ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

SIT SP's Car Accident: ಧರ್ಮಸ್ಥಳ ಪ್ರಕರಣದ ಎಸ್‌ಐಟಿ ಎಸ್‌ಪಿ ತೆರಳುತ್ತಿದ್ದ ಕಾರು ಪಲ್ಟಿ; ಹಲವರಿಗೆ ಗಾಯ

ಧರ್ಮಸ್ಥಳ ಪ್ರಕರಣದ ಎಸ್‌ಐಟಿ ಎಸ್‌ಪಿ ತೆರಳುತ್ತಿದ್ದ ಕಾರು ಪಲ್ಟಿ

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಬಳಿ ಇನ್ನೋವಾ ಕಾರು ನಿಯಂತ್ರಣ ಕಳೆದುಕೊಂಡು, ಪಲ್ಟಿಯಾಗಿದೆ. ಕಾರಿನಲ್ಲಿ ಎಸ್‌ಐಟಿ ಎಸ್ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ್, ಚಾಲಕ ಹಾಗೂ ಸಿಬ್ಬಂದಿಯೊಬ್ಬರು ಕಾರಿನಲ್ಲಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ದೋಹಾದಲ್ಲಿ 'ಸಂಭ್ರಮ 2026' ಕನ್ನಡ ಗಾಯನ ಸುಧೆ: ಕತಾರ್ ಕನ್ನಡಿಗರ ಮನಗೆದ್ದ ಗಾಯಕ ರಾಜೇಶ್ ಕೃಷ್ಣನ್

ದೋಹಾದಲ್ಲಿ ಅದ್ಧೂರಿಯಾಗಿ ನಡೆದ 'ಸಂಭ್ರಮ 2026' ಕನ್ನಡ ಗಾಯನ ಸುಧೆ

Karnataka Sangha Qatar: ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗಸಂಸ್ಥೆಯಾದ ಕತಾರ್‌ನ ಪ್ರತಿಷ್ಠಿತ ಭಾರತೀಯ ಪ್ರವಾಸಿ ಸಂಘಟನೆ 'ಕರ್ನಾಟಕ ಸಂಘ ಕತಾರ್' (ಕೆಎಸ್‍ಕ್ಯೂ), ಇತ್ತೀಚೆಗೆ ಅಲ್ ವಕ್ರಾ ನಗರದ ಡಿಪಿಎಸ್ ಎಂಐಎಸ್ ಸಭಾಂಗಣದಲ್ಲಿ 'ಸಂಭ್ರಮ 2026' ಭವ್ಯ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಲ್ಲಿ ತೆರಿಗೆ ಹಣ ಪೋಲು: ಬಿಜೆಪಿ ವಕ್ತಾರ ಎಸ್. ಪ್ರಕಾಶ್ ಆಕ್ರೋಶ

ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಲ್ಲಿ ತೆರಿಗೆ ಹಣ ಪೋಲು: ಎಸ್. ಪ್ರಕಾಶ್

S Prakash: ಗ್ಯಾರಂಟಿ ಅನುಷ್ಠಾನ ಸಮಿತಿಯು ಒಂದೇ ಒಂದು ಅರ್ಹ ಹೆಸರನ್ನು ಸೇರಿಸಿಲ್ಲ ಅಥವಾ ಅನರ್ಹರ ಹೆಸರನ್ನು ರದ್ದು ಮಾಡಲು ಶಿಫಾರಸು ಮಾಡಿಲ್ಲ. ಓಡಾಡಲು ಕಾರು, ಸಂಬಳ, ಆಪ್ತ ಸಹಾಯಕರನ್ನು ಹೊಂದಿದ ಇವರು ಆರಾಮವಾಗಿ ಇದ್ದಾರೆ. ಏನೂ ಕೆಲಸ ಮಾಡದ ಇವರನ್ನು ಯಾಕೆ ಸಾಕಬೇಕು? ಇವರ ಅವಶ್ಯಕತೆ ಇದೆಯೇ ಎಂದು ಬಿಜೆಪಿ ರಾಜ್ಯ ವಕ್ತಾರ ಎಸ್. ಪ್ರಕಾಶ್ ಪ್ರಶ್ನಿಸಿದ್ದಾರೆ.

