ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೋಟರಿಯಿಂದ ಸಿಂಬಯೋಸಿಸ್ ಇಂಟರ್ನ್ಯಾಷನಲ್ ಯೂನಿವರ್ಸಿಟಿ(ಎಸ್.ಐ.ಯು)ಯಲ್ಲಿ ಹೊಸ ಶಾಂತಿ ಕೇಂದ್ರ ಉದ್ಘಾಟನೆ

ರೋಟರಿ ಹಾಗೂ ಸಿಂಬಯೋಸಿಸ್ ಎರಡೂ ಹೊಂದಿರುವ ತತ್ವಗಳು, ಧ್ಯೇಯೋದ್ದೇಶ, ದೂರ ದೃಷ್ಟಿ ಮತ್ತು ಪರಿಣಿತಿಯ ಸಂಯೋಜನೆಯಾದ ಈ ಕೇಂದ್ರವು ಪುಣೆಯಲ್ಲಿನ ಸಿಂಬಯೋಸಿಸ್'ನ ಸುಂದರ 400+ ಎಕರೆ ವಿಸ್ತೀರ್ಣದ ಲವಲೆ ಕ್ಯಾಂಪಸ್'ನಲ್ಲಿದೆ. ಇದು ಶಾಂತಿ ಮತ್ತು ಅಭಿವೃದ್ಧಿ ಅಧ್ಯಯನಗಳಲ್ಲಿ ಪೂರ್ಣ ಹಣಕಾಸು ಪಾವತಿಸಿದ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮವನ್ನು ನೀಡುತ್ತದೆ.

ರೋಟರಿಯ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮ

-

Ashok Nayak
Ashok Nayak Jan 29, 2026 11:40 PM

ಬೆಂಗಳೂರು: ಶಾಂತಿ ಮತ್ತು ಅಭಿವೃದ್ಧಿಗೆ ಬೆಂಬಲಿಸುವ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆ ಇರಿಸಿರುವ ಸಿಂಬಯೋಸಿಸ್ ಇಂಟರ್ನ್ಯಾಷನಲ್ ಯೂನಿವರ್ಸಿಟಿ (ಎಸ್.ಐ.ಯು)ಯ ರೋಟರಿ ಶಾಂತಿ ಕೇಂದ್ರ ವನ್ನು ಜ.26ರಂದು ಉದ್ಘಾಟಿಸಲಾಯಿತು.

ರೋಟರಿ ಹಾಗೂ ಸಿಂಬಯೋಸಿಸ್ ಎರಡೂ ಹೊಂದಿರುವ ತತ್ವಗಳು, ಧ್ಯೇಯೋದ್ದೇಶ, ದೂರ ದೃಷ್ಟಿ ಮತ್ತು ಪರಿಣಿತಿಯ ಸಂಯೋಜನೆಯಾದ ಈ ಕೇಂದ್ರವು ಪುಣೆಯಲ್ಲಿನ ಸಿಂಬಯೋಸಿಸ್ ನ ಸುಂದರ 400+ ಎಕರೆ ವಿಸ್ತೀರ್ಣದ ಲವಲೆ ಕ್ಯಾಂಪಸ್'ನಲ್ಲಿದೆ. ಇದು ಶಾಂತಿ ಮತ್ತು ಅಭಿವೃದ್ಧಿ ಅಧ್ಯಯನಗಳಲ್ಲಿ ಪೂರ್ಣ ಹಣಕಾಸು ಪಾವತಿಸಿದ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮವನ್ನು ನೀಡುತ್ತದೆ. ಈ ಕಾರ್ಯಕ್ರಮವನ್ನು ಏಷ್ಯಾ ಅಥವಾ ಏಷ್ಯಾದ ಸಮುದಾಯ ಗಳಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಮಧ್ಯಮ-ಹಂತದ ವೃತ್ತಿಪರರಿಗೆ ವಿನ್ಯಾಸಗೊಳಿಸಲಾಗಿದೆ.

