ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Hoodie Fashion: ಚಳಿ-ಗಾಳಿಗೆ ಹೂಡಿ ಫ್ಯಾಷನ್ ತಮ್ಮದಾಗಿಸಿಕೊಳ್ಳಿ

ಚಳಿ-ಗಾಳಿಗೆ ವೈವಿಧ್ಯಮಯ ಹೂಡಿಗಳು (Winter Hoodie Fashion) ಎಂಟ್ರಿ ನೀಡಿವೆ. ಕಾಲೇಜು ಹುಡುಗ-ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಹೇಗೆಲ್ಲಾ ಇವನ್ನು ಇತರೆ ಔಟ್‌ಫಿಟ್‌ಗಳೊಂದಿಗೆ ಮ್ಯಾಚ್ ಮಾಡಬಹುದು. ಈ ಕುರಿತಂತೆ ಇಲ್ಲಿದೆ ಮಾಹಿತಿ.

Profile
Vishwavani News Dec 8, 2024 9:16 AM
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿ-ಗಾಳಿಗೆ ದೇಹವನ್ನು ಬೆಚ್ಚಗಿಡುವಂತಹ ಸ್ಟೈಲಿಶ್ ಆಗಿರುವಂತಹ ಹೂಡಿಗಳು (Winter Hoodie Fashion) ಇಂದು ವಿಂಟರ್ ಫ್ಯಾಷನ್‌ಗೆ ಕಾಲಿಟ್ಟಿದ್ದು, ಕಾಲೇಜು ಹುಡುಗ-ಹುಡುಗಿಯರನ್ನು ಆಕರ್ಷಿಸ ತೊಡಗಿವೆ. ನೋಡಲು ಆಕರ್ಷಕವಾಗಿ ಬಿಂಬಿಸಿವೆ. ಹೌದು, ಈ ಬಾರಿಯ ವಿಂಟರ್ ಫ್ಯಾಷನ್‌ನಲ್ಲಿ ಎಂದಿನಂತೆ ಸ್ಟೈಲಿಶ್ ಲುಕ್ ನೀಡುವ ಹೂಡಿಗಳು ಬಂದಿವೆ. ಈ ಜನರೇಷನ್‌ನವರಿಗೂ ಇಷ್ಟವಾಗುವಂತಹ ಕಲರ್ಸ್ ಹಾಗೂ ಡಿಸೈನ್‌ನಲ್ಲಿ ಪ್ರಿಂಟ್ಸ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.
ಚಿತ್ರಕೃಪೆ: ಪಿಕ್ಸೆಲ್
ವಿಂಟರ್ ಹೂಡಿಗಳಿವು
ಬಹುತೇಕ ಫುಲ್‌ ಸ್ಲೀವ್ಸ್‌ನಲ್ಲಿ ಲಭ್ಯವಿರುವ ಇವು ಮೈಯನ್ನು ಬೆಚ್ಚಗಿಡುತ್ತವೆ. ಸಾದಾ, ಮಾನೋಕ್ರೋಮ್, ಸಾಲಿಡ್ ಶೇಡ್ಸ್, ಚೆಕ್ಸ್, ಗಿಂಗ್ನಂ, ಸ್ಟ್ರೈಪ್ಸ್ ಹಾಗೂ ವೈಬ್ರೆಂಟ್ ಕಲರ್ಸ್‌ನಲ್ಲಿ ಹೂಡಿಗಳು ಈ ಸೀಸನ್‌ಗೆ ಆಗಮಿಸಿವೆ.
ಅಂದಹಾಗೆ, ಸಿನಿಮಾ ಸ್ಟಾರ್‌ಗಳು ಕೂಡ ಹೂಡಿ ಪ್ರೇಮಿಗಳು. ನೋಡಲು ಸ್ಟೈಲಿಶ್‌ ಲುಕ್‌ ನೀಡುವ ಕ್ರಾಪ್ಹೂಡಿ, ಸ್ಲಿವ್ಲೆಸ್‌ ಹೂಡಿಗಳನ್ನು ಹೆಚ್ಚು ಧರಿಸಿ, ಏರ್ಪೋರ್ಟ್ ಲುಕ್ ನೀಡುತ್ತಾರೆ. ಇನ್ನು, ಚಳಿಗೆ ಹೂಡಿಯಲ್ಲಿ ಜತೆಯಲ್ಲಿಯೇ ಅಟ್ಯಾಚ್ ಆದಂತಹ ಕ್ಯಾಪನ್ನು ತಲೆ ಮೇಲೆ ಧರಿಸಿ ಕೂಡ ಸ್ಟೈಲಿಂಗ್ ಮಾಡುವುದು ಇಂದು ಸಾಮಾನ್ಯವಾಗಿದೆ ಎನ್ನುತ್ತಾರೆ ಹೂಡಿ ಲವರ್ಸ್ ರಾಜ್ ಹಾಗೂ ನಿಶಾ.
