ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shidlaghatta News: ಭಕ್ತಿಯ ಹೊನಲಿನಲ್ಲಿ ದೇವಿಯರ ಮೆರವಣಿಗೆ: ಸಿದ್ಧಾರ್ಥ ನಗರದಲ್ಲಿ ಗಂಗಾಭವಾನಿ, ಪೂಜಮ್ಮದೇವಿ ಹಾಗೂ ಮೆರವಳಮ್ಮ ದೇವಿಯ ಉತ್ಸವ

ಅಲಂಕೃತ ದೇವಿಯರ ವಿಗ್ರಹಗಳನ್ನು ಸಿದ್ಧಾರ್ಥ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಮನೆಗಳ ಮುಂದೆ ನಿವಾಸಿಗಳು ಪೂಜೆ ಸಲ್ಲಿಸಿ, ಆರತಿ ಬೆಳಗಿ ದೇವಿಯರ ಆಶೀರ್ವಾದ ಪಡೆದರು. ದೇವಿಯರ ಜಯ ಘೋಷದೊಂದಿಗೆ ಸಾಗಿದ ಮೆರವಣಿಗೆಯಿಂದ ಇಡೀ ಬಡಾವಣೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು.

ಭಕ್ತಿಯ ಹೊನಲಿನಲ್ಲಿ ದೇವಿಯರ ಮೆರವಣಿಗೆ

-

Profile
Ashok Nayak Aug 12, 2026 10:34 AM

ಶಿಡ್ಲಘಟ್ಟ: ಆಷಾಢ ಮಾಸದ ಕೊನೆಯ ಮಂಗಳವಾರದ ಪ್ರಯುಕ್ತ ನಗರದ ಸಿದ್ಧಾರ್ಥ ನಗರದಲ್ಲಿ ಶ್ರೀ ಗಂಗಾಭವಾನಿ, ಶ್ರೀ ಪೂಜಮ್ಮದೇವಿ ಹಾಗೂ ಶ್ರೀ ಮೆರವಳಮ್ಮ ದೇವಿಯ ಮೆರವಣಿಗೆ ಮಹೋ ತ್ಸವವು ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ನೆರವೇರಿತು.

ಉತ್ಸವದ ಅಂಗವಾಗಿ ದೇವಿಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನ ಗಳನ್ನು ನೆರವೇರಿಸಲಾಯಿತು. ಹೂವುಗಳಿಂದ ಅಲಂಕರಿಸಲ್ಪಟ್ಟ ದೇವಿಯರ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ: Shidlaghatta News: ಕನಸು ನನಸಾಗಿಸಲು ಪರಿಶ್ರಮವೇ ಮೆಟ್ಟಿಲು: ಪುಟ್ಟು ಅಂಜಿನಪ್ಪ

ಬಳಿಕ ಅಲಂಕೃತ ದೇವಿಯರ ವಿಗ್ರಹಗಳನ್ನು ಸಿದ್ಧಾರ್ಥ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಮನೆಗಳ ಮುಂದೆ ನಿವಾಸಿಗಳು ಪೂಜೆ ಸಲ್ಲಿಸಿ, ಆರತಿ ಬೆಳಗಿ ದೇವಿಯರ ಆಶೀರ್ವಾದ ಪಡೆದರು. ದೇವಿಯರ ಜಯ ಘೋಷದೊಂದಿಗೆ ಸಾಗಿದ ಮೆರವಣಿಗೆಯಿಂದ ಇಡೀ ಬಡಾವಣೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು.

11cbpm5w ok1

ಈ ಬಾರಿ ಶ್ರೀ ಪೂಜಮ್ಮದೇವಿಯ ವಿಗ್ರಹವನ್ನು ವಿಶೇಷವಾಗಿ ಶೃಂಗರಿಸಿ ಮೆರವಣಿಗೆಯಲ್ಲಿ ಕೊಂಡೊಯ್ದಿದ್ದು ಭಕ್ತರ ಗಮನ ಸೆಳೆಯಿತು. ಮಹಿಳೆಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯರ ಕೃಪೆಗೆ ಪಾತ್ರರಾದರು.

ಉತ್ಸವದ ಹಿನ್ನೆಲೆಯಲ್ಲಿ ಸಿದ್ಧಾರ್ಥ ನಗರದ ಪ್ರಮುಖ ಬೀದಿಗಳು ಭಕ್ತರ ಸಂಭ್ರಮದಿಂದ ಕಂಗೊಳಿ ಸಿದವು. ಮೆರವಣಿಗೆಯುದ್ದಕ್ಕೂ ಮೊಳಗಿದ ದೇವಿಯರ ಜಯಘೋಷ ಧಾರ್ಮಿಕ ವಾತಾವರಣ ವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು.

ಶ್ರೀ ಪೂಜಮ್ಮದೇವಿ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಭಕ್ತರು ಉತ್ಸವದ ಯಶಸ್ಸಿಗೆ ಸಹಕರಿಸಿದರು.