ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದಲ್ಲಿ ಹೊಸ ಪ್ರೊಪೆಲ್ಲರ್ ಎಂಆರ್‌ಒ ಘಟಕಕ್ಕೆ ಆರ್‌.ಟಿ.ಎಕ್ಸ್‌ನ ಕಾಲಿನ್ಸ್ ಏರೋಸ್ಪೇಸ್ ಭೂಮಿಪೂಜೆ

ಎಂಜಿನಿಯರಿಂಗ್, ಉತ್ಪಾದನೆ, ಪರೀಕ್ಷೆ ಮತ್ತು ವಿಶೇಷವಾದ ಮಾರಾಟ ನಂತರದ ಪ್ರೊಪೆಲ್ಲರ್ ನಿರ್ವಹಣೆಯಂತಹ ಅತ್ಯಾಧುನಿಕ ಏರೋಸ್ಪೇಸ್ ಸೇವೆಗಳನ್ನು ಒದಗಿಸಲು ಕಂಪನಿಯು ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ $200 ಮಿಲಿಯನ್‌ಗೂ ಹೆಚ್ಚು ಹೂಡಿಕೆ ಮಾಡಿದೆ. ಈ ಎಂಆರ್‌ಒ ಘಟಕ ಸ್ಥಾಪಿಸಲು ಕಾಲಿನ್ಸ್ ಮಾಡಿರುವ ಬಹು-ಮಿಲಿಯನ್ ಡಾಲರ್ ಬದ್ಧತೆಯು ಈ ಹಿಂದಿನ ಹೂಡಿಕೆಯ ಮುಂದುವರಿದ ಭಾಗವಾಗಿದೆ

ಹೊಸ ಪ್ರೊಪೆಲ್ಲರ್ ಎಂಆರ್‌ಒ ಘಟಕಕ್ಕೆ ಭೂಮಿಪೂಜೆ

-

Profile
Ashok Nayak Nov 17, 2026 8:01 PM

ಬೆಂಗಳೂರು: ಆರ್‌.ಟಿ.ಎಕ್ಸ್ (ಎನ್.ವೈ.ಎಸ್.ಇ: ಆರ್.ಟಿ.ಎಕ್ಸ್.) ಸಂಸ್ಥೆಯ ಅಂಗಸಂಸ್ಥೆ ಕಾಲಿನ್ಸ್ ಏರೋಸ್ಪೇಸ್, ಬೆಂಗಳೂರಿನಲ್ಲಿರುವ ಕಾಲಿನ್ಸ್ ಇಂಡಿಯಾ ಆಪರೇಷನ್ಸ್ ಸೆಂಟರ್ (ಸಿ.ಐ.ಒ.ಸಿ)ನಲ್ಲಿ ದೇಶದ ಮೊದಲ ವಿದೇಶಿ ಏರೋಸ್ಪೇಸ್ ಮೂಲ ಉಪಕರಣ ತಯಾರಕರಿಂದ ಅಧಿಕೃತಗೊಂಡ ಪ್ರೊಪೆಲ್ಲರ್ ನಿರ್ವಹಣೆ, ದುರಸ್ತಿ ಮತ್ತು ಓವರ್ ಹಾಲ್ (ಎಂ.ಆರ್.ಒ) ಘಟಕಕ್ಕೆ ಭೂಮಿಪೂಜೆ ನೆರವೇರಿಸಿದೆ.

ಈ ಘಟಕವು ಏಷ್ಯಾ ಪೆಸಿಫಿಕ್ ಪ್ರದೇಶದಾದ್ಯಂತ ಇರುವ ಎಟಿಆರ್ 42/72 ಪ್ರಾದೇಶಿಕ ವಿಮಾನಗಳು ಮತ್ತು ಏರ್‌ಬಸ್ ಸಿ295 ಸೇನಾ ಸಾರಿಗೆ ವಿಮಾನಗಳ ಅತ್ಯಾಧುನಿಕ ಪ್ರೊಪೆಲ್ಲರ್ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುತ್ತದೆ.

ಎಂಜಿನಿಯರಿಂಗ್, ಉತ್ಪಾದನೆ, ಪರೀಕ್ಷೆ ಮತ್ತು ವಿಶೇಷವಾದ ಮಾರಾಟ ನಂತರದ ಪ್ರೊಪೆಲ್ಲರ್ ನಿರ್ವಹಣೆಯಂತಹ ಅತ್ಯಾಧುನಿಕ ಏರೋಸ್ಪೇಸ್ ಸೇವೆಗಳನ್ನು ಒದಗಿಸಲು ಕಂಪನಿಯು ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಎರಡು ನೂರು ಅಮೆರಿಕನ್‌ ಡಾಲರ್‌ʼಗೂ ಹೆಚ್ಚು ಹೂಡಿಕೆ ಮಾಡಿದೆ. ಈ ಎಂಆರ್‌ಒ ಘಟಕ ಸ್ಥಾಪಿಸಲು ಕಾಲಿನ್ಸ್ ಮಾಡಿರುವ ಬಹು-ಮಿಲಿಯನ್ ಡಾಲರ್ ಬದ್ಧತೆಯು ಈ ಹಿಂದಿನ ಹೂಡಿಕೆಯ ಮುಂದುವರಿದ ಭಾಗವಾಗಿದೆ.

