ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಹೆರಿಗೆಯಾದ 9 ದಿನದ ನಂತರ ಸಾವು- ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ

ಮಾ.4ರಂದು ಸಿಸೇರಿಯನ್ ಮೂಲಕ ವೈದ್ಯೆ ಡಾ.ರೇಣುಕಾ ಹೆರಿಗೆ ಮಾಡಿಸಿದ್ದರು. ಹೆರಿಯಾದ ಒಂದು ವಾರದ ಕಾಲ ಅನುಶ್ರೀ ಆರೋಗ್ಯವಾಗಿದ್ದಳು. ಇನ್ನೇನು ತಾಯಿ ಮಗುವನ್ನು ಡಿಸ್ಚಾರ್ಜ್ ಮಾಡಬೇಕಿತ್ತು. ಆದರೆ ಬುಧವಾರ ಅನುಶ್ರೀ ಆರೋಗ್ಯದಲ್ಲಿ ಏರುಪೇರಾಗಿದೆ, ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಹಲೋಕ ತ್ಯಜಿಸಿ ದ್ದಾರೆ.

ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದ ಬಾಣಂತಿ ಸಾವು

ಮೃತೆ ಅನುಶ್ರೀ ಮತ್ತು ಗಂಡನ

Profile Ashok Nayak Mar 13, 2025 9:51 PM

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಾಣಂತಿಯರ ಸರಣಿ ಸಾವುಗಳ ಕಹಿಯನ್ನು ಮರೆಯುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಬಾಣಂತಿಯೊಬ್ಬರ ಸಾವು ಆಗಿದೆ. ಹೆರಿಗೆಯಾದ 9 ದಿನಗಳ ನಂತರ ಬಾಣಂತಿ ಮೃತಪಟ್ಟಿದ್ದು, ಬಾಣಂತಿ ಕಡೆ ಯವರ ರೋಧನೆ ಮುಗಿಲು ಮುಟ್ಟಿದ್ದು ಇನ್ನು 2 ದಿನಗಳ ಮಗು ಆರೋಗ್ಯವಾಗಿದ್ದು ತಾಯಿ ಇಲ್ಲದೇ ಅನಾಥವಾಗಿದೆ. ಗುಡಿಬಂಡೆ ತಾಲೂಕಿನ ಅಪ್ಪಿರೆಡ್ಡಿಪಲ್ಲಿ ಗ್ರಾಮದ ಅನುಶ್ರೀ ಎಂಬ ಯುವತಿಯನ್ನು ಚಿಂತಾಮಣಿ ತಾಲೂಕಿನ ಚೊಕ್ಕರೆಡ್ಡಿಹಳ್ಳಿಗೆ ಮದುವೆ ಮಾಡಿಕೊಡಲಾಗಿತ್ತು. ಮೊದಲ ಹೆರಿಗೆಗೆ ತವರಿಗೆ ಬಂದಿದ್ದ ಅನುಶ್ರೀ ಅವರನ್ನು ಮಾ.೩ ರಂದು ಹೆರಿಗೆಗಾಗಿ ನಗರದ ತಾಯಿ ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ: Chikkaballapur Crime: ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಸಾವು

ಮಾ.4ರಂದು ಸಿಸೇರಿಯನ್ ಮೂಲಕ ವೈದ್ಯೆ ಡಾ.ರೇಣುಕಾ ಹೆರಿಗೆ ಮಾಡಿಸಿದ್ದರು. ಹೆರಿಯಾದ ಒಂದು ವಾರದ ಕಾಲ ಅನುಶ್ರೀ ಆರೋಗ್ಯವಾಗಿದ್ದಳು. ಇನ್ನೇನು ತಾಯಿ ಮಗುವನ್ನು ಡಿಸ್ಚಾರ್ಜ್ ಮಾಡಬೇಕಿತ್ತು. ಆದರೆ ಬುಧವಾರ ಅನುಶ್ರೀ ಆರೋಗ್ಯದಲ್ಲಿ ಏರುಪೇರಾಗಿದೆ, ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಹಲೋಕ ತ್ಯಜಿಸಿ ದ್ದಾರೆ.

