ಫೆ.1ರಂದು ಚಿಮುಲ್ ಚುನಾವಣೆ 13 ಸ್ಥಾನಕ್ಕೆ 28 ಅಭ್ಯರ್ಥಿಗಳ ಸ್ಪರ್ಧೆ : ಜೋರಾಗಿದೆ ಸೋಲು ಗೆಲುವಿನ ಲೆಕ್ಕಾಚಾರ
ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಕೋಲಾರ ಹಾಲು ಒಕ್ಕೂಟದ ಪ್ರಥಮ ಚುನಾವಣೆಯಲ್ಲಿ 13 ನಿರ್ದೇಶಕ ಸ್ಥಾನಗಳಿಗೆ 28 ಮಂದಿ ಸ್ಪರ್ಧೆ ಮಾಡಿದ್ದು ಪಕ್ಷಗಳ ಚಿನ್ಹೆ ಇಲ್ಲದಿದ್ದರೂ ಮಾಡಿದ್ದು ಎಲ್ಲರಿಗೂ ರಾಜಕೀಯ ಪಕ್ಷ ಮತ್ತು ಮುಖಂಡರ ಅಭಯ ಇದ್ದೇ ಇದೆ.
-
ಕಾಂಗ್ರೆಸ್ ಅಭ್ಯರ್ಥಿಗಳಿಗೆ ಉಸ್ತುವಾರಿ ಮಂತ್ರಿ, ಶಾಸಕ ಸರಕಾರದ ಅಭಯ : ಎನ್‌ಡಿಎ ಅಭ್ಯರ್ಥಿಗಳಿಗೆ ಸಂಸದರೇ ವಿನಯ
ಚಿಕ್ಕಬಳ್ಳಾಪುರ : ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಕೋಲಾರ ಹಾಲು ಒಕ್ಕೂಟದ ಪ್ರಥಮ ಚುನಾವಣೆಯಲ್ಲಿ 13 ನಿರ್ದೇಶಕ ಸ್ಥಾನಗಳಿಗೆ 28 ಮಂದಿ ಸ್ಪರ್ಧೆ ಮಾಡಿದ್ದು ಪಕ್ಷಗಳ ಚಿನ್ಹೆ ಇಲ್ಲದಿದ್ದರೂ ಮಾಡಿದ್ದು ಎಲ್ಲರಿಗೂ ರಾಜಕೀಯ ಪಕ್ಷ ಮತ್ತು ಮುಖಂಡರ ಅಭಯ ಇದ್ದೇ ಇದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವಂತೆ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಸಾಲದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಕಾಂಗೆಸ್‌ನವರೇ ಆಗಿರುವ ಆಗಿರುವುದು ಸಹಜವಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ವರದಾನ ಆಗಬಹುದು. ವಿಚಿತ್ರ ವೆಂದರೆ ಕೆಲವೆಡೆ ಎಡಿಎ ಅಭ್ಯರ್ಥಿಗಳಿಲ್ಲದ ಕಾರಣ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್‌ನವರೇ ತೊಡೆತಟ್ಟಿರುವುದು ಈ ಚುನಾವಣೆಯ ವಿಶೇಷವಾಗಿದೆ.
ಫೆ ೧ ರ ಭಾನುವಾರ ನಡೆಯುತ್ತಿರುವ ಚಿಮುಲ್ ಚುನಾವಣೆಯಲ್ಲಿ 13 ಸ್ಥಾನಗಳಿಗೆ 28 ಅಭ್ಯರ್ಥಿ ಗಳು ಕಣದಲ್ಲಿದ್ದು . ಇದರಲ್ಲಿ ಯಾರು ಹೆಚ್ಚು ಗೆಲ್ಲುತ್ತಾರೆ ? ಯಾರು ಸೋಲುತ್ತಾರೆ ? ಎಂಬುದು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: Chimul Election: ಚಿಮುಲ್ ಚುನಾವಣೆ: ಗುಡಿಬಂಡೆ ಕ್ಷೇತ್ರದಲ್ಲಿ ಹಣಾಹಣಿ, ಮತದಾರರಿಗೆ ಆಮಿಷದ ಸುರಿಮಳೆ
ಈ ಚುನಾವಣೆಯು ಕಾಂಗ್ರೆಸ್ ಮತ್ತು ಎನ್‌ಡಿಎ ನಡುವಿನ ಜಿದ್ದಾಜಿದ್ದಿ ಎನ್ನಬಹುದಾದರೂ ಅಭ್ಯರ್ಥಿಗಳ ಖಾಸಗಿ ವ್ಯಕ್ತಿತ್ವ ಮತ್ತು ಶಕ್ತಿಯೂ ಪ್ರಧಾನ ಪಾತ್ರ ವಹಿಸುವುದು ಖಚಿತ.