ಮತಾಂತರ ಆದವರನ್ನು ಪರಿಶಿಷ್ಟ ಪಂಗಡ ಪಟ್ಟಿಯಿಂದ ಕೈಬಿಡಿ: ಶಾಂತಾರಾಮ ಸಿದ್ದಿ ಆಗ್ರಹ

ಮತಾಂತರ ಆದವರನ್ನು ಎಸ್‌ಟಿ ಪಟ್ಟಿಯಿಂದ ಕೈಬಿಡಿ: ಶಾಂತಾರಾಮ ಸಿದ್ದಿ

Shantaram Siddi: 12 ಕೋಟಿ ಬುಡಕಟ್ಟು ಸಮುದಾಯದ ಜನರಿದ್ದಾರೆ, ಅವರಲ್ಲಿ 1-2 ಕೋಟಿ ಜನ ಮತಾಂತರಗೊಂಡಿದ್ದಾರೆ. ಗಿರಿಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮತಾಂತರಿ ಬುಡಕಟ್ಟಿನವರೇ ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಇವರು ಇತ್ತ ಬುಡಕಟ್ಟು ಹಾಗೂ ಅತ್ತ ಮತಾಂತರಗೊಂಡ ಧರ್ಮದ ಎರಡೂ ಕಡೆಯ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಆರೋಪಿಸಿದ್ದಾರೆ.

Bidadi Township: ಬಿಡದಿ ಟೌನ್‌ಶಿಪ್‌ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್

ಬಿಡದಿ ಟೌನ್‌ಶಿಪ್‌ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ: ಎಂ. ಲಕ್ಷ್ಮಣ್

ನಮ್ಮ ರಾಜ್ಯದಲ್ಲಿ ಐಟಿ ಹಾಗೂ ಇತರೆ ಕ್ಷೇತ್ರದ ಉದ್ಯಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಬಿಡದಿ ಟೌನ್‌ಶಿಪ್‌ ನಿರ್ಮಾಣವಾಗುತ್ತಿದೆ. ಇದರ ಹಿಂದೆ ಯಾವುದೇ ರೀತಿಯ ರಿಯಲ್ ಎಸ್ಟೇಟ್ ಉದ್ದೇಶವಿಲ್ಲ. ಈ ಯೋಜನೆಯಲ್ಲಿ ಲೂಟಿ ಮಾಡಲು ಅವಕಾಶ ಎಲ್ಲಿದೆ ಎಂಬುದನ್ನು ಸಾಬೀತುಪಡಿಸಲಿ ಎಂದು ಬಿಜೆಪಿ ಮತ್ತು ಜೆಡಿಎಸ್‌ ನಾಯಕರಿಗೆ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದ್ದಾರೆ.

ಆರ್‌ಎಸ್‌ಎಸ್‌ ವಿರುದ್ಧ ಕಾನೂನಿನ ಮೊರೆ ಯಾಕೆ ಹೋಗಿಲ್ಲ; ಪ್ರಿಯಾಂಕ್‌ ಖರ್ಗೆಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

ಆರ್‌ಎಸ್‌ಎಸ್‌ ವಿರುದ್ಧ ಕಾನೂನಿನ ಮೊರೆ ಯಾಕೆ ಹೋಗಿಲ್ಲ: ಛಲವಾದಿ

ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗೆ ಮೋಹನ್ ಭಾಗವತ್ ಅವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಅವರಿಗೆ ಉತ್ತರ ಸಿಕ್ಕಿದೆ ಎಂದುಕೊಳ್ಳುವೆ. ದೇಶದ ಕಾನೂನು ಒಂದೇ ಎನ್ನುವಿರಲ್ಲವೇ? ಹಾಗಿದ್ದರೆ ನೀವು ಕಾನೂನಿನ ಮೊರೆ ಯಾಕೆ ಹೋಗಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

ಟೆಕ್ನಾಲಜಿ ಬಳಸುವಲ್ಲಿ ಬೆಂಗಳೂರಿನ ಆಟೋ ಚಾಲಕರು ಯಾರಿಗೂ ಕಡಿಮೆ ಇಲ್ಲ: ಸ್ಮಾರ್ಟ್‌ ವಾಚ್‌ನಲ್ಲೇ ಕ್ಯೂಆರ್ ಕೋಡ್ ತೋರಿಸಿ ಹಣ ಪಡೆದ ಡ್ರೈವರ್‌!

