ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಸ್ತುವಾರಿ ಸಚಿವರೆ ನನಗೆ ಸವಾಲು ಹಾಕಬೇಡಿ, ನಿಮ್ಮ ಮುಖವಾಡ ಕಳಚುವ ಕೆಲಸ ಸದ್ಯದಲ್ಲೇ ಮಾಡುತ್ತೇನೆ: ಸಂಸದ ಡಾ.ಕೆ.ಸುಧಾಕರ್

ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮಾಡುತ್ತಿರುವ ಪ್ರಮುಖ ಕೆಲಸವೆಂದರೆ ಫಲವತ್ತಾದ ಜಮೀನಗಳನ್ನು ಕಿತ್ತುಕೊಂಡು ರೈತರ ಹೊಟ್ಟೆ ಮೇಲೆ ಒಡೆಯುವುದು. ಜಂಗಮಕೋಟೆ ಭಾಗದ ಭೂಮಿಯನ್ನು ಬೇನಾಮಿ ಹೆಸರಲ್ಲಿ ಚಿಂತಾಮಣಿಯಲ್ಲಿ ನೋಂದಣಿ ಮಾಡಿದ್ದಾರೆ. ಎಲ್ಲ ದಾಖಲೆ ಯೂ ನನ್ನ ಬಳಿ ಇದೆ. ನನಗೆ ಸವಾಲು ಹಾಕಬೇಡಿ. ನಿಮ್ಮ ಮುಖವಾಡ ಕಳಚುವ ಕೆಲಸ ಸದ್ಯದಲ್ಲೇ ಮಾಡುತ್ತೇನೆ

ನನಗೆ ಸವಾಲು ಹಾಕಬೇಡಿ, ನಿಮ್ಮ ಮುಖವಾಡ ಕಳಚುವ ಕೆಲಸ ಸದ್ಯದಲ್ಲೇ ಮಾಡುತ್ತೇನೆ

-

Profile
Ashok Nayak Apr 12, 2026 9:40 PM

ಚಿಕ್ಕಬಳ್ಳಾಪುರ: ಉಸ್ತುವಾರಿ ಸಚಿವರೇ ನನಗೆ ಸವಾಲು ಹಾಕಲು ಬರಬೇಡಿ. ಶೀಘ್ರವೇ ನಿಮ್ಮ ಘನಂದಾರಿ ಸಾಧನೆಗಳನ್ನು ಬಯಲು ಮಾಡುವ ಮೂಲಕ ನಿಮ್ಮ ಮುಖವಾಡ ಬಯಲು ಮಾಡು ತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್(MP Dr.K.Sudhakar) ಚಿಂತಾಮಣಿಯ ಡಾ.ಎಂ.ಸಿ ಸುಧಾಕರ್(Dr.M.C.Sudhakar) ಅವರಿಗೆ ಸವಾಲೆಸೆದರು.

ಚಿಕ್ಕಬಳ್ಳಾಪುರ ನಗರದ ಸಂಸದ ನಿವಾಸದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮಾಡುತ್ತಿರುವ ಪ್ರಮುಖ ಕೆಲಸವೆಂದರೆ ಫಲವತ್ತಾದ ಜಮೀನಗಳನ್ನು ಕಿತ್ತುಕೊಂಡು ರೈತರ ಹೊಟ್ಟೆ ಮೇಲೆ ಒಡೆಯುವುದು. ಜಂಗಮಕೋಟೆ ಭಾಗದ ಭೂಮಿಯನ್ನು ಬೇನಾಮಿ ಹೆಸರಲ್ಲಿ ಚಿಂತಾಮಣಿಯಲ್ಲಿ ನೋಂದಣಿ ಮಾಡಿದ್ದಾರೆ. ಎಲ್ಲ ದಾಖಲೆ ಯೂ ನನ್ನ ಬಳಿ ಇದೆ. ನನಗೆ ಸವಾಲು ಹಾಕಬೇಡಿ. ನಿಮ್ಮ ಮುಖವಾಡ ಕಳಚುವ ಕೆಲಸ ಸದ್ಯ ದಲ್ಲೇ ಮಾಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದರು.

