ಫೆಬ್ರವರಿ 6,7ಕ್ಕೆ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಮನವಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ/ಸಾಂಸ್ಕೃತಿಕ ಸ್ಪರ್ಧೆಗಳು ನಡೆಯ ಲಿದ್ದು ಅಥ್ಲೆಟಿಕ್ಸ್ ಕ್ರೀಡೆಯಲ್ಲಿ: 35 ಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ 100 ಮೀ, 200 ಮೀ, 400 ಮೀ, ೮೦೦ ಮೀ, ಡಿಸ್ಕಸ್ ಥ್ರೋ, ಗುಂಡುಎಸೆತ, ಭರ್ಜಿ ಎಸೆತ, ಉದ್ದಜಿಗಿತ, ಎತ್ತರ ಜಿಗಿತ, 100 ಮೀ ಹರ್ಡಲ್ಸ್, 100 ಮೀ ರಿಲೇ ಹಾಗೂ 400 ಮೀ ರಿಲೇ ಇರಲಿದೆ
ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಫೆಬ್ರವರಿ ೬ ಮತ್ತು ೭ ರಂದು ನಗರದ ಸರ್.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಎಲ್ಲಾ ಸರಕಾರಿ ನೌಕರರು ಭಾಗವಹಿಸಬೇಕು ಎಂದು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಮನವಿ ಮಾಡಿದರು. -
ಚಿಕ್ಕಬಳ್ಳಾಪುರ: ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಗಳನ್ನು ಫೆಬ್ರವರಿ 6 ಮತ್ತು 7ರಂದು ನಗರದ ಸರ್.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದು ಎಲ್ಲಾ ಸರಕಾರಿ ನೌಕರರು ಭಾಗವಹಿಸಬೇಕು ಎಂದು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಮನವಿ ಮಾಡಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ/ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು ಅಥ್ಲೆಟಿಕ್ಸ್ ಕ್ರೀಡೆಯಲ್ಲಿ: 35 ಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ 100 ಮೀ, 200 ಮೀ, 400 ಮೀ, ೮೦೦ ಮೀ, ಡಿಸ್ಕಸ್ ಥ್ರೋ, ಗುಂಡುಎಸೆತ, ಭರ್ಜಿ ಎಸೆತ, ಉದ್ದಜಿಗಿತ, ಎತ್ತರ ಜಿಗಿತ, 100 ಮೀ ಹರ್ಡಲ್ಸ್, 100 ಮೀ ರಿಲೇ ಹಾಗೂ 400 ಮೀ ರಿಲೇ ಇರಲಿದೆ ಎಂದರು.
ಇದನ್ನೂ ಓದಿ: Chimul Election: ಚಿಮುಲ್ ಚುನಾವಣೆ: ಗುಡಿಬಂಡೆ ಕ್ಷೇತ್ರದಲ್ಲಿ ಹಣಾಹಣಿ, ಮತದಾರರಿಗೆ ಆಮಿಷದ ಸುರಿಮಳೆ
40ಕ್ಕಿಂತ ಕಡಿಮೆ ವಯಸ್ಸಿನ ಪುರುಷರಿಗೆ 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ, 10000 ಮೀ,ಡಿಸ್ಕಸ್ ಥ್ರೋ, ಗುಂಡು ಎಸೆತ, ಭರ್ಜಿ ಎಸೆತ, ಉದ್ದಜಿಗಿತ, ಎತ್ತರ ಜಿಗಿತ, 110 & 400ಮೀ ಹರ್ಡಲ್ಸ್, 4*100 ಮೀ ರಿಲೇ ಹಾಗೂ 4x400 ಮೀ ರಿಲೇ, 40-50 ವರ್ಷ ವಯೋಮಿತಿಯ ಪುರುಷರಿಗೆ 100 ಮೀ, 400ಮೀ, 800 ಮೀ, ಗುಂಡು ಎಸೆತ, ಡಿಸ್ಕಸ್ ಥ್ರೋ , 35-45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 100 ಮೀ, 200ಮೀ, 400ಮೀ, ಉದ್ದಜಿಗಿತ, ಗುಂಡುಎಸೆತ, ಡಿಸ್ಕಸ್ ಥ್ರೋ
50-60 ವರ್ಷ ವಯೋಮಿತಿಯ ಪುರುಷರಿಗೆ 100 ಮೀ, 400ಮೀ, 800 ಮೀ, ಉದ್ದ ಜಿಗಿತ, ಗುಂಡು ಎಸೆತ, ಡಿಸ್ಕಸ್ ಥ್ರೋ ಆಯೋಜಿಸಲಾಗಿದೆ ಎಂದರು.