ಸ್ಮಾರ್ಟ್‌ ವಾಚ್‌ನಲ್ಲಿ QR ಕೋಡ್ ತೋರಿಸಿ ಹಣ ಪಡೆದ ರಿಕ್ಷಾ ಚಾಲಕ

Viral News: ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಗಮನ ಸೆಳೆದ ಬೆಂಗಳೂರು ಐಟಿ ಕಂಪನಿ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೂ ಜನಪ್ರಿಯ. ಐಟಿ ಉದ್ಯೋಗಿಗಳಿಂದ ಹಿಡಿದು ಜನ ಸಾಮಾನ್ಯರೂ ಇಲ್ಲಿ ಆಧುನಿಕ ತಂತ್ರಜ್ಞಾನ ಬಳಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆಟೋ ಚಾಲಕನೊಬ್ಬ ಡಿಜಿಟಲ್ ಪೇಮೆಂಟ್‌ಗೆ ಸೂಪರ್ ಐಡಿಯಾ ಬಳಸಿದ್ದಾರೆ. ಸದ್ಯ ಅವರ ಟ್ರಿಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Vijayapur Accident: ವಿಜಯಪುರದಲ್ಲಿ ಟಿಪ್ಪರ್-ಸಾರಿಗೆ ಬಸ್ ಡಿಕ್ಕಿಯಾಗಿ ಮೂವರ ದುರ್ಮರಣ

ವಿಜಯಪುರದಲ್ಲಿ ಟಿಪ್ಪರ್-ಸಾರಿಗೆ ಬಸ್ ಡಿಕ್ಕಿಯಾಗಿ ಮೂವರ ದುರ್ಮರಣ

ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಲೋಣಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಟಿಪ್ಪರ್ ಟೈರ್ ಬ್ಲಾಸ್ಟ್ ಆದ ಹಿನ್ನೆಲೆ ಅಪಘಾತ ಉಂಟಾಗಿದೆ ಎಂದು ತಿಳಿದುಬಂದಿದೆ. ದುರ್ಘಟನೆಯಲ್ಲಿ ಮೂವರು ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ಸಿಗಲಿದೆ ಹೈಸ್ಪೀಡ್ ರೈಲು ಸಂಪರ್ಕ

ಕಲ್ಯಾಣ ಕರ್ನಾಟಕಕ್ಕೆ ಸಿಗಲಿದೆ ಹೈಸ್ಪೀಡ್ ರೈಲು ಸಂಪರ್ಕ

ಸುಮಾರು 2 ಲಕ್ಷ ಕೋಟಿ ರುಪಾಯಿ ಬಜೆಟ್ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರೈಲು ಮಾರ್ಗ 671 ಕಿ.ಮೀ. ಉದ್ದ ಇರಲಿದೆ. ಮಾರ್ಗವು ಜಾರಿಗೆ ಬಂದರೆ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮುಂಬೈ ಮತ್ತು ಹೈದರಾಬಾದ್ ನಗರಗಳು ಅತ್ಯಂತ ಸಮೀಪವಾಗಲಿವೆ. ಸದ್ಯ 2 ಮಹಾನಗರಗಳಿಗೆ ಕಲಬುರಗಿ ಯಿಂದ ತಲುಪಲೂ ಸುದೀರ್ಘ ಸಮಯ ಬೇಕಾಗುತ್ತಿದ್ದು, ಬುಲೆಟ್ ಟ್ರೇನ್ ಆರಂಭ ವಾದರೆ ಕಲಬುರಗಿಯಿಂದ ಕೇವಲ ಎರಡು ತಾಸಿನಲ್ಲಿ ಮುಂಬೈ ನಗರವನ್ನು ತಲುಪಬಹುದಾಗಿದೆ.

