ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಖ್ಯಮಂತ್ರಿ ಸಿದ್ಧರಾಮಯ್ಯ ಗ್ಯಾರೆಂಟಿ ಯೋಜನೆಗಳ ಮೂಲಕ ದಲಿತ ಶೋಷಿತ ಸಮುದಾಯಗಳ ಏಳಿಗಾಗಿ ಶ್ರಮಿಸುತ್ತಿದ್ದಾರೆ

ಮುಷ್ಟೂರಿನ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ನಾನು ಕುಡಿದು ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಅವರಿಗೆ ಹೇಳುತ್ತೇನೆ ನಿಮ್ಮ ಅಂಗಡಿಯಲ್ಲಿ ಮಧ್ಯ ಮಾರಾಟ ಮಾಡುತ್ತಿರುವುದು, ಕುಡಿ ಸುವುದು ನಿಮಗೆ ಗೊತ್ತು. ನನಗಲ್ಲ. ನಾನು ಹರೀಶ್ ಎಂಬ ಎಳಸು ನನ್ನ ಆಭಿವೃದ್ಧಿ ಕೆಲಸದ ಬಗ್ಗೆ ಮಾತನಾಡಿದೆ. ನಾನು 87ರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿ ಏನು ಕೆಲಸ ಮಾಡಿದ್ದೇನೆ. ಎಷ್ಟು ರಸ್ತೆ,ಚರಂಡಿ ಮಾಡಿಸಿದ್ದೇನೆ

ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಕಾಂಗ್ರೆಸ್ ಮುಖಂಡರಾದ ನಾರಾಯಣಮ್ಮ

ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾರಾಯಣಮ್ಮ ಮಾತನಾಡಿದರು.

Profile Ashok Nayak Mar 12, 2025 9:31 PM

ಚಿಕ್ಕಬಳ್ಳಾಪುರ: ನಗರದ 5ನೇ ವಾರ್ಡ್ ಗ್ಯಾಸ್ ನಾಗರಾಜ್ ಶಾಸಕ ಪ್ರದೀಪ್ ಈಶ್ವರ್, ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಪಕ್ಷದ ಮುಖಂಡಳಾಗಿ ಖಂಡಿಸಿದ್ದೇನೆ. ಇದಕ್ಕೆ ಉತ್ತರ ನೀಡಬೇಕಾದ ಗ್ಯಾಸ್‌ ನಾಗರಾಜ್ ಬದಲಿಗೆ ಮುಷ್ಟೂರಿನ ಗ್ರಾ.ಪಂ. ಸದಸ್ಯ ಶಿವಕುಮಾರ್, ಮತ್ತು ಹರೀಶ್ ಟೀಕೆ ಮಾಡಿರುವುದು ಸರಿಯಲ್ಲ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ ಕಿಡಿ ಕಾರಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಗ್ಯಾರೆಂಟಿ ಯೋಜನೆಗಳ ಮೂಲಕ ದಲಿತ ಶೋಷಿತ ಸಮುದಾಯಗಳ ಏಳಿಗಾಗಿ ಶ್ರಮಿಸುತ್ತಿದ್ದಾರೆ. ಆರ್ಥಿಕ ತಜ್ಞರಾದ ಅವರ ಅನುಭವದಷ್ಟು ವಯಸ್ಸಿಲ್ಲದ ಗ್ಯಾಸ್ ನಾಗರಾಜ್ ಅಂಬೇಡ್ಕರ್ ಫೋಟೋ ಇಟ್ಕೊಂಡು ದಲಿತರಿಗೆ ಮೋಸ ಮಾಡ್ತಾರೆ ಅಂತ ಅವರನ್ನು ಹಗುರವಾಗಿ ಮಾತ ನಾಡಿದ್ದರಿಂದ ನಾನು ಮಾತನಾಡಿದ್ದೇನೆ.

ಇದನ್ನೂ ಓದಿ: Chikkaballapur News: ರೌಡಿಶೀಟರ್ ಗಳ ಪರೇಡ್ ನಡೆಸಿದ ಎಸ್ಪಿ ಕುಶಾಲ್ ಚೌಕ್ಸೆ..: ಬಾಲ ಬಿಚ್ಚದಂತೆ ಎಚ್ಚರಿಕೆ ರವಾನೆ..