“ಈ ಪರಸ್ಪರ ಸಂಪರ್ಕಿತ ವಿಶ್ವದಲ್ಲಿ ಶಾಂತಿಯನ್ನು ಅಮೂರ್ತ ಆದರ್ಶ ಎಂದು ನೋಡುವಂತಿಲ್ಲ; ಇದನ್ನು ಜ್ಞಾನ, ನೈತಿಕ ನಾಯಕತ್ವ ಮತ್ತು ಕ್ರಿಯೆಯನ್ನು ಸಂಯೋಜಿಸುವ ಸಂಸ್ಥೆಗಳಿಂದ ಬೆಳೆಸ ಬೇಕಾಗುತ್ತದೆ. ರೋಟರಿಯ ಶಿಕ್ಷಣವು ವ್ಯಕ್ತಿಗಳನ್ನು ಗಡಿಗಳ ಆಚೆಗೂ ಸಬಲೀಕರಿಸಿದಾಗ ಗಡಿಗಳ ಆಚೆಗೂ ಸೇವೆ ಒದಗಿಸುವ ಮತ್ತು ವಿಭಜನೆಗಳ ಆಚೆಗೂ ಚಿಂತಿಸುವ ಸುಸ್ಥಿರ ಶಾಂತಿಯನ್ನು ನಿರ್ಮಿಸಲಾಗುತ್ತದೆ ಎಂದು ನಂಬುತ್ತದೆ” ಎಂದು ರೋಟರಿ ಇಂಟರ್ನ್ಯಾಷನಲ್ ಅಧ್ಯ‍ಕ್ಷ(2025-26) ಫ್ರಾನ್ಸೆಸ್ಕೊ ಅರೆಜ್ಜೊ ಹೇಳಿದರು.

ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ

“ಸಿಂಬೋಸಿಸ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯಲ್ಲಿ ರೋಟರಿ ಶಾಂತಿ ಕೇಂದ್ರ ಪ್ರಾರಂಭಿ ಸುತ್ತಿರುವುದು ಅರ್ಥ ಮಾಡಿಕೊಳ್ಳುವ ನಾಯಕರನ್ನು ರೂಪಿಸುವ ಮತ್ತು ಒಂದು ಉದ್ದೇಶಕ್ಕಾಗಿ ಸಮಗ್ರತೆಯಿಂದ ಕೆಲಸ ಮಾಡುವ ನಾಯಕರನ್ನು ಪೋಷಿಸುವ ರೋಟರಿಯ ಬದ್ಧತೆಯನ್ನು ಬಿಂಬಿಸುತ್ತದೆ. ಈ ಉಪಕ್ರಮದ ಮೂಲಕ ಈ ಕೇಂದ್ರವು ಏಷ್ಯಾದಲ್ಲಿ ಪ್ರಾದೇಶಿಕ ಶಾಂತಿ ನಿರ್ಮಾಣ ಕ್ಕೆ ಕೊಡುಗೆ ನೀಡುವುದಲ್ಲದೆ ಜವಾಬ್ದಾರಿ ಹಂಚಿಕೊಂಡ ಸದೃಢವಾದ ಜಾಗತಿಕ ಚೌಕಟ್ಟನ್ನೂ ನಿರ್ಮಿಸಲು ಕೊಡುಗೆ ನೀಡುತ್ತದೆ” ಎಂದರು.

ಸಿಂಬಯೋಸಿಸ್ ಪ್ರಿನ್ಸಿಪಲ್ ಡೈರೆಕ್ಟರ್ ಮತ್ತು ಸಿಂಬಯೋಸಿಸ್ ಇಂಟರ್ನ್ಯಾಷನಲ್ ಯೂನಿವರ್ಸಿ ಟಿಯ ಪ್ರೊ-ಚಾನ್ಸೆಲರ್ ಡಾ.ವಿದ್ಯಾ ಯರವಡೇಕರ್, “ಸಿಂಬಯೋಸಿಸ್ ಇಂಟರ್ನ್ಯಾಷನಲ್ ಯೂನಿ ವರ್ಸಿಟಿಯಲ್ಲಿ ರೋಟರಿ ಶಾಂತಿ ಕೇಂದ್ರದ ಸ್ಥಾಪನೆಯು ಸಿಂಬಯೋಸಿಸ್ ನ ಕೇಂದ್ರ ಮೌಲ್ಯಗಳಿಗೆ ಪೂರಕವಾಗಿದೆ ಮತ್ತು ಇದು 55ನೇ ವಾರ್ಷಿಕೋತ್ಸವ ಆಚರಿಸುತ್ತಿರುವುದರಿಂದ ಅತ್ಯಂತ ಅರ್ಥ ಪೂರ್ಣವಾಗಿದೆ.