ಕಲಾವಿದರು ಮತ್ತು ಪ್ರೇಕ್ಷಕರನ್ನು ಬೆಸೆಯುವ ಡಿಜಿಟಲ್ ಕೊಂಡಿ: ‘ತಿತ್ತಿತೈ’ ಯಕ್ಷಗಾನ ಆ್ಯಪ್!

ಕಲಾಭಿಮಾನಿಗಳ ಮನಗೆದ್ದ ‘ತಿತ್ತಿತೈ’ ಆ್ಯಪ್!

ಯಕ್ಷಾಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ದೊರೆತಿದ್ದು, ಯಕ್ಷಗಾನದಲ್ಲಿ ಡಿಜಿಟಲ್‌ ಹೆಜ್ಜೆಯನ್ನು ಕಾಣಬಹುದಾಗಿದೆ. ಯಕ್ಷಗಾನಕ್ಕಾಗಿ ವಿಶೇಷವಾಗಿ ರೂಪುಗೊಂಡಿರುವ ತಿತ್ತಿತೈ ಯಕ್ಷಗಾನ ಆ್ಯಪ್ ಇದೀಗ ಸಾರ್ವಜನಿಕರ ಬಳಕೆಗೆ ತೆರೆದುಕೊಂಡಿದೆ. ಯಕ್ಷಗಾನದ ವಿವಿಧ ಆಯಾಮಗಳನ್ನು ಒಂದೇ ಸೂರಿನಡಿ ತರುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ಈ ಆ್ಯಪ್ ಅನ್ನು ರೂಪಿಸಲಾಗಿದೆ.

ಬೆಳ್ಳಂ ಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌; ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

ಬೆಳ್ಳಂ ಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌; ಲೋಕಾಯುಕ್ತ ದಾಳಿ

ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ದಾಳಿ ನಡೆಸಿದ್ದಾರೆ. ಕಲಬುರಗಿ, ದಾವಣೆಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಏಕಕಾಲಕ್ಕೆ ದಾಳಿ ನಡೆಸಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್‌ ಕೌಲಾಪುರೆ ನೇತೃತ್ವದಲ್ಲಿ ಮೂರು ಅಧಿಕಾರಿಗಳ 12 ತಂಡ ಏಕಕಾಲಕ್ಕೆ 12 ಕಡೆ ದಾಳಿ ನಡೆಸಿದೆ.

ದಕ್ಷಿಣ ಒಳನಾಡಲ್ಲಿ 2 ದಿನ ಭಾರಿ ಮಳೆ ನಿರೀಕ್ಷೆ;  ಹವಾಮಾನ ಇಲಾಖೆ ಎಚ್ಚರಿಕೆ

ದಕ್ಷಿಣ ಒಳನಾಡಲ್ಲಿ 2 ದಿನ ಭಾರಿ ಮಳೆ ನಿರೀಕ್ಷೆ

ರಾಜ್ಯದಲ್ಲಿ ನೈಋತ್ಯ ಮುಂಗಾರು ಸದ್ಯಕ್ಕೆ ದುರ್ಬಲ ಸ್ಥಿತಿಯಲ್ಲಿದೆ. ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಮತ್ತೊಂದೆಡೆ, ಉತ್ತರ ಒಳನಾಡಿನಲ್ಲಿ ಸಂಪೂರ್ಣವಾಗಿ ಒಣ ಹವಾಮಾನ ಮುಂದುವರೆದಿದ್ದು, ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಕರಾವಳಿ ಜಿಲ್ಲೆ ಸೇರಿ ಮುಂದಿನ 4 ದಿನಗಳ ಕಾಲ ರಾಜ್ಯಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಸಾಧಾರಣೆ ಮಳೆಯಾಗುವ ಸಾಧ್ಯತೆಯಿದೆ.

