Inner Reservation: ನೆರೆ ರಾಜ್ಯದಲ್ಲಿ ಒಳ ಮೀಸಲು ಜಾರಿ, ರಾಜ್ಯದಲ್ಲೂ ಹೆಚ್ಚಿದ ಒತ್ತಡ
ತೆಲಂಗಾಣ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಒಳಮೀಸಲು ನೀಡಬೇಕೆಂಬ ಒತ್ತಡ ಭವಿಷ್ಯ ದಲ್ಲಿ ಸರಕಾರ ಮುಂದೆ ಬರಲಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ಒಳ ಮೀಸಲು ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಈಗಾಗಲೇ ನಾಗಮೋಹನ್ ದಾಸ್ ನೇತೃತ್ವ ದಲ್ಲಿ ಸಮೀಕ್ಷೆ ನಡೆಸಲು ಈಗಾಗಲೇ ವಿಚಾರಣಾ ಆಯೋಗವನ್ನು ರಚಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ


ಅಂಬೇಡ್ಕರ್ ಜಯಂತಿಯಂದೇ ಪರಿಶಿಷ್ಠ ಜಾತಿ ಒಳ ಮೀಸಲನ್ನು ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದ ತೆಲಂಗಾಣ ಸರಕಾರ
ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಸಮುದಾಯಗಳನ್ನು ಒಳಗೊಂಡಿರುವ ಮೀಸಲು ತೆಲಂಗಾಣ 3 ಗುಂಪುಗಳಾಗಿ ಮೀಸಲು
ಮಧ್ಯಮ ಪ್ರಯೋಜನ ಪಡೆದ 18 ಉಪಜಾತಿಗಳ ಮೀಸಲು
ಗಮನಾರ್ಹವಾಗಿ ಪ್ರಯೋಜನ ಪಡೆದ 26 ಉಪಜಾತಿಗಳನ್ನು ಒಳಗೊಂಡಿರುವ ಗುಂಪಿಗೆ ಇರುವ ಮೀಸಲಾತಿ
ಬೆಂಗಳೂರು/ಹೈದರಾಬಾದ್: ರಾಜ್ಯ ರಾಜಕೀಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ಜಾತಿಗಣತಿಯನ್ನು ಸಂಪುಟದಲ್ಲಿ ಮಂಡಿಸಿ ಮುಂದೇನು ಎನ್ನುವ ‘ಪ್ರಶ್ನೆ’ಯ ಸಮಯದಲ್ಲಿಯೇ ತೆಲಂಗಾಣ ಸರಕಾರ ಪರಿಶಿಷ್ಟ ಜಾತಿಯ ಒಳ ಮೀಸಲು ಪ್ರಕಟಿಸಿದೆ. ನೆರೆ ರಾಜ್ಯದ ಈ ಮಹತ್ವದ ನಿರ್ಣಯದ ಬೆನ್ನಲ್ಲೇ, ಕರ್ನಾಟಕದಲ್ಲಿರುವ ಒಳ ಮೀಸಲಿನ ಕೂಗಿಗೆ ಇನ್ನಷ್ಟು ಧ್ವನಿ ಬಂದಿದೆ. ಅಂಬೇಡ್ಕರ್ ಜಯಂತಿಯಂದೇ ತೆಲಂಗಾಣ ಸರಕಾರ ಪರಿಶಿಷ್ಟ ಜಾತಿ ಒಳ ಮೀಸಲನ್ನು ಜಾರಿ ಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಒಳ ಮೀಸಲು ಜಾರಿ ಗೊಳಿಸಿದ ದೇಶದ ಮೊದಲ ರಾಜ್ಯ ತೆಲಂಗಾಣವಾಗಿದೆ. ಇದರ ಬೆನ್ನಲ್ಲೇ, ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಕೇಳುತ್ತಿರುವ ಒಳ ಮೀಸಲಿಗೆ ಮತ್ತಷ್ಟು ಒತ್ತಡ ಹೆಚ್ಚಾಗುವುದು ನಿಶ್ಚಿತವಾಗಿದೆ.
