ಸಿಎಂರಿಂದ ಅರ್ಧರಾತ್ರಿಲೀ ರಿಯಲ್ ಏಸ್ಟೇಟ್ ದಂಧೆ
ಜಯನಗರದ ಕ್ಲೌಡ್ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲ ಅಂತಾ ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ವಾಸ್ತವ ಸ್ವಲ್ಪ ಭಿನ್ನವಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಿದೆ. ರಾಜ್ಯದ ಸರಕಾರಿ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ ಎಂದು ಆರೋಪಿಸಿದರು.
-
ಬೆಂಗಳೂರು: ಕಳ್ಳರು ಬಂದವರೆ ಎಂದು ಸಿಎಂ ಡಿ.ಕೆ.ಶಿವಕುಮಾರ್(D K Shivakumar) ಅವರನ್ನ ಹಳ್ಳಿಯೊಂದರ ಜನ ಮಧ್ಯ ರಾತ್ರಿ ಓಡಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಹೇಳಿದ್ದಾರೆ.
ಜಯನಗರದ ಕ್ಲೌಡ್ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲ ಅಂತಾ ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ವಾಸ್ತವ ಸ್ವಲ್ಪ ಭಿನ್ನವಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಿದೆ. ರಾಜ್ಯದ ಸರಕಾರಿ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ ಎಂದು ಆರೋಪಿಸಿದರು. ನೆಲಮಂಗಲ ಬಳಿಯ ಸೋಂಪುರ ಮತ್ತು ಅದರ ಸುತ್ತಮುತ್ತಲಿನ ಸುಮಾರು 150 ಎಕರೆ ಜಮೀನನ್ನು ನೋಡಲು ಸಿಎಂ ಡಿಕೆ ಶಿವಕುಮಾರ್ ಮಧ್ಯರಾತ್ರಿಯಲ್ಲಿ ಖಾಸಗಿ ಕಾರಿನಲ್ಲಿ ಹೋಗಿದ್ದಾಗ ಈ ಘಟನೆ ನಡೆದಿದೆ.
ಕಳ್ಳರು ಬಂದಿದ್ದಾರೆ ಅಂತಾ ಭಾವಿಸಿದ ಹಳ್ಳಿಯ ಜನರು ಸಿಎಂ ಅವರನ್ನು ಬೆನ್ನಟ್ಟಿದ್ದಾರೆ. ಇದು ಸುಳ್ಳಾ ಅಥವಾ ದಿಟ್ಟನಾ ಅನ್ನೋದನ್ನ ಅವರನ್ನೇ ಕೇಳಿ. ಅಲ್ಲದೆ, ಮುಖ್ಯಮಂತ್ರಿಗಳಿಗೆ ಭ್ರಷ್ಟಾಚಾರದ ಬಗ್ಗೆ ನೋಡೋಕೂ ಟೈಂ ಇಲ್ಲ. ಆದರೆ, ಖಾಲಿ ಜಾಗ ಎಲ್ಲಿದೆ, ಸರಕಾರಿ ಜಾಗ ಎಲ್ಲಿದೆ ಅಂತಾ ನೋಡೋಕಷ್ಟೇ ಟೈಂ ಇದೆ ಎಂದರು. ಇತ್ತೀಚೆಗೆ 20 ಗುಂಟೆ ಜಮೀನಿಗೆ ರೆವಿನ್ಯೂ ಇನ್ಸ್ಪೆಕ್ಟರ್ 50000 ಲಂಚ ತಗೊಂಡು ಸಸ್ಪೆಂಡ್ ಆಗಿದ್ದಾರೆ.
ಅದು ಭ್ರಷ್ಟಾಚಾರ ಅಲ್ವಾ? ಅವರ ಮಿನಿಸ್ಟರ್ ಹೇಳಿದಂಗೆ ಅದು ಗೌರವಧನನಾ? ಗೌರವದಿಂದ ಕೊಡಬೇಕು ಅಂದರಲ್ಲ ಅದಾ ಭ್ರಷ್ಟಾಚಾರವಾ.. ಅಲ್ಲವಾ? ಎಷ್ಟೋ ಕಡೆ ಕೆಲಸ ಮಾಡಲು ದುಡ್ಡು ತಗೊಂಡು ಸಿಕ್ಕಿ ಬೀಳುತ್ತಿದ್ದಾರೆ. ನನ್ನ ಬಳಿ ಟನ್ಗಟ್ಟಲೆ ದಾಖಲೆಗಳಿವೆ ಎಂದರು.