ಮಜಾ ಭಾರತ ರಿಯಾಲಿಟಿ ಶೋ ಕಲಾವಿದ ಸಾವು; ಅರಣ್ಯದಲ್ಲಿ ಪತ್ತೆಯಾಯ್ತು ಶವ

ಮಜಾ ಭಾರತ ರಿಯಾಲಿಟಿ ಶೋ ಕಲಾವಿದ ಸಾವು

ಮಜಾಭಾರತ ಕಾಮಿಡಿ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಕಲಾವಿದ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಣಕುಣಿಯಲ್ಲಿ ನಡೆದಿದೆ. ಹುಮ್ನಾಬಾದ್ ನಗರದ ಟೀಚರ್ಸ್ ಕಾಲೊನಿ‌ಯಲ್ಲಿ ವಾಸವಿದ್ದ ಸಿದ್ದಾರ್ಥ ಪರಶನೂರ ಶವವಾಗಿ ಪತ್ತೆಯಾಗಿದ್ದಾರೆ.

2 ಕೋಟಿ ಇನ್ಷುರೆನ್ಸ್ ಹಣಕ್ಕಾಗಿ ಮಾಜಿ ಸೈನಿಕ ಕೊಲೆ: ಪತ್ನಿ, ಆಕೆಯ ಲವರ್‌ ಸೇರಿ 9 ಮಂದಿ ಬಂಧನ

2 ಕೋಟಿ ಇನ್ಷುರೆನ್ಸ್ ಹಣಕ್ಕಾಗಿ ಮಾಜಿ ಯೋಧನ ಕೊಲೆ

ಇನ್ಶುರೆನ್ಸ್ ಹಣಕ್ಕಾಗಿ ತನ್ನ ಲವರ್ ಜೊತೆ ಹತ್ಯೆ ಪತ್ನಿಯೇ ಮಾಜಿ ಯೋಧನಾಗಿದ್ದ ತನ್ನ ಪತಿಯನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ನಡೆದಿದೆ. ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮದ ನಿವಾಸಿ ಮಾಜಿ ಸೈನಿಕ ಸಂದೀಪ್ ಮೃತ ಮಾಜಿ ಯೋಧ.

Grihalakshmi, Grihajyoti: ಗೃಹಲಕ್ಷ್ಮೀ ಬಳಿಕ ಗೃಹಜ್ಯೋತಿಗೂ ಸರ್ಜರಿ

Grihalakshmi, Grihajyoti: ಗೃಹಲಕ್ಷ್ಮೀ ಬಳಿಕ ಗೃಹಜ್ಯೋತಿಗೂ ಸರ್ಜರಿ

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅರ್ಹತೆ ಇಲ್ಲದವರೂ ಫಲಾನು ಭವಿಗಳಾಗುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಅದಕ್ಕೆ ತಡೆ ನೀಡಲು ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ, ಗೃಹಜ್ಯೋತಿಯಂತಹ ಗ್ಯಾರಂಟಿ ಗಳನ್ನು ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ.

ಭಾರತದ ಜ್ಞಾನಪರಂಪರೆ ಜಗತ್ತಿಗೆ ದಾರಿ ದೀಪವಾಗಬೇಕು: ನ್ಯಾಯಮೂರ್ತಿ ವಿ.ಶ್ರೀಶಾನಂದ

ಭಾರತದ ಜ್ಞಾನಪರಂಪರೆ ಜಗತ್ತಿಗೆ ದಾರಿ ದೀಪವಾಗಬೇಕು

ಎ.ಪಿ.ಎಸ್‌ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳನ್ನು ಉದ್ಘಾಟಿಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗೌರವಿಸಿ ಮಾತನಾಡಿದ ಅವರು, ಶಿಕ್ಷಣಕ್ಕೂ, ವ್ಯಕ್ತಿ ಅಕ್ಷರ ಕಲಿಯಲಿಯುವುದಕ್ಕೂ ವ್ಯತ್ಯಾಸವಿದೆ. ಅಕ್ಷರ ಕಲಿತವರೆಲ್ಲ ವಿದ್ಯಾವಂತರಲ್ಲ. ಜಗತ್ತಿನ ಹಲವು ದೇಶಗಳು ನಾಗರಿಕತೆಯನ್ನು ಮೈಗೂಡಿಸಿಕೊಳ್ಳದಿದ್ದಾಗ ನಮ್ಮ ದೇಶ ಶಿಕ್ಷಣ ಕೇಂದ್ರಗಳನ್ನು ಹೊಂದಿತ್ತು. ಇದಕ್ಕೆ ನಳಂದ ವಿಶ್ವವಿದ್ಯಾಲಯ ನಿದರ್ಶನ

