"ವೋಟರ್ ಲಿಸ್ಟ್ನಿಂದ ಹೆಸರು ಕೈ ಬಿಟ್ಟಿದ್ದಾರೆ"; ಪ್ರಕಾಶ್ ರಾಜ್ ಆರೋಪಕ್ಕೆ ಬಿಜೆಪಿಯಿಂದ ಫ್ಯಾಕ್ಟ್ ಚೆಕ್, ತಪ್ಪು ಮಾಡಿ ಸಿಕ್ಕಿ ಬಿದ್ರಾ ನಟ?
Prakash Raj Voter List Controversy: ಮತದಾರರ ಪಟ್ಟಿಯಿಂದ ನನ್ನ ಹೆಸರನ್ನು ಕೈ ಬಿಡಲಾಗಿದೆ ಎಂದು ನಟ ಪ್ರಕಾಶ್ ರಾಜ್ ಮಾಡಿದ್ದ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಫ್ಯಾಕ್ಟ್ ಚೆಕ್ ವಿಡಿಯೋ ಹಂಚಿಕೊಂಡು ತಿರುಗೇಟು ನೀಡುವ ಬಿಜೆಪಿ, ಬೂತ್ ಮಟ್ಟದ ಅಧಿಕಾರಿ ಬಿಎಲ್ಒ ಅವರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ನಟ ಪ್ರಕಾಶ್ ರಾಜ್ ಅವರು ಬೇರೆಡೆ ಸ್ಥಳಾಂತರ ಗೊಂಡಿರುವುದು ತಿಳಿದು ಬಂದಿದೆ ಎಂದು ಹೇಳಿದೆ.
ನಟ ಪ್ರಕಾಶ್ ರಾಜ್ (ಸಂಗ್ರಹ ಚಿತ್ರ) -
ಬೆಂಗಳೂರು: ಮತದಾರರ ಪಟ್ಟಿಯಿಂದ (Voter List) ನನ್ನ ಹೆಸರನ್ನು ಕೈ ಬಿಡಲಾಗಿದೆ ಎಂದು ನಟ ಪ್ರಕಾಶ್ ರಾಜ್ (Prakash Raj) ಮಾಡಿದ್ದ ಆರೋಪಕ್ಕೆ ಬಿಜೆಪಿ (BJP) ತಿರುಗೇಟು ನೀಡಿದೆ. ಫ್ಯಾಕ್ಟ್ ಚೆಕ್ ವಿಡಿಯೋ ಹಂಚಿಕೊಂಡು ತಿರುಗೇಟು ನೀಡುವ ಬಿಜೆಪಿ, ಬೂತ್ ಮಟ್ಟದ ಅಧಿಕಾರಿ ಬಿಎಲ್ಒ ಅವರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ನಟ ಪ್ರಕಾಶ್ ರಾಜ್ ಅವರು ತಮ್ಮ ನೋಂದಾಯಿತ ವಿಳಾಸವಾದ ಫ್ಲಾಟ್ ಸಂಖ್ಯೆ 266, ಗಾರ್ಡನ್ ಅಪಾರ್ಟ್‌ಮೆಂಟ್, ವಿಠಲ್ ಮಲ್ಯ ರಸ್ತೆ, ಬೆಂಗಳೂರು-01 ಇಲ್ಲಿಂದ ಸ್ಥಳಾಂತರಗೊಂಡಿರುವುದು ಕಂಡುಬಂದಿದೆ.
ಈ ಬಗ್ಗೆ ಅಪಾರ್ಟ್ ಮೆಂಟ್ ಮಾಲೀಕರಿಗೆ ದೂರವಾಣಿ ಮೂಲಕ ವಿಚಾರಿಸಿದಾಗ ನಟ ಪ್ರಕಾಶ್ ರಾಜ್ ಅವರು ಸುಮಾರು 4 ವರ್ಷಗಳಿಂದ ನೋಂದಾಯಿತ ವಿಳಾಸದ ಸ್ಥಳದಲ್ಲಿ ವಾಸವಿಲ್ಲ ಹಾಗೂ ಪ್ರಸ್ತುತ ಬೇರೆ ಬಾಡಿಗೆದಾರರು ವಾಸವಿರುವುದಾಗಿ ಅಪಾರ್ಟ್‌ಮೆಂಟ್ ಮಾಲೀಕರು ತಿಳಿಸಿದ್ದಾಗಿ ಚುನಾವಣಾ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ ಎಂದು ಪೋಸ್ಟ್ ಮಾಡಿದೆ. ಮಾಧ್ಯಮ ಪ್ರಕಟಣೆ ನೀಡಿರುವ ಬೆಂಗಳೂರು ಕೇಂದ್ರ ನಗರಪಾಲಿಕೆಯ ಆಯುಕ್ತರಾಗಿರುವ ಅಪರ ಜಿಲ್ಲಾ ಚುನಾವಣಾಧಿಕಾರಿ ಜಗದೀಶ ಜಿ. ಅವರು ವಾಸ್ತವ ಅಂಶಗಳ ಕುರಿತು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದರು.
ವಿಡಿಯೋ ನೋಡಿ
🚨 FACT CHECK: Prakash Raj’s Voter-Deletion Claim Falls Flat!
— BJP Karnataka (@BJP4Karnataka) August 11, 2026
Actor Prakash Raj alleged that his name was deleted from the electoral roll during the SIR exercise.
