Strike Success: ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಮಾಡದಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ( ಜೆಸಿಟಿಯು) ಮುಷ್ಕರ ಯಶಸ್ವಿ
ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ) ಕರ್ನಾಟಕ ರಾಜ್ಯ ರೈತ ಸಂಘ (ನಾರಾಯಣ ರೆಡ್ಡಿ ಬಣ), ಸಿಐಟಿಯು, ಡಿವೈಎಫ್ಐ,ಎಸ್.ಎಫ್.ಐ ,ದಲಿತ ಹಕ್ಕುಗಳ ಸಮಿತಿ,ಅಕ್ಷರ ದಾಸೋಹ, ಅಂಗನವಾಡಿ ಕಾರ್ಯಕರ್ತರು, ಹಾಗೂ ಕಾರ್ಮಿಕ ಸಂಘಟನೆ ಗಳು ಕೆಲಸದಿಂದ ಹೊರಗುಳಿದು ಅಖಿಲ ಭಾರತ ಮುಷ್ಕರದಲ್ಲಿ ಭಾಗವಹಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.


ಬಾಗೇಪಲ್ಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೋರೆಟ್ ಬಂಡವಾಳಗಾರರ ಹಿತದೃಷ್ಟಿ ಯಿಂದ ಕಾರ್ಮಿಕರ ರಕ್ಷಣೆಗಾಗಿ ಇದ್ದ ಕಾನೂನುಗಳನ್ನು ರದ್ದುಗೊಳಿಸಿ ನಾಲ್ಕು ಸಂಹಿತೆಗಳನ್ನಾಗಿ ಅನುಷ್ಠಾನಕ್ಕೆ ತಂದು ಕಾರ್ಮಿಕ ಹಕ್ಕುಗಳನ್ನು ಕಸಿದುಕೊಂಡು ಮತ್ತಷ್ಟು ಶೋಷಣೆ ಮಾಡಲು ಮುಂದಾಗಿದೆ ಎಂದು ಕಾರ್ಮಿಕ ಸಂಘಗಳ ಜಂಟಿ ಸಮಿತಿ ಮುಖಂಡ ಎಂ.ಪಿ.ಮುನಿವೆಂಕಟಪ್ಪ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ) ಕರ್ನಾಟಕ ರಾಜ್ಯ ರೈತ ಸಂಘ (ನಾರಾಯಣ ರೆಡ್ಡಿ ಬಣ), ಸಿಐಟಿಯು, ಡಿವೈಎಫ್ಐ,ಎಸ್.ಎಫ್.ಐ ,ದಲಿತ ಹಕ್ಕುಗಳ ಸಮಿತಿ,ಅಕ್ಷರ ದಾಸೋಹ, ಅಂಗನವಾಡಿ ಕಾರ್ಯಕರ್ತರು, ಹಾಗೂ ಕಾರ್ಮಿಕ ಸಂಘಟನೆ ಗಳು ಕೆಲಸದಿಂದ ಹೊರಗುಳಿದು ಅಖಿಲ ಭಾರತ ಮುಷ್ಕರದಲ್ಲಿ ಭಾಗವಹಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಗೂಳೂರು ವೃತ್ತದಿಂದ ಹೊರಟ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: Chikkaballapur News: ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ರಸ್ತೆ ತಡೆ ನಡೆಸಿದ ರೈತ, ಕಾರ್ಮಿಕ ಸಂಘಟನೆಗಳು
ತದನಂತರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆಯಲ್ಲಿ ಕುಳಿತ ಪ್ರತಿಭಟನಾ ಕಾರರು ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು. ತದ ನಂತರ ಎಂ.ಪಿ.ಮುನಿ ವೆಂಕಟಪ್ಪ ಮಾತನಾಡಿ ದೇಶದಲ್ಲಿ ಜಾರಿ ಮಾಡಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ಹಿಂತೆಗೆದು ಕೊಳ್ಳುವುದೂ ಸೇರಿದಂತೆ ಪಿಎಸ್‌ಯುಗಳು ಮತ್ತು ಸಾರ್ವಜನಿಕ ಸೇವೆಗಳ ಖಾಸಗೀಕರಣ ಮಾಡುವುದರಿಂದ ಹಿಂದೆ ಸರಿಯಬೇಕು, ಕನಿಷ್ಠ ವೇತನ ಖಾತರಿ ಮತ್ತು ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸುವುದು, ಗುತ್ತಿದೆ ನಿಷೇಧ ಮತ್ತು ಶಾಶ್ವತ ಉದ್ಯೋಗ ಕಲ್ಪಿಸುವುದು ಆರೋಗ್ಯ, ಶಿಕ್ಷಣ ಮತ್ತು ಸಾರ್ವಜನಿಕ ಕಲ್ಯಾಣದಲ್ಲಿ ಹೆಚ್ಚಿನ ಹೂಡಿಕೆ 15 ಕ್ಕೂ ಹೆಚ್ಚು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳಿಂದ ಜಂಟಿ ಹೋರಾಟ ಮಷ್ಕರ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಿದರು.