ಚಿಂತಾಮಣಿ, ಶಿಡ್ಲ÷ಘಟ್ಟ, ಬಾಗೇಪಲ್ಲಿ, ಗುಡಿಬಂಡೆ, ಚಿಕ್ಕಬಳ್ಳಾಪುರದಲ್ಲಿ ಎನ್‌ಡಿಎ ವರ್ಸಸ್ ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿದ್ದರೆ ಗೌರಿಬಿದನೂರು ಚಿಕ್ಕಬಳ್ಳಾಪುರ ನಂದಿ ಹೋಬಳಿ ಯಲ್ಲಿ ಕಾಂಗ್ರೆಸ್, ಪಕ್ಷೇತರ ಮತ್ತು ಎನ್‌ಡಿಎ ತ್ರಿಕೋನ ಸ್ಪರ್ಧೆಯನ್ನು ಕಾಣಬಹುದು.
ಇನ್ನೂ ಕೆಲ ಕ್ಷೇತ್ರಗಳಲ್ಲಿ ನೆಕ್ ಟು ನೆಕ್ ಫೈಟ್ ಇದ್ದು ಒಂದು ಅಥವಾ ಎರಡು ಮತಗಳಿಂದ ಸೋಲು ಗೆಲುವಿನ ಲೆಕ್ಕಾಚಾರದ ಮಾತುಗಳು ನಡೆಯುತ್ತಿವೆ.ಹೀಗಾಗಿ ಇಂತಹ ಕ್ಷೇತ್ರಗಳಲ್ಲಿ ಕೊನೆಯ ಕ್ಷಣದಲ್ಲಿ ಸಹ ಮತ ಭೇಟಿ ನಡೆಸಲಾಗುತ್ತಿದೆ ,ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರೇ ಮತದಾರರಾಗಿದ್ದು ಅವರನ್ನು ಡೆಲಿಗೇಟ್ಸ್ ಎಂದು ಕರೆಯಲಾಗಿದೆ. ಇವರಿಗೆ ಕಳೆದ ಒಂದು ವಾರದಿಂದ ಭರ್ಜರಿಯಾಗಿ ಬಾಡೂಟ, ನಗದು ಹಾಗೂ ಗಿಫ್ಟ್ಗಳು ಹರಿದು ಬರುತ್ತಿದ್ದು ಕೆಲವರಿಗೆ ಪ್ರವಾಸದ ಭಾಗ್ಯವನ್ನು ಕಲ್ಪಿಸಲಾಗಿದೆ ಎನ್ನಲಾಗಿದೆ.
ಮಾಜಿ ಶಾಸಕ ಬಚ್ಚೇಗೌಡರ ನಡೆ!!
ಮೆಗಾ ಡೈರಿ ಹತ್ತಿರದಲ್ಲಿ ಇರುವ ನಂದಿ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್‌ಗೆ ಕಾಂಗ್ರೆಸ್ ಇಲ್ಲಿ ಎಡುರಾಳಿಯಾಗಿದೆ. ಇಂತಲ್ಲಿ ಯಾರು ಯಾರಿಗೆ ಬೆಂಬಲ ನೀಡುತ್ತಾರೆ ಎಂಬ ಪ್ರೆಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.ಜೆಡಿಎಸ್‌ನ ಮಾಜಿ ಶಾಸಕ ಬಚ್ಚೇಗೌಡ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ ಮುನೇಗೌಡ ಇಬ್ಬರೂ ಕಾಂಗ್ರೆಸ್ ಸೇರಿದ್ದು ಇವರು ಯಾರಿಗೆ ಸಹಕಾರ ನೀಡುತ್ತಾರೆಂಬುದು ಕಾದು ನೋಡಬೇಕಿದೆ. ಇದರ ಜೊತೆಗೆ ಎನ್‌ಡಿಎ ಕೂಟದ ಮತಗಳು ಯಾರು ಪಡೆಯುತ್ತಾರೆ ಎಂಬುದು ಕೂಡ ಯಕ್ಷ ಪ್ರೆಶ್ನೆಯಾಗಿದೆ.