45-60 ವರ್ಷ ವಯೋಮಿತಿಯ ಮಹಿಳೆಯರಿಗೆ 100 ಮೀ, 200 ಮೀ, ಉದ್ದಜಿಗಿತ, ಗುಂಡು ಎಸೆತ ಕ್ರೀಡೆಗಳನ್ನು ಏರ್ಪಡಿಸಲಾಗಿದೆ. ವೆಟರನ್ಸ್ ಕ್ರೀಡೆ: 45 ವರ್ಷ ವಯೋಮಿತಿಯ ಪುರುಷರಿಗೆ ಬ್ಯಾಡ್ಮಿಂಟನ್ (ಸಿಂಗಲ್ಸ್ & ಡಬಲ್ಸ್) ಟೇಬಲ್ ಟೆನ್ನಿಸ್ (ಸಿಂಗಲ್ಸ್) ಟೆನ್ನಿಸ್ (ಸಿಂಗಲ್ಸ್) 40 ವರ್ಷ ವಯೋಮಿತಿಯ ಮಹಿಳೆಯರಿಗಾಗಿ ಟೇಬಲ್ ಟೆನ್ನಿಸ್ (ಸಿಂಗಲ್), ಬ್ಯಾಡ್ಮಿಂಟನ್ (ಸಿಂಗಲ್ಸ್) ಟೆನಿಕಾಯ್ಟ್ (ಸಿಂಗಲ್ಸ್) ಕ್ರೀಡೆಗಳನ್ನು ಏರ್ಪಡಿಸಲಾಗಿದೆ.
ಗುಂಪು ಸ್ಪರ್ಧೆ: ಪುರುಷರಿಗಾಗಿ ಫುಟ್ಬಾಲ್, ವಾಲಿಬಾಲ್, ಹಾಕಿ, ಕಬ್ಬಡಿ,ಬಾಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಬ್ಯಾಸ್ಕೆಟ್ ಬಾಲ್ ಹಾಗೂ ಥ್ರೋಬಾಲ್ ಕ್ರೀಡೆಗಳು
ಮಹಿಳೆಯರಿಗಾಗಿ ಕಬ್ಬಡಿ, ಬಾಲ್ ಬ್ಯಾಡ್ಮಿಂಟನ್ ಹಾಗೂ ಥ್ರೋಬಾಲ್ ಕ್ರೀಡೆಯನ್ನು ಏರ್ಪಡಿಸಲಾಗಿದೆ. ಮುಂದುವರೆದು ಸಾಂಸ್ಕೃತಿಕ ಸ್ಪರ್ಧೆಗಳ ಪೈಕಿ ಸಂಗೀತ, ನೃತ್ಯ ಹಾಗೂ ವಾದ್ಯ ಸಂಗೀತವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಹಾಗೂ ಅಧ್ಯಕ್ಷರು, ಸರ್ಕಾರಿ ನೌಕರರ ಕ್ರೀಡಾಕೂಟ, ಚಿಕ್ಕಬಳ್ಳಾಪುರ ಇವರಿಂದ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08156-270054 ಗೆ ಸಂಪರ್ಕಿಸಬಹುದು ಎಂದು ಮನವಿ ಮಾಡಿದರು.
ಸುದ್ದಿ ಗೋಷ್ಟಿಯಲ್ಲಿ ರಾಜ್ಯ ಕಾರ್ಯದರ್ಶಿ ಸುನಿಲ್, ತಾಲೂಕು ಅಧ್ಯಕ್ಷರಾದ ಸುಬ್ಬಾರೆಡ್ಡಿ, ಹನುಮಂತರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಬಾಲರಾಜು, ಖಜಾಂಚಿ ಅರುಣ್‌ಕುಮಾರ್, ರಾಜ್ಯ ಪರಿಷತ್ ಸದಸ್ಯ ಅಮರ್ ಮತ್ತಿತರರು ಇದ್ದರು.