ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಸಂಸ್ಮರಣೋತ್ಸವ; ಪ್ರಶಸ್ತಿ ಪ್ರದಾನ, ಅಭಿನಂದನಾ ಸಮಾರಂಭ

Chikkaballapur News: ಪರಮಪೂಜ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಸಂಸ್ಮರಣೋತ್ಸವದ ಅಂಗವಾಗಿ ಚಿಕ್ಕಬಳ್ಳಾಪುರದ ಎಸ್.ಜೆ.ಸಿ.ಐ.ಟಿ. ಕಾಲೇಜು ಸಭಾಂಗಣದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ ಜರುಗಿತು.

ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ  ಸಂಸ್ಮರಣೋತ್ಸವ

-

Profile
Siddalinga Swamy Sep 17, 2026 5:00 PM

ಚಿಕ್ಕಬಳ್ಳಾಪುರ, ಸೆ.17: ನಗರದ ಹೊರವಲಯದ ಎಸ್.ಜೆ.ಸಿ.ಐ.ಟಿ. ಕಾಲೇಜು ಸಭಾಂಗಣದಲ್ಲಿ (Chikkaballapur News) ಪರಮಪೂಜ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಸಂಸ್ಮರಣೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಂಸ್ಮರಣೋತ್ಸವದ ಅಂಗವಾಗಿ, ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಯು.ಪಿ.ಎಸ್‌.ಸಿ ಸಾಧಕರಿಗೆ ಸನ್ಮಾನ, ‘ಸ್ಟಾರ್ ಆಫ್ ಕರ್ನಾಟಕʼ ಪ್ರಶಸ್ತಿ ಪ್ರದಾನ, ಬಿ.ಜಿ.ಎಸ್ ಸಾಧಕ ಪುರಸ್ಕಾರ ಹಾಗೂ ಆಸ್ಟ್ರೇಲಿಯಾದಲ್ಲಿ ‘ಮಣ್ಣಿನ ಮಗʼ ಪ್ರಶಸ್ತಿ ಪಡೆದ ಸೀಕಲ್ ರಾಮಚಂದ್ರಗೌಡ ಅವರಿಗೆ ಅಭಿನಂದನಾ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಸೌಮ್ಯಾನಂದ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.

Bengaluru Infrastructure Crisis: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಮಾಜಿ ಪಿಡಬ್ಲ್ಯೂಡಿ ಕಾರ್ಯದರ್ಶಿ ಡಾ. ಕೃಷ್ಣ ರೆಡ್ಡಿ ವಿನೂತನ ಸಲಹೆ

ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಯು.ಪಿ.ಎಸ್‌.ಸಿ ಸಾಧಕರಿಗೆ ಸನ್ಮಾನ, ‘ಸ್ಟಾರ್ ಆಫ್ ಕರ್ನಾಟಕʼ ಪ್ರಶಸ್ತಿ ಪ್ರದಾನ, ಬಿ.ಜಿ.ಎಸ್ ಸಾಧಕ ಪುರಸ್ಕಾರ ಹಾಗೂ ಆಸ್ಟ್ರೇಲಿಯಾದಲ್ಲಿ ‘ಮಣ್ಣಿನ ಮಗʼ ಪ್ರಶಸ್ತಿ ಪಡೆದ ಸೀಕಲ್ ರಾಮಚಂದ್ರಗೌಡ ಅವರಿಗೆ ಗೌರವಿಸಿ, ಸನ್ಮಾನಿಸಲಾಯಿತು.