5 ದಿನಗಳ ಕಾಲ ಬಾಣಂತಿ ಅನುಶ್ರೀ ಆಸ್ಪತ್ರೆಯಲ್ಲಿಯೇ ಇದ್ದು, ಮಾ.9ರಂದು ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅನುಶ್ರೀ ಅವರಿಗೆ ಜ್ವರ ಕಾಣಿಸಿ ಕೊಂಡಿದ್ದು, ವಾಂತಿ ಮತ್ತು ಬೇಧಿಯಾಗುತ್ತಿದೆ ಎಂದು ಮತ್ತೆ ತಾಯಿ ಮಕ್ಕಳ ಆಸ್ಪತ್ರೆಗೆ ಸೇರಿದ್ದಾರೆ. ಬಾಣಂತಿಯನ್ನು ಪರೀಕ್ಷೆ ಮಾಡಿದ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದ್ದು, ಏಕಾಏಕಿ ಜ್ವರ ಕಾಣಿಸಿಕೊಳ್ಳುವ ಜೊತೆಗೆ ಬಿಪಿ ಕಡಿಮೆಯಾಗಿ ಪಲ್ಸ್ ರೇಟ್ ಕೂಡಾ ಕುಸಿದಿದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ಅಲ್ಲದೆ ಎಕೋ ಮಾಡಿದ್ದು, ಈ ವೇಳೆ ಬಾಣಂತಿ ಅನುಶ್ರೀ ಅವರಿಗೆ ಹೃದಯ ಸಂಬಂಧಿ ಕಾಯಿಲೆಯು ಇರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಮಂಗಳವಾರ ಮಧ್ಯಾಹ್ನ ಬೆಂಗಳೂ ರಿನ ವಾಣಿ ವಿಲಾಸ ಆಸ್ಪತ್ರೆಗೆ ವೈದ್ಯರು ಕಳುಹಿಸಿದ್ದಾರೆ. ಆದರೆ ವಾಣಿ ವಿಲಾಸ ಆಸ್ಪತ್ರೆ ಯಲ್ಲಿ ಚಿಕಿತ್ಸೆಯು ಫಲಕಾರಿಯಾಗದೆ ಬಾಣಂತಿಯು ಮೃತಪಟ್ಟಿದ್ದು, ಇದಕ್ಕೆ ಹೃದಯ ಸಂಬAಧಿ ಕಾಯಿಲೆಯೇ ಕಾರಣವಾಗಿರಬಹುದೆಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾ ಸರ್ಜನ್ ಮಂಜುಳಾದೇವಿ, ಹೆರಿಗೆ ಸಮಯದಲ್ಲಿ ಹೃದ ಯದ ಮೇಲೆ ಒತ್ತಡ ಬೀಳುವ ಸಾಧ್ಯತೆಗಳಿದೆ. ಅದಕ್ಕೆ ಮೊದಲೂ ಹೃದಯ ಸಂಬಂಧಿ ಕಾಯಿಲೆ ಇರಬಹುದು, ಸಾವು ಆಗಿರೋದು ನಮಗೂ ನೋವು ತಂದಿದೆ. ಅನುಶ್ರೀ ಅವರು ಅಪ್ಪಿರೆಡ್ಡಿಹಳ್ಳಿಯಿಂದ ಬಂದು ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಮಾ.೩ರ ಸಂಜೆ 4 ಗಂಟೆಗೆ ಸೇರಿದ್ದಾರೆ, 40 ವಾರ ಪೂರ್ಣವಾಗಿ, ಹೆರಿಗೆ ನೋವು ಎಂದು ಬಂದು ಸೇರಿದ್ದಾರೆ ಎಂದು ತಿಳಿಸಿದರು.

ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿ ನೀರು ಕಡಿಮೆ ಇರುವುದು ಬೆಳಕಿಗೆ ಬಂದಿದೆ. ದಿನ ತುಂಬಿದೆ, ನೀರು ಕಡಿಮೆ ಇದೆ ಎಂದು ಹೆರಿಗೆಗೆ ಪ್ರಯತ್ನ ಮಾಡಿದ್ದಾರೆ. ಆದರೆ ಒಂದು ದಿನ ಪೂರ್ತಿ ನಾರ್ಮಲ್ ಹೆರಿಗೆ ಮಾಡಲು ಪ್ರಯತ್ನ ಮಾಡಿದರೂ ಆಗದ ಕಾರಣ ಮಾರನೇ ದಿನ ಮಾ.4ರ ಬೆಳಗ್ಗೆ 9.45ಕ್ಕೆ ಸಿಸೇರಿಯನ್ ಮಾಡಿದ್ದಾರೆ ಎಂದು ಹೇಳಿದರು.

ಹೆರಿಗೆಯಾಗಿ ಮಗು 2.8 ಕೆಜಿ ಇತ್ತು, ಆಪರೇಷನ್ ಮಾಡಿ, ವಾರ್ಡಿಗೆ ಶಿಫ್ಟ್ ಮಾಡಲಾಗಿದೆ. ಮಗುವಿಗೆ ತಾಯಿ ಹಾಲು ನೀಡದೆ ಬೇರೆ ಹಾಲು ನೀಡಿದ ಕಾರಣ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 5 ದಿನ ಯಾವುದೇ ಸಮಸ್ಯೆ ಇರಲಿಲ್ಲ, 5ನೇ ದಿನ ಹೋಗಬಹುದು ಎಂದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಮಾ.10 ರಂದು ಮತ್ತೆ ಜ್ವರ ಮತ್ತು ವಾಂತಿ ಬೇಧಿ ಆಗಿದೆ. ಆಗಲೂ ಆಸ್ಪತ್ರೆಯಲ್ಲಿ ಸೇರಿಸಿಕೊಂಡು ಚಿಕಿತ್ಸೆ ನೀಡಲಾಗಿದೆ, ಆಸ್ಪತ್ರೆಯಿಂದ ಎಲ್ಲಿಯೂ ನಿರ್ಲಕ್ಷ್ಯ ತೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜ್ವರ ಮತ್ತು ವಾಂತಿ ಬೇಧಿ ಎಂದು ಬಂದು ಆಸ್ಪತ್ರೆಗೆ ಸೇರಿದರು, ಆಂಟಿಬಯೋಟಿಕ್ ಸೇರಿ ಚಿಕಿತ್ಸೆ ನೀಡಲಾಗಿದೆ. ರಾತ್ರಿ 11.45ಕ್ಕೆ ಜ್ವರ ಬಂದು ಬಿಪಿ ತುಂಬಾ ಕಡಿಮೆಯಾಗಿ, ಪಲ್ಸ್ ರೇಟ್ ಕಡಿಮೆಯಾಯಿತು. ಕೂಡಲೇ ಅವರನ್ನು ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡ ಲಾಯಿತು, 2 ಗಂಟೆಗೆ ಮತ್ತೆ ಬಿಪಿ ನಾರ್ಮಲ್‌ಗೆ ಬಂದು, ಜ್ವರವೂ ಕಡಿಮೆಯಾಯಿತು. ಆದರೆ ಮಾ.11ರಂದು ಬೆಳಗ್ಗೆ 7ಗಂಟೆಗೆ ಉಸಿರಾಟಕ್ಕೆ ತೊಂದರೆಯಾಯಿತು, ಎರಡು ಬಾರಿ ಹೃದಯಾಘಾತಕ್ಕೆ ಒಳಗಾದ ರೀತಿಯಲ್ಲಿ ಕಂಡ ಕಾರಣ ಎಕೋ ಮಾಡಿದಾಗ ಅವರಿಗೆ ಹೃದಯ ಸಂಬAಧಿ ಸಮಸ್ಯೆ ಇರೋದು ತಿಳಿಯಿತು, ಹಾಗಾಗಿ ಅವರನ್ನು ಕೂಡಲೇ ವಾಣಿ ವಿಳಾಸಕ್ಕೆ ಕಳುಹಿಸಲಾಯಿತು ಎಂದು ತಿಳಿಸಿದ್ದಾರೆ.