ತೆಲಂಗಾಣ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಒಳಮೀಸಲು ನೀಡಬೇಕೆಂಬ ಒತ್ತಡ ಭವಿಷ್ಯದಲ್ಲಿ ಸರಕಾರ ಮುಂದೆ ಬರಲಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ಒಳ ಮೀಸಲು ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಈಗಾಗಲೇ ನಾಗಮೋಹನ್ ದಾಸ್ ನೇತೃತ್ವ ದಲ್ಲಿ ಸಮೀಕ್ಷೆ ನಡೆಸಲು ಈಗಾಗಲೇ ವಿಚಾರಣಾ ಆಯೋಗವನ್ನು ರಚಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ವರದಿ ಸಲ್ಲಿಸಲು 60 ದಿನಗಳ ಸಮಯಾವಕಾಶವನ್ನು ನೀಡಿದ್ದರೂ, ಎರಡು ತಿಂಗಳಲ್ಲಿ ವರದಿ ನೀಡುವುದು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬಂದಿರುವುದರಿಂದ, ಒಳ ಮೀಸಲು ಜಾರಿ ಸಂಬಂಧ ಸರಕಾರ ಸದ್ಯಕ್ಕೆ ಕೈಹಾಕುವುದಿಲ್ಲ ಎನ್ನುವುದು ಸ್ಪಷ್ಟ.
ಇದನ್ನೂ ಓದಿ: Bangalore Palace Land Bill: ಬೆಂಗಳೂರು ಅರಮನೆ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ; ಗೆಜೆಟ್ ಅಧಿಸೂಚನೆ ಪ್ರಕಟ
ಇದರೊಂದಿಗೆ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 101 ಉಪಜಾತಿಗಳಿವೆ, ಜತೆಗೆ ಎಡ-ಬಲದ ಗೊಂದಲಗಳಿವೆ. ಆದ್ದರಿಂದ ಈಗಾಗಲೇ ಜಾತಿ ಗಣತಿ ಮಂಡಿ ಸಿರುವ ರಾಜ್ಯ ಸರಕಾರಕ್ಕೆ, ಇದೀಗ ತೆಲಂಗಾಣದ ಈ ನಡೆ ಮತ್ತೊಂದು ತಲೆಬಿಸಿಯನ್ನು ತರಲಿದೆ ಎನ್ನುವ ವಿಶ್ಲೇಷಣೆಗಳು ಕೇಳಿ ಬರುತ್ತಿದೆ.
ತೆಲಂಗಾಣದ ಒಳಮೀಸಲು ಜಾರಿ ಹೇಗಿದೆ?: ಪರಿಶಿಷ್ಟ ಜಾತಿಗೆ ಒಳ ಮೀಸಲು ಜಾರಿ ಗೊಳಿಸಿರುವ ತೆಲಂಗಾಣ ಸರಕಾರ ಅಸ್ತಿತ್ವದಲ್ಲಿರುವ ಶೇ.15 ರಷ್ಟು ಮೀಸಲನ್ನು ಎ, ಬಿ, ಸಿ ಎಂದು ವರ್ಗೀಕರಿಸಿ, ತೆಲಂಗಾಣದಲ್ಲಿರುವ 59 ಉಪಜಾತಿಯನ್ನು ಮೂರು ವರ್ಗಗಳಾಗಿ ವಿಂಗಡಿಸಿ
ಅಸ್ತಿತ್ವದಲ್ಲಿರುವ ಮೀಸಲನ್ನು ನೀಡಲಾಗಿದೆ.
