ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gudibande News: ಕೆರೆ ತುಂಬಲಿ, ರೈತರ ಬದುಕು ಹಸಿರಾಗಲಿ: ಒಡ್ಡಮ್ಮದೇವಿಗೆ ವಿಶೇಷ ಕುಂಭಾಭಿಷೇಕ

ಪಟ್ಟಣದ ಹೊರವಲಯದ ಕೆರೆಯಂಗಳದಲ್ಲಿರುವ ಒಡ್ಡಮ್ಮದೇವಿ ಸನ್ನಿಧಿಯಲ್ಲಿ ವೇದಮೂರ್ತಿ ನಾಗೇಂದ್ರ ಭಟ್ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬೆಳಗ್ಗಿ ನಿಂದ ನಮಕ-ಚಮಕ, ವೇದಪಾರಾಯಣ ಹಾಗೂ ಸ್ವಸ್ತಿವಾಚನ ನೆರವೇರಿತು. ಬಳಿಕ ದೇವಿಗೆ ಪಂಚಾಮೃತಾ ಭಿಷೇಕ, ಕುಂಭಾಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಲಾಯಿತು.

ಕೆರೆ ತುಂಬಲಿ, ರೈತರ ಬದುಕು ಹಸಿರಾಗಲಿ: ಒಡ್ಡಮ್ಮದೇವಿಗೆ ವಿಶೇಷ ಕುಂಭಾಭಿಷೇಕ

-

Profile
Ashok Nayak Aug 12, 2026 10:25 AM

ಗುಡಿಬಂಡೆ: ಉತ್ತಮ ಮಳೆಯಾಗಿ ತಾಲೂಕಿನ ಪ್ರಮುಖ ಜಲಮೂಲವಾದ ಅಮಾನಿ ಭೈರಸಾಗರ ಕೆರೆ ಸಂಪೂರ್ಣ ಭರ್ತಿಯಾಗಿ, ಸುತ್ತಮುತ್ತಲಿನ ಗ್ರಾಮಗಳಿಗೆ ನೀರಿನ ಬವಣೆ ನೀಗಲಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂದು ಪ್ರಾರ್ಥಿಸಿ ರೈತರು ಹಾಗೂ ಭಕ್ತರು ಒಡ್ಡಮ್ಮದೇವಿಗೆ ವಿಶೇಷ ಪೂಜೆ ಮತ್ತು ಕುಂಭಾಭಿಷೇಕ ನೆರವೇರಿಸಿದರು.

ಪಟ್ಟಣದ ಹೊರವಲಯದ ಕೆರೆಯಂಗಳದಲ್ಲಿರುವ ಒಡ್ಡಮ್ಮದೇವಿ ಸನ್ನಿಧಿಯಲ್ಲಿ ವೇದಮೂರ್ತಿ ನಾಗೇಂದ್ರ ಭಟ್ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬೆಳಗ್ಗಿ ನಿಂದ ನಮಕ-ಚಮಕ, ವೇದಪಾರಾಯಣ ಹಾಗೂ ಸ್ವಸ್ತಿವಾಚನ ನೆರವೇರಿತು. ಬಳಿಕ ದೇವಿಗೆ ಪಂಚಾಮೃತಾಭಿಷೇಕ, ಕುಂಭಾಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಲಾಯಿತು.

ಇದನ್ನೂ ಓದಿ: Gudibande News: ಮೂಲಸೌಕರ್ಯ ಪರಿಶೀಲನೆಗೆ ಪುಲಸಾನಿವೊಡ್ಡು, ನಲ್ಲಗೊಂಡಯ್ಯಗಾರಹಳ್ಳಿ ಗ್ರಾಮಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಭೇಟಿ

ಮಹಾ ಮಂಗಳಾರತಿಯ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಅಮಾನಿ ಭೈರಸಾಗರ ಕೆರೆ ಭರ್ತಿಯಾದರೆ ಸುತ್ತಮುತ್ತಲಿನ ಬಾವಿ ಹಾಗೂ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗಿ ಕೃಷಿಕರಿಗೆ ಅನುಕೂಲವಾಗಲಿದೆ ಎಂದು ಸ್ಥಳೀಯರು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ದ್ವಾರಕಾನಾಥ್ ನಾಯ್ಡು, ನಾಮಗೊಂಡ್ಲು ಶಂಕರ್, ರಾಜಣ್ಣ, ಗುಂಪುಮಾರದ ಆನಂದ್, ಜಿ.ಎನ್. ಲಕ್ಷ್ಮೀಪತಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.