ಯಾರಿಗೆ ಎಷ್ಟು ಸ್ಥಾನ ?
ಚಿಮುಲ್ ನ ೧೩ ನಿರ್ದೆ?ಶಕ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ನಾವು ಅತ್ಯಧಿಕ ಸ್ಥಾನಗಳನ್ನೂ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಭವಿಷ್ಯ ನುಡಿದಿದ್ದಾರೆ.
ಇದಕ್ಕೆ ಪ್ರತಿಯಾಗಿ ಸಂಸದ ಡಾ ಕೆ. ಸುಧಾಕರ್ ಅವರು ಚಿಮುಲ್ ಚುನಾವಣೆಯಲ್ಲಿ 9 ರಿಂದ 10 ಸ್ಥಾನ ಗೆದ್ದು ಗದ್ದುಗೆ ಏರುತ್ತೇವೆ ಎಂದು ಹೇಳುವುದರ ಮೂಲಕ ಕಾಂಗ್ರೆಸ್‌ಗೆ ಟಕ್ಕರ್ ಕೊಟ್ಟಿದ್ದಾರೆ.
ಮನೆ ಮನೆ ಭೇಟಿ : ಗೆಲ್ಲಲು ಕಠಿಣ ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿತ ಡೆಲಿಗೇಟ್ಸ್ಗಳನ್ನು ಪ್ರವಾಸಕ್ಕೆ ಕಳಿಸಿದ ಅಭ್ಯರ್ಥಿಗಳು , ಇನ್ನುಳಿದ ಡೆಲಿಗೇಟ್ಸ್ಗಳ ಮನೆಗಳಿಗೆ ಅಭ್ಯರ್ಥಿಗಳು ಭೇಟಿ ನೀಡಿ ತಮಗೆ ಮತ ಹಾಕುವಂತೆ ಮನವಿ ಮಾಡುತ್ತಾ ಭರ್ಜರಿಯಾಗಿ ಮತ ಭೇಟೆ ನಡೆಸುತ್ತಿದ್ದಾರೆ.
ಹೊಸಬರಿಗೆ ಅವಕಾಶ: ಇದೆ ಮೊದಲ ಭಾರಿಗೆ ಚಿಮುಲ್ ಚುನಾವಣೆಯಲ್ಲಿ ಹಿರಿಯರಿಗಿಂತ ಹೊಸಬರಿಗೆ ಎರಡೂ ಪಕ್ಷಗಳವರು ಚುನಾವಣೆಯಲ್ಲಿ ಅವಕಾಶ ನೀಡಿದ್ದಾರೆ.ಇಷ್ಟಾದರೂ ಮತ ದಾರ ಪ್ರಭುಗಳು ಯಾರಿಗೆ ಮತ ಹಾಕುತ್ತಾರೆ. ಹಣ ಆಮಿಷ, ಉಡುಗೊರೆಗಳಿಗೋ, ಇಲ್ಲಾ ಸಹಕಾರಿ ಕ್ಷೇತ್ರದ ಬಗ್ಗೆ ಅಪಾರ ಒಲವು ಕಳಕಳಿ ಕಾಳಜಿ ಇರುವ ವ್ಯಕ್ತಿಗಳಿಗೋ ಎಂಬುದು ಕಾದುನೋಡಬೇಕಿದೆ.ಇವೆಲ್ಲಕ್ಕೂ ಭಾನುವಾರವೇ ಉತ್ತರ ದೊರೆಯಲಿದೆ.