ಈ ಬಗ್ಗೆ ಮಾತನಾಡಿರುವ ತೆಲಂಗಾಣ ನೀರಾವರಿ ಸಚಿವ ಉತ್ತಮ್‌ಕುಮಾರ್ ರೆಡ್ಡಿ, ಒಳ ಮೀಸಲು ಕುರಿತು ವರದಿ ನೀಡಲು ತೆಲಂಗಾಣ ಸರಕಾರವು ಈ ಹಿಂದೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಶಮೀಮ್ ಅಕ್ತರ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಈ ಆಯೋಗ ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಗಳಲ್ಲಿ 59 ಉಪಜಾತಿಗಳನ್ನು ಸಮಿತಿ ಗುರುತಿಸಿದೆ ಮತ್ತು ಅಸ್ತಿತ್ವದಲ್ಲಿರುವ ಶೇ.15 ರಷ್ಟು ಮೀಸಲಾತಿ ಯೊಳಗೆ ಅವುಗಳನ್ನು ಮೂರು ಮೂರು ಗುಂಪು ಗಳಾಗಿ ವಿಂಗಡಿಸಲು ಶಿಫಾರಸು
ಗಳನ್ನು ಮಾಡಿತ್ತು. ಈ ಸಂಬಂಧ ತೆಲಂಗಾಣ ಸರಕಾರ, ತೆಲಂಗಾಣ ಪರಿಶಿಷ್ಟ ಜಾತಿಗಳ ಮೀಸಲಾತಿ ಮಸೂದೆಯ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿದ್ದು, ಇದಕ್ಕೆ ಏಪ್ರಿಲ್ 8, 2025 ರಂದು ತೆಲಂಗಾಣ ರಾಜ್ಯಪಾಲರು ಅಂಕಿತ ಸಹ ಹಾಕಿದ್ದಾರೆ.
ಸೋಮವಾರ ಈ ಸಂಬಂಧ ರಾಜ್ಯಪತ್ರ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆಯೋಗದ ವರದಿಯ ಪ್ರಕಾರ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಸಮುದಾಯಗಳನ್ನು ಒಳಗೊಂಡಿರುವ ಗುಂಪು-1ಕ್ಕೆ ಶೇ.1ರಷ್ಟು ಮೀಸಲು ನೀಡಲಾಗುತ್ತಿದೆ. ಮಧ್ಯಮ ಪ್ರಯೋಜನ ಪಡೆದ 18 ಉಪಜಾತಿಗಳ ಗುಂಪು-2ಗೆ ಶೇ.9ರಷ್ಟು ಮೀಸಲು ನೀಡಲಾಗು ತ್ತಿದೆ. ಮತ್ತು ಗಮನಾರ್ಹವಾಗಿ ಪ್ರಯೋಜನ ಪಡೆದ 26 ಉಪಜಾತಿಗಳನ್ನು ಒಳಗೊಂಡಿರುವ ಗುಂಪು 3ಕ್ಕೆ ಶೇ.5ರಷ್ಟು ಮೀಸಲಾತಿ ಪಡೆಯುತ್ತದೆ ಎಂದು ವಿವರಿಸಿದ್ದಾರೆ.
ಕೈ ನಾಯಕರಿಂದಲೇ ವಿರೋಧ: ಆರಂಭದಲ್ಲಿ ಜಾತಿ ಗಣತಿಗೆ ಸಂಬಂಧಿಸಿದಂತೆ ಮೌನವಾಗಿದ್ದ ಕಾಂಗ್ರೆಸ್ ನಾಯಕರು ಇದೀಗ ಪರೋಕ್ಷವಾಗಿ ತಮ್ಮ ಅಸಮಧಾನ ಹೊರಹಾಕುತ್ತಿದ್ದಾರೆ. ಪ್ರಮುಖ ವಾಗಿ ಪ್ರತ್ಯೇಕ ಒಕ್ಕಲಿಗ ಸಭೆಯ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮ್ಮ ವಿರೋಧವನ್ನು ಹೊರಹಾಕಿದ್ದರೆ, ಇನ್ನೊಂದೆಡೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಲಿಂಗಾಯತ-ವೀರಶೈವ ಪ್ರತ್ಯೇಕಿಸಿರುವ ಮಾಡಿರುವ ಈ ಗಣತಿಯ ಬದಲಿಗೆ ಮತ್ತೊಮ್ಮೆ ಗಣತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್‌ನ ಹಲವು ಲಿಂಗಾಯತ ಶಾಸಕರು, ಈ ಜಾತಿ ಗಣತಿಯನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಆದರೆ ವೀರಶೈವ-ಲಿಂಗಾಯತರನ್ನು ಪ್ರತ್ಯೇಕ ಮಾಡಿ ಗಣತಿ ಮಾಡಲಾಗಿದೆ. ಅದನ್ನು ಸರಿಪಡಿಸಿ ಇನ್ನೊಮ್ಮೆ ಗಣತಿ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ. ಎಲ್ಲ ಜಾತಿಯಲ್ಲಿ ಜನರು ಹೆಚ್ಚಾಗಿದ್ದಾರೆ. ಅದರಂತೆ ನಮ್ಮ ವೀರಶೈವ, ಲಿಂಗಾಯತರಲ್ಲಿಯೂ ಜನ ಹೆಚ್ಚಾಗಿದ್ದಾರೆ. ಹೀಗಾಗಿ ವೀರಶೈವ-ಲಿಂಗಾಯತರು ಒಡೆದು ಹೋಗಿದ್ದು ಅಂಕಿ ಅಂಶ ಕಡಿಮೆ ಕಾಣಿಸುತ್ತಿದೆ.
- ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆ
*
ಜಾತಿ ಗಣತಿಯ ಅಂಕಿ ಅಂಶಗಳನ್ನು ಒಮ್ಮೆ ನೋಡಿದರೆ ಈ ವರದಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಕ್ಷೇಮಕ್ಕಾಗಿ ತಯಾರು ಮಾಡಿಸಿಕೊಂಡಿರುವ ವರದಿಯಂತಿದೆ. ರಾಜ್ಯದಲ್ಲಿ ಏಳು ಕೋಟಿ ಕನ್ನಡಿಗರ ಎಷ್ಟು ಮನೆಗೆ ಹೋಗಿ ಸಮೀಕ್ಷೆ ನಡೆಸಿದ್ದಾರೆ? ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಆಗಿರುವ ನಮ್ಮ ತಂದೆಯ ಮನೆಗೆ ಯಾರೂ ಬಂದಿಲ್ಲ. ನಮ್ಮ ಅಜ್ಜ ಮಾಜಿ ಪ್ರಧಾನಿಗಳು. ಅವರ ಮನೆಗೂ ಯಾರೂ ಭೇಟಿ ಕೊಟ್ಟು ಸಮೀಕ್ಷೆ ಮಾಡಿಲ್ಲ. ಪ್ರತಿಯೊಂದು ಕುಟುಂಬದ ಮನೆ ಬಾಗಿಲಿಗೆ ಹೋಗಿ ವೈಜ್ಞಾನಿಕವಾಗಿ ಗಣತಿ ಮಾಡಬೇಕಿತ್ತು. ಆ ರೀತಿ ಆಗಿಲ್ಲ.
- ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ
*
ಇಂದುನ ಒಕ್ಕಲಿಗೆ ಸಭೆ
ಇಂದು ಒಕ್ಕಲಿಗರ ಸಭೆ ಜಾತಿಗಣತಿ ಬಗ್ಗೆ ಅವಸರದ ತೀರ್ಮಾನವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವ ಕುಮಾರ್ ಹೇಳಿಕೆಯ ಬೆನ್ನಲ್ಲೇ, ಜಾತಿ ಗಣತಿ ವಿಚಾರವಾಗಿ ಮಂಗಳವಾರ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಶಾಸಕರ ಜತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಿ ದ್ದಾರೆ. ಈ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ನಾನು ಜಾತಿ ಗಣತಿ ವರದಿಯನ್ನು ಸಂಪೂರ್ಣವಾಗಿ ನೋಡಿಲ್ಲ. ಅದರ ಅಧ್ಯಯನ ಮಾಡಲಾಗುತ್ತಿದೆ. ಮಂಗಳವಾರ ನಮ್ಮ ಸಮುದಾಯದ ಶಾಸಕರ ಸಭೆ ಕರೆದಿದ್ದೇನೆ. ಅವರ ಜತೆ ಚರ್ಚೆ ಮಾಡಿ, ಯಾರ ಮನಸ್ಸನ್ನೂ ನೋಯಿಸದೇ ಎಲ್ಲರ ಗೌರವ ಕಾಪಾಡಲು ಸಲಹೆ ನೀಡುತ್ತೇವೆ ಎಂದು ತಿಳಿಸಿದರು. ಬೆಂಗಳೂರಿನ ಕುಮಾರ ಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಡಿಸಿಎಂ ಅವರ ಸರಕಾರಿ ನಿವಾಸದಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಶಾಸಕರ ಸಭೆ ಕರೆಯಲಾಗಿದೆ.