ಮುಖ್ಯಮಂತ್ರಿ ಜಪಾನ್ ಗೆ ಹೋದರೂ ಕುಮಾರಸ್ವಾಮಿ ಹಾಗೂ ದೇವೇಗೌಡರದ್ದು ಸಾಕ್ಷಿಗುಡ್ಡೆ ಕೇಳುತ್ತಾರೆ. ಟೊಯೋಟಾ ಹರಿಯಾಣಕ್ಕೆ ಅಥವಾ ಮಹಾರಾಷ್ಟ್ರಕ್ಕೋ ಹೋಗುತ್ತಿತ್ತು. ಆಗ ದೇವೇ ಗೌಡರು ಮನವಿ ಮಾಡಿ ಟೊಯೋಟಾ ಕಂಪನಿ ಇಲ್ಲಿಗೆ ತಂದರು. ಕಾಂಗ್ರೆಸ್ ನವರು ಅದಕ್ಕೆ ಮರಳು, ಇಟ್ಟಿಗೆ ಪೈಪೋಟಿಗೆ ಬಿದ್ದು ದುಡ್ಡು ಮಾಡಿಕೊಂಡರು. ಆ ಕೆಲಸ ನಾವು ಮಾಡಲಿಲ್ಲ. ಟೊಯೊಟಾ ಕಂಪನಿಯವರು ತಮ್ಮ ಪ್ರಾಜೆಕ್ಟ್ 4ನ್ನು ಮಹಾರಾಷ್ಟ್ರಕ್ಕೆ ಯಾಕೆ ತೆಗೆದುಕೊಂಡು ಹೋದರು? ಅಲ್ಲಿ 25000 ಕೋಟಿ ಹೂಡಿಕೆ ಮಾಡುತ್ತಿದ್ದಾರೆ. ಟೊಯೋಟಾದವರು ಮಹಾರಾಷ್ಟ್ರ ಕ್ಕೆ ಯಾಕೆ ಹೋದರು? ಇದಕ್ಕೆ ಯಾರು ಕಾರಣ? ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಪೋಷಕರ ಪರವಾಗಿ ಕ್ಲೌಡ್ ನೈನ್ ಆಸ್ಪತ್ರೆ ವಿರುದ್ಧ ಕಾನೂನು ಹೋರಾಟ
ಆಸ್ಪತ್ರೆಯವರು ದೊಡ್ಡ ತಪ್ಪು ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಭಾನುವಾರ ಸಂಜೆ 4 ಗಂಟೆವರೆಗೂ ಗಡುವು ನೀಡುತ್ತೇನೆ. ಅಷ್ಟರೊಳಗೆ ಮಗುವಿಗೆ ಆಗಿರುವ ಅನ್ಯಾಯ ಸರಿಪಡಿಸಲು ಆಸ್ಪತ್ರೆ ಆಡಳಿತ ಮಂಡಳಿಯವರು ಮುಂದೆ ಬರಬೇಕು. ಇಲ್ಲವಾದರೇ ಆಸ್ಪತ್ರೆ ನಡೆಸಲು ಕಷ್ಟವಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನ ಕ್ಲೌಡ್ ನೈನ್ ಆಸ್ಪತ್ರೆಗೆ ಎಚ್ಚರಿಕೆ ನೀಡಿದ್ದಾರೆ.
ಆಸ್ಪತ್ರೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಲೌಡ್ ನೈನ್ ಆಸ್ಪತ್ರೆಯವರು ದೊಡ್ಡ ತಪ್ಪು ಮಾಡಿ ಅದನ್ನ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅನಸ್ತೇಶಿಯಾದಿಂ ದಲೇ ಮಗುವಿನ ಮಿದುಳಿಗೆ ತೊಂದರೆ ಆಗಿದೆ. ತಪ್ಪು ಮಾಡಿರುವ ಪಾಪಪ್ರಜ್ಞೆ ಕೂಡ ಅವರಿಗೆ ಇಲ್ಲ. ಸಂಜೆ 4 ಗಂಟೆ ವರಗೂ ಟೈಂ ನೀಡುತ್ತೇನೆ. ಅಷ್ಟರೊಳಗೆ ಆಸ್ಪತ್ರೆಯ ಆಡಳಿತ ಮಂಡಳಿಯವರು ನನ್ನನ್ನು, ಮಗುವಿನ ಪೋಷಕರನ್ನು ಭೇಟಿ ಮಾಡಬೇಕು. ಇಲ್ಲದಿದ್ದರೇ ಆಮೇಲೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನನ್ನ ಸೌಮ್ಯ ಸ್ವಭಾವ ದೌರ್ಬಲ್ಯ ಎಂದು ತಿಳಿದುಕೊಳ್ಳೋದು ಸರಿಯಲ್ಲ. ಕ್ಲೌಡ್ನೈನ್ ಆಸ್ಪತ್ರೆ ವಿರುದ್ಧ ಕೋರ್ಟ್ ಗೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಮಗು ಬಗ್ಗೆ ನಿರ್ಲಕ್ಷ್ಯ ಮಾಡಿದ್ದಷ್ಟೇ ಅಲ್ಲ, ತಂದೆ- ತಾಯಿಯನ್ನೂ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ದುಡ್ಡಿನ ಮದ ಆ ರೀತಿ ಇದೆ ಎಂದರು.