Gudibande News: ಮೊಬೈಲ್ ವ್ಯಸನದಿಂದ ದೂರವಿರಿ, ಕ್ರೀಡಾಸಕ್ತಿ ಬೆಳೆಸಿಕೊಳ್ಳಿ: ನವೀನ್ ಕಿರಣ್ ಕರೆ

ಮೊಬೈಲ್ ವ್ಯಸನದಿಂದ ದೂರವಿರಿ, ಕ್ರೀಡಾಸಕ್ತಿ ಬೆಳೆಸಿಕೊಳ್ಳಿ

ಕ್ರೀಡೆಗಳು ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣ ಗಳನ್ನು ಬೆಳೆಸುತ್ತವೆ. ಆದ್ದರಿಂದ ಯುವಕರು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ರಾಷ್ಟ್ರಕ್ಕೆ ಕೀರ್ತಿ ತರುವಂತಹ ಸಾಧನೆಗಳನ್ನು ಮಾಡಬೇಕು.

Gauribidanur News: ಅಪಾಯದ ಮನೆಗಳಲ್ಲಿ ವಾಸವಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತಹಶೀಲ್ದಾರ್ ಕರೆ

ಅಪಾಯದ ಮನೆಗಳಲ್ಲಿ ವಾಸವಿರುವವರನ್ನು ಸ್ಥಳಾಂತರಿಸಿ

ಇತ್ತೀಚಿಗೆ ಸುರಿದ ಬಾರಿ ಮಳೆಯಿಂದಾಗಿ ತೀವ್ರ ಹನಿಗೊಳಗಾದ ತಾಲ್ಲೂಕಿನ ಕಸಬಾ ಹೋಬಳಿಯ ಹೂದುತಿ ಗ್ರಾಮದ ಗೋವಿಂದಪ್ಪ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದರು. ಮಳೆಯ ಆರ್ಭಟಕ್ಕೆ ಮನೆಯ ಮೇಲ್ಟಾವಣಿ ಕುಸಿದಿದ್ದು, ಕಾಂಪೌಂಡ್ ಗೋಡೆಗಳು ಬಿದ್ದು ಹೋಗಿವೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮನೆ ವಾಸಕ್ಕೆ ಅಸುರಕ್ಷಿತ ಸ್ಥಿತಿಯಲ್ಲಿದೆ

ಭಕ್ತರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ : ಶಾಸಕರ ಬಣ ಅವಿರೋಧ ಆಯ್ಕೆ

ಶಾಸಕರ ಬಣ ಅವಿರೋಧ ಆಯ್ಕೆ

ತಾಲ್ಲೂಕಿನ ಹೊಸೂರು ಹೋಬಳಿಯ ಸೊನಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಭಕ್ತರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ (MLA K.H. Puttaswamy Gowda)ರ ಬೆಂಬಲಿತ ಅಭ್ಯರ್ಥಿಗಳಾದ ನರಸಿಂಹ ಮೂರ್ತಿರವರು ಅಧ್ಯಕ್ಷರಾಗಿ, ಕೃಷ್ಣ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ.

Chinthamani News: ಚಿಂತಾಮಣಿಯಲ್ಲಿ ಬೃಹತ್ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಬೃಹತ್ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರ ತಂಡ, ಸ್ಥಳೀಯ ಮುಖಂಡರಾದ ನಾಗರಾಜ್ ಹಾಗೂ ಶಂಕರ ಮಠದ ಟ್ರಸ್ಟ್‌ ಮಂಡಳಿಯ ಎಲ್ಲಾ ಸದಸ್ಯರ ಸಹಕಾರದಿಂದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ ಎಂದು ತಿಳಿಸಿ, ಸಹಕರಿಸಿದ ಎಲ್ಲರಿಗೂ ಮನಃಪೂರ್ವಕ ಧನ್ಯವಾದ ಗಳನ್ನು ಅರ್ಪಿಸಿದರು.

