲದೇ ನಿಮ್ಮ ಜೀವನದಲ್ಲಿ ಔಷಧಿ ರಹಿತ ಆರೋಗ್ಯದ ಹೊಸ ದಾರಿ ತೆರೆದಿಡುವ ಪ್ರಯತ್ನ ಈ 8ನೇ ಪ್ರಕೃತಿ ಚಿಕಿತ್ಸಾ ದಿನದ ಮೂಲ ಉದ್ದೇಶ.
ಡಾ.ಪ್ರಶಾಂತ್ ಶೆಟ್ಟಿ, ಪ್ರಾಂಶುಪಾಲರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜು ಉಜಿರೆ