ಎಸ್. ಎಫ್ ಐ ಜಿಲ್ಲಾಧ್ಯಕ್ಷ ಸೋಮಶೇಖರ್ ಮಾತನಾಡಿ ಒಂದೇ ಧರ್ಮ, ಏಕ ಸಂಸ್ಕೃತಿ ನೆಪದಲ್ಲಿ ಬಹುತ್ವ ನಾಶಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಬಂಡವಾಳಶಾಹಿಗಳ ಲಕ್ಷಾಂತರ ಕೋಟಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಇದಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಆದರೆ, ರೈತರು, ಕಾರ್ಮಿಕರು ಹಾಗೂ ಬಡವರ ಪರವಾದ ಯೋಜನೆಗಳನ್ನು ಟೀಕಿಸಲಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಐಟಿಯು ಮುಖಂಡ ಮುಸ್ತಫಾ ಮಾತನಾಡಿ, ಅಂಗನವಾಡಿ ಮತ್ತು ಬಿಸಿಯೂಟ ನೌಕರರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಅವರ ಕೆಲಸದ ಕಾರ್ಯಗಳು ಹೆಚ್ಚಿದೆ. ಒತ್ತಡದಲ್ಲಿ ಕೆಲಸ ಮಾಡುವಂತಾಗಿರುವ ಕಾರಣ ಹೃದಯಾಘಾತಗಳಂತಹ ಅವಘಡಗಳು ಹೆಚ್ಚಾಗುತಿವೆ.
ಜೀವನೋಪಾಯ ನಡೆಸಿಕೊಳ್ಳಲು ಭಯವಾಗುತ್ತಿದೆ ಇವೆಲ್ಲದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಾಗಲೀ, ಕೇಂದ್ರ ಸರ್ಕಾರವಾಗಲಿ ವೇತನ ಹೆಚ್ಚು ಮಾಡುವ ಕೆಲಸ ಆಗಬೇಕು ಎಂದ ಅವರು ಅಂಗನವಾಡಿಯ ಐಸಿಟಿಎಸ್ ಯೋಜನೆ ಪ್ರಾರಂಭವಾಗಿ 50 ವರ್ಷ ಹಾಗೂ, ಬಿಸಿಯೂಟ ಯೋಜನೆ ಪ್ರಾರಂಭವಾಗಿ 24 ವರ್ಷಗಳಾದರೂ ಸಮಸ್ಯೆಗಳು ಇನ್ನಷ್ಟು ಮತ್ತಷ್ಟು ಬಿಗಡಾಯಿ ಸುತ್ತದೆ ಬಂದಿವೆ ನಮ್ಮ ಸಮಸ್ಯೆಗಳು ಈಡೇರಿಸುವ ತನಕ ನಮ್ಮ ಹೋರಾಟಗಳು ವ್ಯತಿರಿಕ್ತ ವಾಗಿಯೇ ಇರಲಿವೆ ನಮ್ಮನ್ನ ಬಂಧಿಸಿದರೂ ಸರಿಯೇ ನಮ್ಮ ಹೋರಾಟಗಳು ಮಾತ್ರ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಿಸಿಯೂಟ ನೌಕರರಿಗೆ 26 ಸಾವಿರ ಕನಿಷ್ಟ ವೇತನ ನೀಡಬೇಕು. ಮಾಸಿಕ ಪಿಂಚಣಿ 10 ಸಾವಿರ ನೀಡಬೇಕು. ಕನಿಷ್ಠ ಕೂಲಿ ಜಾರಿಯಾಗಬೇಕು. ಬಹುಮುಖ್ಯವಾಗಿ ನಿವೃತ್ತಿಯಾದರೆ ಇಡಿಗಂಟು ನೀಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸದಸ್ಯರಾದ ಚನ್ನರಾಯಪ್ಪ, ಲಕ್ಷ್ಮಿ ನಾರಾಯಣ ರೆಡ್ಡಿ, ಡಿ.ಟಿ.ಮುನಿಸ್ವಾಮಿ, ವಾಲ್ಮೀಕಿ ಅಶ್ವಥಪ್ಪ, ಬಿಳ್ಳೂರು ನಾಗರಾಜು, ಮುನಿಯಪ್ಪ, ಜಿ.ಕೃಷ್ಣಪ್ಪ, ಸೋಮಶೇಖರ್, ಉಮಾ,ರಾಮಾಂಜಿ, ವಿವಿಧ ಕಾರ್ಮಿಕ ಸಂಘಗಳ ಸದಸ್ಯರು ಹಾಜರಿದ್ದರು.