ನಮ್ಮ ಶಾಸಕ ಪ್ರದೀಪ್ ಈಶ್ವರ್ ಅವರು ದಲಿತರ ಏಳಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಜನಪ್ರೀತಿಗೆ ಪಾತ್ರವಾಗಿದ್ದಾರೆ. ಇವರ ಬಗ್ಗೆ ಕೂಡ ಹಗುರವಾಗಿ ಮಾತನಾಡಿದ ಗ್ಯಾಸ್ ನಾಗರಾಜ್ ಸಾಮರ್ಥ್ಯ ಇದ್ದರೆ ಸ್ವಂತ ಹಣದಲ್ಲಿ ಬಡವರ ಸೇವೆ ಮಾಡಲಿ ಎಂದು ಹೇಳಿ ದರು.

ಮುಷ್ಟೂರಿನ ಗ್ರಾಮಪಂಚಾಯಿತಿ ಸದಸ್ಯ ಶಿವಕುಮಾರ್ ನಾನು ಕುಡಿದು ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಅವರಿಗೆ ಹೇಳುತ್ತೇನೆ ನಿಮ್ಮ ಅಂಗಡಿಯಲ್ಲಿ ಮಧ್ಯ ಮಾರಾಟ ಮಾಡುತ್ತಿರು ವುದು, ಕುಡಿಸುವುದು ನಿಮಗೆ ಗೊತ್ತು. ನನಗಲ್ಲ. ನಾನು ಹರೀಶ್ ಎಂಬ ಎಳಸು ನನ್ನ ಆಭಿವೃದ್ಧಿ ಕೆಲಸದ ಬಗ್ಗೆ ಮಾತನಾಡಿದೆ. ನಾನು 87 ರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿ ಏನು ಕೆಲಸ ಮಾಡಿದ್ದೇನೆ.ಎಷ್ಟು ರಸ್ತೆ,ಚರಂಡಿ ಮಾಡಿಸಿದ್ದೇನೆ ಎಂಬುದನ್ನು ಅವರ ತಾಯಿಗೆ ಕೇಳಿದರೆ ಗೊತ್ತಾ ಗುತ್ತದೆ ಎಂದ ಅವರು ನಾನು ಜಿ.ಪಂ.ಸದಸ್ಯೆ ಆಗಿದ್ದಾಗ ಈತನ ವಯಸ್ಸು ಎರಡೋ ಮೂರೋ ಇತ್ತು ಎಂದು ಗುಡುಗಿದರು.

ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಟಿಕೆ ಹಾಕಿ ಮಾತಾಡುವ ಹರೀಶ್ ಮುಷ್ಟೂರು ಗ್ರಾಮದಲ್ಲಿ ನೀನೇ ವೇದಿಕೆ ಸಿದ್ಧಮಾಡಿ ಚರ್ಚೆಗೆ ಕರೆದರೆ ವೇದಿಕೆಯಲ್ಲಿ ಬಂದು ನನ್ನ ಸಾಧನೆಗಳ ಬಗ್ಗೆ ಹೇಳು ತ್ತೇನೆ ಈ ಕಾರ್ಯಕ್ರಮಕ್ಕೆ ಮಾಧ್ಯಮದವರನ್ನು ಕರೆ ತರುವ ಧೈರ್ಯ ನಿನಗಿದೆಯೇ ಎಂದು ಪ್ರಶ್ನಿಸಿ ದರು.  

ನಮ್ಮ ಗ್ರಾಮದ ಹಿರಿಯ ಮುಖಂಡರಾದ ನಾರಾಯಣಮ್ಮ ಅವರ ಬಗ್ಗೆ ಹಗುರವಾಗಿ ಕ್ಷುಲ್ಲಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮುನಿಕೃಷ್ಣಪ್ಪ ಹರೀಶ್ ಮತ್ತು ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದರು.  

ಈ ವೇಳೆ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮುನಿಕೃಷ್ಣಪ್ಪ,ಮುಖಂಡ ಶ್ರೀನಿವಾಸ, ಕಾಂಗ್ರೆಸ್ ಯುವ ಮುಖಂಡ ಡ್ರೈವರ್ ಶ್ರೀನಿವಾಸ್, ಕಾಂಗ್ರೆಸ್ ಹಿರಿಯ ಮುಖಂಡ ತಿರುಮಲಪ್ಪ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಗಂಗಾಧರ್, ಕಾಂಗ್ರೆಸ್ ಮುಖಂಡ ವೆಂಕಟರಾಯಪ್ಪ ಇದ್ದರು.