ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

JP Academy controversy: ಜೆಪಿ ಅಕಾಡೆಮಿ ಹೆಸರಿನ ಗಲಾಟೆ : ಬೈರವೇಶ್ವರ ಕಾಲೇಜಿಗೆ ಹಿನ್ನಡೆ : ಗೋಪಿನಾಥ್‌ಗೆ ಮುನ್ನಡೆ

ಕೈವಾರ ಕ್ರಾಸ್‌ನ ಶ್ರೀ ಭೈರವೇಶ್ವರ ಪಿಯು ಕಾಲೇಜಿನಲ್ಲಿ ಜೆಪಿ ಅಕಾಡೆಮಿಯನ್ನು ಸ್ಥಾಪಿಸಿದ್ದೇ ನಾನು. ಕಾರಣಾಂತರಗಳಿಂದ ಅಲ್ಲಿಂದ ಹೊರಬಂದ ಮೇಲೆ ಕಾನೂನು ಬದ್ಧವಾಗಿಯೇ ಶಿಕ್ಷಣ ಸಂಸ್ಥೆ ನಡೆಸು ತ್ತಿದ್ದೇನೆ. ಭೈರವೇಶ್ವರ ಕಾಲೇಜಿನವರು ಹೊರಗಿನವರೆಂದು ಬಿಂಬಿಸಿ, ನಕಲಿ ಕಾಲೇಜು ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂತಹ ನಡವಳಿಕೆಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು

ಜೆಪಿ ಅಕಾಡೆಮಿ ಹೆಸರಿನ ಗಲಾಟೆ : ಬೈರವೇಶ್ವರ ಕಾಲೇಜಿಗೆ ಹಿನ್ನಡೆ

-

Profile
Ashok Nayak Apr 10, 2026 12:06 AM

ಚಿಂತಾಮಣಿ : ಜೆಪಿ ಅಕಾಡೆಮಿ ಹೆಸರಿನಲ್ಲಿ ಮತ್ತೊಂದು ಕಡೆ ಅಕಾಡೆಮಿ ನಡೆಸಬಾರದೆಂದು ಕೋರಿ ಕೈವಾರ ಕ್ರಾಸ್‌ನ ಶ್ರೀ ಭೈರವೇಶ್ವರ ಪಿಯು ಕಾಲೇಜಿನ ಜೆ.ಸಿ.ಹರೀಶ್ ಸಲ್ಲಿಸಿದ್ದ ತಾತ್ಕಾಲಿಕ ತಡೆಯಾಜ್ಞೆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಅವರಿಗೆ ಹಿನ್ನಡೆಯಾಗಿದೆ ಎಂದು ಜೆಪಿ ಅಕಾಡೆಮಿ ಸಂಸ್ಥಾಪಕ ಹಾಗೂ ನೂತನ ಜಿ.ಎನ್ ಅಕಾಡೆಮಿ ಮುಖ್ಯಸ್ಥ ಗೋಪಿನಾಥ್ ತಿಳಿಸಿದರು.

ನಗರದ ಎಸ್.ಆರ್.ಇ.ಟಿ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಾವೇ ಸ್ಥಾಪನೆ ಮಾಡಿದ್ದ ಅಕಾಡೆಮಿ ವಿಚಾರವಾಗಿ ಕೇಳಿ ಬಂದ ಆರೋಪಗಳಿಗೆ ಸ್ಪಷ್ಟನೆ ನೀಡಿದರು.

ಹಿಂದೆ ಮಾಡಿಕೊಂಡಿದ್ದ ಜೆಪಿ ಅಕಾಡೆಮಿ ಪಾಲುದಾರಿಕೆ ಒಪ್ಪಂದವು ನೋಂದಾಯಿತ ವಾಗಿರಲಿಲ್ಲ. ಜೆಪಿ ಅಕಾಡೆಮಿ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಂಡು ಗೊಂದಲ ಮೂಡಿಸುತ್ತಿದ್ದಾರೆ ಎಂದು ಜೆ.ಸಿ.ಹರೀಶ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾ ಲಯವು ಅವರ ಮನವಿಯನ್ನು ಪುರಸ್ಕರಿಸಿಲ್ಲ. ಸದ್ಯ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಹಾಗೂ ಜೆಪಿ ಅಕಾಡೆಮಿಯ ಪಾಲುದಾರಿಕೆ ಇನ್ನೂ ರದ್ದಾಗದ ಕಾರಣ, ಕಾನೂ ನಾತ್ಮಕ ದೃಷ್ಟಿಯಿಂದ ಎಸ್.ಆರ್.ಇ.ಟಿ ಪಿಯು ಕಾಲೇಜಿನಲ್ಲಿ ನೂತನವಾಗಿ ಜಿ.ಎನ್ ಅಕಾಡೆಮಿ ಆರಂಭಿಸಿರುವುದಾಗಿ ತಿಳಿಸಿದರು.

