ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಪ್ರೋ ಬೆಂಗಳೂರು ಮ್ಯಾರಥಾನ್‌; ವಾಹನ ಸವಾರರೇ ಗಮನಿಸಿ, ಬೆಳಗ್ಗಿನಿಂದಲೇ ಹಲವು ರಸ್ತೆಗಳು ಬಂದ್

13ನೇ ಆವೃತ್ತಿಯ ವಿಪ್ರೋ ಬೆಂಗಳೂರು ಮ್ಯಾರಥಾನ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ ಹಾಗೂ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ. ಕಂಠೀರವ ಕ್ರೀಡಾಂಗಣದಿಂದ ಮುಂಜಾನೆ 4 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ಈ ಮ್ಯಾರಥಾನ್ ನಡೆಯಲಿದೆ. ಡಿಸಿಎಂ ಡಾ ಜಿ.ಪರಮೇಶ್ವರ್, ಸಂಸದ ತೇಜಸ್ವಿ ಸೂರ್ಯ, ಮಂದಿರಾ ಬೇಡಿ, ರಂಜಿತಾ ಘೋಷ್, ಇರಿನಾ ಘೋಷ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.

ವಿಪ್ರೋ ಬೆಂಗಳೂರು ಮ್ಯಾರಥಾನ್‌; ಬೆಳಗ್ಗಿನಿಂದಲೇ ಹಲವು ರಸ್ತೆಗಳು ಬಂದ್

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Sep 27, 2026 9:54 AM

ಬೆಂಗಳೂರು: 13ನೇ ಆವೃತ್ತಿಯ ವಿಪ್ರೋ ಬೆಂಗಳೂರು ಮ್ಯಾರಥಾನ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ (Wipro Bengaluru Marathon) ಸಂಚಾರ ನಿಷೇಧ ಹಾಗೂ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ. ಕಂಠೀರವ ಕ್ರೀಡಾಂಗಣದಿಂದ ಮುಂಜಾನೆ 4 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ಈ ಮ್ಯಾರಥಾನ್ ನಡೆಯಲಿದೆ. ಡಿಸಿಎಂ ಡಾ ಜಿ.ಪರಮೇಶ್ವರ್, ಸಂಸದ ತೇಜಸ್ವಿ ಸೂರ್ಯ, ಮಂದಿರಾ ಬೇಡಿ, ರಂಜಿತಾ ಘೋಷ್, ಇರಿನಾ ಘೋಷ್ ಸೇರಿದಂತೆ ಹಲವು ಗಣ್ಯರು ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದಾರೆ. 45 ಸಾವಿರಕ್ಕೂ ಹೆಚ್ಚು ಓಟಗಾರರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ.

ಮ್ಯಾರಥಾನ್ ಹಿನ್ನೆಲೆಯಲ್ಲಿ ಕಸ್ತೂರ್ ಬಾ ರಸ್ತೆ, ಎಂ.ಜಿ. ರಸ್ತೆ, ಕ್ವೀನ್ಸ್ ರಸ್ತೆ, ಸೆಂಟ್ರಲ್ ಸ್ಟ್ರೀಟ್ ಸೇರಿದಂತೆ ಕಬ್ಬನ್ ರಸ್ತೆ ಹಾಗೂ ಇತರೆ ಪ್ರಮುಖ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ದಟ್ಟಣೆ ತಪ್ಪಿಸಲು ಜೆ.ಸಿ. ರಸ್ತೆ, ಶಿವಾಜಿನಗರ ಹಾಗೂ ಮಾರ್ಕೆಟ್ ಭಾಗಗಳಿಂದ ಪರ್ಯಾಯ ಮಾರ್ಗಗಳಾದ ಶಾಂತಿನಗರ, ಕೆ.ಆರ್. ವೃತ್ತ, ಬಸವೇಶ್ವರ ವೃತ್ತ ಮತ್ತು ಕನ್ನಿಂಗ್‌ಹ್ಯಾಮ್ ರಸ್ತೆಗಳನ್ನು ಬಳಸುವಂತೆ ಸೂಚಿಸಲಾಗಿದೆ.

ಮ್ಯಾರಥಾನ್ ಮಾರ್ಗದಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸ್ಪರ್ಧಿಗಳು ಯು.ಬಿ. ಸಿಟಿ, ಫ್ರೀಡಂ ಪಾರ್ಕ್, ಸೇಂಟ್ ಜೋಸೆಫ್ ಕಾಲೇಜು ಮೈದಾನ ಹಾಗೂ ಗರುಡ ಮಾಲ್‌ನಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಜೆಸಿ ರಸ್ತೆಯಿಂದ ವಿಧಾನಸೌಧ/ಶಿವಾಜಿನಗರ/ರಾಜಭವನ ಕಡೆಗೆ: ಪೋಲಿಸ್ ಕಾರ್ನರ್, ಕೆಜಿ ರಸ್ತೆ - ಹಳೆ ಅಂಚೆ ಕಚೇರಿ ರಸ್ತೆ - ಕೆಆರ್ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ರಸ್ತೆಯ ಪಶ್ಚಿಮ ಭಾಗದ ಮೂಲಕ ಚಲಿಸಬಹುದು.

Viral Video: ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ'ವರ' ಪ್ರತ್ಯಕ್ಷ; ಏನಾಗಿತ್ತು ಇವರ ಉದ್ದೇಶ?

ಪೂರ್ಣ ಮ್ಯಾರಥಾನ್ (42.2K) ಓಟಕ್ಕೆ ವಿಪ್ರೋದ ಜಾಗತಿಕ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ರಂಜಿತಾ ಘೋಷ್ ಅವರು ಮುಂಜಾನೆ 3:50ಕ್ಕೆ ಚಾಲನೆ ನೀಡಿದರು. ಇನ್ನು ಜನಪ್ರಿಯ ಫಿಟ್‌ನೆಸ್ ಸೆಲೆಬ್ರಿಟಿ ಹಾಗೂ ನಟಿ ಮಂದಿರಾ ಬೇಡಿ ಅವರು ಹಾಫ್ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದ್ದಾರೆ.