But the official clarification from Bengaluru Central City Corporation tells a different story.
✅ His name was on… https://t.co/TKXdCnqU6T pic.twitter.com/IxeSaL9FWr
ಬೂತ್ ಮಟ್ಟದ ಅಧಿಕಾರಿ ಬಿಎಲ್ಒ ಅವರು ಮನೆ - ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ನಟ ಪ್ರಕಾಶ್ ರಾಜ್ ಅವರು ತಮ್ಮ ನೋಂದಾಯಿತ ವಿಳಾಸವಾದ ಫ್ಲಾಟ್ ಸಂಖ್ಯೆ 266, ಗಾರ್ಡನ್ ಅಪಾರ್ಟ್‌ಮೆಂಟ್, ವಿಠಲ್ ಮಲ್ಯ ರಸ್ತೆ, ಬೆಂಗಳೂರು-01 ಇಲ್ಲಿಂದ ಸ್ಥಳಾಂತರಗೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ಅಪಾರ್ಟ್ ಮೆಂಟ್ ಮಾಲೀಕರಿಗೆ ದೂರವಾಣಿ ಮೂಲಕ ವಿಚಾರಿಸಿದಾಗ ನಟ ಪ್ರಕಾಶ್ ರಾಜ್ ಅವರು ಸುಮಾರು 4 ವರ್ಷಗಳಿಂದ ನೋಂದಾಯಿತ ವಿಳಾಸದ ಸ್ಥಳದಲ್ಲಿ ವಾಸವಿಲ್ಲ ಹಾಗೂ ಪ್ರಸ್ತುತ ಬೇರೆ ಬಾಡಿಗೆದಾರರು ವಾಸವಿರುವುದಾಗಿ ಅಪಾರ್ಟ್‌ಮೆಂಟ್ ಮಾಲೀಕರು ತಿಳಿಸಿದ್ದಾಗಿ ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ನಟ ಪ್ರಕಾಶ್ ರಾಜ್ ಅವರು ಬೇರೆ ವಿಳಾಸಕ್ಕೆ ಸ್ಥಳಾಂತರವಾಗಿರುವ ಬಗ್ಗೆ ಆ.11 ರಂದು ಸಂಜೆ 5.30ರ ವೇಳೆ ಆಸ್ತಿ ವ್ಯವಸ್ಥಾಪಕರು ದೂರವಾಣಿ ಕರೆ ಮೂಲಕವೂ ಈ ವಿಷಯವನ್ನು ಖಚಿತಪಡಿಸಿದ್ದಾರೆ ಎನ್ನುವುದನ್ನು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ. ವಾಸ್ತವತೆ ಪರಿಶೀಲಿಸಿದ ಬಳಿಕ ನಟ ಪ್ರಕಾಶ್ ರಾಜ್ ಅವರೊಂದಿಗೆ ಮಂಗಳವಾರದಂದು ದೂರವಾಣಿ ಮೂಲಕ ಮಾತನಾಡಿ ವಿಚಾರಿಸಿದಾಗ ನೋಂದಾಯಿತ ವಿಳಾಸದಲ್ಲಿ ವಾಸವಿಲ್ಲ ಎಂದು ತಿಳಿಸಿರುತ್ತಾರೆ. ಆದರೆ, ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇರೊಂದು ವಿಳಾಸದಲ್ಲಿ ವಾಸವಿರುವುದಾಗಿ ಹೇಳಿರುತ್ತಾರೆ ಎಂದು ಚುನಾವಣಾಧಿಕಾರಿ ಜಗದೀಶ್ ಅವರು ಪತ್ರಿಕಾ ಹೇಳಿಕೆಯಲ್ಲಿ ನಟ ಪ್ರಕಾಶ್ ರಾಜ್ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿ ಪಡೆದ ವಿವರಗಳನ್ನು ಉಲ್ಲೇಖಿಸಿದ್ದಾರೆ.
ಕಾನೂನು ಬಾಹಿರ ಕೆಲಸ ಮಾಡಿದ್ರಾ ಪ್ರಕಾಶ್ ರಾಜ್? ನಟನ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್
Form 6 ಮೂಲಕ ನೋಂದಣಿ ಅವಕಾಶ
ಚುನಾವಣಾ ವ್ಯವಸ್ಥೆಯಲ್ಲಿ ನಮೂನೆ-6 (Form 6) ಎಂದರೆ ಹೊಸ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಥವಾ ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವಿಳಾಸ ಬದಲಾವಣೆ/ಹೆಸರು ವರ್ಗಾವಣೆ ಮಾಡಲು ಭಾರತೀಯ ಚುನಾವಣಾ ಆಯೋಗವು ನೀಡುವ ಅಧಿಕೃತ ಅರ್ಜಿಯಾಗಿದೆ. ಹತ್ತಿರದ ಮತಗಟ್ಟೆ ಮಟ್ಟದ ಅಧಿಕಾರಿಯನ್ನು (BLO) ಸಂಪರ್ಕಿಸಿ ಆಫ್‌ಲೈನ್ ಮೂಲಕ ಸಲ್ಲಿಸಬಹುದು. ಅಥವಾ ಭಾರತ ಚುನಾವಣಾ ಆಯೋಗದ ಅಧಿಕೃತ Voters Service Portal ಮೂಲಕ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು.