ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA Subbareddy: ಯುವಜನತೆ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಶಾಸಕ ಸುಬ್ಬಾರೆಡ್ಡಿ ಕರೆ

ಇತ್ತೀಚಿಗೆ ಯುವಜನತೆ ಕ್ರೀಡೆಗಳತ್ತ ಹೆಚ್ಚು ಒಲವು ತೋರುತ್ತಿಲ್ಲ. ಮೊಬೈಲ್, ಇಂಟರ್ ನೆಟ್ ಗಳಿಗೆ ದಾಸರಾಗಿ ಕ್ರೀಡೆ‌ ಗಳನ್ನು ಮರೆಯುತ್ತಿದ್ದಾರೆ. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾ ಮನೋ ಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ಸಹ ಲಭಿಸುತ್ತದೆ. ಇದರ ಜೊತೆಗೆ ಗ್ರಾಮಗಳಲ್ಲಿ ಒಗ್ಗಟ್ಟು ಸಹ ಬೆಳೆಯುತ್ತದೆ

ಯುವಜನತೆ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಶಾಸಕ ಸುಬ್ಬಾರೆಡ್ಡಿ ಕರೆ

ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಶಾಸಕ ಸುಬ್ಬಾರೆಡ್ಡಿ ಉದ್ಘಾಟಿಸಿದರು. -

Ashok Nayak
Ashok Nayak Dec 1, 2025 12:01 PM

ಗುಡಿಬಂಡೆ: ಇಂದಿನ ಯುವಜನತೆ ಕ್ರೀಡೆಗಳತ್ತ ಹೆಚ್ಚು ಆಸಕ್ತಿ ತೋರುತ್ತಿಲ್ಲ, ಕ್ರೀಡೆಗಳಿಂದ ಮಾನ ಸಿಕ ಆರೋಗ್ಯದ ಜೊತೆಗೆ ದೈಹಿಕ ಶಕ್ತಿ ಸಹ ಸಿಗಲಿದೆ. ಆದ್ದರಿಂದ ಯುವಜನತೆ ಹೆಚ್ಚಾಗಿ ಕ್ರೀಡಾ ಕೂಟಗಳಲ್ಲಿ ಭಾಗವಹಿಸಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಆಯೋಜಿ ಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ಯುವಜನತೆ ಕ್ರೀಡೆಗಳತ್ತ ಹೆಚ್ಚು ಒಲವು ತೋರುತ್ತಿಲ್ಲ. ಮೊಬೈಲ್, ಇಂಟರ್ ನೆಟ್ ಗಳಿಗೆ ದಾಸರಾಗಿ ಕ್ರೀಡೆ‌ ಗಳನ್ನು ಮರೆಯುತ್ತಿದ್ದಾರೆ. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ಸಹ ಲಭಿಸುತ್ತದೆ. ಇದರ ಜೊತೆಗೆ ಗ್ರಾಮಗಳಲ್ಲಿ ಒಗ್ಗಟ್ಟು ಸಹ ಬೆಳೆಯುತ್ತದೆ ಎಂದರು.

ಇದೇ ಸಮಯದಲ್ಲಿ ಸಿಎಂ ಪವರ್‍ ಶೇರಿಂಗ್ ಕುರಿತು ಮಾತನಾಡಿದ ಶಾಸಕರು, ಪವರ್‍ ಶೇರಿಂಗ್ ಕುರಿತ ಎಲ್ಲವೂ ಇದೀಗ ಸರಿಹೋಗಿದೆ. ಸಿಎಂ ಹಾಗೂ ಡಿಸಿಎಂ ಇಬ್ಬರೂ ಒಂದಾಗಿ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಗೊಂದಲ ಸೃಷ್ಟಿ ಕೇವಲ ಮಾಧ್ಯಮಗಳದ್ದು ಅಷ್ಟೆ ಎಂದರು.

ಇದನ್ನೂ ಓದಿ: MLA SN Subbareddy: ಡ್ಯಾಂ ನಿರ್ಮಾಣಕ್ಕಾಗಿ ಕಲ್ಲು ಮುಳ್ಳುಗಳ ನಡುವೆ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಇದೇ ಸಮಯದಲ್ಲಿ ಬೀಚಗಾನಹಳ್ಳಿ ಗ್ರಾಮದ ಮುಖಂಡ ನರೇಂದ್ರ ಮಾತನಾಡಿ, ನಮ್ಮ ಗ್ರಾಮ ದಲ್ಲಿ ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸ ಲಾಗಿದೆ. ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಕಡೆಯಿಂದ ತಂಡಗಳು ಆಗಮಿಸಿದೆ. ಎಲ್ಲಾ ತಂಡಗಳು ಶಿಸ್ತು ಸಂಯಮದಿಂದ ನಡೆದುಕೊಳ್ಳಬೇಕು. ಯಾವುದೇ ಒಂದು ಕ್ರೀಡೆಯಲ್ಲಿ ಒಂದು ತಂಡ ಸೋತರೇ, ಮತ್ತೊಂದು ತಂಡ ಸೋಲಬೇಕು. ಇದು ಸಾಮಾನ್ಯ ಪ್ರಕ್ರಿಯೆ. ಆದ್ದರಿಂದ ಎಲ್ಲರೂ ಸೋಲು-ಗೆಲುವು ಎರಡನ್ನೂ ಸಮನಾಗಿ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಕ್ರೀಡಾಕೂಟಗಳನ್ನು ಮತ್ತಷ್ಟು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಈ ವೇಳೆ, ಬಿಇಒ ಕೃಷ್ಣಕುಮಾರಿ, ಮುಖಂಡರಾದ ಮಹದೇವಪ್ಪ, ತಿರುಮಣಿ ಮಂಜುನಾಥ್, ವೆಂಕಟನರಸಪ್ಪ, ಭಗತ್ ಸಿಂಗ್ ಯುವಕರ ಸಂಘದ ಕಿರಣ್ ಸೇರಿದಂತೆ ಹಲವರು ಇದ್ದರು.