ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂಬೇಡ್ಕರ್ ಪ್ರತಿಮೆ ವಿವಾದ: ವಿಧಾನಸೌಧ ಮುತ್ತಿಗೆ ಹಾಕಲು ದಲಿತ ಪರ ಸಂಘಟನೆಗಳು ನಿರ್ಧಾರ

ಸರ್ಕಾರ ಮಾತ್ರ ಗೊತ್ತಿಲ್ಲದಂತೆ ಇದೆ, ಮೇಲ್ನೋಟಕ್ಕೆ ಮಾತ್ರ ಕಾಂಗ್ರೆಸ್ ಅಂಬೇಡ್ಕರ್ ಅನು ಯಾಯಿ ಎಂದು ಹೇಳಿಕೊಳ್ಳುತ್ತಿದೆ. ಅಂಬೇಡ್ಕರ್ ವಿಚಾರದಲ್ಲಿ ಸರ್ಕಾರ ಮಾಡುತ್ತಿರುವ ರಾಜಕೀಯ ಸರಿ ಇಲ್ಲ ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಧೋರಣೆ ನಡೆಸುತ್ತಿದೆ ಎಂದು ಹೇಳಿದರು

ಮಾ.13 ರಂದು ಪಾದಯಾತ್ರೆ ನಡೆಸಿ ಮುತ್ತಿಗೆ ಹಾಕಲಿರುವ ಮುಖಂಡರು

Profile Ashok Nayak Mar 11, 2025 8:55 PM

ಚಿಂತಾಮಣಿ: ನಗರದ ಹೃದಯ ಭಾಗದ ಸರ್ಕಾರಿ ಶಾಲೆಯಲ್ಲಿ ಇಟ್ಟಿರುವ ಅಂಬೇಡ್ಕರ್ ಪ್ರತಿಮೆಗೆ ಕೊಳಕು ಬಟ್ಟೆಯನ್ನು ಕಟ್ಟಿರುವುದನ್ನು ಖಂಡಿಸಿ ದಲಿತಪರ ಸಂಘಟನೆಗಳು ಹಲವು ರೀತಿಯ ಹೋರಾಟಗಳನ್ನು ನಡೆಸಿದ್ದು ಇದೇಗೆ ವಿಧಾನಸೌಧ ಮುತ್ತಿಗೆ ಹಾಕಲು ದಲಿತ ಪರ ಸಂಘಟನೆಗಳು ನಿರ್ಧಾರ ಮಾಡಿದ್ದಾರೆ. ಈ ಕುರಿತು ಇಂದು ನಗರದ ಪ್ರವಾಸಿ ಮಂದಿರದಲ್ಲಿ  ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ದಲಿತ ಮುಖಂಡರಾದ ವಿಜಯನರಸಿಂಹ, ಕವ್ವಾಲಿ ವೆಂಕಟ ರವಣಪ್ಪ, ಜನಾ ರ್ಧನ್, ಕೋಟಗಲ್ ರಮೇಶ್,ಮಾತನಾಡಿ ಕಳೆದ ಆರು ತಿಂಗಳಿನಿಂದ ದಲಿತಪರ ಸಂಘ ಟನೆಗಳು  ಅಂಬೇಡ್ಕರ್ ಪ್ರತಿಮೆಗೆ ಕಟ್ಟಿರುವ ಕೊಳಕು ಬಟ್ಟೆಯನ್ನು ತೆರವುಗೊಳಿಸುವಂತೆ ಹಲವು ರೀತಿಯ ಹೋರಾಟಗಳನ್ನು ನಡೆಸುತ್ತಿದ್ದರು. 

ಇದನ್ನೂ ಓದಿ: Chikkaballapur news: ಒಳಮೀಸಲು ಜಾರಿಗೆ ನಮ್ಮ ಸರಕಾರ ಬದ್ಧ; ಬಲಗೈ ಸಮುದಾಯದ ವಿರೋಧವಿಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ

ಸರ್ಕಾರ ಮಾತ್ರ ಗೊತ್ತಿಲ್ಲದಂತೆ ಇದೆ, ಮೇಲ್ನೋಟಕ್ಕೆ ಮಾತ್ರ ಕಾಂಗ್ರೆಸ್ ಅಂಬೇಡ್ಕರ್ ಅನುಯಾಯಿ ಎಂದು ಹೇಳಿಕೊಳ್ಳುತ್ತಿದೆ. ಅಂಬೇಡ್ಕರ್ ವಿಚಾರದಲ್ಲಿ ಸರ್ಕಾರ ಮಾಡುತ್ತಿರುವ ರಾಜಕೀಯ ಸರಿ ಇಲ್ಲ ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಧೋರಣೆ ನಡೆಸುತ್ತಿದೆ ಎಂದು ಹೇಳಿದರು.

ಅಂಬೇಡ್ಕರ್ ಪ್ರತಿಮೆಗೆ ಕಟ್ಟಿರುವ ಕೊಳಕು ಬಟ್ಟೆಯನ್ನು ತೆರುವುಗೊಳಿಸಲು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿಧಾನಸಭೆಗೆ ಮುತ್ತಿಗೆ ಹಾಕಲು ಚಿಂತಾಮಣಿಯಿಂದ ಮಾ.13ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.