Chikkaballapur News: ಒಂದು ವರ್ಷಗಳ ಕಾಲ ಉತ್ತಮ ರೀತಿಯಲ್ಲಿ ದರ್ಗಾ ನಿರ್ವಹಣೆ ಮಾಡಿರುವ ಮೌಲಾ ಅಲಿ
ಒಂದು ವರ್ಷಗಳ ಕಾಲ ಉತ್ತಮ ಹಾಗೂ ಶಾಂತಿ ರೀತಿಯಲ್ಲಿ ದರ್ಗಾ ಮುಜಾವರಾಗಿ ಕೆಲಸ ನಿರ್ವಹಿಸಿ ರುವ ಎಸ್ ಮೌಲಾ ಅಲಿ ಅವರ ಒಂದು ವರ್ಷದ ಅವಧಿ ಇಂದು ಅಂತ್ಯಗೊಂಡಿದ್ದು ಮತ್ತೆ ಅವರ ಅವಧಿ ಪುನಃ ಐದು ವರ್ಷಗಳ ನಂತರ ಬರಲಿದೆ. ಅವರು ಹಾಗೂ ಅವರ ಮಕ್ಕಳು ಆ ವೇಳೆ ಕೆಲಸ ನಿರ್ವಹಿಸಲಿದ್ದಾರೆ

ಮುಜಾವರ್ ಅಧಿಕಾರ ಹಸ್ತಾಂತರದ ಚಿತ್ರ

ಚಿಂತಾಮಣಿ : ತಾಲ್ಲೂಕಿನ ಮುರುಗ ಮಲ್ಲ ಹೋಬಳಿಯ ನಿಮ್ಮಕಾಯಲ ಹಳ್ಳಿ ಗ್ರಾಮದ ಹಜರತ್ ಸೈಯದ್ ಜಲಾಲ್ ಖಾಕಿ ಷಾ ಮೌಲಾ ಬಾಬಾ ದರ್ಗಾ ಅಧಿಕಾರವನ್ನು ದರ್ಗಾ ಸಮಿತಿಯ ನೇತೃತ್ವದಲ್ಲಿ ಇಂದು ಹಸ್ತಾಂತರ ಮಾಡಿದ ಘಟನೆ ನಡೆಯಿತು.
19 ಜೂನ್ 2024ರಂದು ಸದರಿ ಗ್ರಾಮದ ಲೇಟ್ ಅಬ್ದುಲ್ ರಜಕ್ ರವರ ಪುತ್ರ ಎಸ್ ಮೌಲಾ ಅಲಿ ರವರು ದರ್ಗಾ ಮುಜಾವರ್ ಆಗಿ ಅಧಿಕಾರ ವಹಿಸಿಕೊಂಡಿದ್ದು, ಕರ್ನಾಟಕ ರಾಜ್ಯ ಹಾಗೂ ಚಿಕ್ಕ ಬಳ್ಳಾಪುರ ಜಿಲ್ಲಾ ವಕ್ಫ್ ಬೋರ್ಡ್ ರವರ ಆದೇಶದಂತೆ ಎಸ್ ಮೌಲಾ ಅಲಿ ರವರ ಒಂದು ವರ್ಷದ ಅವಧಿ ೦೯ ಜೂನ್ ೨೦೨೫ ರಂದು ಅಂತ್ಯಗೊಂಡಿದ್ದು, ಇಂದು ಸಂಜೆ ದರ್ಗಾ ಆವರಣ ದಲ್ಲಿ ದರ್ಗಾ ಮುಜಾವರ್ ಎಸ್ ಮೌಲಾ ಅಲಿ ರವರ ತಮ್ಮ ಅಧಿಕಾರವನ್ನು ಲೇಟ್ ಬಾಬಾಜಾನ್ ಪುತ್ರರಾದ ಮಹಮ್ಮದ್ ಅಲಿ ಹಾಗೂ ಮಹಮ್ಮದ್ ರಫೀಕ್ ಅವರಿಗೆ ಹಸ್ತಾಂತರ ಮಾಡಿದರು.
