ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಿಂಗಳಲ್ಲಿ 16 ದೇಶಗಳಲ್ಲಿ ಹಸಿವಿನ ಬಿಕ್ಕಟ್ಟು: ಆಘಾತಕಾರಿ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ

ನಿರಂತರ ಸಂಘರ್ಷ, ಮಧ್ಯಪ್ರಾಚ್ಯ ಯುದ್ಧದಿಂದಾಗಿ ಗಗನಕ್ಕೇರಿರುವ ಇಂಧನ ಬೆಲೆಗಳು ಮತ್ತು ನೆರವಿನ ಅನುದಾನದಲ್ಲಿ ಭಾರಿ ಕಡಿತವೇ ಈ ಪರಿಸ್ಥಿತಿಗೆ ಕಾರಣ ಎಂದು ಹೇಳಿದೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಹಾಗೂ ವಿಶ್ವ ಆಹಾರ ಕಾರ್ಯಕ್ರಮ ಜಂಟಿಯಾಗಿ ಬಿಡುಗಡೆ ಮಾಡಿರುವ ಹಂಗರ್ ಹಾಟ್‌ಸ್ಪಾಟ್ಸ್ (ಹಸಿವಿನ ತಾಣಗಳು) ವರದಿಯು ಡಿಸೆಂಬರ್‌ನಿಂದ ಮೇ 2026ರ ಅವಧಿಯ ಸ್ಥಿತಿಗತಿ ಯನ್ನು ಜಂಟಿಯಾಗಿ ವಿಶ್ಲೇಷಿಸಿದೆ.

ತಿಂಗಳಲ್ಲಿ 16 ದೇಶಗಳಲ್ಲಿ ಹಸಿವಿನ ಬಿಕ್ಕಟ್ಟು

-

Profile
Ashok Nayak Nov 29, 2026 1:00 PM

ಕೈರೋ (ಈಜಿಪ್ಟ್): ಮುಂದಿನ 6 ತಿಂಗಳಲ್ಲಿ ವಿಶ್ವದ 16 ದೇಶಗಳಲ್ಲಿ ಹಸಿವಿನ ಸಮಸ್ಯೆ ಬಿಗಡಾಯಿ ಸಲಿದ್ದು, ಯುದ್ಧಪೀಡಿತ ಸುಡಾನ್ ಮತ್ತು ಯೆಮೆನ್ ಸೇರಿ ಐದು ರಾಷ್ಟ್ರಗಳು ಗಂಭೀರ ಅಪಾಯ ಗಳನ್ನು ಎದುರಿಸಲಿವೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿವೆ.

ನಿರಂತರ ಸಂಘರ್ಷ, ಮಧ್ಯಪ್ರಾಚ್ಯ ಯುದ್ಧದಿಂದಾಗಿ ಗಗನಕ್ಕೇರಿರುವ ಇಂಧನ ಬೆಲೆಗಳು ಮತ್ತು ನೆರವಿನ ಅನುದಾನದಲ್ಲಿ ಭಾರಿ ಕಡಿತವೇ ಈ ಪರಿಸ್ಥಿತಿಗೆ ಕಾರಣ ಎಂದು ಹೇಳಿದೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಹಾಗೂ ವಿಶ್ವ ಆಹಾರ ಕಾರ್ಯಕ್ರಮ ಜಂಟಿಯಾಗಿ ಬಿಡುಗಡೆ ಮಾಡಿರುವ ಹಂಗರ್ ಹಾಟ್‌ಸ್ಪಾಟ್ಸ್ (ಹಸಿವಿನ ತಾಣಗಳು) ವರದಿಯು ಡಿಸೆಂಬರ್‌ನಿಂದ ಮೇ 2026ರ ಅವಧಿಯ ಸ್ಥಿತಿಗತಿಯನ್ನು ಜಂಟಿಯಾಗಿ ವಿಶ್ಲೇಷಿಸಿದೆ. ಈ ಪಟ್ಟಿಯಲ್ಲಿ ಸುಡಾನ್, ಯೆಮೆನ್, ದಕ್ಷಿಣ ಸುಡಾನ್, ಸೊಮಾಲಿಯಾ ಮತ್ತು ಉತ್ತರ ನೈಜೀರಿಯಾ ದೇಶಗಳನ್ನು ಅತ್ಯಂತ ಕಳವಳ ಕಾರಿ ಮಟ್ಟದಲ್ಲಿ ಇರಿಸಲಾಗಿದೆ.

