Logo Unveiling for Astrid World School: ಆಸ್ಟ್ರಿಡ್ ವರ್ಲ್ಡ್ ಸ್ಕೂಲ್ ಸಂಸ್ಥೆಯ ಚಟುವಟಿಕೆಗಳಿಗೆ ಚಾಲನೆ, ಲೋಗೋ ಅನಾವರಣ
ಗುರುಕುಲ ಪದ್ದತಿಯ ಉತ್ತಮ ಅಂಶಗಳು ಮತ್ತು ಆಧುನಿಕ ವಿಜ್ಞಾನದ ಶಿಕ್ಷಣ ಪದ್ಧತಿಗಳನ್ನು ಸಮ್ಮಿಳಿತ ಗೊಳಿಸಿ ವಿದ್ಯಾರ್ಥಿಗಳಲ್ಲಿ ಹೊಸತನದಿಂದ ಯೋಚಿಸುವ ಪಠ್ಯಕ್ರಮ ಅಳವಡಿಸುವ ನೂತನ ಸಂಸ್ಥೆ ಯಾಗಿ ಆಸ್ಟ್ರಿಡ್ ವರ್ಲ್ಡ್ ಸ್ಕೂಲ್(Astrid World School) ಸಂಸ್ಥೆಯ ಚಟುವಟಿಕೆಗಳಿಗೆ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು ಹಾಗೂ ಲೋಗೋ(Logo) ಅನಾವರಣ ಗೊಳಿಸಲಾಯಿತು.
-
ಬೆಂಗಳೂರು: ಗುರುಕುಲ ಪದ್ದತಿಯ ಉತ್ತಮ ಅಂಶಗಳು ಮತ್ತು ಆಧುನಿಕ ವಿಜ್ಞಾನದ ಶಿಕ್ಷಣ ಪದ್ಧತಿಗಳನ್ನು ಸಮ್ಮಿಳಿತಗೊಳಿಸಿ ವಿದ್ಯಾರ್ಥಿಗಳಲ್ಲಿ ಹೊಸತನದಿಂದ ಯೋಚಿಸುವ ಪಠ್ಯಕ್ರಮ ಅಳವಡಿಸುವ ನೂತನ ಸಂಸ್ಥೆಯಾಗಿ ಆಸ್ಟ್ರಿಡ್ ವರ್ಲ್ಡ್ ಸ್ಕೂಲ್(Astrid World School) ಸಂಸ್ಥೆಯ ಚಟುವಟಿಕೆಗಳಿಗೆ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು ಹಾಗೂ ಲೋಗೋ(Logo) ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮತ್ತು ಶಾಸಕ ಆರ್ ವಿ ದೇಶಪಾಂಡೆ(R V Deshpande), ಸಚಿವ ಕೆ.ಹೆಚ್. ಮುನಿಯಪ್ಪ(K H Muniyappa), ಆಸ್ಟ್ರಿಡ್ ಸಂಸ್ಥಾಪಕ ಅಧ್ಯಕ್ಷ ಹಾಗೂ ನಿರ್ದೇಶಕ ಎ.ಆರ್ ನಾಯಕ್, ಸಂಸದ ಡಾ. ಸಿಎನ್ ಮಂಜುನಾಥ್(MP Dr C N Manjunath), ಮಾಜಿ ಸಚಿವೆ ಡಾ ಜಯಮಾಲಾ ರಾಮಚಂದ್ರ, ಎಂ.ಎಲ್.ಸಿ ರವಿಕುಮಾರ್(MLC Ravikumar), ಡಾ. ಅಹಲ್ಯಾ ಶರ್ಮಾ, ಹನುಮಂತರಾಯಪ್ಪ, ಮಾಜಿ ಸಚಿವ ಚಂದ್ರಪ್ಪ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್(Vishweshwar Bhat) ಮತ್ತು ರವಿ ಹೆಗಡೆ(Ravi Hegde) ಸೇರಿದಂತೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.