ಇದನ್ನೂ ಓದಿ; Chikkaballapur News: 4ನೇ ಅಖಿಲ ಭಾರತ ಸಾಹಿತ್ಯ ಪರಿಷದ್ ಸಮ್ಮೇಳನದಲ್ಲಿ ಬಿ.ಆರ್.ಕೃಷ್ಣರಿಗೆ ಸನ್ಮಾನ
ಈ ವೇಳೆ ಮಾತನಾಡಿದ ದರ್ಗಾ ಅಧ್ಯಕ್ಷ ಅಮೀರ್ ಜಾನ್ ಒಂದು ವರ್ಷಗಳ ಕಾಲ ಉತ್ತಮ ಹಾಗೂ ಶಾಂತಿ ರೀತಿಯಲ್ಲಿ ದರ್ಗಾ ಮುಜಾವರಾಗಿ ಕೆಲಸ ನಿರ್ವಹಿಸಿರುವ ಎಸ್ ಮೌಲಾ ಅಲಿ ಅವರ ಒಂದು ವರ್ಷದ ಅವಧಿ ಇಂದು ಅಂತ್ಯಗೊಂಡಿದ್ದು ಮತ್ತೆ ಅವರ ಅವಧಿ ಪುನಃ ಐದು ವರ್ಷಗಳ ನಂತರ ಬರಲಿದೆ. ಅವರು ಹಾಗೂ ಅವರ ಮಕ್ಕಳು ಆ ವೇಳೆ ಕೆಲಸ ನಿರ್ವಹಿಸಲಿದ್ದಾರೆ.
ಸದ್ಯ ಒಂದು ವರ್ಷಗಳ ಕಾಲ ಮುಜಾವರ್ ಕೆಲಸ ನಿರ್ವಹಿಸಲು ಲೇಟ್ ಬಾಬಾಜಾನ್ ಅವರ ಪುತ್ರರಿಗೆ ಅಧಿಕಾರವನ್ನು ವಹಿಸಲಾಗಿದೆ ಎಂದು ಹೇಳಿದ ಅವರು ದರ್ಗಾ ಆವರಣದಲ್ಲಿ ಚಿಕ್ಕಬಳ್ಳಾ ಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಅವರು ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ,ಶೌಚಾಲಯದ ವ್ಯವಸ್ಥೆ,ವಾಹನಗಳ ಪಾರ್ಕಿಂಗ್ ವ್ಯವಸ್ಥೆ,ಅನುಕೂಲ ಮಾಡಿಕೊಡಬೇಕೆಂದು ಮಾಧ್ಯಮದವರ ಮುಖಾಂತರ ಮನವಿ ಮಾಡಿಕೊಂಡರು.
ಮುಜಾವರ್ ಎಸ್ ಮೌಲಾ ಅಲಿ ಮಾತನಾಡಿ ಒಂದು ವರ್ಷಗಳ ಕಾಲ ಗ್ರಾಮಸ್ಥರ ಹಾಗೂ ಎಲ್ಲರ ಸಹಕಾರದೊಂದಿಗೆ ದರ್ಗಾ ಮುಜಾವರಾಗಿ ಕೆಲಸ ಮಾಡಲಾಗಿದೆ.
ಮುಂದಿನ ಐದು ವರ್ಷಕ್ಕೆ ನಮ್ಮ ಅವಧಿ ಮತ್ತೆ ಬರಲಿದ್ದು ನಾವು ಹಾಗೂ ನನ್ನ ಮಕ್ಕಳು ಆ ವೇಳೆ ದರ್ಗಾ ಮುಜಾವರ್ ಕೆಲಸ ನಿರ್ವಹಣೆ ಮಾಡಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಸ್ಲಾಂ,ಪ್ಯಾರೇಜಾನ್, ಉಪಾಧ್ಯಕ್ಷರಾದ ಮೊಹಮ್ಮದ್, ವಾಲಿ, ಶಬೀರ್, ಬಾಬಾಜಾನ್, ಇಮ್ರಾನ್ ಪಾಷಾ, ರಿಯಾಜ್, ಜಬ್ಬರ್ ಸಾಬ್, ಇಮ್ತಿಯಾಜ್ ಪಾಷಾ, ಸೇರಿದಂತೆ ಮತ್ತಿತರರು ಇದ್ದರು.