2022ರಿಂದ ಈ 5 ದೇಶಗಳು ಪದೇ ಪದೆ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಅ.2025ರಲ್ಲಿ ಗಾಜಾದಲ್ಲಿ ಕದನ ವಿರಾಮ ಘೋಷಣೆಯಾದ ನಂತರ ಪ್ಯಾಲೇಸ್ಟಿನಿಯನ್ ಪ್ರದೇಶಗಳನ್ನು ಒಂದು ಹಂತ ಕೆಳಗೆ ಇಳಿಸಲಾಗಿದೆ. ಆದರೂ, ಗಾಜಾದ ಜನಸಂಖ್ಯೆಯ ಶೇಕಡಾ 67ರಷ್ಟು ಇನ್ನೂ ತೀವ್ರ ಹಸಿವಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಸದ್ಯದ ಸುಧಾರಣೆಗಳು ಅಸ್ಥಿರವಾಗಿವೆ ಎಂದು ವರದಿ ಎಚ್ಚರಿಸಿದೆ.

ಇದನ್ನೂ ಓದಿ: Ex Soldier Hunger strike: ಕಾರ್ಗಿಲ್ ವಿಜಯೋತ್ಸವದ ದಿವಸಾ ಜಮೀನಿಗಾಗಿ ಉಪವಾಸ ಸತ್ಯಾಗ್ರಹ ಕುಳಿತ ಮಾಜಿ ಸೈನಿಕ

ಸುಡಾನ್‌ನಲ್ಲಿ ಕ್ಷಾಮ ಮುಂದುವರಿಕೆ: ಸುಡಾನ್‌ನ ಉತ್ತರ ಡಾರ್ಫರ್ ಮತ್ತು ದಕ್ಷಿಣ ಕೊರ್ಡೊ ಫಾನ್‌ನ 13 ಪ್ರದೇಶಗಳಲ್ಲಿ ಜನವರಿಯವರೆಗೂ ಕ್ಷಾಮದ ಅಪಾಯ ಮುಂದುವರಿಯಲಿದೆ ಎಂದು ವರದಿ ತಿಳಿಸಿದೆ. ಇತ್ತೀಚಿನ ರಾಷ್ಟ್ರವ್ಯಾಪಿ ವಿಶ್ಲೇಷಣೆಯ ಪ್ರಕಾರ, ಸುಮಾರು 19.5 ಕೋಟಿ ಜನರು (ಜನಸಂಖ್ಯೆಯ ಶೇಕಡಾ 41) ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ.

ದಕ್ಷಿಣ ಡಾರ್ಫರ್‌ನ ಪೂರ್ವ ಜೆಬೆಲ್‌ಮಾರಾದ ಎರಡು ನಿರಾಶ್ರಿತರ ಶಿಬಿರಗಳಲ್ಲಿ ತೀವ್ರ ಅಪೌಷ್ಟಿ ಕತೆಯ ಪ್ರಮಾಣವು ಕ್ಷಾಮದ ಮಟ್ಟವನ್ನೂ ಮೀರಿದೆ. ಯುದ್ಧ ಮತ್ತು ಮತ್ತು ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಇಂಧನ ಬೆಲೆ ಹೆಚ್ಚಾದ ಕಾರಣ, ಸುಡಾನ್‌ನಲ್ಲಿ ಜೋಳದ ಬೆಲೆ ಕಳೆದ ಒಂದು ವರ್ಷದಲ್ಲಿ ದುಪ್ಪಟ್ಟಾಗಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಡೀಸೆಲ್ ಬೆಲೆಗಳು ಕಳೆದ ವರ್ಷ ಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಯುದ್ಧದ ನಡುವೆ, ಎಲ್ʼನಿನೊ ಬರಗಾಲವು ಸುಡಾನ್‌ಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಇದು ಸುಡಾನ್‌ನ ಪ್ರಮುಖ ಕೃಷಿ ರಾಜ್ಯಗಳಾದ ಸೆನ್ನಾರ್‌ನ ಶೇಕಡಾ 55ರಷ್ಟು ಮತ್ತು ಗೆಡಾರೆಫ್‌ʼನ ಶೇಕಡಾ 70ರಷ್ಟು ಕೃಷಿ ಭೂಮಿಯ ಮೇಲೆ ಪರಿಣಾಮ ಬೀರಿದೆ.