ಹೂಡಿಗೆ ಮ್ಯಾಚಿಂಗ್ ಹೀಗಿರಲಿ
ಹೂಡಿಗಳು ಎಲ್ಲಾ ಔಟ್‌ಫಿಟ್‌ಗೂ ಮ್ಯಾಚ್ ಆಗುವುದಿಲ್ಲ. ಕ್ಯಾಶುವಲ್ ಅದರಲ್ಲೂ ಪ್ಯಾಂಟ್ ಹಾಗೂ ಸ್ಕರ್ಟ್‌ಗಳಿಗೆ ಇವನ್ನು ಮ್ಯಾಚ್ ಮಾಡಬೇಕು. ಇನ್ನು, ಉದ್ದವಿರುವ ಸ್ಲಿಮ್‌ ಹುಡುಗಿಯರಿಗೆ ಇವು ಪರ್ಫೆಕ್ಟ್ ಔಟ್‌ಫಿಟ್. ಇದನ್ನು ಯಾವುದೇ ಶೈಲಿಯ ವೆಸ್ಟರ್ನ್ ಔಟ್‌ಫಿಟ್‌ನೊಂದಿಗೆ ಧರಿಸಬಹುದು. ಪಲ್ಹಾಜೂ, ಕೇಪ್ರಿಸ್ ಜತೆಗೂ ಹೂಡಿ ಪರ್ಫೆಕ್ಟ್ ಸೂಟ್ ಆಗುತ್ತವೆ. ಆದರೆ, ಪ್ಯಾಂಟ್‌ಗಳ ಕಟ್ಸ್‌ ಹಾಗೂ ಸ್ಟಿಚ್ಚಿಂಗ್ ಈ ಹೂಡಿಗೆ ಮ್ಯಾಚ್ ಆಗಬೇಕು. ಮಿಕ್ಸ್ ಮ್ಯಾಚ್ ಟೆಕ್ನಿಕ್ಗೊತ್ತಿದ್ದಲ್ಲಿ, ಸೆಮಿ ಫಾರ್ಮಲ್ ಉಡುಪುಗಳಿಗೂ ಇವನ್ನು ಧರಿಸಬಹುದು. ಹೂಡಿಗೆ ಪ್ರಿಂಟ್ಸ್ ಅಥವಾ ಚೆಕ್ಸ್ ಒಳಗೊಂಡ ಪ್ಯಾಂಟ್ ಧರಿಸಿದಲ್ಲಿ ಸ್ಟೈಲಿಶ್ ಆಗಿ ಕಾಣಿಸುವುದು. ಆಕ್ಸೆಸರೀಸ್ ಧರಿಸುವುದು ಬೇಡ ಎನ್ನುತ್ತಾರೆ ಡಿಸೈನರ್ ರಿಯಾ.
ಹೂಡಿ ಧರಿಸಿ ಲೇಯರ್ ಲುಕ್ ನೀಡುವಾಗ ಆದಷ್ಟೂ ಕಂಫರ್ಟಬಲ್ ಹೇರ್‌ ಸ್ಟೈಲ್ ಮಾಡಿ. ಯಾಕೆಂದರೆ ಮೊದಲೇ ಬೆಚ್ಚಗಿನ ಉಡುಪು ಧರಿಸಿ ನಂತರ ಫ್ರೀ ಹೇರ್‌ ಸ್ಟೈಲ್‌ ಮಾಡಿದಲ್ಲಿ ಸೆಕೆಯಾಗಬಹುದು. ಹಾಗಾಗಿ ಹೈ ಪೋನಿ, ಫಿಶ್ಟೇಲ್, ಸೈಡ್ಪೋನಿ, ಲಾಂಗ್‌ ಸೈಡ್‌ ಚೋಟಿಯಂತಹ ಹೇರ್‌ ಸ್ಟೈಲ್‌ಗಳನ್ನು ಟ್ರೈ ಮಾಡಿ ಎಂದು ಹೇಳುತ್ತಾರೆ ಮೇಕೋವರ್ ಎಕ್ಸ್‌ಪರ್ಟ್ ರಾಘವ್.
ಈ ಸುದ್ದಿಯನ್ನೂ ಓದಿ | Trench Coat Fashion: ಚಳಿ-ಮಳೆ-ಗಾಳಿಗೆ ಕಾಲಿಟ್ಟ ಟ್ರೆಂಚ್ ಕೋಟ್ ಫ್ಯಾಷನ್
ಚಳಿಗಾಲದಲ್ಲಿ ಹೂಡಿ ಧರಿಸಿ ಸ್ಟೈಲಿಶ್ ಆಗಿ ಕಾಣಿಸುವವರಿಗೆ ಸಿಂಪಲ್ ಟಿಪ್ಸ್
ಆದಷ್ಟು ಸಿಂಪಲ್ ಮೇಕೋವರ್‌ಗೆ ಆದ್ಯತೆ ನೀಡಿ.
ಲೈಟ್‌ವೇಟ್ ಹೂಡಿಗಳನ್ನು ಪ್ರಿಫರ್ ಮಾಡಿ.
ಸಾದಾ ಹೂಡಿಗೆ ಪ್ರಿಂಟ್ಸ್, ಪ್ರಿಂಟ್ಸ್ ಹೂಡಿಗೆ ಸಾದಾ ಪ್ಯಾಂಟ್ ಅಥವಾ ಸ್ಕರ್ಟ್ಸ್ ಧರಿಸಿ. ಸಖತ್ ಆಗಿ ಕಾಣಿಸುವುದು.
ತೆಳ್ಳಗಿರುವವರು ಫರ್ ಹಾಗೂ ಫ್ರಿಂಝ್ ಹೂಡಿ ಸೆಲೆಕ್ಟ್ ಮಾಡಬಹುದು.
ಪ್ಲಂಪಿಯಾಗಿರುವವರು ಸ್ಲಿಮ್‌ಫಿಟ್ ಹೂಡಿ ಧರಿಸಬಹುದು.
ವಿಂಟರ್ ಲುಕ್‌ಗಾಗಿ ಶೂ ಧರಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)