ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಶಾಲಾ ವ್ಯಾನ್; ಕೂದಲೆಳೆ ಅಂತರದಲ್ಲಿ ಮಕ್ಕಳು ಪಾರು!
Viral News: ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವ್ಯಾನ್ ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆ ದಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನ ವಿಜಯ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಪವಾಡ ಸದೃಶವಾಗಿ ಮಕ್ಕಳು ಪಾರಾಗಿದ್ದಾರೆ.
ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಶಾಲಾ ವ್ಯಾನ್ -
ಘಾಜಿಯಾಬಾದ್,ಸೆ.17: ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವ್ಯಾನ್ ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆದಿರುವ ಆಘಾತಕಾರಿ ಘಟನೆಯೊಂದು (Viral News) ನಡೆದಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನ ವಿಜಯ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಪವಾಡ ಸದೃಶವಾಗಿ ಮಕ್ಕಳು ಪಾರಾಗಿದ್ದಾರೆ. ವ್ಯಾನ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು ಅಲ್ಲದೆ ಕೆಳಗಿನ ರಸ್ತೆಗೆ ಬಿದ್ದಿದೆ. ಅದೃಷ್ಟವಶಾತ್ ವ್ಯಾನ್ ಮಗುಚಿ ಬೀಳದೇ ಇರುವ ಕಾರಣ ಯಾವುದೇ ಅಪಾಯ ಸಂಭವಿಸದೇ ಮಕ್ಕಳು ಹಾಗೂ ಚಾಲಕ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಜಯ ನಗರದ ಡಿಎವಿ ಶಾಲೆಯ ಬಳಿ ಬೆಳಿಗ್ಗೆ 7:30 ರ ಸುಮಾರಿಗೆ ಈ ಘಟನೆಯೂ ನಡೆದಿದೆ. ಹಠಾತ್ ನಿಯಂತ್ರಣ ತಪ್ಪಿದರೂ ವ್ಯಾನ್ ಉರುಳಲಿಲ್ಲ, ಇದರಿಂದಾಗಿ ಹೆಚ್ಚು ಗಂಭೀರ ಅಪಘಾತವಾಗಬಹುದಾಗಿದ್ದ ದುರ್ಘಟನೆ ತಪ್ಪಿದೆ. ವ್ಯಾನ್ ಕೆಳಗೆ ಬೀಳುತ್ತಿದ್ದಂತೆ ಅದರಲ್ಲಿದ್ದ ಮಕ್ಕಳು ಭಯದಿಂದ ಚೀರಾಡಲು ಪ್ರಾರಂಭಿಸಿದ್ದಾರೆ. ಈ ಸದ್ದು ಕೇಳಿ ಸುತ್ತಮುತ್ತಲಿನ ಸಾರ್ವಜನಿಕರು ತಕ್ಷಣವೇ ಧಾವಿಸಿದ್ದಾರೆ.
ವಿಡಿಯೋ ನೋಡಿ:
उत्तर प्रदेश: गाजियाबाद में स्कूली वैन अनियंत्रित होकर पेड़ तोड़ते हुए सर्विस रोड पर जा गिरी। हादसे में किसी भी बच्चे को चोट नहीं आई है। pic.twitter.com/wBsknPBJq5
— Sachin Gupta (@Sachingupta) September 17, 2026
ಆದರೆ ಅಪಘಾತ ಸಂಭವಿಸಿದಾಗ ಸ್ಥಳದಲ್ಲಿ ಹತ್ತಿರ ನಡೆದು ಕೊಂಡು ಹೋಗುತ್ತಿದ್ದ ದಾರಿಹೋಕರೊಬ್ಬರು ವಾಹನದಿಂದ ಕೆಲವೇ ಹೆಜ್ಜೆಗಳ ದೂರದಲ್ಲಿದ್ದರು.ಅವರು ಕೂಡ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ವ್ಯಾನ್ ಬಳಿ ಓಡಿಬಂದು ಕಿಟಕಿಯನ್ನು ತೆರೆದು ಮಕ್ಕಳನ್ನು ಹೊರತೆಗೆಯಲು ನೆರವಾಗಿದ್ದಾರೆ. ಸ್ಥಳೀಯರು ಕೂಡ ತಕ್ಷಣಕ್ಕೆ ಸ್ಪಂದಿಸಿದ್ದಾರೆ.
ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಬಹಳಷ್ಟು ವೈರಲ್ ಆಗಿವೆ. ಶಾಲಾ ವ್ಯಾನ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ನಂತರ ಕೆಳಗಿನ ಸರ್ವಿಸ್ ಲೇನ್‌ನಲ್ಲಿ ಇಳಿ ಯುವುದನ್ನು ತೋರಿಸುತ್ತದೆ. ಶಾಲಾ ವ್ಯಾನ್ ನಿಯಂತ್ರಣ ಕಳೆದುಕೊಂಡಿದ್ದು ಹೇಗೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.