Chinthamani News: ಜೂ.17ಕ್ಕೆ ಕೈವಾರ ತಾತಯ್ಯ ಆರಾಧನೆ

Chinthamani News: ಜೂ.17ಕ್ಕೆ ಕೈವಾರ ತಾತಯ್ಯ ಆರಾಧನೆ

ಸದ್ಗುರು ತಾತಯ್ಯನವರು ರಚಿಸಿರುವ ತಾಳೆಗರಿಗಳನ್ನು ಮಠದಲ್ಲಿ ಸಂರಕ್ಷಿಸಿ ಇಡಲಾಗಿದೆ. ತಾಳೆಗರಿಗಳು ಆರಾಧನೆಯಂದು ಮಾತ್ರ ನೋಡಲು ಸಿಗುತ್ತದೆ. ಆರಾಧನಾ ಮಹೋತ್ಸವದ ಪ್ರಯುಕ್ತ ಸದ್ಗುರು ಕೈವಾರ ತಾತಯ್ಯನವರು ರಚಿಸಿರುವ ಕಾಲಜ್ಞಾನ, ಕೀರ್ತನೆ, ಶತಕಗಳ ಮೂಲ ತಾಳೆಗರಿಗಳಿಗೆ ವಿಶೇಷ ಪೂಜೆ ಗಳನ್ನು ಸಲ್ಲಿಸಲಾಗುವುದು.

ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ಪೂರೈಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ಪೂರೈಕೆಗೆ ಸಿಎಂ ಸೂಚನೆ

ಕೃಷಿ, ತೋಟಗಾರಿಕೆ, ರೇಷ್ಮೆ ಮೀನುಗಾರಿಕೆ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ. ರಾಜ್ಯಗಳಲ್ಲಿರುವ ಮಾದರಿ ಯೋಜನೆ, ಮಾರ್ಗಗಳನ್ನು ಅಧ್ಯಯನ ಮಾಡಿ ರಾಜ್ಯದ ಕೃಷಿ ಸಂಸ್ಕೃತಿ ಮತ್ತು ಬೆಳೆ ಮಾದರಿಗಳಿಗೆ ಅನುಗುಣವಾಗಿ ಕಾರ್ಯರೂಪಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.

International Yoga Day: 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಜಿ.ಪ್ರಭು

12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಕಲ ಸಿದ್ಧತೆ

ಸಾಮೂಹಿಕ ಯೋಗಾಭ್ಯಾಸ ಮಾಡುವ ಮೂಲಕ ಈ ಬಾರಿಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು ಹಾಗೂ ಜಿಲ್ಲಾಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ನೀಡಿದರು

DSS Protest: ಅರಣ್ಯಾಧಿಕಾರಿಗಳ ದೌರ್ಜನ್ಯ ಖಂಡಿಸಿ 10 ಕಿ.ಮೀ. ಕಾಲ್ನಡಿಗೆ ಜಾಥಾ; ಟೆಂಟ್ ತೆರವುಗೊಳಿಸಿದ್ದಕ್ಕೆ ಆಕ್ರೋಶ, ಅನಿರ್ದಿಷ್ಟಾವಧಿ ಧರಣಿ ಆರಂಭ

ದಲಿತ ರೈತರ ಭೂಮಿ ಉಳಿವಿಗಾಗಿ ದಸಂಸ ಹೋರಾಟದ ಕಹಳೆ

ಗ್ರಾಮದಿಂದ ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪನ ದಿನ್ನೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿವರೆಗೆ ಸುಮಾರು 10 ಕಿಲೋಮೀಟರ್ ಕಾಲ್ನಡಿಗೆ ಜಾಥಾ ನಡೆಸಿದ ನೂರಾರು ರೈತರು ಮತ್ತು ಹೋರಾಟಗಾರರು, ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವು ದಾಗಿ ಘೋಷಿಸಿದರು.

Loading...