ಡಾ.ಎಸ್.ಬಿ. ಮಜುಂದಾರ್ ಅವರು “ವಸುಧೈವ ಕುಟುಂಬಕಂ” ಎಂಬ ಧ್ಯೇಯೋದ್ದೇಶದಲ್ಲಿ ಸ್ಥಾಪಿಸಿದ ಸಿಂಬಯೋಸಿಸ್ ಭಾರತ ಮತ್ತು ವಿಶ್ವದ ಮೂಲೆ ಮೂಲೆಯ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸುತ್ತಿದ್ದು ಅವರಿಗೆ ಅಂತಾರಾಷ್ಟ್ರೀಯ ಅರಿವು ಮತ್ತು ಸೋದರತ್ವದ ಸ್ಫೂರ್ತಿ ತರುತ್ತಿದೆ. ನಮ್ಮ ದೂರದೃಷ್ಟಿಯ ಸಂಸ್ಥಾಪಕರು ಗುಣಮಟ್ಟದ ಶಿಕ್ಷಣ ನೀಡುವುದು ಅಂತಾರಾಷ್ಟ್ರೀಯ ತಿಳಿವಳಿಕೆ ಉತ್ತೇಜಿಸಲು ಏಕೈಕ ಮಾರ್ಗ ಎಂದು ನಂಬಿದ್ದರು” ಎಂದರು.

ಎಸ್.ಐ.ಯು.ವಿನಲ್ಲಿ ರೋಟರಿ ಶಾಂತಿ ಕೇಂದ್ರವು ಪ್ರತಿ ವರ್ಷ 40 ರೋಟರಿ ಪೀಸ್ ಫೆಲೋಶಿಪ್ ಗಳಿಗೆ ಆಹ್ವಾನಿಸುತ್ತದೆ.

“ಭಾರತದ ಶ್ರೀಮಂತ ವೈವಿಧ್ಯತೆ ಮತ್ತು ಸಂಕೀರ್ಣ ಸಾಮಾಜಿಕ ಕ್ಷೇತ್ರದಲ್ಲಿ ಸಿಂಬಯೋಸಿಸ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯಲ್ಲಿರುವ ರೋಟರಿ ಶಾಂತಿ ಕೇಂದ್ರವು ಸಹಾನುಭೂತಿ ಮತ್ತು ಆವಿಷ್ಕಾರದೊಂದಿಗೆ ಮುಂದುವರಿಯುವ ನಾಯಕರನ್ನು ಬೆಳೆಸುವ ವಿಶಿಷ್ಟ ಅವಕಾಶ ಗಳನ್ನು ನೀಡುತ್ತದೆ” ಎಂದು ದಿ ರೋಟರಿ ಫೌಂಡೇಷನ್(2022-2026) ಟ್ರಸ್ಟೀ ಭರತ್ ಎಸ್. ಪಾಂಡ್ಯ ಹೇಳಿದರು.

“ಸಿಂಬಯೋಸಿಸ್ ಜೊತೆಯಲ್ಲಿ ಸಹಯೋಗ ಹೊಂದುವ ಮೂಲಕ ನಾವು ಉದಯೋನ್ಮುಖ ಮತ್ತು ಅನುಭವಿ ಶಾಂತಿ ನಿರ್ಮಾಪಕರಿಗೆ ನಾವು ಜ್ಞಾನ, ಕೌಶಲ್ಯಗಳು ಮತ್ತು ಸ್ಥಳೀಯ ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸಲು ಅಗತ್ಯವಾದ ವೇದಿಕೆ ಸೃಷ್ಟಿಸಿಕೊಡುತ್ತಿದ್ದೇವೆ. ಈ ಕೇಂದ್ರವು ಏಷ್ಯಾ ದಲ್ಲಿನ ಹೊಸ ತಲೆಮಾರಿನ ನಾಯಕರನ್ನು ಪೋಷಿಸಲು ನೆರವಾಗಲಿದ್ದು ಸಂವಾದ, ಅರ್ಥ ಮಾಡಿ ಕೊಳ್ಳುವಿಕೆ ಮತ್ತು ಸುಸ್ಥಿರ ಶಾಂತಿಯನ್ನು ತರಲು ಬದ್ಧವಾಗಿದೆ” ಎಂದರು.

