ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Legislative Council Member T.A. Saravana: ಗುಡಿಬಂಡೆ ಪಟ್ಟಣಕ್ಕೆ ಭರವಸೆ ಸಮಿತಿ ಅಧ್ಯಕ್ಷ ಶರವಣ ಭೇಟಿ, ಸಾರ್ವಜನಿಕರಿಂದ ಸಮಸ್ಯೆ ಆಲಿಸಿದ ಎಂ.ಎಲ್.ಸಿ

ಭರವಸೆ ಸಮಿತಿ ವತಿಯಿಂದ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಮ್ಮ ಸರ್ಕಾರ ಹಾಗೂ ಸದನದಲ್ಲಿ ಚರ್ಚೆಯಾದ ಭರವಸೆಗಳ ಸಂಬಂಧ ಈ ಭೇಟಿ ಮಾಡಲಾಗಿದೆ. ಆದರೆ ಸದನದಲ್ಲಿ ನಡೆದ ಭರವಸೆಗಳು ಇನ್ನೂ ಭರವಸೆಯಾಗಿಯೇ ಉಳಿದಿದ್ದು, ಈ ಸಂಬಂಧ ಸದನದಲ್ಲೂ ಚರ್ಚೆ ನಡೆದಿದ್ದು, ಜನರಿಂದ ದೂರುಗಳು ಸಹ ಬಂದಿದೆ

ಗುಡಿಬಂಡೆ ಪಟ್ಟಣಕ್ಕೆ ಭರವಸೆ ಸಮಿತಿ ಅಧ್ಯಕ್ಷ ಶರವಣ ಭೇಟಿ

ಪಟ್ಟಣದ ಕನ್ನಿಕಾಪರಮೇಶ್ವರಿ ದೇವಾಲಯದ ಬಳಿ ರಾಜ್ಯ ಭರವಸೆ ಸಮಿತಿಯ ಅಧ್ಯಕ್ಷ ಎಂ.ಎಲ್.ಸಿ ವಿಧಾನಪರಿಷತ್ ಸದಸ್ಯ ಟಿ.ಎ ಶರವಣ ರವರಿಗೆ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. -

Ashok Nayak Ashok Nayak Oct 17, 2025 10:55 PM

ಗುಡಿಬಂಡೆ: ರಾಜ್ಯ ಭರವಸೆ ಸಮಿತಿಯ ಅಧ್ಯಕ್ಷ ಎಂ.ಎಲ್.ಸಿ, ವಿಧಾನಪರಿಷತ್ ಸದಸ್ಯ ಟಿ.ಎ ಶರವಣ ಗುಡಿಬಂಡೆ ಪಟ್ಟಣಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. 

ಇದೇ ಸಮಯದಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಲು ವಿಳಂಬ ತೋರುತ್ತಿರುವ ಅಧಿಕಾರಿ ಗಳಿಗೆ ತ್ವರಿತಗತಿಯಲ್ಲಿ ಜನರ ಕೆಲಸ ಮಾಡಿಕೊಡಲು ಸೂಚನೆ ನೀಡಿದರು.

ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಭರವಸೆ ಸಮಿತಿ ವತಿಯಿಂದ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಮ್ಮ ಸರ್ಕಾರ ಹಾಗೂ ಸದನದಲ್ಲಿ ಚರ್ಚೆಯಾದ ಭರವಸೆಗಳ ಸಂಬಂಧ ಈ ಭೇಟಿ ಮಾಡಲಾಗಿದೆ. ಆದರೆ ಸದನದಲ್ಲಿ ನಡೆದ ಭರವಸೆಗಳು ಇನ್ನೂ ಭರವಸೆಯಾಗಿಯೇ ಉಳಿದಿದ್ದು, ಈ ಸಂಬಂಧ ಸದನದಲ್ಲೂ ಚರ್ಚೆ ನಡೆದಿದ್ದು, ಜನರಿಂದ ದೂರುಗಳು ಸಹ ಬಂದಿದೆ. ಜನರಿಗೆ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: Gudibande News: ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಗೆ ಮೋದಿ ಚಾಲನೆ, ಗುಡಿಬಂಡೆಯಲ್ಲಿ ವೀಕ್ಷಣೆ

ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣದಲ್ಲಿ ಆಸ್ತಿ ಕಳೆದುಕೊಂಡವರಿಗೆ ನಿವೇಶನ ವಾಗಲೀ ಅಥವಾ ಪರಿಹಾರವಾಗಲಿ ನೀಡಿಲ್ಲ. ಇದರಿಂದ ಆಸ್ತಿ ಕಳೆದುಕೊಂಡವರಿಗೆ ಅನ್ಯಾಯ ವಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ ಸಹ ಪ್ರಗತಿ ಪರಿಶೀಲನಾ ಸಭೆ ಸಹ ನಡೆಸಲಾಗಿದೆ. ಮುಂದಿನ 15 ದಿನಗಳ ಒಳಗಾಗಿ ಗುಡಿಬಂಡೆ ಪಟ್ಟಣದ ಜನತೆಗೆ ರಸ್ತೆ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಚನೆ ನೀಡಿದ್ದೇನೆ. ಜನರಿಗೆ ನಮ್ಮ ಭರವಸೆ ಸಮಿತಿಯ ಮೂಲಕ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಇದೇ ಸಮಯದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆ ಕುರಿತು ಮಾತನಾಡುತ್ತಾ, ರಾಜ್ಯದಲ್ಲಿ ಯಾವ ಕಾರಣಕ್ಕಾಗಿ ಈ ಸಮೀಕ್ಷೆ ನಡೆಯುತ್ತಿದೆ ಎಂಬುದು ತಿಳಿದಿಲ್ಲ. ಈಗಾಗಲೇ ನ್ಯಾಯಾಲಯ ಸಹ ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟವಾಗಿ ತಿಳಿಸಿದೆ. ಇದು ಜನಗಣತಿಯೋ, ಜಾತಿ ಗಣತಿಯೋ, ಆರ್ಥಿಕ ಗಣತಿಯೋ, ವೈಯುಕ್ತಿಕ ಗಣತಿಯೋ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು. ಈ ಸಮೀಕ್ಷೆಗಳನ್ನು ಮಾಡುವ ಅಧಿಕಾರ ಇರೋದು ಕೇಂದ್ರ ಸರ್ಕಾರಕ್ಕೆ ಮಾತ್ರ. ಈಗಾಗಲೇ ಕಾಂತರಾಜು ವರದಿಯಂತೆ ಸರ್ವೆ ನಡೆಸಿ ಕೋಟ್ಯಂತರ ಹಣ ವ್ಯಯಿಸಿದೆ. ಇದೇ ಇನ್ನೂ ಮಂಡನೆಯಾಗಿಲ್ಲ. ಇದೀಗ ಮತ್ತೊಂದು ಸಮೀಕ್ಷೆ ಏಕೆ ಬೇಕಿತ್ತು. ಅಂತಹುದರಲ್ಲಿ ಈ ಸಮೀಕ್ಷೆ ನಡೆಸುತ್ತಿರುವ ಉದ್ದೇಶ ನಮಗೆ ತಿಳಿದಿಲ್ಲ. ಈ ಸಮೀಕ್ಷೆಯಾದರೂ ಕಾಂತರಾಜು ವರದಿಯಂತೆ ಮೂಲಕೆಗುಂಪಾಗದೇ, ಜನರಿಗೆ ಅನುಕೂಲ ವಾಗುವಂತಾಗಲಿ ಎಂದರು.

ಇನ್ನೂ ಈ ಸಮಯದಲ್ಲಿ ಗುಡಿಬಂಡೆ ಸಾರ್ವಜನಿಕರು ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ಸರಿಯಾಗಿ ಜನರ ಕೆಲಸಗಳು ನಡೆಯುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ರವರಿಗೆ ದೂರುಗಳನ್ನು ನೀಡಿದರು. ಈ ಸಮಯದಲ್ಲಿ ವಿಧಾನಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಪ್ರತಾಪ್ ಸಿಂಹ ನಾಯ್ಕ, ಆರತಿಕೃಷ್ಣ, ಕಾರ್ಯದರ್ಶಿ ನಿರ್ಮಲ, ಉಪ ಕಾರ್ಯದರ್ಶಿ ಜಲಜಾಕ್ಷಿ ವಿಭಾಗೀಯ ಅಧಿಕಾರಿ ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.