ಲಿಂಗಾಯತರ ಸಭೆ
ಭಿನ್ನಮತಗಳನ್ನು ಬದಿಗಿಟ್ಟು, ಜಾತಿಗಣತಿ ವಿರುದ್ಧ ಒಂದಾಗಿ ಹೋರಾಡಬೇಕಿದೆ ಎನ್ನುವ ಮಾತುಗಳು ವೀರಶೈವ- ಲಿಂಗಾಯತ ಸಮುದಾಯದಲ್ಲಿ ಇದೀಗ ಕೇಳಿ ಬರುತ್ತಿದೆ. ಅಖಿಲ ಭಾರತ
ವೀರಶೈವ ಮಹಾ ಸಭಾ ಅನೌಪಚಾರಿಕ ಸಭೆ ನಡೆಸಿದ್ದು, ಪ್ರಭಾವಿ ಸಚಿವರೊಬ್ಬರನ್ನು ಕರೆಸಿ ಗಂಭೀರ ಚರ್ಚೆ ನಡೆಸಿದ್ದಾರೆ. ಇದರೊಂದಿಗೆ ಜಾತಿ ಗಣತಿಯಲ್ಲಿ ಸೋರಿಕೆಯಾಗಿರುವ ಅಂಶ ಮುಂದಿಟ್ಟುಕೊಂಡು ಜಾತಿಗಣತಿಯಲ್ಲಿರುವ ವಿಷಯಗಳು, ಅವುಗಳ ಸತ್ಯಾಸತ್ಯತೆ, ಭವಿಷ್ಯದಲ್ಲಿ ಇದರಿಂದ ಆಗಬಹುದಾದ ಪರಿಣಾಮ ಸೇರಿ ವಿವಿಧ ಆಯಾಮಗಳ ಬಗ್ಗೆ ಅಧ್ಯಯನ ನಡೆಸಿ ಏ.17ರೊಳಗೆ ಪ್ರಾಥಮಿಕ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಈ ಪ್ರಾಥಮಿಕ ವರದಿ ಯನ್ನು ಎಲ್ಲ ಲಿಂಗಾಯತ ಸಚಿವರಿಗೆ ನೀಡಿ, ವಿಶೇಷ ಸಚಿವ ಸಂಪುಟದಲ್ಲಿ ಚರ್ಚಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
*
10 ವರ್ಷದ ಹಳೆಯ ವರದಿ ಅವೈeನಿಕವಾಗಿದ್ದು, ಇದನ್ನು ಕಸದ ಬುಟ್ಟಿಗೆ ಹಾಕಬೇಕಿದೆ. ವೈಜ್ಞಾ ನಿಕವಾಗಿ ಮರು ಸಮೀಕ್ಷೆ ಮಾಡಿ, ಎಲ್ಲರ ಸಭೆ ಕರೆದು ಜಾರಿಗೊಳಿಸಲಿ. ಸಿಎಂ ಒಂದು ಹೇಳಿದರೆ, ಡಿಸಿಎಂ ಇನ್ನೊಂದು ಹೇಳುತ್ತಾರೆ. ಎಂ.ಬಿ.ಪಾಟೀಲ, ಪರಮೇಶ್ವರ್ ಬೇರೆ ಬೇರೆ ರೀತಿಯ ಹೇಳಿಕೆ ಕೊಡುತ್ತಾರೆ. ಆಡಳಿತ ಪಕ್ಷದ ಗೊಂದಲವಿದೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