ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA KH Puttaswamy Gowda: ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಿ : ಶಾಸಕ ಪುಟ್ಟಸ್ವಾಮಿಗೌಡ ತಾಕೀತು

ಗಂಗಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಒಂದಷ್ಟು ಕಾಮಗಾರಿಗಳು ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಕೋರಿಕೆಯಂತೆ ಗಂಗಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳ ಲಾಗುವುದು

ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಿ

-

Ashok Nayak Ashok Nayak Oct 17, 2025 11:06 PM

ಗೌರಿಬಿದನೂರು: ಸರ್ಕಾರಿ ಶಾಲೆಗಳು ಎಂದರೆ ದೇವಾಲಯಗಳಂತೆ,ಉತ್ತಮ ಗುಣಮಟ್ಟದೊಂದಿಗೆ ನಿಗಧಿತ ಅವಧಿಯೊಳಗೆ ಶಾಲಾ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಿಳಿಸಿದರು.

ತಾಲೂಕಿನ ಕೆಂಗೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಸುಮಾರು 14.5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ಶಾಲಾ ಕೊಠಡಿಯನ್ನು ನಿರ್ಮಿಸಲು ಭೂಮಿ ಪೂಜೆ ಯನ್ನು ನೆರೆವೇರಿಸಿ ಮಾತನಾಡಿದರು. ಈಗಾಗಲೆ ಗಂಗಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಒಂದಷ್ಟು ಕಾಮಗಾರಿಗಳು ಪ್ರಗತಿಯಲ್ಲಿದೆ,ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಕೋರಿಕೆಯಂತೆ ಗಂಗಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳ ಲಾಗುವುದು ಎಂದರು.

ಇದನ್ನೂ ಓದಿ: MLA K.H. Puttaswamy Gowda: ಭಾರತೀಯರಿಗೆ ಸರ್ವಪಲ್ಲಿ ರಾಧಾಕೃಷ್ಣನ್ ಎಂದೆಂದಿಗೂ ಸ್ಪೂರ್ತಿಯ ಧೃವತಾರೆ : ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ಇದೇ ಸಂಧರ್ಭದಲ್ಲಿ ಕೆಂಗೇನಹಳ್ಳಿಯ ಗ್ರಾಮಸ್ಥರು ಕೆರೆ ಕಾಲುವೆಗಳು ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿ ಹೋಗಿದೆ,ಕಾಲುವೆಯ ಮಣ್ಣನ್ನು ತೆಗೆಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿ,ಶಾಸಕರಿಗೆ ಮನವಿಯನ್ನು ಸಲ್ಲಿಸಿದರು.

ಗ್ರಾಮಸ್ಥರ ಮನವಿಗೆ ತಕ್ಷಣವೇ ಸ್ಪಂದಿಸಿದ ಶಾಸಕರು ಜೆಸಿಬಿ ಯಂತ್ರವನ್ನು ಕಳುಹಿಸಿ ಕೆರೆ ಕಾಲುವೆಯ ಮಣ್ಣನ್ನು ತೆಗೆಸಿಕೊಡುವುದಾಗಿ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ, ಪಂಚಾಯತ್ ರಾಜ ಇಲಾಖೆಯ ಎಇಇ ನಾರಾಯಣಪ್ಪ, ಮುಖಂಡರಾದ ಸದಾಶಿವಪ್ಪ,ಸಿದ್ದಪ್ಪ, ಲಕ್ಷ್ಮೀನಾರಾಯಣ್ ಪಟೇಲ್ ,ಸಾಗಾನಹಳ್ಳಿ ಶಿವಕುಮಾರ್, ಹನುಮಂತರಾಯಪ್ಪ ,ಉಮಾಶಂಕರರೆಡ್ಡಿ, ಜಿಸಿ ಅಶೋಕ್ ,ಗಂಗರಾಜು,ಶಂಕರ್ ,ಪ್ರಸಾದ್,ಚಂದ್ರ ,ನರಸಿಂಹಮೂರ್ತಿ ,ಕಲ್ಯಾಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.