Hyena Movie: ವಿಭಿನ್ನ ಕಥಾ ಹಂದರವುಳ್ಳ ʼಹೈನಾʼ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ತೇಜಸ್ವಿ ಸೂರ್ಯ!
ವಿಭಿನ್ನ ಕಥಾಹಂದರ ಹೊಂದಿರುವ ʼಹೈನಾʼ ಚಿತ್ರದ (Hyena Movie) ಟ್ರೇಲರ್ ಜ.15 ರಂದು ಬಿಡುಗಡೆಯಾಗಲಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ʼಹೈನಾʼ ಚಿತ್ರದ ಟ್ರೇಲರ್ ಅನಾವರಣ ಮಾಡಲಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
Vishwavani News
January 10, 2025
ಬೆಂಗಳೂರು: ಅಮೃತ ಫಿಲಂ ಸೆಂಟರ್ ಲಾಂಛನದಲ್ಲಿ ವೆಂಕಟ್ ಭಾರದ್ವಾಜ್ ಹಾಗೂ ರಾಜ್ ಕಮಲ್ ನಿರ್ಮಿಸಿರುವ ಹಾಗೂ ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು, ನಿರ್ದೇಶಿಸಿರುವ ವಿಭಿನ್ನ ಕಥಾಹಂದರ ಹೊಂದಿರುವ ʼಹೈನಾʼ ಚಿತ್ರದ (Hyena Movie) ಟ್ರೇಲರ್ ಜ.15 ರಂದು ಬಿಡುಗಡೆಯಾಗಲಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ (Tejasvi Surya) ʼಹೈನಾʼ ಚಿತ್ರದ ಟ್ರೇಲರ್ ಅನಾವರಣ ಮಾಡಲಿದ್ದಾರೆ.
ಈ ಸುದ್ದಿಯನ್ನೂ ಓದಿ | Sankranti Festival 2025: ಸಂಕ್ರಾಂತಿಗೆ ಎಳ್ಳು-ಬೆಲ್ಲ ಹಂಚಲು ಬಂತು ಬಗೆಬಗೆಯ ಡಿಸೈನರ್ ಬಾಕ್ಸ್!
ನಮ್ಮ ʼಹೈನಾʼ ಚಿತ್ರದ ಬಗ್ಗೆ ತಿಳಿದುಕೊಂಡ ಸಂಸದ ತೇಜಸ್ವಿ ಸೂರ್ಯ ಅವರು ಜ. 15 ರಂದು ಟ್ರೇಲರ್ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ. ʼಹೈನಾʼ ಚಿತ್ರ ದೇಶಭಕ್ತಿ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. ಗುಪ್ತಾಚಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಇಲಾಖೆಯ ಕಾರ್ಯವೈಖರಿಯ ಬಗ್ಗೆ ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ. ದೇಶಭಕ್ತಿಯ ಕುರಿತಾದ ಚಿತ್ರಕ್ಕೆ ಸದಾ ನನ್ನ ಬೆಂಬಲ ಇರುತ್ತದೆ. ಹಾಗಾಗಿ ನಾನು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಸರಳ, ಸಜ್ಜನಿಕೆಗೆ ಹೆಸರಾಗಿರುವ ಸಹೃದಯಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ನಮ್ಮ ತಂಡದ ಪರವಾಗಿ ಧನ್ಯವಾದ ಎನ್ನುತ್ತಾರೆ ನಿರ್ದೇಶಕ ವೆಂಕಟ್ ಭಾರದ್ವಾಜ್.
ಇತ್ತೀಚೆಗಷ್ಟೇ ಹೈನಾ ಚಿತ್ರದ ಲಿರಿಕಲ್ ವೀಡಿಯೊ ಜನರ ಮನ ಗೆದ್ದಿದೆ. ಟ್ರೇಲರ್ ಹಾಗೂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ.
ಈ ಸುದ್ದಿಯನ್ನೂ ಓದಿ | Winter Mix Match Fashion 2025: ಬದಲಾಗಿದೆ 2025ರ ಚಳಿಗಾಲದ ಮಿಕ್ಸ್ ಮ್ಯಾಚ್ ಫ್ಯಾಷನ್
ಹರ್ಷ ಅರ್ಜುನ್, ದಿಗಂತ ಸ್ವರೂಪ, ರಾಜ್ ಕಮಲ್, ಲಕ್ಷ್ಮಣ ಶಿವಶಂಕರ್, ನಂದಕಿಶೋರ್ ಮತ್ತು ಲಾರೆನ್ಸ್ ಪ್ರೀತಂ ಅವರಂತಹ ಪ್ರತಿಭಾನ್ವಿತ ನಟರ ತಾರಾಬಳಗವಿರುವ 'ಹೈನಾ' ಚಿತ್ರಕ್ಕೆ ಲಕ್ಷ್ಮಣ್ ಶಿವಶಂಕರ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಲವ್ ಪ್ರಾಣ್ ಮೆಹ್ತಾ ಸಂಗೀತ ನಿರ್ದೇಶನ, ನಿಶಾಂತ್ ನಾನಿ ಛಾಯಾಗ್ರಹಣ ಹಾಗೂ ಶಮಿಕ್ ವಿ ಭಾರದ್ವಾಜ್ ಸಂಕಲನವಿರುವ ʼಹೈನಾʼ ಚಿತ್ರ ಈ ತಿಂಗಳ ಕೊನೆಗೆ ನಿಮ್ಮ ಮುಂದೆ ಬರಲಿದೆ.