ಕೈವಾರ ಕ್ರಾಸ್‌ನ ಶ್ರೀ ಭೈರವೇಶ್ವರ ಪಿಯು ಕಾಲೇಜಿನಲ್ಲಿ ಜೆಪಿ ಅಕಾಡೆಮಿಯನ್ನು ಸ್ಥಾಪಿಸಿದ್ದೇ ನಾನು. ಕಾರಣಾಂತರಗಳಿಂದ ಅಲ್ಲಿಂದ ಹೊರಬಂದ ಮೇಲೆ ಕಾನೂನು ಬದ್ಧವಾಗಿಯೇ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ಭೈರವೇಶ್ವರ ಕಾಲೇಜಿನವರು ಹೊರಗಿನವರೆಂದು ಬಿಂಬಿಸಿ, ನಕಲಿ ಕಾಲೇಜು ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂತಹ ನಡವಳಿಕೆಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: Film Critics Academy Awards: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ : ಅತೀ ಹೆಚ್ಚು ನಾಮನಿರ್ದೇಶಿತರು ಯಾರು?

ಎರಡೂ ಕಡೆ ಓದುತ್ತಿರುವವರು ನಮ್ಮ ಮಕ್ಕಳೇ, ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನಾರ್ಜನೆ ನೀಡುವು ದಷ್ಟೇ ನಮ್ಮ ಏಕೈಕ ಉದ್ದೇಶವಾಗಿದೆ. ನಾನು ಭೈರವೇಶ್ವರ ಕಾಲೇಜಿನಿಂದ ಹೊರಬರದೇ ಇದ್ದಿದ್ದರೆ ಅಲ್ಲಿನ 40 ಮಂದಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡುತ್ತಿರಲಿಲ್ಲ. ಅವರಿಗೆ ಅನ್ಯಾಯ ವಾಗುತ್ತಿದ್ದರೂ ಏಕೆ ಸುಮ್ಮನಿದ್ದರೋ ನನಗೆ ಗೊತ್ತಿಲ್ಲಎಂದರು.

ಡಿ.ಎಸ್.ಎಸ್ ಸಂಚಾಲಕ ಹಾಗೂ ಪೋಷಕ ಶ್ರೀರಂಗಪ್ಪ ಮಾತನಾಡಿ, ಒಂದು ವಾರದ ಹಿಂದೆ ಈ ಸಂಸ್ಥೆಯ ವಿರುದ್ಧ ಪತ್ರಿಕಾಗೋಷ್ಠಿ ನಡೆಸಲು ಮಧುಲತಾ ಮತ್ತಿತರರು ನಮ್ಮನ್ನು ಕರೆದಿದ್ದರು. ಸತ್ಯಾಂಶ ತಿಳಿದಿದ್ದರಿಂದ ನಾವು ಭಾಗವಹಿಸಲಿಲ್ಲ. ಇಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದಲೇ ನನ್ನ ಮಗಳು ಪ್ರಥಮ ಪಿಯುಸಿ ನಂತರ ಗೋಪಿನಾಥ್ ಅವರ ನೂತನ ಅಕಾಡೆಮಿಗೆ ದಾಖಲಾಗಿ ದ್ದಾಳೆ ನಾವು ಯಾರ ಬಲವಂತವೂ ಇಲ್ಲದೇ ಉತ್ತಮ ಗುಣಮಟ್ಟದ ಶಿಕ್ಷಣದ ಹಿನ್ನೆಲೆಯಲ್ಲಿ ನಮ್ಮ ಮಕ್ಕಳನ್ನು ಜಿ.ಎನ್ ಅಕಾಡೆಮಿಗೆ ಸೇರಿಸಿದ್ದೇವೆ ಎಂದರು.

ಪೋಷಕರಾದ ಕಲ್ಪನಾ ಮತ್ತು ಮಂಜುನಾಥ್ ಮಾತನಾಡಿ, ಗೋಪಿನಾಥ್ ಅವರ ಗುಣಮಟ್ಟದ ಕೋಚಿಂಗ್‌ನಿAದಾಗಿ ಹೊರರಾಜ್ಯದ ವಿದ್ಯಾರ್ಥಿಗಳು ಹಳ್ಳಿಯಲ್ಲಿರುವ ಶ್ರೀ ಭೈರವೇಶ್ವರ ಪಿಯು ಕಾಲೇಜಿಗೆ ಬರುತ್ತಿದ್ದರು. ಅವರು ಕಾಲೇಜಿನಿಂದ ಹೊರಬಂದ ಮೇಲೆ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ  ಇಲ್ಲಿಗೆ ದಾಖಲಿಸಿದ್ದೇವೆ ಎಂದರು. ಪ್ರಾಧ್ಯಾಪಕರಾದ ಪ್ರಶಾಂತ್, ಮಣಿಕಂಠ, ತರುಣ್, ಮಾನಸ ಹಾಗೂ ಪೋಷಕರು ಇದ್ದರು.