ನಗರದ ಸಂಸದರ ಗೃಹ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

ಇದನ್ನೂ ಓದಿ: MP Dr. K. Sudhakar: ತೃತೀಯ ಹಂತದ ಸಂಸ್ಕರಣೆ ಯೋಜನೆ ತರಬೇಕು: ಇಲ್ಲದಿದ್ದರೆ ಸರ್ಕಾರದ ವಿರುದ್ಧ ಪಾದಯಾತ್ರೆ: ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ
ಜಿಲ್ಲಾ ಉಸ್ತುವಾರಿ ಸಚಿವರಾದಾಗಿನಿಂದ ಅವರೇನು ಕೆಲಸ ಮಾಡಿದ್ದಾರೆ. ನಾನು ಏನು ಕೆಲಸ ಮಾಡಿದ್ದೇನೆ ಎಂದು ಹೇಳುತ್ತೇನೆ. ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಡಿರುವ ಘನಂದಾರಿ ಕೆಲಸವೆಂದರೆ   ರೈತರು ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಂಡು ಅವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿರುವುದೇ ಆಗಿದೆ ಎಂದರು.
ಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆ ವಿಷಯದಲ್ಲಿ ಚಿಮುಲ್ ನಿರ್ದೇಶಕ ಹುಜುಗೂರು ರಾಮಯ್ಯನವರು ಆರೋಪ ಮಾಡಿದ್ದಾರೆ. ಅದರೆ ನಾನು ಆಗ ವಿದೇಶದಲ್ಲಿದ್ದೆ. ನಾನು ಆಗ ಚಿಕ್ಕಬಳ್ಳಾಪುರದಲ್ಲಿ ಇದ್ದಿದ್ದರೆ ಮರಳುಕುಂಟೆ ಕೃಷ್ಣಮೂರ್ತಿಯವರು ಸೋಲುತ್ತಿರಲಿಲ್ಲ. ನಾನು ಅಂತಹ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡಿಲ್ಲ. ಅಂತಹ ಪರಿಸ್ಥಿತಿಯೂ ನನಗೆ ಬಂದಿಲ್ಲ. ಯಾರೋ ಒತ್ತಡ ಹಾಕಿದ್ದಾರೆ. ಹೀಗಾಗಿ ಅವರು ನನ್ನ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಿದರು.

ಮಂಡ್ಯ ಜಿಲ್ಲೆ ಆದಿಚುಂಚನಗಿರಿಯಲ್ಲಿ ಏಪ್ರಿಲ್ 15 ರಂದು ಬೆಳಗ್ಗೆ 10 ಗಂಟೆಗೆ ಡಾ.ಬಾಲಗಂಗಾಧರ ನಾಥ ಸ್ವಾಮೀಜಿಯವರ ಹೆಸರಿನಲ್ಲಿ ಬೈರವೈಕ್ಯ ದೇಗುಲ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸದ ಡಾ.ಕೆಸುಧಾಕರ್ ಮನವಿ ಮಾಡಿದರು.

ಹಿಡಿ ಅಕ್ಕಿ ಇಲ್ಲದೆ ಇದ್ದ ಆದಿ ಚುಂಚನಗಿರಿ ಮಠ (Adi Chunchanagiri Mutt)ಇಂದು 450ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿರುವ ಮಠ ಮಾಡಲು ಡಾ.ಬಾಲಗಂಗಾಧರನಾಥ ಸ್ವಾಮೀಜಿ(Dr. Balagangadharnath Swamiji)ಯವರ ಸೇವೆ ಅನನ್ಯ. ಅವರ ಸ್ಮರಣೆ ಯಲ್ಲೇ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ(Dr. Sri Nirmalanandanath Swamiji)ಯವರು ಮಠವನ್ನು ಇನ್ನಷ್ಟು ಅಭಿವೃದ್ಧಿ ಮಾಡಿದ್ದಾರೆ. ಅಂತಹ ಶ್ರೀ ಬಾಲಗಂಗಾಧರ ಶ್ರೀಗಳ ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಯವರು ಉದ್ಘಾಟಿಸಲು ಬರುತ್ತಿದ್ದಾರೆ. ಹೀಗಾಗಿ ಈ ಭಾಗದ ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ. ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ನಮ್ಮ ಮುಖಂಡರು ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷರಾದ ಎ.ಗಜೇಂದ್ರ, ಬಿಜೆಪಿ ಜಿಲ್ಲಾ ಮುಖಂಡರಾದ ಆವುಲಕೊಂಡರಾಯಪ್ಪ, ಮುನಿ ಕೃಷ್ಣಪ್ಪ, ತೇಜೆಂದ್ರಬಾಪು, ಪ್ರಭಾಕರರೆಡ್ಡಿ, ಲೀಲಾವತಿ ಶ್ರೀನಿವಾಸ್, ಬಾಲಕುಂಟಹಳ್ಳಿ ಗಂಗಾಧರಪ್ಪ, ನಾರಾಯಣಸ್ವಾಮಿ, ಅನು ಅನಂದ್, ಮೊಬೈಲ್ ಬಾಬು, ರಾಮಣ್ಣ ಮತ್ತಿತರರು ಇದ್ದರು.