ಯೆಮೆನ್‌ನಲ್ಲಿ ಬಿಕ್ಕಟ್ಟು ಉಲ್ಪಣ: ಯೆಮೆನ್‌ನಲ್ಲಿ ಜುಲೈನಲ್ಲಿ ಮತ್ತೆ ಆರಂಭವಾಗಿರುವ ಕಾದಾಟ ಹಲವು ರಂಗಗಳಲ್ಲಿ ಹರಡುತ್ತಿರುವುದರಿಂದ, ಅಲ್ಲಿ ಹಸಿವಿನ ಸಮಸ್ಯೆ ಇನ್ನಷ್ಟು ಉಲ್ಬಣ ಗೊಳ್ಳುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. 2014ರಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ರಾಜಧಾನಿ ಸನಾವನ್ನು ವಶಪಡಿಸಿಕೊಂಡಾಗಿನಿಂದ ಈ ದೇಶವು ಯುದ್ಧದ ಪರಿಸ್ಥಿತಿಯಲ್ಲಿದೆ. ಇದರ ಪರಿಣಾಮವಾಗಿ ಮರುವರ್ಷ ಸೌದಿ ನೇತೃತ್ವದ ಮೈತ್ರಿಕೂಟವು ಸಂಘರ್ಷ ದಲ್ಲಿ ಮಧ್ಯಪ್ರವೇಶಿಸಿತು. ನೈಋತ್ಯ ನಗರವಾದ ತೈಜ್‌ಗೆ ದಿಗ್ಬಂಧನ ಹಾಕಿರುವುದರಿಂದ ಅಲ್ಲಿ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ.

ಸಂಘರ್ಷ ತೀವ್ರಗೊಂಡ ನಂತರ, ತೈಜ್, ಲಾಜ್ ಮತ್ತು ಏಡನ್ ಪ್ರಾಂತ್ಯಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ನಿರ್ವಸಿತರಾಗಿದ್ದಾರೆ. ಸರಕಾರದದ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ 1.8 ಮಿಲಿಯನ್ (18 ಲಕ್ಷ) ಜನರು ತೀವ್ರ ಹಸಿವನ್ನು ಎದುರಿಸುತ್ತಿದ್ದಾರೆ. ಫೆಬ್ರುವರಿವರೆಗೆ ನಡೆಸಲಾದ ಕೊನೆಯ ರಾಷ್ಟ್ರವ್ಯಾಪಿ ಅಂದಾಜಿನ ಪ್ರಕಾರ, ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಅಂದರೆ, 18.3 ಮಿಲಿಯನ್ (1 ಕೋಟಿ 83 ಲಕ್ಷ) ಜನರು ತೀವ್ರ ಆಹಾರ ಬಿಕ್ಕಟ್ಟಿನಲ್ಲಿದ್ದರು.

ಆರ್ಥಿಕ ನೆರವು ಕಡಿತದಿಂದಲೂ ಸಂಕಷ್ಟ

ಪ್ರಮುಖ ದಾನಿ ರಾಷ್ಟ್ರಗಳು ಆರ್ಥಿಕ ನೆರವನ್ನು ಹಿಂತೆಗೆದುಕೊಂಡಿರುವುದರಿಂದ, ಒದಗಿಸಲಾಗುವ ನೆರವಿನ ಪ್ರಮಾಣದಲ್ಲಿ ಭಾರಿ ಕುಸಿತವಾಗಿದೆ. ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿರುವ ಐದು ದೇಶಗಳಿಗೆ ನೀಡಲಾಗುವ ಆಹಾರ ಮತ್ತು ಪೌಷ್ಟಿಕಾಂಶದ ನೆರವು 2022 ಮತ್ತು 2025ರ ನಡುವೆ ಶೇಕಡಾ 62ರಷ್ಟು ಕಡಿಮೆಯಾಗಿದೆ. ಯೆಮೆನ್‌ನಲ್ಲಿ ಈ ಕುಸಿತವು ಶೇಕಡಾ 79ರಷ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಸರಕಾರಗಳ ನಿಲುವಿನಲ್ಲಿನ ಬದಲಾವಣೆಗಳಿಂದಾಗಿ, ಮಾನವೀಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡುವ ಶತಕೋಟಿ ಡಾಲರ್‌ಗಳಷ್ಟು ಹಣ ಕಡಿತಗೊಂಡಿದೆ.