"ಇಂದಿನ ಭೂಮಿಪೂಜೆಯು ಭಾರತದ ವಾಯುಯಾನ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಗ್ರಾಹಕರ ಬೇಡಿಕೆ ಪೂರೈಸುವ ನಮ್ಮ ಬದ್ಧತೆಯನ್ನು ಪ್ರತಿನಿಧಿಸುತ್ತದೆ," ಎಂದು ಕಾಲಿನ್ಸ್ ಏರೋಸ್ಪೇಸ್‌ʼನ ಅಡ್ವಾನ್ಸ್‌ಡ್ ಸ್ಟ್ರಕ್ಚರ್ಸ್ ವಿಭಾಗದ ಅಧ್ಯಕ್ಷ ಅಜಯ್ ಮಹಾಜನ್ ಹೇಳಿದರು.

ಇದನ್ನೂ ಓದಿ: Bangalore News: ​ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ

"ಭಾರತದಾದ್ಯಂತ ಪ್ರಾದೇಶಿಕ ವಾಯು ಸಂಪರ್ಕವು ವಿಸ್ತರಿಸುತ್ತಿರುವುದರಿಂದ, ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳು ಸದಾ ಸೇವೆಗೆ ಲಭ್ಯವಿರುವಂತೆ ನೋಡಿಕೊಳ್ಳು ವುದು ಅತ್ಯಗತ್ಯವಾಗಿದೆ. ದೇಶದಲ್ಲೇ ಪ್ರೊಪೆಲ್ಲರ್ ಎಂಆರ್‌ಒ ಸಾಮರ್ಥ್ಯಗಳನ್ನು ಸ್ಥಾಪಿಸುವ ಮೂಲಕ, ನಾವು ವಿಶ್ವದರ್ಜೆಯ ಮಾರಾಟ ನಂತರದ ಪರಿಣತಿಯನ್ನು ನೇರವಾಗಿ ನಮ್ಮ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ. ಇದರಿಂದ ದುರಸ್ತಿಗೆ ತಗಲುವ ಸಮಯ ಮತ್ತು ಕಾರ್ಯಾಚರಣೆಯ ಸ್ಥಗಿತದ ಅವಧಿ ಕಡಿಮೆಯಾಗಲಿದೆ" ಎಂದರು.

ಕರ್ನಾಟಕ ಸರ್ಕಾರದ ಬೆಂಬಲವು ಈ ಹೂಡಿಕೆಗೆ ಪೂರಕವಾಗಿದೆ. ”ಈ ಘಟಕವು ಭಾರತ ಮತ್ತು ವಿಶಾಲ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಪ್ರಾದೇಶಿಕ ವಿಮಾನಯಾನದ ಬೆಳವಣಿಗೆ ಮತ್ತು ಸೇನಾ ಸಾರಿಗೆಯ ಆಧುನೀಕರಣಕ್ಕೆ ಬೆಂಬಲ ನೀಡಲಿದೆ. ಹೊಸ ಎಂಆರ್‌ಒ ಕೇಂದ್ರದ ಕಾರ್ಯಾಚರಣೆ ಯಲ್ಲಿ 50 ವಿಶೇಷ ತಂತ್ರಜ್ಞರು ಮತ್ತು ಎಂಜಿನಿಯರ್‌ ಗಳ ತಂಡವು ಕಾರ್ಯನಿರ್ವಹಿಸಲಿದ್ದು, ಸೇವೆಯ ಪ್ರಮಾಣ ಹೆಚ್ಚಾದಂತೆ ತಂಡವೂ ವಿಸ್ತರಣೆಯಾಗಲಿದೆ. ಈ ಘಟಕವು 2029ರ ಆರಂಭ ದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ನವೆಂಬರ್ 2025ರಲ್ಲಿ ಉದ್ಘಾಟನೆ ಗೊಂಡ ಕಾಲಿನ್ಸ್ ಸಿಐಒಸಿ ಬೆಂಗಳೂರಿನ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್‌ನಲ್ಲಿರುವ 26 ಎಕರೆ ವಿಸ್ತೀರ್ಣದ ಏರೋಸ್ಪೇಸ್ ಉತ್ಪಾದನಾ ಘಟಕವಾಗಿದೆ. ಈ ಘಟಕವು 70ಕ್ಕೂ ಹೆಚ್ಚು ಉತ್ಪನ್ನಗಳ ತಯಾರಿಕೆಗೆ ಬೆಂಬಲ ನೀಡುತ್ತದೆ ಮತ್ತು ಕೃತಕ ಬುದ್ಧಿಮತ್ತೆ. ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಹಾಗೂ ರೊಬೊಟಿಕ್ಸ್‌ನಂತಹ ತಂತ್ರಜ್ಞಾನಗಳನ್ನು ಬಳಸಿಕೊಂಡು ಮೆಕ್ಯಾನಿಕಲ್, ಎಲೆಕ್ಟ್ರೋ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಂಗಳನ್ನು ಉತ್ಪಾದಿಸುತ್ತದೆ.

ಕಾಲಿನ್ಸ್ ಏರೋಸ್ಪೇಸ್ ಕುರಿತು ಆರ್‌.ಟಿ.ಎಕ್ಸ್ ಸಂಸ್ಥೆಯ ಅಂಗಸಂಸ್ಥೆ ಕಾಲಿನ್ಸ್ ಏರೋಸ್ಪೇಸ್, ಅತ್ಯಾಧುನಿಕ ಏರೋಸ್ಪೇಸ್ ಮತ್ತು ರಕ್ಷಣಾ ಪರಿಹಾರಗಳನ್ನು ಒದಗಿಸುತ್ತದೆ