rotary.org/peace-fellowshipsಎಸ್.ಐ.ಯು.ವಿನಲ್ಲಿ ರೋಟರಿಯ ಒಂದು ವರ್ಷದ ಡಿಪ್ಲೊಮಾ ಕಾರ್ಯಕ್ರಮಕ್ಕೆ ಅರ್ಜಿಗಳು ಫೆಬ್ರವರಿ 1ರಿಂದ ಮೇ 15, 2026ರವರೆಗೆ ಮುಕ್ತವಾಗಿರುತ್ತವೆ. ರೋಟರಿ ಶಾಂತಿ ಫೆಲೋಶಿಪ್ ಕಾರ್ಯಕ್ರಮಗಳು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವುದಕ್ಕೆ ಭೇಟಿ ಕೊಡಿ:

“ಎಸ್.ಐ.ಯು.ವಿನಲ್ಲಿ ರೋಟರಿ ಶಾಂತಿ ಕೇಂದ್ರವು ಗ್ರೇಟರ್ ಏಷ್ಯಾ ಪ್ರದೇಶಕ್ಕೆ ಪೂರೈಸಲಿದ್ದು ಅನುಭವಪೂರ್ವಕ ಕಲಿಕೆಯ ಬಹುಶಿಸ್ತೀಯ ವಿಧಾನ ಅಳವಡಿಸಿಕೊಂಡಿದೆ. ಈ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮನ್ನು ಶಾಂತಿ ಮತ್ತು ಅಭಿವೃದ್ಧಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಮಧ್ಯಮ-ಹಂತದ ವೃತ್ತಿಪರರಿಗೆ ಸಬಲೀಕರಿಸಲು ಸಂಯೋಜಿತ ಮಾದರಿ ಯಲ್ಲಿ ನೀಡಲಾಗುತ್ತಿದ್ದು ಏಷ್ಯಾದಲ್ಲಿ ಅವರಿಗೆ ಸುಸ್ಥಿರ ಮತ್ತು ಕ್ರಿಯಾತ್ಮಕ ಫಲಿತಾಂಶಗಳಲ್ಲಿ ಮುಂದುವರಿಯಲು ನೆರವಾಗುತ್ತದೆ” ಎಂದು ಸಿಂಬಯೋಸಿಸ್ ಇಂಟರ್ನ್ಯಾಷನಲ್ ಯೂನಿವರ್ಸಿ ಟಿಯ ರೋಟರಿ ಶಾಂತಿ ಕೇಂದ್ರದ ಸೆಂಟರ್ ಹೆಡ್ ಡಾ.ಸುಲಕ್ಷಣಾ ಸೇನ್ ಹೇಳಿದರು.

ಪೂರ್ಣ ಹಣಕಾಸು ನೆರವಿನ ಫೆಲೋಶಿಪ್ರೋಟರಿಯು ಪ್ರಸ್ತುತ ವಿಶ್ವದ ಮೂಲೆ ಮೂಲೆಯ ಶಾಂತಿ ಮತ್ತು ಅಭಿವೃದ್ಧಿ ನಾಯಕರಿಗೆ ತನ್ನ ಎಂಟು ಶಾಂತಿ ಕೇಂದ್ರದ ಕಾರ್ಯಕ್ರಮಗಳ ಮೂಲಕ 170 ಗಳನ್ನು ನೀಡುತ್ತಿದೆ. 2002ರಿಂದಲೂ ರೋಟರಿ ಶಾಂತಿ ಕೇಂದ್ರಗಳು ಶಾಂತಿ ನಿರ್ಮಾಣದಲ್ಲಿ 1,800 ಕ್ಕೂ ಹೆಚ್ಚು ವೃತ್ತಿಪರರಿಗೆ ತರಬೇತಿ ನೀಡಿವೆ ಮತ್ತು ಕಾರ್ಯಕ್ರಮದ ಅಲುಮ್ನಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತಿತರೆ ಕಡೆಗಳಲ್ಲಿ ನಾಯಕ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.